ಶ್ರೀ ರಾಮಕೃಷ್ಣ ವಿದ್ಯಾಕೇಂದ್ರ
ಧ್ಯೇಯ | ಸರ್ವತೋನ್ಮುಖ ವಿಕಾಸರ್ಹ ಮಾನವ. English: Man Making and Character Building. |
---|---|
ಪ್ರಕಾರ | ಖಾಸಗೀ ಸಂಸ್ಥೆ ಪ್ರಾಥಮಿಕ ಶಾಲೆ |
ಸ್ಥಾಪನೆ | 1984 |
ಸಂಯೋಜನೆ | ಶ್ರೀ ರಾಮಕೃಷ್ಣ ಮಠ |
ಚೇರ್ಮನ್ | ಸ್ವಾಮೀ ಹರ್ಷಾನಂದಜಿ ಮಹರಾಜ್ |
ಡೈರೆಕ್ಟರ್ | ಸ್ವಾಮೀ ವಿಷ್ಣುಮಯಾನಂದಾಜೀ ಮಹರಾಜ್ |
ಶೈಕ್ಷಣಿಕ ಸಿಬ್ಬಂಧಿ | > ೧೦ |
ವಿದ್ಯಾರ್ಥಿಗಳು | > ೨೦೦ |
ಸ್ಥಳ | ಬೆಂಗಳೂರು, ಕರ್ನಾಟಕ, ೫೬೦೦೮೩, ಭಾರತ 12°43′21″N 77°34′19″E / 12.722464°N 77.571951°E |
ಆವರಣ | ಪತ್ರಪಾತಿ ತೋಪು, ೧೦ ಎಕರೆ |
This article contains content that is written like an advertisement. |
ಶ್ರೀ ರಾಮಕೃಷ್ಣ ವಿದ್ಯಾಕೇಂದ್ರ, ಶಿವನ ಹಳ್ಳಿ, ಇದು ಬೆಂಗಳೂರು ನಗರದಿಂದ ಸುಮಾರು ೩೦ ಕಿಮೀ ದೂರದಲ್ಲಿರುವ ಬನ್ನೇರುಘಟ್ಟಾ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಶಿವನಹಳ್ಳಿ ಎಂಬ ಗ್ರಾಮದಲ್ಲಿದೆ. ಇದು ಶ್ರೀ ರಾಮಕೃಷ್ಣ ಮಿಷನ್, ಶಿವನ ಹಳ್ಳಿಯ ಒಂದು ಅಂಗ. ಇಲ್ಲಿ ನರ್ಸರಿ ಇಂದ ೭ ನೇ ತರಗತಿಯವರೆಗೆ ಉಪನ್ಯಾಸಕ ಕನ್ನಡ ಮಾಧ್ಯಮದ ಪಾಠಶಾಲೆ ಇದೆ. ಶ್ರೀ ರಾಮಕೃಷ್ಣ ವಿದ್ಯಾಕೇಂದ್ರ ಮರಗಿಡಗಳಿಂದ ಸುತ್ತುವರೆದ ಶಾಲೆ. ಶಾಲೆಯ ಪಕ್ಕದಲ್ಲೇ ೩.೫ ಎಕರೆಯ ದೊಡ್ಡ ಕ್ರೀಡಾಂಗಣ ಇದೆ, ಒಂದು ದೊಡ್ಡ ಗ್ರಂಥಾಲಯ, ಪ್ರಯೋಗಶಾಲೆ ಮತ್ತು ಕಂಪ್ಯೂಟರ್-ಲ್ಯಾಬ್ ಇದೆ. ಇದರಲ್ಲಿ ಸುಮಾರು ೩೦ ನೆತ್ವರ್ಕ್ಡ್ ಕಂಪ್ಯೂಟರ್-ಗಳು ಇವೆ. ಈ ಶಾಲೆ ಬೆಂಗಳೂರಿನ, ರಾಮಕೃಷ್ಣ ಮಠದ ಶಾಖಾ ಕೆಂದ್ರ ಮತ್ತು ಭಾರತದಲ್ಲಿ ಶ್ರೀರಾಮಕೃಷ್ಣ ಸಂಘ ಸಂಸ್ಥೆಗಳ ಪ್ರಮುಖ ಕೇಂದ್ರ ಬೇಲೂರು, ಕೊಲ್ಕತ್ತದಲ್ಲಿ ಇದೆ.
