ಕಟುಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಟುಕನು ಪ್ರಾಣಿಗಳನ್ನು ವಧೆ ಮಾಡಬಹುದಾದ, ಅವುಗಳ ಮಾಂಸವನ್ನು ಸಿದ್ಧಪಡಿಸಬಹುದಾದ, ಅವುಗಳ ಮಾಂಸವನ್ನು ಮಾರಾಟಮಾಡಬಹುದಾದ, ಅಥವಾ ಈ ಮೂರು ಕಾರ್ಯಗಳ ಯಾವುದೇ ಸಂಯೋಜನೆಯಲ್ಲಿ ಭಾಗವಹಿಸುವ ವ್ಯಕ್ತಿ. ಇವರು ಚಿಲ್ಲರೆ ಮಾರಾಟಕ್ಕಾಗಿ ಅಥವಾ ಸಗಟು ಆಹಾರ ಸಂಸ್ಥೆಗಳಲ್ಲಿ ಮಾರಾಟಕ್ಕಾಗಿ ಮಾಂಸ ಮತ್ತು ಕೋಳಿಮಾಂಸವನ್ನು ನಿರ್ಧಾರದ ಅಳತೆಯ ತುಂಡುಗಳಾಗಿ ಸಿದ್ಧಪಡಿಸಬಹುದು. ಕಟುಕನು ಮಹಾಮಳಿಗೆಗಳು, ಕಿರಾಣಿ ಅಂಗಡಿಗಳು, ಮಾಂಸದ ಅಂಗಡಿಗಳು ಹಾಗೂ ಮೀನಿನ ಮಾರುಕಟ್ಟೆಗಳು, ಕಸಾಯಿಖಾನೆಗಳಲ್ಲಿ ಕೆಲಸ ಮಾಡಬಹುದು ಅಥವಾ ಸ್ವ ಉದ್ಯೋಗ ನಡೆಸಬಹುದು. ಒಂದು ಪ್ರಾಚೀನ ವ್ಯಾಪಾರವಾದ ಇದರ ಕರ್ತವ್ಯಗಳು ಜಾನುವಾರುಗಳ ಪಳಗಿಸುವಿಕೆಯ ಕಾಲಮಾನದ್ದಾಗಿರಬಹುದು. ಇಂಗ್ಲಂಡ್‍ನಲ್ಲಿ ಕಟುಕರು ೧೨೭೨ರಷ್ಟು ಹಿಂದೆಯೇ ಸಂಘಗಳನ್ನು ರಚಿಸಿಕೊಂಡಿದ್ದರು.[೧] ಇಂದು, ಅನೇಕ ಅಧಿಕಾರವ್ಯಾಪ್ತಿಗಳು ಕಟುಕರಿಗೆ ವ್ಯಾಪಾರ ಪ್ರಮಾಣೀಕರಣಗಳನ್ನು ನೀಡುತ್ತವೆ. ಕೆಲವು ಪ್ರದೇಶಗಳು ಮೂರು ವರ್ಷದ ಕಲಿಕೆ ಅವಧಿಯನ್ನು ನಿರೀಕ್ಷಿಸುತ್ತವೆ ಮತ್ತು ಇದರ ನಂತರ ತಜ್ಞ ಕಟುಕನಾಗುವ ಆಯ್ಕೆ ಇರುತ್ತದೆ.

