ಸದಸ್ಯ:Samhitha Bhat

ವಿಕಿಪೀಡಿಯ ಇಂದ
Jump to navigation Jump to search

ಜನನ[ಬದಲಾಯಿಸಿ]

ಮಂಗಳೂರು

ನನ್ನ ಹೆಸರು ಸಂಹಿತ. ಕರ್ನಾಟಕದ ದಕ್ಷಿಣ ಭಾಗದ ಸಮುದ್ರ ತೀರದ ಮಂಗಳೂರು ನನ್ನ ಹುಟ್ಟೂರು. ಹುಟ್ಟಿದ್ದು ಮಂಗಳೂರಿನಲ್ಲಾದರೂ ಬೆಳೆದದ್ದು ಬೆಂಗಳೂರಿನ ಗಡಿಬಿಡಿಯಲ್ಲಿ. 10ನೇ ತರಗತಿಯವರೆಗೂ ಓದಿದ್ದು ಕಾನ್ವೆಂಟಿನಲ್ಲಿ ಈಗ ಪ್ರಸ್ತುತ ಕ್ರೈಸ್ಟ ವಿಶ್ವವಿಶ್ವವಿದ್ಯಾಲಯದಲ್ಲಿ ಮೊದಲನೇ ವರ್ಶ ಡಿಗರೀ ಪದವಿಯನ್ನು ಒದುತ್ತಿದ್ದೇನೆ. ಶಾಲಾ ಜೀವನದಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಾಲೆಯನ್ನು ಅನೇಕ ಮಟ್ಟದಲ್ಲಿ ಪ್ರತಿನಿಧಿಸಿದ್ದೇನೆ. ಗೀತಗಾಯನ ಸ್ಪರ್ಧೆ , ಆಶುಭಾಷಣ ಸ್ಪರ್ಧೆ , ಕವಿತಾ ರಚನೆ ಸ್ಪರ್ಧೆಗಳು ಇವುಗಲ್ಲಿ ಕೆಲವು.

ಹವ್ಯಾಸ[ಬದಲಾಯಿಸಿ]

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಪ್ರಮುಖ ಗಯಕರಾದ ಪಂಡಿತ್ ಭೀಮ್ಸೆನ್ ಜೊಶಿ

ನನ್ನ ಹವ್ಯಾಸಗಳು ಕಾದಂಬರಿಗಳನ್ನು ಓದುವುದು , ಸಂಗೀತ ಅಭ್ಯಾಸ , ಅಡುಗೆ , ಚಿತ್ರಕಲೆ ಮುಂತಾದವುಗಳು. ನನ್ನ ವಿರಾಮದ ಸಮಯದಲ್ಲಿ ಇವುಗಲಂಥ ಹಲವು ಚಟುವಟಿಕೆಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ.ಓದುವುದು ಇನ್ನೊಂದು ಹವ್ಯಾಸ. ಆಂಗ್ಲಾ ಭಾಷೆಯ ಕಾದಂಬರಿಗಳು ಓದುವುದು ಹೆಚ್ಚು. ಆದರೂ ಕನ್ನಡ ಕಾದಂಬರಿಗಳು, ಕವಿತೆಗಳು , ಹಾಗು ಕಥೆಗಳನ್ನು ಓದಿದ್ದೇನೆ. ಸುಧಾ ಮೂರ್ತಿ , ತ್ರಿವೇಣಿ , ಎಸ್.ಲ್. ಭೈರಪ್ಪ , ಕೆ.ಪಿ ಪೂರ್ಣ ಚಂದ್ರ ತೇಜಸ್ವಿ , ಗಿರೀಶ್ ಕಾರ್ನಾಡ ಮುಂತಾದವರು ಮೆಚ್ಚಿನ ಲೇಖಕರು. ಭಿತ್ತಿ , ಜುಗಾರಿ ಕ್ರಾಸ್ , ಮೂಕಜ್ಜಿಯ ಕನಸುಗಳು , ರಕ್ತ ಸಿಂಧೂರ , ನಾಕು ತಂತಿ ಮುಂತಾದ ಕಾದಂಬರಿ ಅತ್ಯಂತ ಉತ್ತಮವಾದ ಪುಸ್ತಕಗಳು.

ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್

ಆಸಕ್ತಿ[ಬದಲಾಯಿಸಿ]

ನಾನು ಹಿಂದುಸ್ತಾನಿ ಶೈಲಿಯ ಶಾಸ್ತ್ರೀಯ ಗಾಯನವನ್ನು ಸುಮಾರು 2ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದೇನೆ. ಅದಕ್ಕಿಂತ ಮೊದಲು ಸುಮಾರು 3 ವರ್ಷಗಳ ಕಾಲ ಕರ್ನಾಟಿಕ್ ಸಂಗೀತವನ್ನು ಅಭ್ಯಾಸ ಮಾಡಿದ್ದೆ. ಸುಮಾರು 6ವರ್ಷಗಳ ಕಾಲ ಸುಗಮ ಸಂಗೀತದ ಅಭ್ಯಾಸವನ್ನು ಮಾಡಿದ್ದೆ. ಸುಗಮ ಸಂಗೀತದಲ್ಲಿ ಕುವೆಂಪು , ಜಿ.ಎ ಸ್ ಶಿವರುದ್ರಪ್ಪ ಮುಂತಾದವರ ರಚನೆಗಳು ಅಚ್ಚು ಮೆಚ್ಚು.

ಕ್ರಿಕೆಟ್ , ಕಬಡ್ಡಿ , ಬಾಡ್ಮಿಂಟನ್ ಮುಂತಾದ ಆಟಗಳನ್ನೂ ಸಹ ಬಹಳ ಇಷ್ಟದಿಂದ ನೂಡುತ್ತೆನೇ. ಮಹಿಳಾ ಪ್ರಧಾನ ಆಟಗಳನ್ನು ಹೆಚ್ಚು ಪ್ರೊತ್ಸಾಹಿಸುತ್ತೆನೆ. ಮಹಿಳೆಯರ ಇಂದಿನ ಬೆಳವಣಿಗೆಯನ್ನು ಕಂಡು ಹೆಮ್ಮೆಪಡುವವರಲ್ಲಿ ನಾನೂ ಒಬ್ಬಳು.

ನಂಬಿಕೆ ವ್ಯವಸ್ತೆ[ಬದಲಾಯಿಸಿ]

ತಮ್ಮ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳ ಜೊತೆ ಹೋರಾಡಿ ಇಂದು ತಮ್ಮ ಹಕ್ಕುಗಳನ್ನು ಪಡೆಯುತ್ತಿರಿವುದನ್ನು ಕಂಡು ಸ್ಫೂರ್ತಿ ಪಡೆಯುತ್ತಿರುವ ಅನೇಕ ಹೆಣ್ಣುಮಕ್ಕಳಲ್ಲಿ ಒಬ್ಬಳು ಎಂದು ಹೆಳಿಕೊಳ್ಳಲು ಸ್ವಲ್ಪವೂ ಹಿಂಜರಿವುದಿಲ್ಲ.ಕನ್ನಡನಾಡಿನಲ್ಲಿ ಹುಟ್ಟಿ ಬೆಳೆದ ನಾನು , ಈ ನಾಡಿಗೆ ಚಿರ ಋಣಿ. ಕನ್ನಡ ಭಾಷೆಯನ್ನು ಆಡಿಸಿ ಕೊಂಡಾಡುವ ಹೆಮ್ಮೆಯ ನಾಗರಿಕೆ.