ವಿವರ
[ಬದಲಾಯಿಸಿ]ಗ್ರಾಮಾಂತರ ಪ್ರದೇಶಗಳಲ್ಲಿ ಶ್ರೀ ರಾಮಕೃಷ್ಣ ಮಿಷನ್ ಆಡಳಿತದಲ್ಲಿ ನಡೆಯುತ್ತಿರುವ ಎಲ್ಲಾ ಶಾಲೆಗಳ ಪೈಕಿ ಅತ್ಯುನ್ನತ ಶಾಲೆ ಎಂದು ಹೆಸರು ಗಳಿಸಿರುವ ಶ್ರೀ ರಾಮಕೃಷ್ಣ ವಿದ್ಯಾ ಕೆಂದ್ರ ಅನೇಕ ಬಗೆಗಳಲ್ಲಿ ನವ ಮಾರ್ಗದರ್ಶಕವೆನಿಸಿದೆ. ಪರಿಕಲ್ಪನೆಯ ಕಲಿಕೆ ಭದ್ರವಾದರೆ ಆತ್ಮವಿಶ್ವಾಸ ಹೆಚ್ಛುತ್ತದೆ, ಪರೀಕ್ಷೆಗಳಲ್ಲಿ ಅಂಕಗಳನ್ನು ಗಳಿಸುವ ಸಾಮರ್ಥ್ಯ ಸಿದ್ಧಿಸುತ್ತದೆ ಎಂಬ ತತ್ವದ ಮೇಲೆ ಇಲ್ಲಿ ಪಠ್ಯವಿಷಯಗಳನ್ನು, ಪಠ್ಯಕ್ರಮವನ್ನು ಅನುಸರಿಸಲಾಗುತ್ತಿದೆ. ವಿದ್ಯಾರ್ಥಿಗಳೇ ಶಾಲೆಯ ಅನೇಕ ದೈನಂದಿನ ಕಾರ್ಯಗಳಲ್ಲಿ ನೇತೃತ್ವವನ್ನು ವಹಿಕೊಳ್ಳುವ ಅವಕಾಶ ಉತ್ತೇಜನ ಇಲ್ಲಿ ಸಾಧ್ಯವಿದೆ.
ಇತಿಹಾಸ
[ಬದಲಾಯಿಸಿ]ವಿಶೇಷತೆ
[ಬದಲಾಯಿಸಿ]ವಿದ್ಯಾರ್ಥಿಗಳು ಪಲ್ಲಕ್ಕಿ ಏರಲೂ ಸಿದ್ದರಿರಬೇಕು, ಪಲ್ಲಕ್ಕಿ ಹೊರಲೂ ಸಿದ್ದರಿರಬೇಕು ಹೀಗಾಗಬೇಕಾದರೆ, ದೇಹ, ಮನಸ್ಸು, ಬುದ್ಧಿ, ಆತ್ಮವಿಶ್ವಾಸ ಮತ್ತು ಕಾರ್ಯ ದಕ್ಷತೆಗಳನ್ನು ಮೈಗೂಡಿಸಿಕೊಳ್ಳಲು ಇಲ್ಲಿ ಪಠ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತೋಟದ ಕೆಲಸ, ಎಲ್ಲ ಬಗೆಯ ಸ್ವಚ್ಛತಾ ಕಾರ್ಯ, ವಿದ್ಯ್ಯರ್ಥಿಗಳು ಪಾಲಿಸಬೇಕಾದ ನಿಯಮಗಳನ್ನು ವಿದ್ಯಾರ್ಥಿಗಳು ತಾವೇ ಸಮಾಲೋಚಸಿ, ಅದಕ್ಕೆ ಉಪನ್ಯಾಸಕ ವರ್ಗ ಹಾಗು ಆಡಲಿತ ವರ್ಗಗಳಿಂದ ಅನುಮತಿ ಪಡೆದು ಚಾಲನೆಗೆ ತರುವುದು, ಸ್ಪಲತೆ, ವಿಫಲತೆಗಳನ್ನು ದಾಖಲಿಸುವುದು, ಉಪನ್ಯಾಸಕರ ನಿರ್ದೀಶನದ ಮೇಲೆ ಮಂದ-ಅಧ್ಯಯನಿಗಳಿಗೆ ನೆರವಾಗುವಂತೆ ವೇಘ-ಅಧ್ಯಯನಿ ವಿದ್ಯಾರ್ಥಿಗಳೇ ಕಲಿಕಾ ಸಂಪನ್ಮೂಲಗಳನ್ನು ತಯಾರಿಸಿ ಬಳಕೆಗೆ ಒದಗಿಸುವುದು ಇಂತಹ ಅನೇಕ ಅಂಶಗಳನ್ನೊಳಗೊಂಡ ಪಠ್ಯಾನುಕ್ರಮ ಇಲ್ಲಿ ಪ್ರಯತ್ನಿಸಲಾಗುತ್ತಿದೆ.
