ವಿಷಯಕ್ಕೆ ಹೋಗು

ಸದಸ್ಯ:1810266apoorva

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಪೂರ್ವ.ಸಿ.ಎ
ಅಪೂರ್ವ.ಸಿ.ಎ
ಅಪೂರ್ವ ಅವರ ಸಾಂದರ್ಭಿಕ ಚಿತ್ರ
Born
ಅಶ್ವಿನಿ.ಸಿ.ಎ

೩೦/೧೨/೨೦೦೦
ಚಳ್ಳಕೆರೆ ತಾಲೂಕು, ಚಿತ್ರದುರ್ಗ ಜಿಲ್ಲೆ
Nationalityಇಂಡಿಯನ್
Educationಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ - ಶ್ರೀ ಸ್ವಾಮಿ ವಿವೇಕಾನಂದ ಶಾಲೆ ಕಾಲೇಜು - ಎಸ್.ಅರ್.ಎಸ್ ಕಾಲೇಜು
Notable workಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ೭೫ನೆಯ "ಕನ್ನಡ ಸಾಹಿತ್ಯ ಸಮ್ಮೇಳನ"ದಲ್ಲಿ ಸ್ವಾಗತ ನೃತ್ಯ
Parent(s)ತಂದೆ - ಅಶೋಕ್ ರೆಡ್ಡಿ.ಟಿ, ತಾಯಿ - ಸುಧ.ಎನ್.ಅರ್

ಜನನ ಮತ್ತು  ಬಾಲ್ಯ

[ಬದಲಾಯಿಸಿ]

'ಅಪೂರ್ವ' ಎಂದರೆ 'ಅಪರೂಪ 'ಹೌದು.ನನ್ನ ಹೆಸರು ಅಪೂರ್ವ.ಸಿ.ಎ. ನಾನು ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ,ಚಿತ್ರದುರ್ಗ ಕೋಟೆ ಚಳ್ಳಕೆರೆ ತಾಲ್ಲೂಕಿನಲ್ಲಿರುವ, ಲಕ್ಷ್ಮಿ ಶ್ರೀನಿವಾಸ್ ನರ್ಸಿಂಗ್ ಹೋಂ ಎಂಬ  ಖಾಸಗಿ ಆಸ್ಪತ್ರೆಯಲ್ಲಿ. ನನ್ನ ಜನ್ಮದಿನಾಂಕ ೩೦:೧೨:೨೦೦೦ ಶನಿವಾರ ಬೆಳಗ್ಗೆ ೧೨:೪೫ ಕ್ಕೆ ನಾನು ಈ ಭೂಮಿಗೆ  ಬಂದಿದ್ದು. ನಾನು ನನ್ನ ಬಾಲ್ಯತನವನ್ನು ಕಳೆದದ್ದು ಚಳ್ಳಕೆರೆ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ . ನನ್ನ ತಂದೆಯ ಹೆಸರು 'ಅಶೋಕ್ ರೆಡ್ಡಿ.ಟಿ' ಮತ್ತು ನನ್ನ ತಾಯಿಯ ಹೆಸರು 'ಸುಧಾ.ಎನ್.ಆರ್'. ನನ್ನ ತಂದೆಯವರು ಮುಖ್ಯ ಶಿಕ್ಷಕರಾಗಿ ಸರ್ಕಾರಿ  ಪ್ರೌಢ ಶಾಲೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ನನ್ನ ತಾಯಿ ಗೃಹಿಣಿ. ಇನ್ನು ನನಗೆ ಸಹೋದರ ಇದ್ದಾನೆ, ಅವನ ಹೆಸರು ವಿನಯಾದಿತ್ಯ.ಸಿ.ಎ. ನನಗಿಂತ ಮೂರು ವರ್ಷ ದೊಡ್ಡವನು. ನನ್ನ ಸಹೋದರ ಬಿ.ಕಾಂ  ಪದವಿಯನ್ನು ಮುಗಿಸಿ  ಮುಂದಿನ ಉದ್ಯೋಗಕ್ಕಾಗಿ ತರಬೇತಿಯನ್ನು ಪಡೆಯುತ್ತಿದ್ದಾನೆ. ನನ್ನ ತಂದೆಗೆ ನಾನು ಮುದ್ದಿನ ಮಗಳು. ನಾನು ಎಂದರೆ  ನಮ್ಮ ಮನೆಯಲ್ಲಿ ಎಲ್ಲರಿಗು ತುಂಬಾ ಇಷ್ಟ. ನಾನು ಚಿಕ್ಕವಳಿದ್ದಾಗಿನಿಂದಲೂ ಈಗಿನವರೆಗೂ ನನ್ನ ಸಹೋದರನ ಜೊತೆ ಜಗಳವಾಡಿಕೊಂಡು, ಆಟವಾಡಿಕೊಂಡು ಬೆಳೆದಿದ್ದೇನೆ.ನಾನೆಂದರೆ ನಮ್ಮಣ್ಣನಿಗೆ ತುಂಬಾ ಇಷ್ಟ. ಇನ್ನು ನನ್ನ ತಂದೆ, ತಾಯಿ, ಅಜ್ಜಿ, ತಾತ  ಎಲ್ಲಾರು  ನನಗೆ ಒಳ್ಳೆಯ  ಸಂಪ್ರದಾಯ, ಒಳ್ಳೆಯ ನಡವಳಿಕೆಯನ್ನು ಕಲಿಸಿದ್ದಾರೆ. ದೊಡ್ಡವರಿಗೆ ಗೌರವವನ್ನು ನೀಡಬೇಕು, ದೊಡ್ಡವರ ಮಾತನ್ನು ಕೇಳಬೇಕು ಎಂದು ಹೇಳಿಕೊಟ್ಟಿದ್ದಾರೆ. ಅವರು ಹೇಳಿಕೊಟ್ಟ ಹಾಗೆಯೆ ನಾನು ಬೆಳೆದಿದ್ದೇನೆ.

