ವಿಷಯಕ್ಕೆ ಹೋಗು

ಸ್ಟೆಲ್ಲಾ ಗಿಬ್ಬನ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಟೆಲ್ಲಾ ಡೊರೊಥಿಯಾ ಗಿಬ್ಬನ್ಸ್ ರವರು ಐರ್ಲೆಂಡಿನ ಪ್ರಸಿದ್ದ ಇಂಗ್ಲಿಷ್ ಲೇಖಕಿ, ಪತ್ರಕರ್ತೆ ಮತ್ತು ಕವಿಯತ್ರಿಯಾಗಿದ್ದರು. ಕೊಲ್ದ್ ಕಮ್ಫ಼ರ್ಟ್ ಫ಼ರ್ಮ್ ಇವರ ಮೊದಲ ಸಾಹಿತ್ಯ ಕೃತಿ, ಇದರ ಮೂಲಕ ತಮ್ಮ ಸಾಹಿತ್ಯ ಕೃಷಿಯನ್ನು ಆರಂಭಿಸಿದರು.

ಕುಟುಂಬದ ಹಿನ್ನೆಲೆ ಮತ್ತು ಬಾಲ್ಯ

[ಬದಲಾಯಿಸಿ]

ಗಿಬ್ಬನ್ಸ್ ಎಂಬುವ ಕುಟುಂಬವು ಮೂಲತಃ ಐರ್ಲೆಂಡ್ನಲ್ಲಿ ಹುಟ್ಟಿಕೊಂಡಿತು.ಸ್ಟೆಲ್ಲಾಳ ತಾತ, ಚಾರ್ಲ್ಸ್ ಪ್ರೆಸ್ಟನ್ ಗಿಬ್ಬನ್ಸ್ ಒಬ್ಬ ಸಿವಿಲ್ ಎಂಜಿನಿಯರ್ ಆಗಿದ್ದರು.ಸ್ಟೆಲ್ಲಾ ಗಿಬ್ಬನ್ಸ್ ರವರ ತಂದೆ ಟೆಲ್ಫರ್ಡ್ ಗಿಬ್ಬನ್ಸ್ ಹಾಗು ತಾಯಿ ಮೌಡ್ ವಿಲಿಯಮ್ಸ್ ಗಿಬ್ಬನ್ಸ್.[] ಈ ದಂಪತಿಯ ಮೊದಲ ಮಗುವಾಗಿ, ಸ್ಟೆಲ್ಲಾರವರು ೫ ಜನವರಿ ೧೯೦೨ ರಂದು ಐರ್ಲೆಂಡ್ನಲ್ಲಿ ಜನೆಸಿದರು.ಇವರ ಎರಡು ಸಹೋದರರು, ಗೆರಾಲ್ಡ್ ಗಿಬ್ಬನ್ಸ್ ಮತ್ತು ಲೂಯಿಸ್ ಗಿಬ್ಬನ್ಸ್. ಸ್ಟೆಲ್ಲಾ ೧೩ರ ವಯಸ್ಸನ್ನು ತಲುಪುವವರೆಗೂ ಗವರ್ನೆಸ್ಗಳ ಅನುಕ್ರಮವಾಗಿ ಮನೆಯಲ್ಲೇ ಶಿಕ್ಷಣ ಪಡೆದಳು.ಕುಟುಂಬದ ಪುಸ್ತಕ ಕಪಾಟುಗಳು ಅವಳಿಗೆ ಓದುವುದಕ್ಕೆ ವಸ್ತುಗಳನ್ನು ಒದಗಿಸಿದ ಕಾರಣ ಅವಳು ಕಥೆ ಹೇಳುವ ಪ್ರತಿಭೆಯನ್ನು ಅಭಿವೃದ್ಧಿಪಡಿಸಿದರು. ತಮ್ಮ ಸಹೋದರರಿಗೆ ಸಣ್ಣ ಕಥೆಗಳನ್ನು ಹೇಳುತ್ತಿದ್ದರು.

ವಿದ್ಯಾಭ್ಯಾಸ

[ಬದಲಾಯಿಸಿ]

