ಚೀಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಗದದ ಚೀಲ

ಚೀಲವು (ಕುನಿಕಲ್) ಬಾಗಿಸಬಲ್ಲ ಧಾರಕದ ರೂಪದಲ್ಲಿರುವ ಒಂದು ಸಾಮಾನ್ಯ ಸಾಧನ. ಚೀಲಗಳ ಬಳಕೆಯು ದಾಖಲಿಸಲಾದ ಇತಿಹಾಸಕ್ಕಿಂತ ಹಿಂದಿನದ್ದಾಗಿದೆ. ಅತ್ಯಂತ ಮುಂಚಿನ ಚೀಲಗಳು ಅಂಚುಗಳಲ್ಲಿ ಮಡಚಿದ, ಮತ್ತು ಆ ಆಕಾರದಲ್ಲಿ ಅದೇ ವಸ್ತುವಿನ ಹಗ್ಗಗಳಿಂದ ಕಟ್ಟಲಾದ ಪ್ರಾಣಿಯ ಚರ್ಮ, ಹತ್ತಿ, ಅಥವಾ ನೇಯ್ದ ಸಸ್ಯ ನಾರುಗಳ ತುಂಡಾಗಿದ್ದವು.[೧] ಅವುಗಳ ಸರಳತೆಯ ಹೊರತಾಗಿಯೂ, ಚೀಲಗಳು ಮಾನವ ನಾಗರೀಕತೆಯ ವಿಕಾಸಕ್ಕೆ ಮೂಲಭೂತವಾಗಿವೆ, ಏಕೆಂದರೆ ಬೆರಿಗಳು ಅಥವಾ ಆಹಾರಧಾನ್ಯಗಳಂತಹ ಸಡಿಲ ವಸ್ತುಗಳನ್ನು ಸುಲಭವಾಗಿ ಸಂಗ್ರಹಿಸಲು, ಕೈಗಳಿಂದ ಸುಲಭವಾಗಿ ಒಯ್ಯಲು ಸಾಧ್ಯವಿರುವುದಕ್ಕಿಂತ ಹೆಚ್ಚಿನ ವಸ್ತುಗಳನ್ನು ಸಾಗಿಸಲು ಅವು ಜನರಿಗೆ ಅವಕಾಶ ಕೊಡುತ್ತವೆ. ಖರೀದಿದಾರರ ಅನುಕೂಲಕ್ಕಾಗಿ ಅಗ್ಗವಾದ ಬಿಸಾಡಬಲ್ಲ ಕಾಗದದ ಚೀಲಗಳು ಮತ್ತು ಪ್ಲಾಸ್ಟಿ‍ಕ್‍ನ ಖರೀದಿ ಚೀಲಗಳು ಚಿಲ್ಲರೆ ವ್ಯಾಪಾರದಲ್ಲಿ ಬಹಳ ಸಾಮಾನ್ಯವಾಗಿವೆ. ಹಲವುವೇಳೆ ಇವನ್ನು ಅಂಗಡಿಯು ಉಚಿತವಾಗಿ ಅಥವಾ ಸಣ್ಣ ಶುಲ್ಕ ತೆಗೆದುಕೊಂಡು ಪೂರೈಕೆ ಮಾಡುತ್ತದೆ. ಅಂಗಡಿಗಳಲ್ಲಿ ಬಳಸಲು ಗ್ರಾಹಕರು ತಮ್ಮ ಸ್ವಂತದ ಖರೀದಿ ಚೀಲಗಳನ್ನು ಕೂಡ ತೆಗೆದುಕೊಂಡು ಹೋಗಬಹುದು.

ಉಲ್ಲೇಖಗಳು[ಬದಲಾಯಿಸಿ]

  1. Farid Chenoune, Carried Away: All About Bags (2005).
"https://kn.wikipedia.org/w/index.php?title=ಚೀಲ&oldid=889608" ಇಂದ ಪಡೆಯಲ್ಪಟ್ಟಿದೆ