ವಿಷಯಕ್ಕೆ ಹೋಗು

ಕೇರಳ ಕಸವು ಸೀರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೇರಳ ಕಸವು ಸೀರೆ ಧರಿಸಿದ ನರ್ತಕಿ

ಕಸವು ಸೀರೆ ಚಿನ್ನದ ಬಣ್ಣ ಹಾಗೂ ಕ್ರೀಮ್ ಕೂದಲಿನ ಬಣ್ಣದ ಸೀರೆಯಾಗಿದ್ದು, ಮಲಯಾಳಂ ಮಹಿಳೆಯರಿಂದ ಧರಿಸಲ್ಪಡುತ್ತದೆ.[] ‘ದೇವರ ಸ್ವಂತ ದೇಶ’ ಎಂದೇ ಕರೆಯಲ್ಪಡುವ ಕೇರಳಾದ ಪ್ರತೀ ಮಹಿಳೆಯ ಸೌಂದರ್ಯದ ಸಾರವನ್ನು ವ್ಯಾಖ್ಯಾನಿಸುವ ಅತ್ಯುತ್ತಮ ಸಾಂಪ್ರದಾಯಿಕ ಸೀರೆಗಳಲ್ಲಿ ಒಂದಾಗಿದೆ. ಇದು ಕೈಗವಸ್ತುವಿನಿಂದ ವಿನ್ಯಾಸಗೊಂಡಿದ್ದು, ಶುದ್ಧ ಚಿನ್ನದ ಬಣ್ಣದಲ್ಲಿ ಮಾಡಿದ ಸೀರೆಯ ಅಂಚುಗಳ ಮೂಲಕ ಅದರ ಗ್ಲಾಮರ್‍ನ್ನು ಹೆಚ್ಚಿಸುತ್ತದೆ. ಈ ಸೀರೆ ವಿಶೇಷವಾಗಿ ಹೊಸ ವರ್ಷದಲ್ಲಿ ಅಂದರೆ ಹಿಂದೂ ಪಂಚಾಂಗದ ಪ್ರಕಾರ, ಕೇರಳಾದಲ್ಲಿನ ಮಹಿಳೆಯರಿಗೆ ಅತ್ಯಂತ ಮಂಗಳಕರವಾದ ಉಡುಪು ಎಂದು ಪರಿಗಣಿಸಲಾಗುತ್ತಿದೆ.[] ಕೇರಳ ಸೀರೆಗೆ ಕಸವು, ಕೇರಳಾ ಕಸವು, ಮತ್ತು ಮುಂಡಮ್ ನೆರಿಯಥಮ್ (ನೆರೆಯಥಮ್) ಎಂದೂ ಕೂಡ ಕರೆಯುತ್ತಾರೆ.

ಇತಿಹಾಸ

[ಬದಲಾಯಿಸಿ]

ಮೂಲತಃ ಮುಂಡಮ್ ನೆರಿಯತಮ್ ಎಂದು ಕರೆಯಲ್ಪಡುವ ಕೇರಳ ಕಸವು ಸೀರೆ ಬೌದ್ಧ ಯುಗದ ಕಾಲದ್ದಾಗಿದೆ. ನಿಧಾನವಾಗಿ ಮತ್ತು ಕ್ರಮೇಣ ಈ ಸಾಂಸ್ಕøತಿಕ ಉಡುಗೆ ಮೂಲಭೂತವಾಗಿ ದಕ್ಷಿಣ ಭಾಗಗಳಿಗೆ ವಿಸ್ತರಿಸಿತು. ನಂತರ ಕೇರಳದಲ್ಲಿ ಸಮೃದ್ಧವಾಗಿ ಪ್ರಮುಖ ಉಡುಗೆಯಾಯಿತು.ಈ ಶೈಲಿಯ ಉಡುಗೆ ಗ್ರೀಕ್-ರೋಮನ್ ಸಂಸ್ಕಂತಿಯಲ್ಲಿಯೂ ಕಂಡುಬರುತ್ತದೆ. ಇದನ್ನು ಅಲ್ಲಿ ‘ಪಾಲ್ಮಿರೀನ್’ ಎಂದು ಕರೆಯುತ್ತಾರೆ. ಈ ಉಡುಪನ್ನು ಕ್ರಮೇಣ ಉದ್ದನೆಯ ಬಟ್ಟೆಯೆಂದು ಪರಿಗಣಿಸಲ್ಪಟ್ಟು ಸೀರೆಯಂತೆ ಉಡಲು ಪ್ರಾರಂಭಿಸಲಾಯಿತು. 1970ರ ವರೆಗೆ ಈ ಉಡುಪನ್ನು ಸೀರೆಯಾಗಿ ಧರಿಸಲಾಗುತ್ತಿರಲಿಲ್ಲ, ಏಕೆಂದರೆ ಅದರಲ್ಲಿರುವ ಪಲ್ಲೆಯನ್ನು ಮೇಲ್ಭಾಗದ ಉಡುಪಿನಂತೆ ಧರಿಸಬೇಕಾದ ಅಂಶವೆಂದು ಪರಿಗಣಿಸಲಾಗಿರಲಿಲ್ಲ.

