ವಿಷಯಕ್ಕೆ ಹೋಗು

ಸದಸ್ಯ:Sanjeev raddappa/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾಟಕ ಎಂಬುವುದು ಘಟನೆಗಳ ಸರಪಳಿ. ಯಾವುದೇ ವಿಷಯವಿರಲಿ ಘಟನೆಗಳನ್ನು ಒಂದಕೊಂದು ಸಂಬಂಧಿಸಿದಂತೆ ಹೆಣೆಯಬೇಕು. ನಾಟಕದ ಪ್ರಕಾರಗಳಲ್ಲಿ ಯಾವ ನಾಟಕನ್ನು ಆಯ್ಕೆ ಮಾಡಿಕೊಳ್ಳುತ್ತೇವೋ ಅದರ ಅನುಸಾರವಾಗಿ ಬರವಣಿಗೆ ಇರಬೇಕು.

ನಾಟಕ ಬರವಣಿಗೆ

[ಬದಲಾಯಿಸಿ]

ನಾಟಕದಲ್ಲಿ ಹಲವು ಸ್ತರಗಳನ್ನು ತಂದು ತೋರಿಸಬೇಕು (ಆರಂಭ-ವಿಕಾಸ-ನಿರ್ಣಯ-ಮುಕ್ತಾಯ) ಹೆಚ್ಚಿನ ಸಂಭಾಷಣೆಯಿಂದ ನಾಟಕವಾಗಲಾರದು. ನಾಟಕದ ಬರವಣಿಗೆಯ ಆರಂಭ ದೃಶ್ಯದಲ್ಲಿ ಸ್ಪಲ್ಪಮಟ್ಟಿಗೆ ಸಮಸ್ಯೆಯ ಎಳೆಯನ್ನು ತೋರಿಸಬೇಕು. ಇದರ ಜತೆಗೆ ಕಾಲ ಮತ್ತು ದೇಶವು ಪ್ರಮುಖ ಪಾತ್ರ ವಹಿಸುತ್ತದೆ. ನಾಟಕದಲ್ಲಿ ತರ್ಕವೆಂಬುದು ಪ್ರಥಮ ಸ್ಥಾನದಲ್ಲಿರುತ್ತದೆ. ತರ್ಕವೆಂದರೆ ಒಂದಕೊಂದು ಸನ್ನಿವೇಶಗಳಿಗಿರುವ ಸಂಬಂಧ.

ನಾಟಕ ಬರವಣಿಗೆಯ ಪ್ರಕಾರಗಳು

[ಬದಲಾಯಿಸಿ]

ನಾಟಕದ ಬರವಣಿಗೆಯಲ್ಲಿ ಎರಡು ಪ್ರಕಾರಗಳಿವೆ. ೧. ಸೃಜನಶೀಲ ಬರಹ ೨. ಸೃಜನೇತರ ಬರಹ

ಸೃಜನಶೀಲ ಬರಹ ನಾಟಕದಲ್ಲಿ ಎರಡು ಸಂಗತಿಗಳಿವೆ. ೧. ನಾಟಕ ಪಠ್ಯ ಬರಹಗಳಿಂದ ನಾಟಕವನ್ನು ಕಟ್ಟಿಕೊಡುತ್ತದೆ. ೨. ರಂಗಪಠ್ಯ ಬರವಣಿಣೆಯ ಜೊತೆಗೆ ದೃಶ್ಯಗಳನ್ನು ಸಹ ಒಳಗೊಂಡಿರುತ್ತದೆ. ನಾಟಕ ಪಠ್ಯ ನಾಟಕ ಪಠದೊಳಗೆ ಕ್ರಿಯೆಯನ್ನು ಸಂಯೋಜಿಸಬೇಕು. ಮೂಲಭೂತವಾಗಿರುವ ಒಂದು ಬರಹ. ಒಬ್ಬ ವ್ಯಕ್ತಿ ಆಲೋಚನೆ ಚಿಂತನೆಗಳ ಮೂಲಕ ಬರೆಯುವುದು. ಇದರಲ್ಲಿ ಮುಖ್ಯವಾದ್ದು ಕಾಲ ವಿಂಗಡನೆ.

ನಾಟಕದಲ್ಲಿರುವ ಪ್ರಕಾರಗಳು

[ಬದಲಾಯಿಸಿ]

೧. ಸುಖಾಂತ ನಾಟಕಗಳು ೨. ದುರಂತ ನಾಟಕಗಳು ೩. ಪೌರಾಣಿಕ ನಾಟಕಗಳು ೪. ಸಾಮಾಜಿಕ ನಾಟಕಗಳು ೫. ಐತಿಹಾಸಿಕ ನಾಟಕಗಳು ೬. ಗೀತ ನಾಟಕಗಳು ೭. ಗದ್ಯ ನಾಟಕಗಳು ೮. ಹಾಸ್ಯ ನಾಟಕಗಳು ೯. ಯಕ್ಷಗಾನ ನಾಟಕಗಳು ೧೦. ಬೀದಿ ನಾಟಕಗಳು ೧೧. ಬಯಲು ನಾಟಕ ೧೨. ಮೂಕ ನಾಟಕ ೧೩. ರೌದ್ರ ನಾಟಕ ೧೪. ಸಾಂದರ್ಭಿಕ ನಾಟಕ ೧೫. ಮಕ್ಕಳ ನಾಟಕ ೧೬. ದೊಡ್ಡಾಟ ನಾಟಕ ೧೭. ಸಣ್ಣಾಟ ನಾಟಕ ನಾಟಕದ ಬರವಣಿಗೆಯ ಶೈಲಿಗಾಗಿ ಕುವೆಂಪು ರವರ ಶ್ಮಶಾನ ಕುರುಕ್ಷೇತ್ರ ಬೆರಳ್ಗೆ ಕೊರಳ್ ಷೇಕ್ಸ್ಪಿಯರ್ ರವರ ಹ್ಯಾಮ್ಲೆಟ್ []


  1. https://kn.m.wikipedia.org/wiki/%E0%B2%B9%E0%B3%8D%E0%B2%AF%E0%B2%BE%E0%B2%AE%E0%B3%8D%E0%B2%B2%E0%B3%86%E0%B2%9F%E0%B3%8D