ವಿಕಿಪೀಡಿಯ:ವಿಕಿಪೀಡಿಯ ಸಾಧಕರು/ಲೋಕೇಶ ಕುಂಚಡ್ಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೋಕೇಶ ಕುಂಚಡ್ಕ

ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕರು ಲೋಕೇಶ ಕುಂಚಡ್ಕ.
ಲೋಕೇಶ ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಜಾನಪದ ಸಂಶೋಧನೆಯಲ್ಲಿ ತೊಡಗಿದ್ದಾರೆ, ಇವರ ಹುಟ್ಟೂರು ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಂಚಡ್ಕ. ಇದರಿಂದಾಗಿಯೇ ಲೋಕೇಶರ ಹೆಸರಿನ ಜೊತೆ ಕುಂಚಡ್ಕವೂ ಸೇರಿಕೊಂಡಿದೆ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೆಟ್ಟಿಯಲ್ಲಿ ಮುಗಿಸಿ ನಂತರ ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಆಲೆಟ್ಟಿಯಲ್ಲಿಯೇ ಮುಗಿಸಿದರು, ಪದವಿ ಪೂರ್ವ ಶಿಕ್ಷಣವನ್ನು ನೆಹರು ಸ್ಮಾರಕ ಮಹಾವಿದ್ಯಾಲಯ ಸುಳ್ಯದಲ್ಲಿ ಮುಗಿಸಿದರು. ಎನ್ನೆಂಸಿಯಲ್ಲಿ ಕಲಾ ಪದವಿಯನ್ನು ಮುಗಿಸಿ, ಶ್ರೀನಿವಾಸ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕ ತರಬೇತಿಯನ್ನು ಪಡೆದಿದ್ದಾರೆ , ಸ್ನಾತಕೋತ್ತರ ಪದವಿಯನ್ನು ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪೊರೈಸಿದ್ದಾರೆ.
ಲೋಕೇಶರು ಕನ್ನಡ ವಿಕಿಪೀಡಿಯಕ್ಕೆ ೨೦೧೫ರಲ್ಲಿ ಕೊಡುಗೆಯನ್ನು ಪ್ರಾರಂಭಿಸಿದರು. ನಂತರ ತುಳು ವಿಕಿಪೀಡಿಯ ಇಂಕ್ಯುಬೇಟರ್‌ನಲ್ಲಿ ಇರಬೇಕಾದರೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇಂದು ಇವರು ಕನ್ನಡ ಮತ್ತು ತುಳು ವಿಕಿಪೀಡಿಯದ ಸಕ್ರಿಯ ಸಂಪಾದಕರಾಗಿದ್ದಾರೆ. ಇವರು ಅನೇಕ ಉತ್ತಮ ಲೇಖನಗಳನ್ನು ರಚಿಸಿ ಸದಾ ಕನ್ನಡ ವಿಕಿಪೀಡಿಯದಲ್ಲಿ ನಡೆಯುವ ಕೃತಿ ಚೌರ್ಯ, ಇತರ ಕೆಲಸಗಳ ಮೇಲೆ ಗಮನವಿಟ್ಟು ಕನ್ನಡ ವಿಕಿಪೀಡಿಯದ ಮಾಹಿತಿ ದಕ್ಷತೆ ಹೆಚ್ಚಿಸುವಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ.