ಮೂತ್ರವ್ಯಾಧಿ
ಮೂತ್ರವ್ಯಾಧಿಯು ಅತಿಯಾದ ಮೂತ್ರ ವಿಸರ್ಜನೆ ಅಥವಾ ಅನೌಪಚಾರಿಕ ಪುನರಾವರ್ತಿತ ಮೂತ್ರ ವಿಸರ್ಜನೆಯನ್ನು ನಿಯಂತ್ರಿಸುವ ಅಸಾಮರ್ಥ್ಯವಾಗಿದೆ. ಇದನ್ನು ಎನೂರ್ಸಿಸ್ ಎಂದು ಹೇಳುತ್ತಾರೆ. ಅನೌಪಚಾರಿಕ ಮೂತ್ರ ವಿಸರ್ಜನೆಯನ್ನು ಮೂತ್ರದ ಅಸಂಯಮ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದು ಮಕ್ಕಳಲ್ಲಿ ಕಂಡುಬರುವ ರೋಗ.
ವಿಧಗಳು
[ಬದಲಾಯಿಸಿ]ಈ ರೋಗದಲ್ಲಿ ಹಗಲಿನ ಮೂತ್ರವ್ಯಾಧಿ(ಡೈಯುರ್ನಲ್ ಎನೂರ್ಸಿಸ್) ಮತ್ತು ರಾತ್ರಿ ಸಮಯದ ಮೂತ್ರವ್ಯಾಧಿ(ನಾಕ್ಟರ್ನಲ್ ಎನೂರ್ಸಿಸ್) ಎಂಬ ಪ್ರಮುಖ ವಿಧಗಳಿವೆ. ಪ್ರಾಥಮಿಕ ವ್ಯಾಧಿಯನ್ನು ಗುಣಪಡಿಸಬಹುದು. ದ್ವಿತೀಯ ಹಂತದ ವ್ಯಾಧಿಯನ್ನು ಗುಣಪಡಿಸುವುದು ಕಷ್ಟ ಮತ್ತು ಅದು ಪುನರಾವರ್ತನೆಗೊಳ್ಳುವ ಸಂಭವವಿದೆ.[೧]
ಲಕ್ಷಣಗಳು
[ಬದಲಾಯಿಸಿ]ರಾತ್ರಿಯ ಎನೂರ್ಸಿಸ್ ಸಾಮಾನ್ಯವಾಗಿ ಮಗು ನಿದ್ರೆಯ ಸಮಯದಲ್ಲಿ ಸಾಕಷ್ಟು ಮೂತ್ರವನ್ನು ವಿಸರ್ಜಿಸುವುದರಿಂದ ಎಚ್ಚರವಾಗುವುದು ಕಷ್ಟವಾಗುತ್ತದೆ. ಇದರಿಂದಾಗಿ ಮೂತ್ರ ಕೋಶಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತವೆ. ಮೂತ್ರದ ಅಸಂಯಮ ಎಂದೂ ಕರೆಯಲ್ಪಡುವ ಹಗಲಿನ ಸಮಯದ ಮೂತ್ರವ್ಯಾಧಿ ಸಹ ಮೂತ್ರಕೋಶದ ಸೋಂಕಿನಿಂದ ಉಂಟಾಗುತ್ತದೆ.[೨]
ಮೂತ್ರಕೋಶದ ತೊಂದರೆಗಳ ಸಾಮಾನ್ಯ ಲಕ್ಷಣ
[ಬದಲಾಯಿಸಿ]- ಅಸಂಯಮ ಕೋರಿಕೆ(ಅರ್ಜ್ ಇನ್ಕೋನ್ಟಿನೆನ್ಸ್)
- ಮೂತ್ರ ವಿಸರ್ಜನೆಯ ಮುಂದೂಡಿಕೆ
- ಅಸಂಯಮ ಒತ್ತಡ(ಸ್ಟ್ರೆಸ್ ಇನ್ಕೋನ್ಟಿನೆನ್ಸ್)[೩][೪]
ಕಾರಣಗಳು ಮತ್ತು ರೋಗನಿರ್ಣಯ
