ವಿಷಯಕ್ಕೆ ಹೋಗು

ಪಿಎಸ್‌ಎಲ್‌ವಿ–ಸಿ38 - ಕಾರ್ಟೊಸ್ಯಾಟ್‌ 2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾರ್ಟೊಸ್ಯಾಟ್‌ 2

[ಬದಲಾಯಿಸಿ]
ಕಾರ್ಟೊಸ್ಯಾಟ್‌ 2 ಸರಣಿಯ ಉಪಗ್ರಹವನ್ನು ಹೊತ್ತೊಯ್ಯುವ ಪಿ.ಎಸ್.ಎಲ್.ವಿ. ರಾಕೆಟ್ ( PSLV (DYK)
  • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಕಾರ್ಟೊಸ್ಯಾಟ್‌ 2 ಸರಣಿಯ ಉಪಗ್ರಹವನ್ನು ಶುಕ್ರವಾರ ಉಡಾವಣೆ ಮಾಡಿದೆ. ಈ ಬಾರಿ ಭಾರತದ ಒಂದು ದೊಡ್ಡ ಮತ್ತು ಒಂದು ಸಣ್ಣ ಉಪಗ್ರಹಗಳ ಜತೆಗೆ 14 ದೇಶಗಳ 29 ಉಪಗ್ರಹಗಳನ್ನೂ ಇಸ್ರೊ ಕಕ್ಷೆಗೆ ಸೇರಿವೆ.
  • ಅಮೆರಿಕ, ಬ್ರಿಟನ್‌, ಜರ್ಮನಿ, ಫ್ರಾನ್ಸ್‌ನಂತಹ ದೇಶಗಳ ಉಪಗ್ರಹಗಳೂ ಇದರಲ್ಲಿ ಇವೆ. ಇಸ್ರೊದ ವಾಣಿಜ್ಯ ವಿಭಾಗ ಅಂತರಿಕ್ಷ ಕಾರ್ಪೊರೇಷನ್‌ ಲಿ. ವಿವಿಧ ದೇಶಗಳ ಜತೆಗೆ ಮಾಡಿಕೊಂಡಿರುವ ಒಪ್ಪಂದ ಪ್ರಕಾರ ವಿದೇಶಗಳ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗುತ್ತಿದೆ.

ಹೆಚ್ಚಿನ ವಿವರ

[ಬದಲಾಯಿಸಿ]
  • ಕಾರ್ಟೊಸ್ಯಾಟ್–2 ಮತ್ತು ಇತರ 30 ಸಣ್ಣ ಉಪಗ್ರಹಗಳನ್ನು ಹೊತ್ತಿದ್ದ ಪಿಎಸ್‌ಎಲ್‌ವಿ ಸಿ–38, ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 9.29ಕ್ಕೆ ಪಯಣ ಆರಂಭಿಸಿತು. ನಂತರದ 27 ನಿಮಿಷಗಳಲ್ಲಿ ಎಲ್ಲಾ 31 ಉಪಗ್ರಹಗಳನ್ನೂ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು.
  • ‘ಕಾರ್ಟೊಸ್ಯಾಟ್ ಸರಣಿಯ ಈ ಹಿಂದಿನ ಉಪಗ್ರಹಗಳು ಕಳುಹಿಸಿದ್ದ ಚಿತ್ರಗಳನ್ನು ಬಳಸಿಕೊಂಡೇ ಸೇನೆ ಕಳೆದ ವರ್ಷ, ಗಡಿ ನಿಯಂತ್ರಣಾ ರೇಖೆಯಲ್ಲಿ ನಿರ್ದಿಷ್ಟ ದಾಳಿ ನಡೆಸಿತ್ತು. ಕಾರ್ಟೊಸ್ಯಾಟ್–2 ಉಪಗ್ರಹ ಕಳುಹಿಸಲಿರುವ ಚಿತ್ರಗಳು, ಈ ಹಿಂದಿನ ಉಪಗ್ರಹದ ಚಿತ್ರಕ್ಕಿಂತಲೂ ದೊಡ್ಡದಾಗಿರಲಿವೆ’ ಎಂದು ಇಸ್ರೊದ ವಿಜ್ಞಾನಿಯೊಬ್ಬರು ಹೇಳಿದ್ದಾರೆ.
  • ‘ಕಾರ್ಟೊಸ್ಯಾಟ್–1, ಗರಿಷ್ಠ 0.8 ಮೀಟರ್‌ ಅಳತೆಯಷ್ಟು ಜಾಗ ಸ್ಪಷ್ಟವಾಗಿ ಕಾಣಿಸುವ ಚಿತ್ರವನ್ನು ಸೆರೆಹಿಡಿಯುತ್ತಿತ್ತು. ಕಾರ್ಟೊಸ್ಯಾಟ್–2 ಗರಿಷ್ಠ 0.6 ಮೀಟರ್‌ ಅಳತೆಯ ಜಾಗದ ಚಿತ್ರವನ್ನು ಸ್ಪಷ್ಟವಾಗಿ ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ. ಇದರಿಂದ ನೆಲದ ಮೇಲಿರುವ ಸಣ್ಣ–ಪುಟ್ಟ ವಸ್ತುಗಳನ್ನೂ ಉಪಗ್ರಹದ ಮೂಲಕವೇ ಪತ್ತೆ ಮಾಡಬಹುದು. ಇದು ಭಾರತೀಯ ಸೇನೆಯ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸಲಿದೆ’ ಎಂದು ಆ ವಿಜ್ಞಾನಿ ಹೇಳಿದ್ದಾರೆ.
  • ‘ಕಾರ್ಟೊಸ್ಯಾಟ್–2 ಕಕ್ಷೆಗೆ ಸೇರಿದ ನಂತರ, ತನ್ನ ಸೌರಫಲಕಗಳನ್ನು ತೆರೆದು ಕಾರ್ಯಾಚರಣೆ ಆರಂಭಿಸಿದೆ. ಬೆಂಗಳೂರಿನಲ್ಲಿರುವ ಕೇಂದ್ರದಿಂದ ಉಪಗ್ರಹವನ್ನು ನಿಯಂತ್ರಿಸಲಾಗುತ್ತದೆ. ಉಪಗ್ರಹ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆರಂಭಿಸಿದ ನಂತರ, ಉಪಗ್ರಹದಿಂದ ಚಿತ್ರಗಳು ಮತ್ತು ಕೆಲವು ಸ್ವರೂಪದ ದತ್ತಾಂಶಗಳನ್ನು ಪಡೆಯಲು ಸೇನೆಗೆ ಅನುಮತಿ ನೀಡಲಾಗುತ್ತಿದೆ. ಇದಕ್ಕಾಗಿ ಸೇನೆ ಒಂದು ಸ್ವೀಕೃತಿ ಕೇಂದ್ರವನ್ನು ಸ್ಥಾಪಿಸಿದೆ ಮತ್ತು ತರಬೇತಿ ಪಡೆದ ಸಿಬ್ಬಂದಿಯೂ ಇದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.[]

ಪ್ರಾಥಮಿಕ ವಿವರಗಳು

[ಬದಲಾಯಿಸಿ]
  • ಗುರುವಾರ– ಬೆಳಗ್ಗೆ 5.29ಕ್ಕೆ 28 ತಾಸುಗಳ ಕ್ಷಣಗಣನೆ ಆರಂಭ
  • ಶುಕ್ರವಾರ– ಬೆಳಗ್ಗೆ 9.20ಕ್ಕೆ ಉಡಾವಣೆ
  • ಶ್ರೀಹರಿಕೋಟ ಉಡಾವಣಾ ಕೇಂದ್ರದಿಂದ ಉಡಾವಣೆ
  • ಭೂಮಿಯಿಂದ ಕಕ್ಷೆಯ ದೂರ 505ಕಿ.ಮೀ
  • ವಾಹಕ: ಪಿಎಸ್‌ಎಲ್‌ವಿ–ಸಿ38
  • ಇದು ಪಿಎಸ್‌ಎಲ್‌ವಿಯ 40ನೇ ಹಾರಾಟ

ಭೌತಿಕ ವಿವರಗಳು

[ಬದಲಾಯಿಸಿ]

*ಉಪಗ್ರಹಗಳು

  • ಕಾರ್ಟೊಸ್ಯಾಟ್‌ 2 ಸರಣಿಯ ಭೂ ವೀಕ್ಷಣಾ ಉಪಗ್ರಹ (ತೂಕ: 712 ಕೆ.ಜಿ)
  • ಇತರ 30 ಸಣ್ಣ ಉಪಗ್ರಹಗಳು (ಒಟ್ಟು ತೂಕ: 243 ಕೆ.ಜಿ)
  • 30 ಸಣ್ಣ ಉಪಗ್ರಹಗಳ ಪೈಕಿ 29  ಉಪಗ್ರಹಗಳು 14 ದೇಶಗಳಿಗೆ ಸೇರಿದ್ದಾಗಿವೆ. ಒಂದು ಸಣ್ಣ ಉಪಗ್ರಹ ಭಾರತದ್ದು.

ಪ್ರಯೋಜನಗಳು

[ಬದಲಾಯಿಸಿ]
  • ಭೂ ನಕ್ಷೆ ತಯಾರಿ
  • ನಗರ, ಗ್ರಾಮೀಣ ಪ್ರದೇಶಗಳು, ಕರಾವಳಿ ಪ್ರದೇಶಗಳ ಭೂ ಬಳಕೆ ಗುರುತಿಸುವಿಕೆ ಮತ್ತು ನಿಯಂತ್ರಣ
  • ರಸ್ತೆ ಜಾಲದ ಮೇಲೆ ನಿಗಾ, ನೀರು ವಿತರಣೆ
  • ಭೂ ಬಳಕೆಯಲ್ಲಿನ ಪರಿವರ್ತನೆ ಗುರುತಿಸುವಿಕೆ
  • ಭೌಗೋಳಿಕ ಮಾಹಿತಿ ವ್ಯವಸ್ಥೆ
  • ಕಾರ್ಟೊಸ್ಯಾಟ್‌ 2 ಉಪಗ್ರಹವನ್ನು ಧ್ರುವೀಯ ಸೂರ್ಯ ಸಮನ್ವಯ ಕಕ್ಷೆಗೆ ಸೇರಿಸಲಾಗುವುದು
  • ಕಾರ್ಟೊಸ್ಯಾಟ್‌–2 ದೂರ ಸಂವೇದಿ ಉಪಗ್ರಹವಾಗಿದ್ದು, ಈ ಸರಣಿಯ ಹಿಂದಿನ ಉಪಗ್ರಹಗಳ ರೀತಿಯಲ್ಲಿಯೇ ಇದೆ
  • ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಮಿಗೆ ಕಳುಹಿಸುವುದು ಇದರ ಉದ್ದೇಶ.
  • ಅದಕ್ಕಾಗಿ ಸದಾ ಒಂದೇ ರೀತಿಯಲ್ಲಿ ಸೂರ್ಯನ ಬೆಳಕು ಬೀಳುವ ಕಕ್ಷೆಯಲ್ಲಿ (ಸೂರ್ಯ ಸಮನ್ವಯ ಕಕ್ಷೆ) ಉಪಗ್ರಹವನ್ನು ಇರಿಸಲಾಗುತ್ತದೆ

[]

ಉಲ್ಲೇಖ

[ಬದಲಾಯಿಸಿ]