ಮೌಲ್ಯಮಾಪನ
[ಬದಲಾಯಿಸಿ]ಸ್ವಾಮಿ ವಿವೇಕಾನಂದ ರ ಉದ್ದೇಶದಂತೆ ಮಾನವನ ಸರ್ವತೋನ್ಮುಖ ಬೆಳವಣಿಗೆಗೆ ಅಡಿಪಾಯ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಲು ಇಲ್ಲಿಯ ಶಾಲೆಯಲ್ಲಿ ಹಲವಾರು ಪ್ರಯತ್ನ, ಪ್ರಯೋಗಗಳು ನಡೆಯುತ್ತಿವೆ. ಈ ಪ್ರಯತ್ನದಲ್ಲಿ ವಿಶೇಷವಾಗಿ ಮಕ್ಕಳ ಪಠ್ಯ ವಿಷಯದ ಕಲಿಕೆಯನ್ನಷ್ಟೇ ಅಲ್ಲದೆ ಇನ್ನಿತರ ಉತ್ತಮ ಸರ್ವತೋನ್ಮುಖ ಬೆಳವಣಿಗೆಗೆ ಬೇಕಾದ ವಿಷಯಗಳ ಮೇಲೂ ನಿತ್ಯ ಗಮನಹರಿಸಲಾಗುತ್ತದೆ. ಮಕ್ಕಳಿಲ್ಲಿ ಶಿಸ್ತು, ಸ್ವಚ್ಛತೆ, ಪರಿಸರಮಾಲಿನ್ಯ, ಸ್ವಾವಲಂಬನೆ, ಪರಸ್ಪರ ಅವಲಂಬನೆ ಇವುಗಳೆಲ್ಲಕ್ಕೂ ಮಕ್ಕಳ ನಾಯಕ, ನಾಯಕೀಯರು ಅಂಕಗಳನ್ನು ದಾಖಲಿಸುತ್ತಾರೆ. ಇವುಗಳಲ್ಲಿ ದೊರೆಯುವ ಅಂಕ ಸುಮಾರು ೨೦% ರಷ್ಟು ವಿದ್ಯಾರ್ಥಿಯ ಒಟ್ಟು ಕಲಿಕಾ ಮೌಲ್ಯ ಮಾಪನಕ್ಕೆ ಅಳವಡಿಸಲಾಗುತ್ತದೆ. ಹಾಗೆಯೇ ೧೦% ಕ್ರೀಡೆಗಳಿಂದ, ೧೦% ಸಾಂಸ್ಕೃತಿಕ ವಿಷಯಗಳಿಂದ ಒಟ್ಟು ಮೌಲ್ಯ ಮಾಪನಕ್ಕೆ ಅಳವಡಿಸಿ ಅದರ ಆಧಾರದ ಮೇಲೆ ವಿದ್ಯಾರ್ಥಿಯ ಅಂತಿಮ ಗ್ರೇಡ್ ನಿರ್ಧರಿಸಲಾಗುವುದು.
ರಾಮಕೃಷ್ಣ ಮಿಷನ್‌ನಿಂದ ಮಹಿಳೆಯರನ್ನು ಆತ್ಮನಿರ್ಭರ ಭಾರತದತ್ತ ಹೆಜ್ಜೆ -
ಶ್ರೀ ರಾಮಕೃಷ್ಣ ಮಠ ಮತ್ತು ಮಿಶನ್ ರಾಮಕೃಷ್ಣ ಪರಮಹಂಸ ರ ಶಿಷ್ಯ ಮತ್ತು ಧಾರ್ಮಿಕ ಗುರು ಸ್ವಾಮಿ ವಿವೇಕಾನಂದರು ಮೇ ೧, ೧೮೯೭ರಲ್ಲಿ ರಾಮಕೃಷ್ಣ ಮಿಶನ್ ಅಸೋಷಿಯೇಶನ್ ಎಂಬ ಹೆಸರಿನಲ್ಲಿ ಸ್ಥಾಪಿಸಿದ ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆ. ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ -ಸ್ವಂತ ಮುಕ್ತಿಗಾಗಿ ಮತ್ತು ಲೋಕಹಿತಕ್ಕಾಗಿ-ಎಂಬ ಧ್ಯೇಯವಾಕ್ಯದಲ್ಲಿ ಅಡಕಗೊಳಿಸಲಾಗಿದೆ. ಈ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆಯು ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತದ ತಳಹದಿಯ ಮೇಲೆ ಸ್ಥಾಪಿತವಾಯಿತು. ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಅವಳಿ ಸಂಘಟನೆಗಳು ವಿಶ್ವದಾದ್ಯಂತ ಆಧ್ಯಾತ್ಮಿಕ ನಡೆಯುತ್ತಿರುವ ರಾಮಕೃಷ್ಣ ಚಳವಳಿ ಅಥವಾ ವೇದಾಂತ ಚಳವಳಿಯ ತಿರುಳುಭಾಗವಾಗಿದೆ.