ಪ್ರಾಣಿ ವಧೆ/ಕತ್ತರಿಕೆಯು ಒಂದು ಸಾಂಪ್ರದಾಯಿಕ ವೃತ್ತಿಯಾಗಿದೆ. ಕೈಗಾರಿಕೀಕೃತ ವಿಶ್ವದಲ್ಲಿ, ಪ್ರಾಣಿಗಳನ್ನು ವಧೆಮಾಡಲು ಕಸಾಯಿಖಾನೆಗಳು ಕಟುಕರನ್ನು ಬಳಸುತ್ತವೆ. ಇವರು ಪ್ರವೀಣರಾಗಿ ಅರೆ ಸ್ವಯಂಚಾಲಿತ ಕತ್ತರಿಸುವಿಕೆ ಸಾಲಿನಲ್ಲಿ ಒಂದು ಅಥವಾ ಕೆಲವು ಕ್ರಮಗಳನ್ನು ಪುನರಾವರ್ತಿತವಾಗಿ ನಿರ್ವಹಿಸುತ್ತಾರೆ. ಕ್ರಮಗಳಲ್ಲಿ ಎಚ್ಚರ ತಪ್ಪಿಸುವುದು (ಪ್ರಾಣಿಯನ್ನು ಅಸಮರ್ಥವನ್ನಾಗಿ ಮಾಡುವುದು), ರಕ್ತಕಳೆಯುವುದು (ರಕ್ತದ ತೆಗೆತವನ್ನು ಸುಗಮವಾಗಿಸಲು ಶೀರ್ಷಧಮನಿ ಅಥವಾ ತೋಳಿನ ಸಿರೆಗಳನ್ನು ಪ್ರತ್ಯೇಕಿಸುವುದು), ಚರ್ಮ ಸುಲಿಯುವುದು (ಚಕ್ಕಳವನ್ನು ತೆಗೆಯುವುದು), ಬಿಸಿ ನೀರಿನಲ್ಲಿ ಸಂಸ್ಕರಿಸುವುದು ಮತ್ತು ಕೂದಲು ತೆಗೆಯುವುದು (ಹಂದಿಮಾಂಸ), ಕರುಳು ತೆಗೆದುಹಾಕುವುದು (ಒಳಾಂಗಗಳನ್ನು ತೆಗೆಯುವುದು) ಮತ್ತು ವಿದಳನ ಮಾಡುವುದು (ಹೆಣವನ್ನು ಉದ್ದಕ್ಕೆ ಅರ್ಧವಾಗಿ ವಿಭಜಿಸುವುದು) ಸೇರಿವೆ. ಪ್ರಾಣಿಹೆಣಗಳನ್ನು ತಂಪಾಗಿಸಿದ ನಂತರ ಪ್ರಾಥಮಿಕ ಕತ್ತರಿಕೆಯನ್ನು ಮಾಡಲಾಗುತ್ತದೆ. ಇದು ಕನಿಷ್ಠ ನಷ್ಟದೊಂದಿಗೆ ಮೂಲಭೂತ ತುಂಡುಗಳನ್ನು ಕತ್ತರಿಸಲು ಹೆಣಗಳನ್ನು, ಬದಿಗಳು, ಅಥವಾ ಕಾಲುಭಾಗಗಳನ್ನು ಆಯ್ದುಕೊಳ್ಳುವುದು; ಹೆಣದಿಂದ ಮೂಲಭೂತ ತುಂಡುಗಳನ್ನು ಪ್ರತ್ಯೇಕಿಸುವುದು; ಮೂಲಭೂತ ತುಂಡುಗಳಿಂದ ಅನಗತ್ಯ ಭಾಗಗಳನ್ನು ತೆಗೆದು ಅವನ್ನು ಎರಡನೆಯ ಕತ್ತರಿಕೆಗಾಗಿ ಅಥವಾ ಮಾರಾಟಕ್ಕಾಗಿ ಸಿದ್ಧಪಡಿಸುವುದು; ಮತ್ತು ಕತ್ತರಿಸಿದ ಮಾಂಸವನ್ನು ಸಂಗ್ರಹಿಸಿಡುವುದನ್ನು ಒಳಗೊಳ್ಳುತ್ತದೆ. ಎರಡನೆಯ ಕತ್ತರಿಕೆಯು ಮೂಳೆಗಳನ್ನು ತೆಗೆಯುವುದು ಮತ್ತು ಮಾರಾಟದ ತಯಾರಿಯಾಗಿ ಮೂಲಭೂತ ತುಂಡುಗಳನ್ನು ಅಂದವಾಗಿಸುವುದನ್ನು ಒಳಗೊಳ್ಳುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "York Butchers' Guild". Yorkbutchersgild.com. Archived from the original on 2012-03-08. Retrieved 2012-04-04. {{cite web}}: Unknown parameter |deadurl= ignored (help)
"https://kn.wikipedia.org/w/index.php?title=ಕಟುಕ&oldid=869750" ಇಂದ ಪಡೆಯಲ್ಪಟ್ಟಿದೆ