ಎಚ್.ಎಂ ಕುಮಾರ ಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ.ಎಚ್.ಎಂ ಕುಮಾರಸ್ವಾಮಿ

ಡಾ.ಎಚ್ .ಎಮ್.ಕುಮಾರಸ್ವಾಮಿಯವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಯಸಳೂರು. ತಮ್ಮ ಪಿ.ಯು.ಸಿ ಶಿಕ್ಷಣವನ್ನು ಹೊಳೆನರಸೀಪುರದಲ್ಲಿ, ಬಿ. ಎ. ಪದವಿಯನ್ನು ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ. ಎ. ಪದವಿಯನ್ನು ಮ್ಯೆಸೂರು ವಿಶ್ವಾವಿದ್ಯಾನಿಲಯದಲ್ಲಿ ಹಾಗೂ ಪಿ. ಎಚ್. ಡಿ. ಪದವಿಯನ್ನು ಗುಲ್ಬರ್ಗಾ ವಿಶ್ವಾವಿದ್ಯಾನಿಲಯದಲ್ಲಿ ಪಡೆದಿರುತ್ತಾರೆ. 1997 ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸತತ 35 ವರ್ಷ ಹಿಂದಿ ಉಪನ್ಯಾಸಕರಾಗಿ ,ಹಿಂದಿ ವಿಭಾಗದ ಮುಖ್ಯಸ್ಥರಾಗಿ ಪ್ರಸ್ತುತ 2012-13 ರಲ್ಲಿ ಕಾಲೇಜು ಪ್ರಾಂಶುಪಾಲಾರಾಗಿ ಸೇವೆ ಗೈದಿದ್ದಾರೆ. ನಾಟಕ, ಲೇಖನ, ವಿಮರ್ಶೆ, ಅನುವಾದ, ಕಥೆ, ಕವನ, ರಂಗತಜ್ಞ ಹೀಗೆ ಬಹು ಮುಖ ಸಾಧಕರಾಗಿರುವ ಡಾ. ಸ್ವಾಮಿ ಸುಳ್ಯದ ಸಾಹಿತ್ಯ ಕ್ರಾಂತಿಯಲ್ಲಿ ತನ್ನದೇ ಆದ ಚಾಪನ್ನು ಒತ್ತಿದ್ದಾರೆ. ಒಟ್ಟು ಹನ್ನೋಂದು ಕೃತಿಗಳನ್ನು ಡಾ ಕುಮಾರ ಸ್ವಾಮಿ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ .

ಕೃತಿಗಳು[ಬದಲಾಯಿಸಿ]

ಬಂಕಪುರದ ಬಯಲಾಟ(ಅನುವಾದಿತ ಕೃತಿ ), ಗ್ರಾಮ ಸೇತುವೆ, ಖಾಲಿ ಬಾಟಲಿಗಳು(ಕಿರು ನಾಟಕ) ಬಯಲು(ನಾಟಕ), ಪಿರಮಿಡ್ಡ್(ಹಿಂದಿ ಕಥೆಗಳಅನುವಾದ), ವಿಚಿತ್ರೇಶ್ವರನ ಜಾತ್ರೆ, ರಾಷ್ಟ್ರ ಕವಿ ಗೋವಿಂದ ಪೈ ವ್ಯಕ್ತಿತ್ವ ಔರ್ ಕೃತಿತ್ವ(ಹಿಂದಿ ಕೃತಿ) ಭಾರತೇಂದುರವರ ಮೂರು ನಾಟಕಗಳು(ಅನುವಾದಿತ), ಕರಾವಳರಂಗ ಭೂಮಿ, ಮಾಯಮೃಗ , ತಥಾ ಅನ್ಯ ಕಥಾ ನೀಯಾಂ, ಮುಂತಾದವು. ಇವರ ಎಂಟು ನಾಟಕಗಳು ರಾಷ್ಟ್ರೀಯ ಆಕಾಶವಾಣಿಯಲ್ಲಿ ಪ್ರಸಾರಗೊಂಡಿವೆ. ನಿಲ್ದಾಣ, ಹಿನ್ನೀರು ರೇಡಿಯೊದಲ್ಲಿ ಪ್ರಸಾರವಾಗಿವೆ. ಹಿಂದಿಯ ವಿವಿಧ ಪತ್ರಿಕೆಗಳಲ್ಲಿ ಡಾ. ಸ್ವಾಮಿಯವರ ಲೇಖನಗಳು ಪ್ರಕಟಗೊಂಡಿವೆ. ಅಧ್ಯಾಪನ ವೃತ್ತಿಯೊಡನೆ ರಂಗ ಭೂಮಿ ಕಲಾವಿಧರಾಗಿ ದುಡಿದಿರುವ ಡಾ.ಸ್ವಾಮಿಯವರು ಅಭಿನಯ (1980) ರಂಗ ಕಲಾವಿರಂಗ ಕಲಾವಿದರ ತಂಡದ ಸ್ಥಾಪಕ ಸದಸ್ಯರಾಗಿ ಹೊಸ ನಾಟಕಗಳನ್ನು ಸುಳ್ಯಕ್ಕೆ ಪರಿಚಯಿಸಿದ್ದಾರೆ. ದೃಶ್ಯ , ನಾಳೆ ಯಾರಿಗೂ ಇಲ್ಲ, ಮಧುಮಕ್ಕಿ, ಸ್ಪರ್ಶ, ಕಲ್ಯಾಣ ಸ್ವಾಮಿ , ಶ್ರೀ ಕೃಷ್ಣ ದೇವರಾಯ, ನಾಟಕಗಳನ್ನು ಪ್ರದರ್ಶಿಸಿ ತಾಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಮತ್ತು ವಿವಿ ಮಟ್ಟದಲ್ಲಿ ಪ್ರಸಸ್ತಿಗಳನ್ನು ಗಳಿಸಿರುತ್ತಾರೆ.

ಸಾಧನೆ[ಬದಲಾಯಿಸಿ]

1980-83 ರ ವರೆಗೆ ರೋಟರ್ಯಕ್ಟ್ ಸಂಸ್ಥೆಯ ಸದಸ್ಯರಾಗಿ ನಂತರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮಂಗಳೂರು ವಿವಿಯ ಹಿಂದಿ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ,ಸ್ವಂತಿಕಸಾಹಿತ್ಯ ಬಳಗದ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ, ಸುಳ್ಯ ತಾಲೂಕು ಪರಿಸರ ಒಕ್ಕೂಟದ ಅಧ್ಯಕ್ಷರಾಗಿ, ಸುಳ್ಯತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಜಾವಾಣಿ ದಿನ ಪತ್ರಿಕೆಗೆ ಹವ್ಯಾಸಿ ವರದಿಗಾರಾಗಿ 12 ವರ್ಷ ನಿರಂತರ ಸೇವೆ ಗೈದಿದ್ದಾರೆ. ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಗೊಂಡಿದ್ದಾರ

ಪ್ರಶಸ್ತಿಗಳು[ಬದಲಾಯಿಸಿ]

ನಾಳೆ ಯಾರಿಗೂ ಇಲ್ಲ ನಾಟಕ ನಿರ್ದೇಶನಕ್ಕಾಗಿ ತಾಲೂಕು ಜಿಲ್ಲಾ ಮಟ್ಟದ ಪ್ರಶಸ್ತಿಗಳು, ಅಲೆಮಾರಿಗಳು ನಾಟಕ ನಿರ್ದೇಶನಕ್ಕಾಗಿ ವಿ.ವಿ.ಮಟ್ಟದ ದ್ವೀತಿಯ ಪ್ರಶಸ್ತಿ , ಶಾಂತಿ ಗ್ರಾಮ ನಾಟಕ ನಿರ್ದೇಶನಕ್ಕಾಗಿ ಕೊಪ್ಪಿಕಾರ್ ಪ್ರಶಂಸೆ ಪತ್ರ [1986],ಮಧುಮಕ್ಕಿ’ ನಾಟಕ ನಿರ್ದೇಶನಕ್ಕಾಗಿ ರಾಜ್ಯಮಟ್ಟದ ತ್ರತೀಯ ಪ್ರಶಸ್ತಿ , ಕರ್ನಾಟಕ ಸಂಘ ಸ್ಥಾಪಿಸಿದ ಪರಿಸರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆಮಾಡಿದ್ದಾರೆ. ಇವರು ಅನೇಕ ವಿಚಾರ ಸಂಕಿರಣಗಳಲ್ಲೂ ಭಾಗಿಯಗಿದ್ದಾರೆ. ಕಾಸರಗೋಡು, ಕೊಚ್ಚಿನ್ , ಅಸ್ಸಾಂ, ಬಳ್ಳಾರಿ, ಬೆಂಗಳೂರು, ಹಿಮಾಚಲ ಪ್ರದೇಶ, ಮುಂಬಯಿ ಹಾಗೂ ನೇಪಾಳದಲ್ಲಿ ನಡೆದ ಅಂತರರಾಷ್ಟ್ರೀಯ ಅನುವಾದ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಇವರು 18ನೇ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಹಿಂದಿ ಮತ್ತು ಕನ್ನಡದ ಸಮರ್ಥಸಂವಹನಕಾರರಾಗಿ ನಿರಂತರ ದುಡಿದ ಡಾ. ಕುಮಾರ ಸ್ವಾಮಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.[೧]

ಉಲ್ಲೇಖಗಳು[ಬದಲಾಯಿಸಿ]

  1. ಕಾರಂಜಿ ೨೦೧೨-೧೩