ರಾಮಕೃಷ್ಣ ಮಿಷನ್ ಒಂದು ಸ್ವಯಂಸೇವಕ ಸಂಸ್ಥೆ. ಶತಮಾನ ಕಂಡ ಬೆಂಗಳೂರು ಆಶ್ರಮ ಬಸವನಗುಡಿಯಲ್ಲಿದೆ. ಬೆಂಗಳೂರಿನ ಹತ್ತಿರವಿರುವ ಶಿವನಹಳ್ಳಿ ಮೊದಲಾದ ಹಳ್ಳಿಗಳಲ್ಲಿ ಹಲವಾರು ಸಮಾಜಕಲ್ಯಾಣ ಕಾರ್ಯಗಳನ್ನು ಕೈಗೊಂಡಿದೆ. ಬರ ಪರಿಹಾರ, ನೆರೆಸಂತ್ರಸ್ತರ ಸಹಾಯ, ಗ್ರಾಮೀಣ ಜನರಿಗೆ ಶಿಕ್ಷಣ, ಆರೋಗ್ಯ ಸೇವೆಯೆ, ಗ್ರಾಮೀಣ ನಿರ್ವಹಣೆ, ಬುಡಕಟ್ಟು ಕಲ್ಯಾಣ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮೊದಲಾದ ಜನಸೇವಾ ಕಾರ್ಯಕ್ರಮಗಳನ್ನು ಈ ಸಂಸ್ಥೆಯ ವಿವಿಧ ಶಾಖೆಗಳು ನಿರ್ವಹಿಸುತ್ತವೆ. ಧಾರ್ಮಿಕ ಸಾಹಿತ್ಯ ಪ್ರಕಟಣೆ, ಶೀಲ ಸಂವರ್ಧನ ಶಿಬಿರಗಳು, ಪ್ರವಚನ ಮುಂತಾದವುಗಳ ಮೂಲಕ ಜನರ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಇದು ಪೂರೈಸುತ್ತಿದೆ. ಇದರ ಪ್ರಧಾನ ಕಛೇರಿಯ ಅಸ್ತಿತ್ವ ಹೌರಾ ದ ಬೇಲೂರು ಮಠ, ಕೋಲ್ಕತಾ, ಭಾರತದಲ್ಲಿದೆ. ಭಾರತದ ಸನಾತನ ಹಿಂದೂ ಧರ್ಮ ಮತ್ತು ವೇದಾಂತ ಆಧಾರ ಸ್ತಂಭಗಳು.
ಶ್ರೀ ರಾಮಕೃಷ್ಣ ವಿದ್ಯಾಕೇಂದ್ರ, ಶಿವನಹಳ್ಳಿ, ಇದು ಬೆಂಗಳೂರು ನಗರದಿಂದ ಸುಮಾರು ೩೦ ಕಿಮೀ ದೂರದಲ್ಲಿರುವ ಬನ್ನೇರುಘಟ್ಟಾ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಶಿವನಹಳ್ಳಿ ಎಂಬ ಗ್ರಾಮದಲ್ಲಿದೆ. ಇದು ಶ್ರೀ ರಾಮಕೃಷ್ಣ ಮಿಷನ್, ಶಿವನಹಳ್ಳಿಯ ಒಂದು ಅಂಗ. ಇಲ್ಲಿ ನರ್ಸರಿ ಇಂದ ೭ ನೇ ತರಗತಿಯವರೆಗೆ ಉಪನ್ಯಾಸಕ ಕನ್ನಡ ಮಾಧ್ಯಮದ ಪಾಠಶಾಲೆ ಇದೆ. ಶ್ರೀ ರಾಮಕೃಷ್ಣ ವಿದ್ಯಾಕೇಂದ್ರ ಮರಗಿಡಗಳಿಂದ ಸುತ್ತುವರೆದ ಶಾಲೆ. ಶಾಲೆಯ ಪಕ್ಕದಲ್ಲೇ ೩.೫ ಎಕರೆಯ ದೊಡ್ಡ ಕ್ರೀಡಾಂಗಣ ಇದೆ, ಒಂದು ದೊಡ್ಡ ಗ್ರಂಥಾಲಯ, ಪ್ರಯೋಗಶಾಲೆ ಮತ್ತು ಕಂಪ್ಯೂಟರ್-ಲ್ಯಾಬ್ ಇದೆ. ಇದರಲ್ಲಿ ಸುಮಾರು ೩೦ ನೆಟ್ವರ್ಕ್ಡ್ ಕಂಪ್ಯೂಟರ್-ಗಳು ಇವೆ. ಈ ಶಾಲೆ ಬೆಂಗಳೂರಿನ, ರಾಮಕೃಷ್ಣ ಮಠದ ಶಾಖಾ ಕೆಂದ್ರ ಮತ್ತು ಭಾರತದಲ್ಲಿ ಶ್ರೀರಾಮಕೃಷ್ಣ ಸಂಘ ಸಂಸ್ಥೆಗಳ ಪ್ರಮುಖ ಕೇಂದ್ರ ಬೇಲೂರು, ಕೊಲ್ಕತ್ತದಲ್ಲಿ ಇದೆ. ಶಿವನಹಳ್ಳಿ ಸುತ್ತಮುತ್ತ ಇರುವ ಸುಮಾರು ೧೫ ಹಳ್ಳಿಗಳಲ್ಲಿ ಸ್ವ ಸಹಾಯಗಳನ್ನು ಸಂಘಟಿಸುವುದರ ಮುಖಾಂತರ ಅಲ್ಲಿನ ಮಹಿಳೆಯರಿಗೆ ವಿವಿಧ ರೀತಿಯಲ್ಲಿ ತರಭೇತಿಗಳನ್ನು ನೀಡಲಾಗುತ್ತಿದೆ. ಹಳ್ಳಿ ಜನರಿಗೆ ಓದು ಬರಹವಾಗಲಿ ಬ್ಯಾಂಕ್ ವ್ಯವಹಾರದ ಬಗ್ಗೆ, ಉಳಿತಾಯ ಮಾಡುವುದು, ಸಾಲ ತೆಗೆದುಕೊಳ್ಳುವುದು ಇದು ಯಾವುದೂ ಗೊತ್ತಿಲ್ಲ. ಸಾಲಬೇಕಾದಾಗ ಜಮಿನ್ದಾರರ ಹತ್ರ ಹೋಗುತ್ತಾರೆ ೧ಕ್ಕೆ ೪ ಪಟ್ಟು ಬಡ್ಡಿ ಕೊಟ್ಟು ತರುತ್ತಾರೆ. ಸ್ವಲ್ಪ ಜಾಸ್ತಿ ಸಾಲಬೇಕಾದಾಗ ಅವರು ಚಿನ್ನ ಅಥವಾ ಭೂಮಿಪತ್ರ ಕೇಳುತ್ತಾರೆ. ರಾಮಕೃಷ್ಣಾಶ್ರಮದವರು ಗ್ರಾಮಾಂತರ ಜಿಲ್ಲೆಯ ಹಳ್ಳಿಯ ಜನರ ಸಹಾಯಕ್ಕೆ ಮುಂದಾದಾಗ ನಮಗೆ ಸಿಕ್ಕಿದ್ದು ಶಿವನಹಳ್ಳಿ. ಅದರ ಸುತ್ತ ಮುತ್ತ ಅನೇಕ ಸಣ್ಣ ಪುಟ್ಟ ಹಳ್ಳಿಗಳು. ಆ ಹಳ್ಳಿಗಳಲೆಲ್ಲಾ ಹೆಣ್ಣು ಮಕ್ಕಳು ಬಹಳ ಕಷ್ಟಪಟ್ಟು ದುಡಿಯುತ್ತಿದ್ದರು. ಊಟಕ್ಕೂ ಕೊರತೆ ಇತ್ತು ಸುತ್ತಲು ಕಾಡು, ಏನಾದ್ರು ಬೆಳೆ ಬೆಳೆದರೆ ಆನೆಗಳ ಕಾಟ. ಅಲ್ಲಿಯ ಮಕ್ಕಳಿಗೆ ಸ್ವಾಮೀಜಿಯವರು ಅಲ್ಲಿಯೇ ಇದ್ದ ಶಾಲೆಯಲ್ಲಿ ಹೆಣ್ಣುಮ್ಮಕ್ಕಳನ್ನು ಕರೆದು ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಹೇಳಿದರು. ಶಿಕ್ಷಣ ಅವಶ್ಯಕತೆಯ ಬಗ್ಗೆ ತಿಳಿಸಿದರು. ನೀವು ಯಾಕೆ ಸಾಲ ಮಾಡಿಕೊಂಡು ಕಟ್ಟಲು ಆಗದೇ ಕಷ್ಟಪಡುತ್ತೀರಾ? ಅದಕ್ಕೆ ನೀವೆ ಯಾಕೆ ೨೦ ಜನ ಸೇರಿಕೊಂಡು ನಿಮ್ಮ ಕೈಯಲ್ಲಿ ಆದಷ್ಟು ೫೦-೫೦ ರೂಪಾಯಿಯಂತೆ ಕಟ್ಟಿ ೧೦೦೦ ರೂಪಾಯಿ ಆದಮೇಲೆ ನಿಮಗೆ ಸಾಲಕೊಡುತ್ತೇವೆ. ಅದಕ್ಕೆ ೨% ಬಡ್ಡಿ ಹಾಕುತ್ತೇವೆ. ನೀವು ಸರಿಯಾಗಿ ಕಟ್ಟಿಲ್ಲ ಅಂದ್ರೆ ಅದಕ್ಕೆ ದಂಡ ಹಾಕ್ತೀವಿ ೩ & ೫ ವರ್ಷ ಮಾಡಿ ನಂತರ ಅವರು ದಂಡ ಕಟ್ಟಿದ್ದು, ಬಡ್ಡಿ, ಅವರ ಉಳಿತಾಯ ಎಲ್ಲವನ್ನು ಲೆಕ್ಕ ಮಾಡಿ ಇನ್ಸೆಂಟೀವ್ಸ್ ಡಿವಿಡೆಂಡ್ ಅಂತ ಅವರದನ್ನು ಅವರಿಗೆ ಕೊಟ್ಟರು. ಇದರಿಂದ ಮಕ್ಕಳಿಗೆ ಓದಿಸಲು ಸ್ವಲ್ಪ ಸಹಾಯ ಆಯ್ತು ವೃತ್ತಿಪರ ಜೀವನ ಕಂಡುಕೊಳ್ಳಬಹುದು ಹಸುಗಳನ್ನು ಕೊಡಿಸಿ ಡೈರಿ ತೆರೆಸಿದರು ಕುರಿಗಳನ್ನು ಕೊಡಿಸಿ, ಗ್ಯಾಸ್ ಕೊಡಿಸಿ ಅದನ್ನು ಹೇಗೆ ಬಳಸಬೇಕು ಎಂದು ತಿಳಿಸಿದರು.
