ಸದಸ್ಯ:Samhitha Bhat/WEP 2018-19
ಶ್ಯಾಮನೂರ್ ಶಿವಶಂಕರಪ್ಪ
[ಬದಲಾಯಿಸಿ]ಶ್ಯಾಮನೂರ್ ಶಿವಶಂಕರಪ್ಪರವರು ೧೬ ಜೂನ್ ೧೯೩೧ರಂದು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು. ಇವರ ಹೆಂಡತಿ ಎಸ್ ಎಸ್ ಪಾರ್ವತಮ್ಮ, ಇವರ ಮಕ್ಕಳು ಎಸ್ ಎಸ್ ಮಲ್ಲಿಕಾರ್ಜುನ, ಎಸ್ ಎಸ್ ಗಣೇಶ್ ಮತ್ತು ಎಸ್ ಎಸ್ ಬಕ್ಕೆಶ್. ಇವರ ಮಗನಾದ ಶ್ಯಾಮನೂರ್ ಮಲ್ಲಿಕಾರ್ಜುನರವರು ತಂದೆಯ ಮಾರ್ಗದರ್ಶನದ ಮೇರೆಗೆ ತಮ್ಮನ್ನೂ ಸಹ ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ.
ಶಿವಶಂಕರಪ್ಪನವರು ದಾವಣಗೆರೆ ಜಿಲ್ಲೆಯ ದಕ್ಶಿಣ ಭಾಗದಿಂದ ಚುನಾವಣೆಯಲ್ಲಿ ಕಳೆದ ಸುಮಾರು ೧೦ ವರ್ಷಗಳಿಂದ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ೨೦೧೮ ವಿಧಾನ ಸಭ ಚುನಾವಣೆಯಲ್ಲಿ ಸಾಮಾನ್ಯ ಮತದಾರರು, ಎನ್.ಆರ್.ಐ ಮತದಾರರು ಮತ್ತು ಸೇವಾ ಮತದಾರರನ್ನು ಒಳಗೊಂಡು ಒಟ್ಟು ೨,೦೧,೧೮೪ ಮತದಾರರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ . ಸಾಮಾನ್ಯ ಮತದಾರರಲ್ಲಿ ೧,೦೧,೫೬೮ ಪುರುಷರು, ೯೯,೫೫೬ ಸ್ತ್ರೀ ಮತ್ತು ೩೪ ಇತರರು. ಕ್ಷೇತ್ರದ ಮತದಾರರ ಅನುಪಾತವು ೯೭ .೯೯ ಮತ್ತು ಅಂದಾಜು ಸಾಕ್ಷರತೆಯು ೭೯ %.
ಶಿವಶಂಕರಪ್ಪನವರು ಕಳೆದ ೩ ದಶಕಗಳಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೈತಿಯ ಖಜಾಂಚಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕರ್ನಾಟಕ ರಾಜ್ಯದ ಮಾಜಿ ತೋಟಗಾರಿಕ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇವರು, ತಾವು ಅಧಿಕಾರವನ್ನು ಸ್ವೀಕರಿಸಿದ ಕೆಲ ದಿನಗಳಲ್ಲಿ ತೋಟಗಾರಿಕಾ ಇಲಾಖೆಯೊಂದಿಗೆ ಮಲಗಿರುವ 1,000 ಕೋಟಿ ರೂಪಾಯಿಗಳನ್ನು ರಾಜ್ಯದಲ್ಲಿನ ತೋಟಗಾರಿಕಾ ಚಟುವಟಿಕೆಗಳನ್ನು ಉತ್ತೇಜಿಸಲು ವ್ಯವಸ್ಥಿತವಾಗಿ ಬಳಸಿಕೊಳ್ಳುವುದಾಗಿ ನಿರ್ಧರಿಸಿ ಈ ವಿಚಾರವನ್ನು ಮುನ್ನಡೆಸಿದರು.
ಸಾಧನೆ
[ಬದಲಾಯಿಸಿ]ಇವರು ಅಖಿಲ ಭಾರತ ವೀರಶಿವ ಮಹಾಸಭೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು, ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ಮತ್ತು ಹಲವಾರು ವೃತ್ತಿಪರ ಶಿಕ್ಷಣ ಸಂಸ್ಥೆಗಳು ಸೇರಿ ಸರಪಳಿಯಾಗಿರುವ, ಬಾಪುಜಿ ಎಂಜಿನಿಯರಿಂಗ್ ಅಸೋಸಿಯೇಷನ್ರ ಅಧ್ಯಕ್ಷರಾಗಿದ್ದಾರೆ. ಅವರು ಪ್ರಖ್ಯಾತ ಶಿಕ್ಷಣವಾದಿ ಮತ್ತು ಕೈಗಾರಿಕೋದ್ಯಮಿಯಾಗಿದ್ದು, ಸಕ್ಕರೆ ಮತ್ತು ಡಿಸ್ಟಿಲರೀಸ್ನ ವ್ಯಾಪಾರ ಮಾಡುವ ಶ್ಯಾಮನೂರ್ ಗ್ರೂಪ್ ಎಂದು ಕರೆಯಲ್ಪಡುವ ಒಂದು ಉದ್ಯಮದ ಗುಂಪನ್ನು ಹೊಂದಿದ್ದಾರೆ.
