ಜಯರಾಮ ಕಾರಂತ
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ವಿಕೀಕರಣ ಮಾಡಬೇಕು, ಸರಿಯಾದ ಉಲ್ಲೇಖ ಬೇಕು, ಕೊಂಡಿಗಳು ಬೇಕು. |
ಜಯರಾಮ ಕಾರಂತ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದಲ್ಲಿ ೧೩ ಜೂನ್ ೧೯೫೮ರಂದು ಜನಿಸಿದರು. ಇವರ ತಂದೆಯ ಹೆಸರು ಕಾಂತಾವರ ಸುಬ್ರಾಯ ಕಾರಂತ ಮತ್ತು ತಾಯಿಯ ಹೆಸರು ಶ್ರೀಮತಿ ಗಿರಿಜಾ ಕಾರಂತ. ಒಟ್ಟು ೭ ಜನ ಮಕ್ಕಳಲ್ಲಿ ಹಿರಿಯರಾದ ಇವರು ಕವಿಯಾಗಿ ಪ್ರಸಿದ್ಧರು.
ವಿದ್ಯಾಭ್ಯಾಸ
[ಬದಲಾಯಿಸಿ]ತಮ್ಮ ವಿದ್ಯಾಭ್ಯಾಸವನ್ನು ಕಾಂತಾವರ, ಮೂಡುಬಿದಿರೆ[೧], ಕಳಸ[೨] ಮತ್ತು ಉಡುಪಿ[೩] ಮೊದಲಾದ ಊರುಗಳಲ್ಲಿ ಪೂರೈಸಿ, ಸ್ನಾತಕೋತ್ತರ ಇಂಗ್ಲೀಷ್ ಡಿಪ್ಲೋಮಾವನ್ನು ಪಡೆದಿದ್ದಾರೆ.
ವೃತ್ತಿ ಜೀವನ
[ಬದಲಾಯಿಸಿ]ಉಡುಪಿಯ ಉದಯಭಾರತಿ ಪಾಕ್ಷಿಕದಲ್ಲಿ ಅಂಶಕಾಲಿಕ ಸಂಪಾದಕರಾಗಿ ಸೇವೆ ಸಲ್ಲಿಸಿ ನಂತರ ೧೯೭೭-೧೯೮೦ರವರೆಗೆ ಉಡುಪಿಯ ರಾಘವೇಂದ್ರ ಸ್ವಾಮಿ ಪುಸ್ತಕ ಭಂಡಾರದಲ್ಲಿ ಮತ್ತು ನವಭಾರತ ಪುಸ್ತಕ ಭಂಡಾರದಲ್ಲಿ ಮಾರಾಟಗಾರರಾಗಿ ಹಾಗೂ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ೧೯೮೮ರಿಂದ ೨೦೦೩ರವರೆಗೆ ಕನ್ನಡ ದಿನಪತ್ರಿಕೆಯಾದ ಉದಯವಾಣಿಯಲ್ಲಿ ಉಪಸಂಪಾದಕರಾಗಿ ಹಾಗೂ ೨೦೦೩ರಿಂದ ತರಂಗ ವಾರಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾಧನೆಗಳು
[ಬದಲಾಯಿಸಿ]- ೧೯೯೭ರಿಂದ ದ್ವಿತೀಯಾಕ್ಷರ ಪ್ರಾಸವುಳ್ಳ ೧೦+೧೦+೧೧ ಮಾತ್ರೆಗಳ ಮೂರು ಸಾಲಿನ 'ಮುಕ್ಕಾಲು ಪದ್ಯ'ಗಳನ್ನು ರಚಿಸುತ್ತಿರುವ ಜಯರಾಮ ಕಾರಂತರು, ಈ ಮೂಲಕ ವಿಭಿನ್ನ ಛಂದಸ್ಸಿನ ಪದ್ಯರಚನೆಯ ಕ್ರಮವೊಂದನ್ನು ಕನ್ನಡಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
- ಜಯರಾಮ ಕಾರಂತ ಅವರು ತಮ್ಮ ಸ್ವಂತ 'ಸ್ನೇಹ ಪ್ರಕಾಶನ'ದಡಿಯಲ್ಲಿ ನಾಡಿನ ಗಣ್ಯ ಸಾಹಿತಿಗಳ ಕವಿತೆ, ನಾಟಕ, ಅನುವಾದಿತ ನೀಳ್ಗತೆ, ಕಾದಂಬರಿ ಮೊದಲಾದ ಹತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
- ಉದಯವಾಣಿ, ಕನ್ನಡಪ್ರಭ, ಪ್ರಜಾವಾಣಿ, ಮುಂಗಾರು, ಕನ್ನಡಪ್ರಭ, ತರಂಗ, ಕರ್ಮವೀರ, ತುಷಾರ, ಉತ್ಥಾನ ಮತ್ತು ಯುಗಪುರುಷ ಮುಂತಾದ ಪತ್ರಿಕೆಗಳಲ್ಲಿ ಕಥೆ, ಕವನಗಳನ್ನು ಪ್ರಕಟಿಸಿದ್ದಾರೆ.