ವಿದ್ಯಭ್ಯಾಸ

[ಬದಲಾಯಿಸಿ]

ನನ್ನ ವಿದ್ಯಾಭ್ಯಾಸಕ್ಕಾಗಿ ನನ್ನ ಪೋಷಕರು ಚಳ್ಳಕೆರೆ ತಾಲ್ಲೂಕಿನಲ್ಲಿರುವ 'ಶ್ರೀ ಸ್ವಾಮಿ ವಿವೇಕಾನಂದ' ಶಾಲೆಗೆ ಸೇರಿಸಿದರು. ನಾನು ಎಲ್.ಕೆ.ಜಿ ಯಿಂದ ಹತ್ತನೇ ತರಗತಿಯವರೆಗೂ ಓದಿದ್ದು ಅದೇ ಶಾಲೆಯಲ್ಲಿ. ಏಳನೇ ತರಗತಿಯವರೆಗೂ ನಾನು ಕನ್ನಡ ಮಾದ್ಯಮದಲ್ಲಿ ಓದಿದ್ದು , ನಂತರ ಎಂಟನೇ ತರಗತಿಗೆ ಅದೇ ಶಾಲೆಯಲ್ಲಿ ನಾನು ಆಂಗ್ಲ ಮಾಧ್ಯಮಕ್ಕೆ ಸೇರಿಕೊಂಡೆ. ನಾನು ಐದನೇ ತರಗತಿಯಿಂದ ಸತತವಾಗಿ ಪರೀಕ್ಷೆಯಲ್ಲಿ  ನನ್ನ ತರಗತಿಗೆ ನಾನೇ ಮೊದಲು ಬರುತ್ತಿದ್ದೆ. ನನ್ನ ತಂದೆ, ತಾಯಿ ತುಂಬಾ ಸಂತೋಷ, ಹೆಮ್ಮೆ ಪಡುತ್ತಿದ್ದರು.ನಮ್ಮ ಶಾಲೆಯಲ್ಲಿ ಎಲ್ಲಾ ಶಿಕ್ಷಕರು ನನಗೆ ಓದುವುದಕ್ಕೆ ತುಂಬಾ ಸಹಾಯ ಮಾಡುತ್ತಿದ್ದರು ನನಗೆ ಹತ್ತನೇ ತರಗತಿಯಲ್ಲಿ  "ಬೆಸ್ಟ್ ಸ್ಟೂಡೆಂಟ್ ಆ ದಿ ಇಯರ್" ಎನ್ನುವ ಪುರಸ್ಕಾರ ನೀಡಿದ್ದರು. ನಾನು ೨೦೧೬ರಲ್ಲಿ ಹತ್ತನೇ ತರಗತಿಯಲ್ಲಿ ಶೇ.೯೧% ನೊಂದಿಗೆ  ಉತ್ತೀರ್ಣಳಾಗಿರುತ್ತೇನೆ.  ನನ್ನ ಪ್ರೌಢ ಶಿಕ್ಷಣ ಮುಗಿದ ಮೇಲೆ ನಾನು ಚಳ್ಳಕೆರೆ ತಾಲೂಕಿನಲ್ಲಿರುವ ಎಸ್. ಅರ್. ಎಸ್. ಪದವಿ ಪೂರ್ವ ಕಾಲೇಜಿಗೆ ವಾಣಿಜ್ಯ ವಿಭಾಗವನ್ನು  ಆರಿಸಿಕೊಂಡು ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದೆನು. ಅಲ್ಲಿ ನನಗೆ ತುಂಬಾ ಒಳ್ಳೆಯ ಸಹಪಾಠಿಗಳು ಆದರು. ಹಾಗೆಯೇ ನನಗೆ ಪದವಿ ಪೂರ್ವ ಕಾಲೇಜಿನಲ್ಲಿಯೂ ಸಹ ನನ್ನ ನಡವಳಿಕೆ, ನನ್ನ ವಿದ್ಯಾಭ್ಯಾಸ, ನಾನು ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದುದನ್ನು ಗುರುತಿಸಿ "ಬೆಸ್ಟ್ ಸ್ಟೂಡೆಂಟ್ ಆ ದಿ ಇಯರ್" ಎಂದು ನನಗೆ ಪುರಸ್ಕಾರ ನೀಡಿದರು. ನನಗೆ ಖುಷಿಯಾದ ವಿಷಯವೆಂದರೆ ವಾಣಿಜ್ಯ ಹಾಗು ವಿಜ್ಞಾನ ವಿಭಾಗಗಳನ್ನು ಕೂಡಿಸಿದರೆ ಸುಮಾರು ಒಂದು ೧೫೦ ಹುಡುಗಿಯರಿದ್ದರು ಅಷ್ಟು ಜನರಲ್ಲಿ ನನ್ನನ್ನು ಆಯ್ಕೆ ಮಾಡಿದ್ದರು. ನನ್ನ ತಂದೆ ತಾಯಿ ಹಾಗು ಅಣ್ಣ ತುಂಬಾ ಖುಷಿಪಟ್ಟರು.ನನ್ನ ಶಿಕ್ಷಕರು ಪರೀಕ್ಷೆಗೆ ತಯಾರಿಯಾಗಲು ತುಂಬಾನೇ ಸಹಾಯ ಮಾಡಿದರು.ಹೀಗೆ ೨೦೧೮ರಲ್ಲಿ  ನಾನು ದ್ವಿತೀಯ ಪಿ.ಯು.ಸಿ ಯಲ್ಲಿ ನಮ್ಮ ಕಾಲೇಜಿಗೆ ಶೇಕಡ ೯೪ ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನವನ್ನು ಪಡೆದು ಉತ್ತೀರ್ಣಳಾಗಿದ್ದೇನೆ. ನನ್ನ ಮುಂದಿನ ವಿದ್ಯಾಭ್ಯಾಸವನ್ನು ಬೆಂಗಳೂರು ಬೆಂಗಳೂರಿನ ಹೆಸರಾಂತ "ಕ್ರೈಸ್ಟ್ ವಿಶ್ವವಿದ್ಯಾಲಯ" ಕ್ರೈಸ್ಟ್ ಯೂನಿವರ್ಸಿಟಿ ಬಿ.ಕಾಂನ  ಮೊದಲನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಕೊನೆಯದಾಗಿ ನಾನು ಈ ಭೂಮಿಗೆ ಬರಲು ಕಾರಣರಾದಂತಹ ನನ್ನ ಪೋಷಕರಿಗೆ ಈ ಸಂದರ್ಭದಲ್ಲಿ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅವರ ಆಸೆಯಂತೆ ನಾನು ಇನ್ನು ಚೆನ್ನಾಗಿ ಓದಿ ನನ್ನ ಗುರಿಯನ್ನು ತಲುಪುತ್ತೇನೆ.  