ಚುನಾವಣೆಗಳು
[ಬದಲಾಯಿಸಿ]ಶಿವಶಂಕರಪ್ಪನವರು ದಕ್ಶಿಣ ದಾವಣಗೆರೆ ಜಿಲ್ಲೆಯ ೨೦೦೮ ಹಾಗು ೨೦೧೩ರ ವಿಧಾನ ಸಭಾ ಚುನಾವಣೆಯಲ್ಲಿ ಜಯವನ್ನು ಸಾಧಿಸಿ ಕಾಂಗ್ರೆಸ್ ಪಕ್ಶದ ಅತ್ಯಂತ ಅನುಭವಿ ಪ್ರತಿನಿಧಿಯಾಗಿಯೂ ಹಾಗು ಸಂಪುಟ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ೨೦೦೮ರ ಚುನಾವಣೆಗಳಲ್ಲಿ ಶಿವಶಂಕರಪ್ಪನವರು ಬಿಜೆಪಿ ಪಕ್ಶದ ಯಶವಂತ ರಾವ್ ಜಾಧವ್ ಅವರನ್ನು ಸುಮಾರು ೫೫೦೦ ಮತಗಳಿಂದ ಸೋಲಿಸಿ ದಕ್ಶಿಣ ದಾವಣಗೆರೆ ಜಿಲ್ಲೆಯ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದರು. ಅತ್ಯಂತ ಪ್ರಭಾವಶಾಲಿಯಾದ ರಾಜಕಾರಣಿ ೨೦೦೮ರಿಂದ ತಮ್ಮನ್ನು ತಾವೆ ತೊಡಗಿಸಿಕೊಂಡು ರಾಜ್ಯದ ಅಭಿವೃದ್ಧಿಗಾಗಿ ತಮ್ಮ ಸಮಯ ಹಾಗು ಸಂಪನ್ಮೂಲವನ್ನು ಕೇಂದ್ರೀಕರಿಸಿದ್ದಾರೆ. ೨೦೧೩ರ ಚುನಾವಣೆಯಲ್ಲಿಯೂ ಸಹ ಶಿವಶಂಕರಪ್ಪನವರು ಮೇಲ್ಕಂಡ ಕ್ಶೇತ್ರದಿಂದ ಸ್ಪರ್ಧಿಸಿ ಕೆರೆಕಟ್ಟೆ ಸೈಯ್ಯದ್ ಸೈಫ಼ುಲ್ಲ ಅವರನ್ನು ೪೦,೦೦೦ ಮತಗಳಿಂದ ಸೋಲಿಸಿ ಗೆಲುವಿನ ಪತಾಕೆ ಹಾರಿಸಿದರು.
ಅವರ ಮಗ ಶಾಮನೂರ್ ಮಲ್ಲಿಕಾರ್ಜುನ್, ಕರ್ನಾಟಕ ಸರ್ಕಾರದಲ್ಲಿ ಮಾಜಿ ಯುವ ಮತ್ತು ಕ್ರೀಡಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ, ಇವರು ದಾವಣಗೆರೆ ಜಿಲ್ಲೆಯ ಉತ್ತರ ಭಾಗದಿಂದ ಸ್ಪರ್ಧಿಸುತ್ತಿದ್ದಾರೆ. ಈ ತಂದೆ ಮಗನ ಜೋಡಿ ೨೦೧೩ರ ವಿಧಾನ ಸಭಾ ಚುನಾವಣೆಗಳಲ್ಲಿಉತ್ತರ ಹಾಗೂ ದಕ್ಶಿಣ ದಾವಣಗೆರೆ ಜಿಲ್ಲೆಯನ್ನು ಪ್ರತಿನಿಧಿಸಿ, ಇಬ್ಬರೂ ಜಯವನ್ನು ಸಾಧಿಸಿದ್ದರು.
ಉಲ್ಲೇಖಗಳು
[ಬದಲಾಯಿಸಿ]೧.https://ssjanakalyantrust.org/
೨.http://myneta.info/karnataka2013/candidate.php?candidate_id=865