ಪ್ರಸ್ತುತ ದಿನದಲ್ಲಿ ಇದರ ಬಳಕೆ

[ಬದಲಾಯಿಸಿ]

ಸುವರ್ಣ ಬಣ್ಣದ ಅಂಚುಗಳನ್ನು ಈಗ ವಿವಿಧ ರೀತಿಯ ಬಣ್ಣಗಳನ್ನು ಉಪಯೋಗಿಸಿಕೊಂಡು ವಿನ್ಯಾಸ ಮಾಡಲಾಗಿದೆ. ಅಲ್ಲದೇ ಸಾಂಪ್ರದಾಯಿಕ ಸಂಸ್ಕøತಿಯನ್ನು ಬಿಂಬಿಸುವ ಕುಸುರಿ ಕೆಲಸಗಳು ಮತ್ತು ವಿನ್ಯಾಸಗಳು ಈಗ ಹೊಸ ರೀತಿಯಲ್ಲಿ ರಚಿಸಲ್ಪಟ್ಟಿವೆ.ಸೀರೆಯ ನೋಟ ಮತ್ತು ಗ್ಲಾಮರ್ ಹೆಚ್ಚಿಸುವ, ನಿಯಮಿತ ಕಸವು ಬ್ಲೌಸ್ ಈಗ ಡಿಸೈನರ್ ಬ್ಲೌಸ್‍ಗೆ ದಾರಿ ಮಾಡಿಕೊಟ್ಟಿದೆ. ಅದು ಇಂದಿನ ಪೀಳಿಗೆಯೊಂದಿಗೆ ಮತ್ತು ಆಧುನಿಕ ಫ್ಯಾಶನ್‍ನ ರುಚಿ ಮತ್ತು ಪ್ರವೃತ್ತಿಯೊಂದಿಗೆ ಸಿಂಕ್ ಆಗುತ್ತದೆ. ಸೀರೆಯ ಮೇಲ್ಭಾಗವು ಕಸವು ರವಿಕೆಯಲ್ಲಿ ಸಾಂಪ್ರದಾಯಿಕವಾಗಿ ಹಿಡಿಯಲ್ಪಡುವುದಿಲ್ಲ.ಏಕೆಂದರೆ ಆಧುನಿಕ ಪ್ರವೃತ್ತಿಯ ಪ್ರಕಾರ ಇದು ಹೊಂದಾಣಿಕೆಯಾಗುವುದಿಲ್ಲ. ಈ ಸೀರೆಯ ಮೇಲೆ ರಚಿಸಲಾದ ಗೋಲ್ಡನ್ ಮತ್ತು ಕ್ರೀಮ್ ಬಣ್ಣದ ಟ್ರೇಡ್ ಮಾರ್ಕ್‍ಗಳು ಸಾಂಪ್ರದಾಯಿಕವಾಗಿ ಉಡುಪನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಸೀರೆಯ ಶರೀರದ ಮೇಲೆ ಕಟ್ಟಲಾದ ಅಂಚುಗಳು ಚಿತ್ರದ ರೀಲ್‍ನ್ನು ಹೋಲುತ್ತದೆ. ವಿವಧ ಬಣ್ಣಗಳ ಎಳೆಗಳನ್ನು ಬಳಸುವುದರೊಂದಿಗೆ ವಿನ್ಯಾಸಗೊಳಿಸಿದ ಅಂಚುಗಳು ಬಹು ಬಣ್ಣದ ದಾರವನ್ನು ಉಪಯೋಗಿಸಿಕೊಂಡು ಸಾಂಪ್ರದಾಯಿಕ ಹಾಗೂ ಧಾರ್ಮಿಕ ಲಕ್ಷಣಗಳನ್ನು ಒಳಗೊಂಡೊವೆ.ಬಟ್ಟೆಯ ಹಿಂದೆ ಕೇರಳದ ಮಣ್ಣಿನಲ್ಲಿ ತಮ್ಮ ಸಾಂಸ್ಕøತಿಕ ಬೇರುಗಳನ್ನು ಹೊಂದಿದ ಮಹಿಳೆಯರ ಸಾಂಸ್ಕøತಿಕ ಅಂಶವನ್ನು ಸಂಕ್ಷಿಪ್ತವಾಗಿ ಪ್ರಸ್ತುತ ಪಡಿಸಿದಂತೆ ಈ ಕಲಾಕೃತಿ ಸೂಚಿಸುತ್ತದೆ. ಕಲಾಕಾರ ರಾಜಾ ರವಿವರ್ಮ ಅವರ ಗಮನಾರ್ಹ ರೇಖಾ ಚಿತ್ರಗಳ ಮೂಲಕ ಒಳ್ಳೆಯ ಫ್ಯಾಬ್ರಿಕ್ ಸಾರವಿರುವಂತೆ ಭಾವಿಸುತ್ತದೆ. ಇಂತಹ ಫ್ಯಾಬ್ರಿಕ್ ವಿನ್ಯಾಸ ರಾಮಾಯಣ, ಮಹಾಭಾರತದಂತಹ ಪೌರಾಣಿಕ ಮಹಾಕಾವ್ಯಗಳಲ್ಲಿ ಜನಪ್ರಿಯತೆಯನ್ನು ಕಂಡುಕೊಂಡಿವೆ. ಇಂತಹ ವಿನ್ಯಾಸ ಕೇರಳಾ ಕಸವು ಸೀರೆಯಲ್ಲಿ ಕಾಣಸಿಗುತ್ತವೆ.

