ವಿಷಯಕ್ಕೆ ಹೋಗು

ರಾಷ್ಟ್ರೀಯ ಮಾನ್ಯತಾ ಮಂಡಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಷ್ಟ್ರೀಯ ಮಾನ್ಯತಾ ಮಂಡಳಿ
ಸ್ಥಾಪನೆ1994
ಶೈಲಿ2010 ರಿಂದ ಸ್ವಾಯತ್ತ
ಪ್ರಧಾನ ಕಚೇರಿದೆಹಲಿ, ಭಾರತ
ಅಧ್ಯಕ್ಷರು
ಸುರೇಂದ್ರ ಪ್ರಸಾದ್
ಅಂಗಸಂಸ್ಥೆಗಳುಉನ್ನತ ಶಿಕ್ಷಣ ಆಯೋಗ, ಎಮ್‌ಎಚ್‌ಆರ್‌ಡಿ
ಅಧಿಕೃತ ಜಾಲತಾಣnbaind.org

ರಾಷ್ಟ್ರೀಯ ಮಾನ್ಯತಾ ಮಂಡಳಿ(ನ್ಯಾಷನಲ್ ಬೋರ್ಡ್ ಆಫ್ ಅಕ್ರೆಡಿಟೇಶನ್(ಎನ್‍ಬಿಎ) (National Board of Accreditation)(NBA)) ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಮಾನ್ಯತೆಗೆ ಜವಾಬ್ದಾರಿ ನೀಡುವ ಎರಡು ಪ್ರಮುಖ ಸಂಸ್ಥೆಗಳಲ್ಲಿ ಒಂದು ಸಂಸ್ಥೆ ಆಗಿದೆ. ಇದೇ ತರಹ ಇರುವ ಇನ್ನೊಂದು ಸಂಸ್ಥೆ ಎಂದರೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತು (ಎನ್ಎಎಸಿ)(ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರಿಡಿಟೇಶನ್ ಕೌನ್ಸಿಲ್ National Assessment and Accreditation Council (NAAC).[] ರಾಷ್ಟ್ರೀಯ ಮಾನ್ಯತಾ ಮಂಡಳಿ(NBA) ಯು ಎಂಜಿನಿಯರಿಂಗ್ ಮತ್ತು ನಿರ್ವಹಣಾ ಕಾರ್ಯಕ್ರಮಗಳಾದ ತಾಂತ್ರಿಕ ಕಾರ್ಯಕ್ರಮಗಳನ್ನು, ಮಾನ್ಯತೆ ಮಾಡುವುದು, ಆದರೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತು(NAAC) ಸಾಮಾನ್ಯ ಕಾಲೇಜುಗಳನ್ನು ಮತ್ತು ವಿಶ್ವವಿದ್ಯಾನಿಲಯಗಳನ್ನು ಮಾನ್ಯ ಮಾಡುತ್ತದೆ.[] ರಾಷ್ಟ್ರೀಯ ಮಾನ್ಯತಾ ಮಂಡಳಿಯು ವಾಷಿಂಗ್ಟನ್ ಅಕಾರ್ಡ್ ನ ಪೂರ್ಣ ಸದಸ್ಯತ್ವವನ್ನು ಹೊಂದಿದೆ.

ಇತಿಹಾಸ

[ಬದಲಾಯಿಸಿ]

ರಾಷ್ಟ್ರೀಯ ಮಾನ್ಯತಾ ಮಂಡಳಿ(NBA) ಯನ್ನು 1994 ರಲ್ಲಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು(ಆಲ್ ಇಂಡಿಯಾ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಷನ್) (AICTE(ಎಐಸಿಟಿಇ))ಸ್ಥಾಪಿಸಿತು ಮತ್ತು 2010 ರಿಂದ ಸ್ವನಿಯಂತ್ರಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.[] 2014 ರಲ್ಲಿ ಇದನ್ನು ವಾಷಿಂಗ್ಟನ್ ಅಕಾರ್ಡ್ ನಲ್ಲಿ ಪೂರ್ಣ ಸದಸ್ಯತ್ವದ ಸ್ಥಾನಮಾನ ನೀಡಲಾಯಿತು.[]