ಮನೆಯಲ್ಲೇ ಪ್ರಾಥಮಿಕ ಶಿಕ್ಷಣವನ್ನು ಪಡೆದ ನಂತರ ಅವರು ಉತ್ತರ ಲಂಡನ್ನಿನ 'ಕಾಲೇಜಿಯೇಟ್ ಸ್ಕೂಲ್ ಫಾರ್ ಗರ್ಲ್ಸ್' ಮತ್ತು ಲಂಡನ್ ಯೂನಿವರ್ಸಿಟಿ ಕಾಲೇಜಿಗೆ ಹಾಜರಿಯಾದರರು. ಅಲ್ಲಿ ಅವರು ಜರ್ನಲಿಸಂ ವಿಷಯದಲ್ಲಿ ಎರಡು ವರ್ಷದ ಡಿಪ್ಲೊಮಾ ಪಡೆದರು.ಅರ್ಥಶಾಸ್ತ್ರ, ರಾಜಕೀಯ, ಇತಿಹಾಸ, ವಿಜ್ಞಾನ ಮತ್ತು ಇತರೆ ವಿಷಯಗಳನ್ನೂ ಸ್ಟೆಲ್ಲಾ ಗಿಬ್ಬನ್ಸ್ ಅಭ್ಯಾಸ ಮಾಡಿದ್ದರು.ಗಿಬ್ಬನ್ಸ್ ಕೋರ್ಸ್ ಪ್ರಾರಂಭವಾದ ಕೂಡಲೇ ಯೂನಿವರ್ಸಿಟಿ ನಿಯತಕಾಲಿಕೆಯ ಡಿಸೆಂಬರ್ ೧೯೨೧ರ ಸಂಚಿಕೆಗೆ "ದಿ ಮರ್ಶೆಸ್ ಆಫ್ ಮೈ ಸೋಲ್" ಎಂಬ ಕವಿತೆಯ ಕೊಡುಗೆ ನೀಡಿದ್ದರು. ಮುಂದಿನ ಎರಡು ವರ್ಷಗಳಲ್ಲಿ ಅವರ ಸಾಹಿತ್ಯ ಸಾಧನೆ ಮತ್ತಷ್ಟು ಅಭಿವೃದ್ಧಿ ಹೂಂದಿ "ದ ಡೋರ್, ಎ ಸ್ಟೋರಿ ಇನ್ ದಿ ರಷ್ಯನ್ ಮನ್ನರ್" ಸೇರಿದಂತೆ ಮತ್ತಷ್ಟು ಕವಿತೆ ಮತ್ತು ಗದ್ಯ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದರು.[] ಗಿಬ್ಬನ್ಸ್ ೧೯೨೩ರ ಬೇಸಿಗೆಯಲ್ಲಿ ತನ್ನ ಕೋರ್ಸ್ ಪೂರ್ಣಗೊಳಿಸಿ ಡಿಪ್ಲೊಮಾ ಪದವಿ ಪಡೆದುಕೊಂಡರು.

ಪತ್ರಿಕೋದ್ಯಮ ಮತ್ತು ಆರಂಭಿಕ ಬರಹ

[ಬದಲಾಯಿಸಿ]

thumb|ದಿ ಕೊಲ್ದ್ ಫ಼ಾರ್ಮ್- ಗಿಬ್ಬನ್ಸ್‍ರವರ ಪ್ರಸಿದ್ಧ ಪುಸ್ತಕಗಿಬ್ಬನ್ಸ್ ಅವರ ಮೊದಲ ಕೆಲಸ ಬ್ರಿಟೀಷ್ ಯುನಿಟ್ ಪ್ರೆಸ್ ಮತ್ತು ನ್ಯೂಸ್ ಏಜೆನ್ಸಿಯಲ್ಲಿತ್ತು. ಅಲ್ಲಿ ಅವರು ಸಮಯ ಸಿಕ್ಕಾಗೆಲ್ಲ ಅವರು ಸಣ್ಣ ಕಥೆ ಹಾಗು ಕಾದಂಬರಿಗಳನ್ನು ಬರಿಯುತಿದ್ದರು. ವಿದೇಶೀ ಪಯಣಗಳನ್ನೂ ಪ್ರಾರಂಭಿಸಿದರು ಸ್ವಿಟ್ಜರ್ಲ್ಯಾಂಡಿಗೆ ಹೋದಾಗ ಅಲ್ಲಿಯ ಸ್ವಿಸ್ ಆಲ್ಪೈನ್ ದೃಶ್ಯಾವಳಿ ಹಲವಾರು ಕವಿತೆಗಳನ್ನು ಪ್ರೇರೇಪಿಸಿತು, ಅದರಲ್ಲಿ ಕೆಲವನ್ನು ನಂತರ ಪ್ರಕಟಿಸಲಾಯಿತು.ಸೆಪ್ಟೆಂಬರ್ ೧೯೨೭ರಲ್ಲಿ ಟಿ.ಎಸ್. ಎಲಿಯಟ್ ಅವರು ಸಂಪಾದಿಸಿದ "ದಿ ಜಿರಾಫೆಸ್" ಎಂಬ ಸಾಹಿತ್ಯಕ ನಿಯತಕಾಲಿಕೆಯಲ್ಲಿ ಅವರ ಪದ್ಯ ಕಾಣಿಸಿಕೊಂಡಿತು.[] ನಂತರ ಅವರು ಕೊಲ್ಡ್ 'ಕಮ್ಫರ್ಟ್ ಫಾರ್ಮ್' ಎಂಬುವ ಕಾದಂಬರಿಯನ್ನು ಬರೆಯುವ ಕೆಲಸವನ್ನು ಪ್ರಾರಂಭಿಸಿದರು.

ಕೃತಿಗಳ ಪಟ್ಟಿ

[ಬದಲಾಯಿಸಿ]
  • ಕೋಲ್ಡ್ ಕಂಫರ್ಟ್ ಫಾರ್ಮ್
  • ಬ್ಯಾಸೆಟ್, ಲಂಡನ್
  • ಎನ್ಬರಿ ಹೀತ್
  • ನೈಟಿಂಗೇಲ್ ವುಡ್ ಮುಂತಾದವು

.

ಉಲ್ಲೇಖಗಳು

[ಬದಲಾಯಿಸಿ]