ಆಸಕ್ತಿಯ ಕ್ಷೇತ್ರಗಳು

[ಬದಲಾಯಿಸಿ]

ಶಾಲೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗು ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿದ್ದ ಪ್ರತಿಭಾ ಕಾರಂಜಿ ಎಂಬ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜಾನಪದ ನೃತ್ಯವನ್ನು ಮಾಡುತ್ತಿದ್ದೆ , ದೇಶಭಕ್ತಿ ಗೀತೆಗಳಲ್ಲಿ ಭಾಗವಹಿಸುತ್ತಿದ್ದೆನು.  ನಾನು ಒಂದನೇ ತರಗತಿ ಓದುತ್ತಿರುವಾಗ ಭರತನಾಟ್ಯವನ್ನು ಕಲಿಯುವುದಕ್ಕೆ "ನೃತ್ಯನಿಕೇತನ" ಎಂಬ ಶಾಲೆಗೆ ನನ್ನನ್ನು ನನ್ನ ತಂದೆ ಸೇರಿಸಿದರು. ಸತತವಾಗಿ ನಾನು ಏಳು ವರ್ಷ ಭರತನಾಟ್ಯವನ್ನು ಕಲಿತೆನು.  ನಾನು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ೭೫ನೆಯ "ಕನ್ನಡ ಸಾಹಿತ್ಯ ಸಮ್ಮೇಳನ"ದಲ್ಲಿ ಆಗಿನ ಮುಖ್ಯಮಂತ್ರಿಗಳಾದ ಸಿ.ಯಡಿಯೂರಪ್ಪನವರನ್ನು ವೇದಿಕೆಗೆ ಸ್ವಾಗತಿಸಲು ಸ್ವಾಗತ ನೃತ್ಯವನ್ನು ಮಾಡಿದ್ದೆನು. ಅದೇ ವೇದಿಕೆಯಲ್ಲಿ ಇತರೆ ಎರಡು ಹಾಡುಗಳಿಗೆ ಭರತನಾಟ್ಯವನ್ನು ಮಾಡಿದ್ದೆನು.. ಆ ಎರಡು ದಿನ ನನ್ನ ಜೀವನದಲ್ಲೇ  ಮರೆಯಲಾಗದಂತಹ ದಿನಗಳು. ನಾನು ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ಹಾಗೆಯೆ ನನ್ನ ತಂದೆ ತಾಯಿ ಕೂಡ ತುಂಬಾ ಹೆಮ್ಮೆಯಿಂದ, ಸಂತೋಷದಿಂದ ಹೇಳಿಕೊಳ್ಳುತ್ತಾರೆ.  ನಾನು ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದಾಗ ನೃತ್ಯವನ್ನು ಮಾಡುತ್ತಿದ್ದೆ ಹಾಗು ಹಾಡುಗಳನ್ನ ಹೇಳುತ್ತಿದ್ದೆನು. ಎಲ್ಲಾ  ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತಿದ್ದೆನು. ಹಾಗೆಯೇ ನಾನು ಪದವಿ ಪೂರ್ವ ಕಾಲೇಜಿನಲ್ಲಿಯೂ ಸಹ ಮೊದಲಿನ ಹಾಗೆ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆನು. ನಾನು ದ್ವಿತೀಯ ಪಿ.ಯು.ಸಿ ಯಲ್ಲಿ ನಮ್ಮ ಕಾಲೇಜಿನಲ್ಲಿ ಏರ್ಪಡಿಸಿದ್ದ ಭಕ್ತಿಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು, ಚಿತ್ರಕಲೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು, ಭಾವಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆಡಿದ್ದೆನು. ಈಗಲು ಸಹ ಕ್ರೈಸ್ಟ್ ವಿಶ್ವ ವಿದ್ಯಾಲಯದಲ್ಲಿಯೂ ನಾನು ನಾಟಕಗಳಲ್ಲಿ ಹಾಗು ನೃತ್ಯಗಳಲ್ಲಿ  ಭಾಗವಹಿಸುತ್ತಿದ್ದೇನೆ .