ಗಂಡಸುತನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗ್ರೀಕ್ ಪುರಾಣ ಸಂಗ್ರಹದಲ್ಲಿ ಹೇರಕ್ಲೀಸ್ ಗಂಡಸುತನಕ್ಕೆ ಸಮಾನಾರ್ಥಕವಾಗಿದ್ದಾನೆ

ಗಂಡಸುತನ ಎಂದರೆ ಹುಡುಗರು ಮತ್ತು ಗಂಡಸರೊಂದಿಗೆ ಸಂಬಂಧಿಸಲಾದ ಗುಣಗಳು, ವರ್ತನೆಗಳು ಮತ್ತು ಪಾತ್ರಗಳ ಸಮೂಹ. ಸಾಮಾಜಿಕ ಕಲ್ಪನೆಯಾಗಿ, ಇದು ಗಂಡು ಜೈವಿಕ ಲಿಂಗದ ವ್ಯಾಖ್ಯಾನದಿಂದ ಭಿನ್ನವಾಗಿದೆ.[೧] ಗಂಡಸುತನದ ಗುಣಮಟ್ಟಗಳು ವಿಭಿನ್ನ ಸಂಸ್ಕೃತಿಗಳು ಮತ್ತು ಐತಿಹಾಸಿಕ ಅವಧಿಗಳಾದ್ಯಂತ ಬದಲಾಗುತ್ತವೆ. ಗಂಡು ಮತ್ತು ಹೆಣ್ಣುಗಳಿಬ್ಬರೂ ಗಂಡು ಲಕ್ಷಣಗಳು ಮತ್ತು ವರ್ತನೆಯನ್ನು ಪ್ರದರ್ಶಿಸಬಹುದು.

ಪಾಶ್ಚಾತ್ಯ ಸಮಾಜದಲ್ಲಿ ಸಾಂಪ್ರದಾಯಿಕವಾಗಿ ಗಂಡಸುತನದ ಲಕ್ಷಣಗಳಾಗಿ ಕಾಣಲಾದವುಗಳೆಂದರೆ ಧೈರ್ಯ, ಸ್ವಾತಂತ್ರ್ಯ, ಹಿಂಸೆ, ಆತ್ಮ ಸಮರ್ಥನೆ ಇತ್ಯಾದಿ. ಪುರುಷತ್ವಾತಿರೇಕವು ಗಂಡಸುತನ ಮತ್ತು ಶಕ್ತಿ ಮೇಲೆ ಒತ್ತುಕೊಡುವ ಗಂಡಸುತನದ ಒಂದು ರೂಪ ಮತ್ತು ಇದನ್ನು ಹಲವುವೇಳೆ ಪರಿಣಾಮಗಳು ಹಾಗೂ ಜವಾಬ್ದಾರಿಗೆ ಉಪೇಕ್ಷೆಯೊಂದಿಗೆ ಸಂಬಂಧಿಸಲಾಗುತ್ತದೆ.

ಗಂಡು ಮತ್ತು ಹೆಣ್ಣುಗಳಿಬ್ಬರೂ ಗಂಡು ಲಕ್ಷಣಗಳು ಮತ್ತು ವರ್ತನೆಯನ್ನು ಪ್ರದರ್ಶಿಸಬಹುದು. ಗಂಡು ಮತ್ತು ಹೆಣ್ಣು ಲಕ್ಷಣಗಳು ಎರಡನ್ನೂ ಪ್ರದರ್ಶಿಸುವವರನ್ನು ಉಭಯಲಿಂಗಿಗಳೆಂದು ಪರಿಗಣಿಸಲಾಗುತ್ತದೆ, ಮತ್ತು ಲಿಂಗ ಅಸ್ಪಷ್ಟತೆಯು ಲಿಂಗ ವರ್ಗೀಕರಣವನ್ನು ಮಸುಕಾಗಿಸಬಹುದು ಎಂದು ಸ್ತ್ರೀವಾದಿ ತತ್ವಶಾಸ್ತ್ರಜ್ಞರು ವಾದಿಸಿದ್ದಾರೆ.

ಅನೇಕ ಸಂಸ್ಕೃತಿಗಳಲ್ಲಿ, ಒಬ್ಬರ ಲಿಂಗಕ್ಕೆ ಸಾಮಾನ್ಯವಾಗಿರದ ಲಕ್ಷಣಗಳನ್ನು ಪ್ರದರ್ಶಿಸುವುದು ಒಂದು ಸಾಮಾಜಿಕ ಸಮಸ್ಯೆಯಾಗಿರಬಹುದು. ಸಮಾಜಶಾಸ್ತ್ರದಲ್ಲಿ, ಈ ವರ್ಗೀಕರಣವನ್ನು ಲಿಂಗ ಕಲ್ಪನೆ ಎಂದು ಕರೆಯಲಾಗುತ್ತದೆ ಮತ್ತು ಸಮಾಜದ ಸಂಪ್ರದಾಯಗಳನ್ನು ಪೂರೈಸುವ ಸಮಾಜೀಕರಣದ ಭಾಗವಾಗಿದೆ. ಲಿಂಗ ಅಭಿವ್ಯಕ್ತಿ, ಲಿಂಗ ಗುರುತಿಸುವಿಕೆ ಮತ್ತು ಲೈಂಗಿಕ ದೃಷ್ಟಿಕೋನವನ್ನು ಭಿನ್ನ ಪರಿಕಲ್ಪನೆಗಳು ಎಂದು ವ್ಯಾಪಕವಾಗಿ ಸ್ವೀಕರಿಸಲಾಗಿದೆ ಎಂಬುದು ವಾಸ್ತವವಾಗಿದ್ದರೂ, ಸಾಮಾನ್ಯವಲ್ಲದ ವರ್ತನೆಯು ಸಲಿಂಗ ಕಾಮದ ಸೂಚಕ ಎಂದು ಪರಿಗಣಿತವಾಗಬಹುದು. ಲೈಂಗಿಕತೆಯನ್ನು (ಮುಂಚಿನ ಲೈಂಗಿಕ ವಿಜ್ಞಾನ ಅಧ್ಯಯನಗಳಲ್ಲಿರುವಂತೆ) ವಸ್ತು ಆಯ್ಕೆಯ ಪರಿಭಾಷೆಯಲ್ಲಿ ವ್ಯಾಖ್ಯಾನಿಸಲಾದಾಗ, ಗಂಡು ಸಲಿಂಗಕಾಮವನ್ನು ಹೆಣ್ಣಿಗತನವೆಂದು ಅರ್ಥೈಸಲಾಗುತ್ತದೆ. ಅತಿಯಾದ ಗಂಡಸುತನದ ಸಾಮಾಜಿಕ ಅಸಮ್ಮತಿಯನ್ನು ಪುರುಷತ್ವಾತಿರೇಕ ಟೆಸ್ಟಾಸ್ಟರೋನ್ ವಿಷಸೇರಿಕೆಯಂತಹ ಹೊಸ ಶಬ್ದಗಳಿಂದ ವ್ಯಕ್ತಮಾಡಬಹುದು.

ಉಲ್ಲೇಖಗಳು[ಬದಲಾಯಿಸಿ]

  1. Ferrante, Joan (2008), "Gender and sexualities: with emphasis on gender ideals", in Ferrante, Joan (ed.). Sociology: a global perspective (7th ed.). Belmont, California: Thomson Wadsworth. pp. 269–272. ISBN 9780840032041.
"https://kn.wikipedia.org/w/index.php?title=ಗಂಡಸುತನ&oldid=839314" ಇಂದ ಪಡೆಯಲ್ಪಟ್ಟಿದೆ