ಮನೆಯಲ್ಲಿದ್ದ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದು ಟ್ರೈನಿಂಗ್ ಕೊಟ್ಟೆವು. ಅವರು ಬಹಳ ಬೆಳವಣಿಗೆ ಹೊಂದಿದ್ದಾರೆ. ಇದು ಸುಮಾರು ೩೫ ವರ್ಷಗಳಿಂದ ನಡೆಯುತ್ತಿದೆ. ಚಿದಾನಂದರು, ರಾಮಕೃಷ್ಣ ಆಶ್ರಮದಲ್ಲಿದ್ದಾಗ ನಾನು ಗ್ರಾಮೀಣಾಭಿವೃದ್ಧಿಗೆ ಸೇರಿಕೊಂಡೆ. ಮೂಲತಃ ನಾನು ಬಳ್ಳಾರಿ ಜಿಲ್ಲೆ ಹೊಸಪೇಟೆಯವಳು ನಂತರ ಬೆಂಗಳೂರಿನ ಗಾಯತ್ರಿ ವಿಮೆನ್ಸ್ ವೆಲ್‌ಫೇರ್ ಅಸೋಸಿಯೇಷನ್ ಯಶವಂತಪುರದಲ್ಲಿ ಟ್ರೈನಿಂಗ್ ಕೊಟು. ಅಲ್ಲಿಂದ ಅಸೋಸಿಯೇಷನ್‌ನಲ್ಲಿ ಕೆಲಸ ಮಾಡುತ್ತಿದ್ದೆ ೧೨೫ ರೂಪಾಯಿ ಸಂಬಳ ಕೊಡುತ್ತಿದ್ದರು. ಆಲ್ ಇನ್ ಒನ್ ಕಂಪನಿಯಲ್ಲಿ ವಾಚ್ ಮೆಕಾನಿಕ್ ಆಗಿ ಕೆಲಸ ಸಿಕ್ಕಿತು. ಅಲ್ಲಿ ಕೆಲಸ ಮಾಡುತ್ತಿರುವಾಗ ಆಲ್ ಇನ್ ಒನ್ ಮತ್ತು ಟೈಟಾನ್ ಕಂಪನಿಗೂ ಪೈಪೋಟಿ ಶುರುವಾಯ್ತು ನಂತರ ಕಂಪನಿ ಮುಚ್ಚಿಹೊಯ್ತು ಆಗ ನಮಗೆಲ್ಲ ವಿ.ಆರ್.ಎಲ್ ಕೊಟ್ರು. ರತ್ನಾಕರ್ ರವರು ಪರಿಚಯವಾದರು ಅವರು ಹಳ್ಳಿ-ಹಳ್ಳಿಗೂ ಹೋಗಿ ಜನರಿಗೆ ಚಿಕಿತ್ಸೆಕೊಡುತ್ತಿದ್ದರು ಶಾರದಾ ಸೇವಾ ಚಿಕಿತ್ಸೆ ಅಂತಾ ಸ್ವಾಮಿಜಿಯವರು ಮಾಡಿಟ್ಟಿದ್ದಾರೆ. ಅಲ್ಲಿ ಬೇರೆ ಕಡೆ ವಾಸಿಯಾಗದ ಖಾಯಿಲೆಗಳು ಗುಣವಾಗುತ್ತವೆ. ಕುಬೇರಗೌಡ ಅನ್ನೋ ಡಾಕ್ಟರ್ ಇದ್ದಾರೆ ಅವರು ೩೦-೩೫ ವರ್ಷದಿಂದ ಅಲ್ಲೇ ಕೆಲಸ ಮಾಡುತ್ತ್ತಿದ್ದರು ಈಗ ಅವರು ರಿಟೈಡ್ ಆಗಿದ್ದಾರೆ. ಈಗ ಅಮರ್‌ನಾರಾಯಣ್ ಅಂತ ಬೇರೆ ಡಾಕ್ಟರ್ ನೋಡಿಕೊಂಡು ಹೊಗುತ್ತಿದ್ದಾರೆ ಮುಂದೆ ನಾನೇನು ಮಾಡಬೇಕು ಅಂತಾ ಕೇಳಿದೆ ಶಾಂತದಯಾನಂದರು ಡಾ.