[ಬದಲಾಯಿಸಿ]ಅತಿಯಾದ ಮೂತ್ರ ವಿಸರ್ಜನೆಗೆ ಸರಿಯಾದ ಶೌಚಾಲಯ ನಿರ್ವಹಣೆಯ ಅರಿವು ಇಲ್ಲದಿರುವುದು ಒಂದು ಕಾರಣ. ಅನುವಂಶಿಕ ಪರಿಣಾಮಗಳು, ಮೂತ್ರ ಕೋಶದ ಸೋಂಕು ಹಾಗೂ ಅತಿಯಾದ ಒತ್ತಡ ಕಾರಣವಾಗಿರುತ್ತವೆ. ರೋಗ ನಿರ್ಣಯದ ಡಿಎಸ್ಎಮ್- ಐವಿ- ಟಿಆರ್ ಮಾನದಂಡಗಳು:[೫]
- ಮೂತ್ರವನ್ನು ಹಾಸಿಗೆ ಅಥವಾ ಬಟ್ಟೆಯಲ್ಲಿ ವಿಸರ್ಜಿಸುವುದು (ಅನೈಚ್ಛಿಕ ಅಥವಾ ಉದ್ದೇಶಪೂರ್ವಕವಾಗಿ)
- ಕನಿಷ್ಠ ಸತತ ಮೂರು ತಿಂಗಳುಗಳವರೆಗೆ ವಾರದ ಎರಡು ಬಾರಿ ಆವರ್ತನದಿಂದ ಅಥವಾ ಸಾಮಾಜಿಕ, ಶೈಕ್ಷಣಿಕ (ಔದ್ಯೋಗಿಕ), ಅಥವಾ ಕಾರ್ಯನಿರ್ವಹಣೆಯ ಇತರ ಪ್ರಮುಖ ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಗಮನಾರ್ಹವಾದ ಯಾತನೆ ಅಥವಾ ದುರ್ಬಲತೆಯಿಂದ ಕೂಡಿರುವುದು.
- ಕಾಲಾನುಕ್ರಮದ ವಯಸ್ಸು ಕನಿಷ್ಟ 5 ವರ್ಷವಿರಬೇಕು
- ಸಾಮಾನ್ಯ ವೈದ್ಯಕೀಯ ಸ್ಥಿತಿಯಿಂದ ಉಂಟಾಗಿರಬಾರದು[೬]
ಚಿಕಿತ್ಸೆ
[ಬದಲಾಯಿಸಿ]ಆರ್ದ್ರತೆಯ ಎಚ್ಚರಿಕೆಗಳು, ಔಷಧಗಳು, ಶೌಚಾಲಯದ ಅರಿವು, ಇಮಿಪ್ರಮೈನ್ ಮತ್ತು ಡೆಸ್ಮೋಪ್ರೆಸ್ಸಿನ್ ಔಷಧಗಳಿಂದ ಪ್ರಾಥಮಿಕ ಮೂತ್ರವ್ಯಾಧಿಯನ್ನು ನಿಯಂತ್ರಣಕ್ಕೆ ತರಬಹುದು.[೭]
ಉಲ್ಲೇಖ
[ಬದಲಾಯಿಸಿ]- ↑ https://www.stanfordchildrens.org/en/topic/default?id=urinary-incontinence-90-P03083
- ↑ https://www.webmd.com/sleep-disorders/bedwetting-symptoms
- ↑ https://www.webmd.com/mental-health/enuresis
- ↑ https://www.healthline.com/health/bladder-infection
- ↑ https://www.theravive.com/therapedia/enuresis-dsm--5-307.6-(f98.0)
- ↑ https://www.webmd.com/mental-health/enuresis#1
- ↑ https://www.aafp.org/afp/2008/0815/p489.html