ದಿ ಹಿಂದೂಸ್: ಆನ್ ಆಲ್ಟರ್ನೇಟಿವ್ ಹಿಸ್ಟರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಿ ಹಿಂದೂಸ್: ಆನ್ ಆಲ್ಟರ್ನೇಟಿವ್ ಹಿಸ್ಟರಿ ಯು ಖ್ಯಾತ ಇಂಡಾಲಜಿ ತಜ್ಞೆ ವೆಂಡಿ ಡಾನಿಗೆರ್ ಅವರ ಪುಸ್ತಕ. ೨೦೦೯ರಲ್ಲಿ ಪ್ರಪ್ರಥಮವಾಗಿ ಮುದ್ರಣ ಕಂಡ ಈ ಪುಸ್ತಕವು ಭಾರತದಲ್ಲಿ ಪೆಂಗ್ವಿನ್ ಇಂಡಿಯಾದಿಂದ ಪ್ರಕಟಣೆಯಾಯಿತು.

ಫೆಬ್ರವರಿ ೨೦೧೪ ರಲ್ಲಿ ಈ ಪುಸ್ತಕವು ಭಾರತದಲ್ಲಿ ತೀವ್ರ ಟೀಕೆಗೊಳಗಾಯಿತು. ಇದರ ಪ್ರಕಾಶಕರ ಮತ್ತು ಬರಹಗಾರರ ವಿರುದ್ಧ ನ್ಯಾಯಾಲಯದಲ್ಲಿ ಖಟ್ಲೆ ಹೂಡಲಾಗಿ, ಪ್ರಕಾಶಕರು ಈ ಪುಸ್ತಕವನ್ನು ಮಾರುಕಟ್ಟೆಯಿಂದ ಹಿಂಪಡೆದರು. ೨೦ ತಿಂಗಳ ನಂತರ ಇದೇ ಪುಸ್ತಕ ಮತ್ತೊಂದು ಪ್ರಕಾಶಕರಾದ ಸ್ಪೀಕಿಂಗ್ ಟೈಗರ್ ಬುಕ್ಸ್ ಮೂಲಕ ಮಾರುಕಟ್ಟೆಗೆ ಬಂದಿತು.

ಪುಸ್ತಕದ ಸಾರಾಂಶ[ಬದಲಾಯಿಸಿ]

ಇತ್ತೀಚಿನವರೆಗೂ ವೈದಿಕರ ಅಥವಾ ಬಿಳಿಯ ಇತಿಹಾಸಕಾರರ ಮೂಲಕ ಹೇಳಲ್ಪಟ್ಟಿದ್ದ ಹಿಂದೂ ಧರ್ಮದ ಇತಿಹಾಸವನ್ನು ಈ ಪುಸ್ತಕವು ಮಹಿಳೆಯರ, ನಾಯಿಗಳ, ಕುದುರೆಗಳ ಮತ್ತು ಸಮಾಜದಿಂದ ಬಹಿಷ್ಕರಿಸಲ್ಪಟ್ಟವರ ದೃಷ್ಟಿಯಿಂದ ಹೇಳುತ್ತದೆ.

ಸ್ವಾಗತ[ಬದಲಾಯಿಸಿ]

ಹಿಂದುಸ್ತಾನ್ ಟೈಮ್ಸ್ ಪ್ರಕಾರ, ದಿ ಹಿಂದೂಸ್ ಪುಸ್ತಕವು ಅಕ್ಟೋಬರ್ ೧೫, ೨೦೦೯ರ ಸಾಪ್ತಾಹಿಕದಲ್ಲಿ ಮೊದಲನೆಯ ಸ್ಥಾನದಲ್ಲಿತ್ತು. ಸೋಷಿಯಲ್ ಸೈಂಟಿಸ್ಟ್ ಮತ್ತು ಜರ್ನಲ್ ಆಫ಼್ ದಿ ಅಮೆರಿಕನ್ ಓರಿಯೆಂಟಲ್ ಸೊಸೈಟಿ ಗಳು ಪುಸ್ತಕವನ್ನು ಕೊಂಡಾಡಿದ್ದವಾದರೂ ಪುಸ್ತಕದಲ್ಲಿನ ಕೆಲವು ತಪ್ಪುಗಳ ಬಗ್ಗೆ, ಬ್ರಿಟಿಷ್ ಆಳ್ವಿಕೆದಾರರ ಬಗೆಗಿನ ಅಧ್ಯಾಯವನ್ನು ಖಂಡಿಸಿದವು.

ದಿ ಲೈಬ್ರರಿ ಜರ್ನಲ್, ದಿ ಟೈಮ್ಸ್ ಲಿಟರರಿ ಸಪ್ಲಿಮೆಂಟ್, ದಿ ನ್ಯೂ ಯಾರ್ಕ್ ರಿವ್ಯೂ ಆಫ಼್ ಬುಕ್ಸ್, ದಿ ನ್ಯೂ ಯಾರ್ಕ್ ಟೈಮ್ಸ್, ದಿ ಹಿಂದೂ ಒಳಗೊಂಡಂತೆ ಹಲವಾರು ಪತ್ರಿಕೆಗಳು ಗುಣಾತ್ಮಕ ವಿಮರ್ಶೆ ಮಾಡಿದ್ದವು.

ಭಾರತದಲ್ಲಿ ಕಾನೂನು ಸಮರ[ಬದಲಾಯಿಸಿ]

ಪ್ರಪಂಚದಾದ್ಯಂತ ಹಲವಾರು ವಿದ್ವಾಂಸರು ದಿ ಹಿಂದೂಸ್ ಪುಸ್ತಕವನ್ನು ಹೊಗಳಿದ್ದರೂ, ಭಾರಾತೀಯರಿಂದ ತೀವ್ರ ಟೀಕೆಗೆ ಒಳಗಾಗಬೇಕಾಯಿತು. ಹಿಂದೂ ಧರ್ಮವನ್ನು ಈ ಪುಸ್ತಕದಲ್ಲಿ ಅವಹೇಳನ ಮಾಡಲಾಗಿದೆ ಎಂದು ಶಿಕ್ಷಾ ಬಚಾವ್ ಆಂದೋಲನ್ ಸಮಿತಿಯ ಸ್ಥಾಪಕರಾದ ದೀನಾನಾಥ್ ಬಾತ್ರಾ ಆರೋಪಿಸಿದರು. ಪ್ರಕಾಶಕರಾದ ಪೆಂಗ್ವಿನ್ ಇಂಡಿಯಾ ಸಂಸ್ಥೆಯು ಬ್ರಿಟಿಷ್ ಕಾಲದ ಕಾನೂನುಗಳನ್ನು ದೂಷಿಸಿತ್ತಾದರೂ ನ್ಯಾಯಾಲಯದಲ್ಲಿ ಖಟ್ಲೆಯನ್ನು ಎದುರಿಸಲಾರದೆ ಪುಸ್ತಕವನ್ನು ಮಾರುಕಟ್ಟೆಯಿಂದ ಹಿಂಪಡೆದು ಆರು ತಿಂಗಳಿನಲ್ಲಿ ಎಲ್ಲಾ ಪುಸ್ತಕದ ನಕಲುಗಳನ್ನು ನಾಶಪಡಿಸುವುದಾಗಿ ಹೇಳಿಕೆ ನೀಡಿತು.