ಪ್ರಕಾಶ್‌ರವರನ್ನು ಪರಿಚಯ ಮಾಡಿಸಿಕೊಡುತ್ತೇನೆ ಅವರ ಜೊತೆ ಕೆಲಸ ಮಾಡು ಅಂತ ಹೇಳಿದರು. ಶಾರದಾದೇವಿ, ರಾಮಕೃಷ್ಣ, ವಿವೇಕಾನಂದರು ಹೇಗೆ ಬಾಳಿದ್ರು ಅವರ ಆದರ್ಶಗಳೇನು ಅಂತ ಜನರಿಗೆ ತಿಳಿಸಬೇಕು ಎಂದು ತಿಳಿಸಿಕೊಟ್ಟರು. ಹಳ್ಳಿಯ ಜನರಿಗೆ ಧ್ಯಾನ, ಆಧ್ಯಾತ್ಮ, ಪ್ರಾರ್ಥನೆಯೆಂದರೇನು ಅನ್ನುವುದರ ಬಗ್ಗೆ ಅವರಿಗೆ ಅರಿವು ಮೂಡಿಸುವುದು ಮತ್ತು ಅವರಿಗೆ ವ್ಯವಹಾರ ಜ್ಞಾನ ಮೂಡಿಸಬೇಕು. ಆಮೇಲೆ ಅವರೆಲ್ಲಾ ೧೦-೧೦ ರೂಪಾಯಿ ಕಟ್ಟುತ್ತಾರೆ ಅವರಿಗೆಲ್ಲ ಒಂದೊಂದು ಪಾಸ್ ಬುಕ್ ಕೊಟ್ಟಿರುತ್ತಾರೆ ಅದರಲ್ಲಿ ಎಂಟ್ರಿ ಮಾಡಿಕೊಡಬೇಕು ದೊಡ್ಡ ಲೆಡ್ಜರ್ ಬುಕ್‌ನಲ್ಲಿ ಅವರ ಹೆಸರೆಲ್ಲಾ ಮೈಂಟೇನ್ ಮಾಡಬೇಕು. ಹೇಗೆಂದರೆ ಈ ವಾರ ಇಷ್ಟು ಕಟ್ಟಿದ್ದಾರೆ ಒಟ್ಟು ಎಷ್ಟು ದುಡ್ಡಾಗಿದೆ ಲೆಕ್ಕಬರೆದು ಇಡಬೇಕು. ಅವರು ಕಟ್ಟಿದ ವಾರ ವಾರದ ದುಡ್ಡನ್ನು ಬ್ಯಾಂಕಿಗೆ ಕಟ್ಟಬೇಕು. ಒಟ್ಟು ೧೦೦೦ ರೂಪಾಯಿಯಾದ ಮೇಲೆ ಅವರೇ ಸಾಲ ಕೇಳುತ್ತಾರೆ ಆವಾಗ ಅವರಿಗೆ ನಾವು ಚೆಕ್ ಕೊಡುತ್ತೇವೆ ಇವರು ಹೋಗಿ ದುಡ್ಡು ತರುತ್ತಾರೆ ಅವರಿಗೆ ಚೆಕ್, ಚಲನ್ ಎಲ್ಲಾ ವ್ಯವಹಾರಗಳ ಮಾಹಿತಿ ತಿಳಿಸಿಕೊಟ್ಟಿದ್ದೇವೆ. ಈ ರೀತಿ ಸಂಘಗಳು ಮಾಡಿ ವ್ಯವಹಾರವನ್ನು ಮಾಡುತ್ತಿದ್ದೇವೆ. ಮೊದಲು ೩೫ ಸಂಘಗಳಿದ್ದವು ಈಗ ೧೫-೧೮ ಸಂಘಗಳಿದ್ದಾವೆ ನಾವೆಲ್ಲರೂ ಒಂದೊಂದು ಸಂಘವನ್ನು ನೋಡಿಕೊಳ್ಳುತ್ತಿದ್ದೇವೆ. ಈಗ ಕೆಲ ಜನ ಬುದ್ಧಿವಂತರಾಗಿದ್ದಾರೆ ಸ್ವಾಮಿಜಿಯವರು ಎಲ್ಲಾ ಮಕ್ಕಳನ್ನು ಎಮ್.ಬಿ.ಎ. ವರೆಗೂ ಓದಿಸಿದ್ದಾರೆ. ಇನ್‌ಫೋಸಿಸ್‌ನ ಸುಧಾಮೂರ್ತಿಯವರು ಶಾಲೆಯನ್ನು ಕಟ್ಟಿಕೊಟ್ಟಿದ್ದಾರೆ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಬೇರೆ ಬೇರೆ ಹಾಸ್ಟಲ್ ಇದೆ, ಅಲ್ಲಿ ಓದಿದ ಹುಡುಗಿಯರು ಈಗ ಅಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಾನು ಮೊದಲು ಹೋಗಿದ್ದಾಗಿನಿಂದಲು ವಿಷ್ಣುಮಯಾನಂದರೆ ಇರುವುದು ವೃದ್ಧಾನಂದರು ಇದ್ದರೂ ಅವರು ಈಗ ಗೋವಾ ಆಶ್ರಮಕ್ಕೆ ಹಾಕಿದ್ದಾರೆ. ಸೌಖ್ಯನಂದರೂ ಅಂತ ಅವರು ಈಗ ಇಲ್ಲಿಗೆ ಬಂದಿದ್ದಾರೆ ಇಲ್ಲಿಂದ ಲೋಹಿತ್ ಮಹಾರಾಜ ಅವರು ಈಗ ಅಲ್ಲಿಗೆ ಹೋಗಿದ್ದಾರೆ ಇವಾಗ ಹೀಗೆ ನಡೆದುಕೊಂಡು ಹೋಗ್ತಾ ಇದೆ. ಆಮೇಲೆ ಡೈರಿಯೆಲ್ಲಾ ತೆಗೆಸಿಕೊಟ್ಟಿದ್ದಾರೆ ಗ್ಯಾಸ್ ಕೊಡಿಸಿ, ರೇಶನ್ ಕೊಡಿಸಿ, ಐಡಿ ಕಾರ್ಡ್, ಆಧಾರ್ ಕಾರ್ಡ್ ಎಲ್ಲಾ ಸ್ವಾಮಿಜಿ ಕಡೆಯಿಂದ ಮಾಡಿಸಿಕೊಟ್ಟಿದ್ದು. ಕೆಲ ಹೆಣ್ಣು ಮಕ್ಕಳಿಗೆ ಹೇಗೆ ಕ್ಯಾನ್ಸರ್ ಬಂದ ಹೆಣ್ಣು ಮಕ್ಕಳನ್ನು ಸ್ವ-ಸಹಾಯ ಸಂಘದಿಂದ ಮೆಡಿಕಲ್ ಚೆಕಪ್ ಮಾಡಿಸಿದ್ವೀ. ಈಗ ಹೆಣ್ಣು ಮಕ್ಕಳು ವಿವಿಧ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ನಮಗೆ ಶನಿವಾರ-ಭಾನುವಾರ ೨ ದಿನ ಮಾತ್ರ ವ್ಯಾಪಾರ ಕೊರೋನ ಇರುವುದರಿಂದ ಇಲ್ಲ ವಿವೇಕಾನಂದ ಜಯಂತಿ, ರಾಮಕೃಷ್ಣ ಜಯಂತಿಯಲ್ಲಿ ಇಲ್ಲಿ ಮಳಿಗರ ಹಾಕುತ್ತೇವೆ.. ಆಗ ನಮ್ಮ ವ್ಯಾಪಾರ ನಡೆಯುತ್ತದೆ. ಹೆಣ್ಣು ಮಕ್ಕಳು ಹೊರಗೆ ಬರೋದು ತುಂಬಾ ಕಷ್ಟ ಮಕ್ಕಳಿಗೆ ಓದಿಸೋದು ಮತ್ತೆ ಅವರಿಗೆ ಮನೆಯಲ್ಲ ಕಟ್ಟಿಕೊಟ್ಟಿದ್ದಾರೆ. ದೇಣಿಗೆ ಮಾಡಿ ಸುತ್ತಲೂ ವಿದ್ಯುತ್ ತಂತಿ ಬಿಟ್ಟಿದ್ದಾರೆ ಯಾಕಂದ್ರೆ ಆನೆಗಳು ಬಂದು ಮೊದಲು ತುಳಿದುಹೋಗುತ್ತಿತ್ತು ಅದಕ್ಕೆ ಸುತ್ತಲೂ ತಂತಿ ಹಾಕಿಸಿದ್ದಾರೆ ಒಟ್ಟು ೪೫ ಮನೆಗಳನ್ನು ಕಟ್ಟಿಸಿದ್ದಾರೆ. ಸೊಳ್ಳೆಪುರದಲ್ಲಿ ೧೬ ಹಳ್ಳಿ ತಗೊಂಡಿದ್ದಾರೆ ೮-೯ ಹಳ್ಳಿಗಳಲ್ಲಿ ಕೆಲ್ಸ ಮಾಡುತ್ತಿದ್ದಾರೆ. ಇದು ಆತ್ಮನಿರ್ಭರ ಭಾರತಕ್ಕೆ ಮಾದರಿಯಾಗಿದೆ ಎಂದು ಹೇಳಬಹುದು.