- ತಾಲೂಕು, ಜಿಲ್ಲಾ, ರಾಜ್ಯ, ಗಡಿನಾಡ, ಕನ್ನಡ ಸಮ್ಮೇಳನಗಳಲ್ಲಿ ಕವಿಗೋಷ್ಠಿಗಳಲ್ಲಿ ಕವಿತೆಗಳನ್ನು ವಾಚಿಸಿದ್ದಾರೆ.
- ಕುಂದಾಪುರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ.(೧೯೯೩)
- ಕಾರ್ಕಳ ತಾಲೂಕು ಸಮ್ಮೇಳನದಲ್ಲಿ ನಡೆದ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ.(೨೦೦೯)
- ಚಿತ್ರದುರ್ಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗಿ.(೨೦೦೯)
- ಮೂಡಬಿದಿರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಚುಟುಕು ಕವಿಗೋಷ್ಠಿಯಲ್ಲಿ ಭಾಗಿ.(೨೦೦೬)
- ಆಳ್ವಾಸ್ ನುಡಿಸಿರಿ - ಕವಿನಮನ -ಕವಿಸಮಯದಲ್ಲಿ ಕವನವಾಚನ.
- ಕಾಂತಾವರ ಕನ್ನಡ ಸಂಘದಲ್ಲಿ ಹಲವು ವರ್ಷಗಳ ಕಾಲ ಸಕ್ರಿಯ ಸೇವೆ ಸಲ್ಲಿಸಿದ್ದಾರೆ.
ಕೃತಿಗಳು
[ಬದಲಾಯಿಸಿ]- ದಳಗಳು - ಕವನ ಸಂಕಲನ (೧೯೮೫)
- ವಲಸೆ ಬಂದ ಹಕ್ಕಿ - ಕವನ ಸಂಕಲನ (೧೯೯೭)
- ಮುಕ್ಕಾಲು ಪದ್ಯಗಳು - ಕವನ ಸಂಕಲನ (೧೯೯೭, ೨೦೦೧)
- ನೆಲಗುಲಾಬಿಯ ಗುಟ್ಟು - ಕವನ ಸಂಕಲನ (೨೦೦೧)
- ಬಿದ್ದ ಪ್ರತಿಮೆ - ಕವನ ಸಂಕಲನ (೨೦೧೪)
- ನಾಯಕನಿಗೆ ನಮನ - (ಜೆಪಿ ಕುರಿತ ಲೇಖನಗಳ ಸಂಗ್ರಹ) (ಸಹಸಂಪಾದಿತ)
- ಮೊಗಸಾಲೆ ಐವತ್ತರ ಹೊತ್ತಿಗೆ - ಅಭಿನಂದನ ಗ್ರಂಥ - (ಸಹಸಂಪಾದಿತ) (೨೦೦೪)
- ಮುದ್ದಣನಿಗೆ ನಮನ - ವಿಮರ್ಶೆಗಳ ಸಂಕಲನ - (ಸಂಪಾದಿತ) (೨೦೦೩)
- ಮುದ್ದಣ ಪುರಸ್ಕಾರ - ಮುದ್ದಣ ಜನ್ಮಶತಮಾನೋತ್ಸವ ಸಂಭ್ರಮ ಸ್ಮೃತಿ ಸಂಪುಟ - (ಸಂಪಾದಿತ) (೨೦೦೩)
- ಝೆನ್ ಹನಿಗಳು - (೧೦೦ ಕಥೆಗಳ ಅನುವಾದ) (೨೦೦೧)
- ಉಡುಪಿ ಜಿಲ್ಲೆಯ ಕಾವ್ಯ - (ಸಂಪಾದಿತ) (೨೦೦೭)
- ಪುನರೂರು ಪುರಸ್ಕಾರ - ಅಭಿನಂದನ ಗ್ರಂಥ (ಸಂಪಾದಿತ) (೨೦೦೫)
- ಬತ್ತದ ಚೈತನ್ಯದ ಗಣಿ - ದ ಪವರ್ ವಿದಿನ್ - ಅನುವಾದ) (೨೦೧೫)
- ಯಶಸ್ಸಿನ ಏಳು ಸೂತ್ರಗಳು - ದೀಪಕ್ ಚೋಪ್ರಾ ಅವರ ಗ್ರಂಥದ ಸಂಕ್ಷಿಪ್ತ ರೂಪಾಂತರ
- ದೌ ದ ಜಿಂಗ್ - ಅನುವಾದ
- ಖಲೀಲ್ ಗಿಬ್ರಾನ್ ಕತೆಗಳು - ಅನುವಾದ
ಗೌರವಗಳು
[ಬದಲಾಯಿಸಿ]- 'ದಳಗಳು' ಕವನಸಂಕಲನಕ್ಕೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ. (೧೯೮೫)
- 'ವಲಸೆ ಬಂದ ಹಕ್ಕಿ' ಕವನಸಂಕಲನಕ್ಕೆ ಪೆರ್ಲ ಕಾವ್ಯ ಪ್ರಶಸ್ತಿ. (೧೯೯೭)
- ಕನ್ನಡ ಸಂಘ, ಕಾಂತಾವರ ಇದರ ಬೆಳ್ಳಿ ಹಬ್ಬದಲ್ಲಿ ಸನ್ಮಾನ.(೨೦೦೧)
- ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ.(೧೯೯೯)