ವಿಷಯಕ್ಕೆ ಹೋಗು

ಸದಸ್ಯ:Swamipandithbhagathji/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಡಿಂಬವಧೆ

'ಹಿಂದೂ ಧರ್ಮದ' ಪವಿತ್ರ ಗ್ರಂಥಗಳಲ್ಲಿ ಮಹಾಭಾರತವೂ ಒಂದು.ಇಡೀ ಮಹಾಭಾರತದಲ್ಲಿ ಪಾಂಡವರ ವನವಾಸ ಅವಧಿಯಲ್ಲಿ ಘಟಿಸಿದ "ಹಿಡಿಂಬವಧೆ" ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ.ಆದರೆ ನೆನಪಿರಲಿ ಆ ಘಟನೆಗೆ ಸಾಕ್ಷಿಯಾಗಿದ್ದು "ಏಕಚಕ್ರನಗರ" ಎಂಬ ಮಹಾಭಾರತದ ಕಾಲದ ಚಿಕ್ಕ ಹಳ್ಳಿ.ಕಾಲಕಳೆದಂತೆ ಬದಲಾವಣೆಗೆ ಒಳಪಡುತ್ತಾ ಸದ್ಯ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿರುವ ಆ ಹಳ್ಳಿಯೇ ಹಗರಟಗಿ.ಈ ಊರಿನ ಬಗ್ಗೆ ಈಗಾಗಲೇ ಹಲವಾರು ಸಂಶೋಧನೆಗಳು ನಡೆದಿವೆ.ಆ ಪ್ರಕಾರವಾಗಿ ಈ ಹಳ್ಳಿಯಲ್ಲಿ ೧೦೧ ದೇವಸ್ಥಾನಗಳು,೧೦೧ ಬಾವಿಗಳು, ೧೦೧ ನಂದಿ ವಿಗ್ರಹಗಳು,ಪ್ರತಿ ದೇವಸ್ಥಾನಕ್ಕೊಂದರಂತೆ ೧೦೧ ಶಾಸನಗಳು ಈಗಲೂ ಪ್ರಸ್ತುತ.ವಿಶೇಷವೆನೇಂದರೆ ಇಲ್ಲಿ ಕುಂತಿಯನ್ನೊಳಗೊಂಡತೆ ಪಂಚಪಾಂಡವರಾದ ಯುಧಿಷ್ಟಿರ,ಭೀಮ,ಅರ್ಜುನ,ನಕುಲ,ಸಹದೇವರಿಗೆ ದೇವಸ್ಥಾನಗಳಿವೆ.ಸಾಮಾನ್ಯವಾಗಿ ಭಾರತದಾದ್ಯಂತ ಬ್ರಹ್ಮ,ವಿಷ್ಣು,ಶಿವ,ಕೃಷ್ಣನಿಗೆ ದೇವಸ್ಥಾನಗಳಿರುವುದು ಸಾಮಾನ್ಯ.ಆದರೆ ಮಹಾರಾಜರಾದ ಪಾಂಡವರಿಗೆಕೇ ದೇವಸ್ಥಾನ ಎಂಬ ಪ್ರಶ್ನೆ ಬರುವುದು ಸಾಮಾನ್ಯ.ಅದರಲ್ಲೂ ಪಾಂಡವರನ್ನು ದೇವರುಗಳೆಂದು ಒಪ್ಪಿಕೊಳ್ಳಬೇಕೇ ಎಂಬ ಪ್ರಶ್ನೆ ಬರುವುದು ಇನ್ನೂ ಸಾಮಾನ್ಯ.ಅದಕ್ಕೆ ಪುಷ್ಠಿ ನೀಡುವಂತೆ ಧರ್ಮರಾಯನ ದೇವಸ್ಥಾನ ಮೂರ್ನಾಲ್ಕು ದಶಕಗಳ ಹಿಂದೆ ಜೀರ್ಣೋದ್ಧಾರಗೊಂಡು, ಪ್ರತಿ ವರ್ಷವೂ ಯುಗಾದಿ ಅಮವಾಸ್ಯೆ ಕಳೆದ ಐದು ದಿನಕ್ಕೆ ಅತಿ ವಿಜೃಂಭಣೆಯಿಂದ ಜಾತ್ರೆ ಜರಗುತ್ತದೆ.