ವಿಧಗಳು

[ಬದಲಾಯಿಸಿ]

ಕೇರಳಾ ಕಸವು ಸೀರೆಯನ್ನು ಮೂಲಭೂತವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಕರಾ: ಇದು ಸೀರೆಯ ಅಂಚುಗಳಲ್ಲಿ ವಿನ್ಯಾಸಗೊಳಿಸಲಾದ ಬಣ್ಣ ಬಣ್ಣದ ಚಿತ್ತಾರಗಳಿಂದ ಮೂಡಿಬರುತ್ತದೆ. ಮತ್ತು ಎರಡನೆಯ ವಿಧ ಮುಂಡು. ಇದು ಉಡುಪಿನ ಕೆಳಭಾಗ ಮಾತ್ರ ವಿನ್ಯಾಸಗೊಳಿಸಲಾಗಿರುತ್ತದೆ. ಈ ಉಡುಪಿಗೆ ‘ನೆರಿಯುತು’ ಎಂದೂ ಕರೆಯಲಾಗುತ್ತದೆ.

ಆವಿಷ್ಕಾರ

[ಬದಲಾಯಿಸಿ]

ಕಸವು ಸೀರೆಯು ಕಸೂತಿ ಸಲ್ವಾರ್ ಕಮೀಜ್, ಆಧುನಿಕ ಮತ್ತು ಸಾಂಪ್ರದಾಯಿಕ ನೋಟ ಇನ್ನೂ ಹೆಚ್ಚಿನ ಮಿಶ್ರಣ ಟ್ರೆಂಡೀ ವೇಷಭೂಷಣಗಳಂತೆ ತಮ್ಮನ್ನು ತಾವು ಮುದ್ರಿಸುವ ಮೂಲಕ ಹೊಸ ರೂಪುರೇಷೆ ಕಟ್ಟಿಕೊಟ್ಟಿದೆ. ಸಾಂಪ್ರದಾಯಿಕ ಅಸವು ಅಂಚುಗಳು ವಜ್ರದಾಕಾರದಲ್ಲಿ ಸೃಜನಾತ್ಮಕವಾಗಿ ಚಿತ್ರಿಸಲಾಗಿದೆ. ಅಲ್ಲದೇ ಚೆಕ್ ಆಕಾರದ ವಿನ್ಯಾಸಗಳೂ ಕಾಣಸಿಗುತ್ತದೆ. ಚಿನ್ನದ ಬಣ್ಣದ ಅಂಚುಗಳು, ಹಸಿರು ಮತ್ತು ಕೆಂಪು ಬಣ್ಣದ ಅಂಚುಗಳು ಸೀರೆಯನ್ನು ಆವರಿಸಿಕೊಂಡಿದ್ದು ಇದು ಸೀರೆಯ ನೋಟವನ್ನು ಇನ್ನೂ ಹೆಚ್ಚಾಗಿಸುತ್ತದೆ.

ಎಲ್ಲೆಲ್ಲಾ ಧರಿಸುತ್ತಾರೆ

[ಬದಲಾಯಿಸಿ]

ಕೇರಳದಲ್ಲಿ ವ್ಯಾಪಕವಾಗಿ ಆಚರಿಸಲಾಗುವ ಓಣಂ ಹಬ್ಬದ ಸಂದರ್ಭದಲ್ಲಿ, ಯುವಜನರ ಮತ್ತು ಕಲಾವಿದರ ಕಲಾನೃತ್ಯಗಳಿಗೆ ಪಾಲ್ಗೊಳ್ಳುವ ಸಂದರ್ಭದಲ್ಲಿ ಕಸವು ಕಸೂತಿ ಉಡುಪುಗಳು ಧರಿಸಲ್ಪಡುತ್ತವೆ. ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಮಾತ್ರವಲ್ಲದೇ ಉಳಿದ ಭಾಗಗಳಲ್ಲಿಯೂ ಸಹ ಓಣಂ ಸಮಯದಲ್ಲಿ ಇದನ್ನು ಧರಿಸುತ್ತಾರೆ. ಅಲ್ಲದೇ ಈಗಿನ ಆಧುನಿಕ ವಿನ್ಯಾಸಗಳು ಇದರ ಜೊತೆಗೂಡಿ ಹೊಸ ರೀತಿಯಲ್ಲಿ ವಿನ್ಯಾಸಗೊಂಡಿದೆ. ಇದನ್ನು ಹಬ್ಬದ ಸಂದರ್ಭದಲ್ಲಿ ಹೆಚ್ಚಾಗಿ ಧರಿಸುತ್ತಾರೆ.[]

ನಿರ್ವಹಣೆ

[ಬದಲಾಯಿಸಿ]

ಶುಷ್ಕ ಶುಚಿಗೊಳಿಸುವುದು ಒಳ್ಳೆಯದು. ಏಕೆಂದರೆ ಇದನ್ನು ನೀರು ಹಾಕಿ ತೊಳೆದರೆ ಹಾಳಾಗುವ ಸಾಧ್ಯತೆ ಇದೆ.


ಉಲ್ಲೇಖಗಳು

[ಬದಲಾಯಿಸಿ]
  1. https://www.utsavpedia.com/motifs-embroideries/simple-and-gorgeous-kerela-kasavu/
  2. ಬೌಲಂಗೇರ್ 1997, ಘುರಿ 1951
  3. http://www.thehindu.com/todays-paper/tp-features/tp-metroplus/Say-it-in-gold-and-off-white/article14636670.ece