ಮಾನ್ಯತೆ ಪಡೆದ ಕಾರ್ಯಕ್ರಮಗಳು

[ಬದಲಾಯಿಸಿ]

ರಾಷ್ಟ್ರೀಯ ಮಾನ್ಯತಾ ಮಂಡಳಿ(NBA) ಯ ಶಿಕ್ಷಣ ಸಂಸ್ಥೆಗಳ ಕಾರ್ಯಕ್ರಮ(Programmes)ಗಳಿಗೆ ಮಾತ್ರ ಮಾನ್ಯತೆ ನೀಡುತ್ತದೆ. ಅಂದರೆ, ಸಂಪೂರ್ಣವಾಗಿ ಶಿಕ್ಷಣ ಸಂಸ್ಥೆಗಳನ್ನು ಮಾನ್ಯತೆ ಮಾಡುವ ಜವಾಬ್ದಾರಿ ಇರುವುದಿಲ್ಲ. ಇವುಗಳಲ್ಲಿ ಡಿಪ್ಲೋಮಾಗಳು, ಸ್ನಾತಕಪೂರ್ವ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳು ಸೇರಿವೆ. ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ನಿರ್ವಹಣೆ, ಔಷಧಾಲಯ, ವಾಸ್ತುಶಿಲ್ಪ, ಅನ್ವಯಿಕ ಕಲೆಗಳು ಮತ್ತು ಕರಕುಶಲ ವಸ್ತುಗಳು, ಕಂಪ್ಯೂಟರ್ ಅಪ್ಲಿಕೇಷನ್ಗಳು ಮತ್ತು ಆತಿಥ್ಯ ಮತ್ತು ಪ್ರವಾಸೋದ್ಯಮ ನಿರ್ವಹಣೆಯು ಸೇರಿವೆ.[]

ಮಾನ್ಯತೆ ಸ್ವಯಂಪ್ರೇರಿತವಾಗಿದ್ದರೂ, 2017 ರಲ್ಲಿ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು(ಎಐಸಿಟಿಇ) ಯು ತನ್ನ ಕಾರ್ಯಕ್ರಮಗಳ ಅರ್ಧದಷ್ಟು ಪ್ರಮಾಣವನ್ನು ಸಾಧಿಸಲು ವಿಫಲವಾದ ಸಂಸ್ಥೆಗಳಿಗೆ ಅನುಮೋದನೆಯನ್ನು ನೀಡುವುದಿಲ್ಲ ಎಂದು ಘೋಷಿಸಿತು.[]

ಉಲ್ಲೇಖಗಳು

[ಬದಲಾಯಿಸಿ]
  1. Kohli, Gauri (21 March 2017). "Global drive planned to check fake colleges and universities". Hindustan Times (in ಇಂಗ್ಲಿಷ್). Retrieved 3 October 2017.
  2. Mohanty, Basant Kumar (2 January 2017). "IITs loath to take up accreditation role". The Telegraph. Archived from the original on 3 ಅಕ್ಟೋಬರ್ 2017. Retrieved 3 October 2017.
  3. "National Board of Accreditation". www.nbaind.org. Archived from the original on 2 ಅಕ್ಟೋಬರ್ 2017. Retrieved 3 October 2017.
  4. "Boost for techies as Ind now full member of Washington Accord". Zee News (in ಇಂಗ್ಲಿಷ್). 13 June 2014. Retrieved 3 October 2017.
  5. "Program Accreditated by NBA". www.nbaind.org. Archived from the original on 3 ಅಕ್ಟೋಬರ್ 2017. Retrieved 3 October 2017.
  6. Nanda, Prashant K. (12 April 2017). "How AICTE wants engineering, B-Schools to improve students' job readiness". Mint. Retrieved 3 October 2017.

ಬಾಹ್ಯ ಕೊಂಡಿಗಳು

[ಬದಲಾಯಿಸಿ]