ವಿಷಯಕ್ಕೆ ಹೋಗು

ಕಸೊಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಸೊಲ್
ಗಿರಿಧಾಮ
ಕಸೊಲ್ ಪರ್ವತ ನೋಟ
ಕಸೊಲ್ ಪರ್ವತ ನೋಟ
ದೇಶ ಭಾರತ
ರಾಜ್ಯಹಿಮಾಚಲ ಪ್ರದೇಶ
ಜಿಲ್ಲೆಕುಲ್ಲು
Area
 • Total೦.೩೬ km (೦.೧೪ sq mi)
Elevation
೧,೫೮೦ m (೫,೧೮೦ ft)
ಭಾಷೆಗಳು
 • ಅಧಿಕೃತಹಿಂದಿ ಇಂಗ್ಲೀಷ್
Time zoneUTC+5:30 (IST)
ದೂರವಾಣಿ ಕೋಡ್೦೧೯೦೭
Vehicle registrationಹೆಚ್ ಪಿ-
ಹತ್ತಿರದ ಪಟ್ಟಣಕುಲ್ಲು
ಸಾಕ್ಷರತೆಕಡಿಮೆ%
ಹವಾಮಾನತಂಪು

ಕಸೊಲ್ ಉತ್ತರ ಭಾರತಹಿಮಾಚಲ ಪ್ರದೇಶದಲ್ಲಿರುವ ಕುಲ್ಲು ಜಿಲ್ಲೆಯಲ್ಲಿರುವ ಒಂದು ಗ್ರಾಮ[][]. ಇದು ಪಾರ್ವತಿ ಕಣಿವೆಯ, ಪಾರ್ವತಿ ನದಿ ದಂಡೆಯಲ್ಲಿ [ಭುನ್ಟರ್]ನಿಂದ ಮನಿಕರನ್ಗೆ ಹೊಗುವ ದಾರಿಯಲ್ಲಿ ನೆಲೆಗೊಂಡಿದೆ. ಕುಲ್ಲುನಿಂದ ೪೨ಕಿ.ಮಿ. ಹಾಗು ಭುನ್ಟರ್ ನಿಂದ ೩೦ ಕಿಮೀ ದೂರದಲ್ಲಿ ದೂರದಲ್ಲಿರುವ ಈ ಜಾಗವು ಸಮುದ್ರ ಮಟ್ಟದಿಂದ ೧೬೪೦ ಮೀ ಎತ್ತರದಲ್ಲಿದೆ. ಕಸೊಲ್ ಗ್ರಾಮವು ತೋಶ್ ಗ್ರಾಮಕ್ಕೆ ಭೇಟಿ ನೀಡುವ ಪ್ರವಾಸಿಗರಲ್ಲಿ ಹೆಚ್ಚು ಪ್ರಸಿದ್ಧಿ.

ಈ ಗ್ರಾಮವು ಹೆಚ್ಚು ಇಸ್ರೇಲ್ ಪ್ರವಾಸಿಗಾರನ್ನು ಆಕರ್ಷಿಸುತ್ತಿದೆ[].

ಸಾರಿಗೆ

[ಬದಲಾಯಿಸಿ]

ಕಸೊಲ್ ಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಭುನ್ಟರ್ ಪಟ್ಟಣದಲ್ಲಿರುವ ಕುಲ್ಲು-ಮನಲಿ ವಿಮಾನ ನಿಲ್ದಾಣ(IATA: KUU, ICAO: VIBR). ಇದು ಮನಾಲಿಗೆ ಸಂಪರ್ಕ ಕಲ್ಪಿಸುವ ಹತ್ತಿರದ ಸಾರಿಗೆ ನಿಲ್ದಾಣವು ಕೂಡ.[] ಕಸೋಲ್ ತಲುಪಲು ಮೊದಲು ಭುನ್ಟರ್ ಪಟ್ಟಣ ತಲುಪಿ ಅಲ್ಲಿಂದ ಬೆಳಿಗ್ಗೆ ೮ - ಸಂಜೆ ೬ ರ ವರೆಗೂ ಪ್ರತಿ ಘಂಟೆಗೊಮ್ಮೆ ಲಭ್ಯವಿರುವ ಸಾರಿಗೆ ಸೌಲಭ್ಯ ಉಪಯೋಗಿಸಿಕೊಳ್ಳಬಹುದು. ಆದಾಗ್ಯೂ, ಸ್ಥಳೀಯ ಟ್ಯಾಕ್ಸಿ ಸೇವೆ ಸದಾ ಕಾಲ ಲಭ್ಯವಿರುತ್ತದೆ. ಆ ಪ್ರದೇಶದಲ್ಲಿ ಕಸೋಲ್ ಪ್ರಸಿದ್ಧ ಪ್ರವಾಸಿ ತಾಣ ಆಗಿರುವುದರಿಂದ, ಹತ್ತಿರದ ಮನಾಲಿ ನಗರದಿಂದಲು ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.

ಹತ್ತಿರದ ವೀಕ್ಷಣಾ ತಾಣಗಳು

[ಬದಲಾಯಿಸಿ]
  • ಪಾರ್ವತಿ ನದಿ
  • ಮಣಿಕರನ್ ಗುರುದ್ವಾರ
  • ತೋಶ್
  • ಮಲಾನ
  • ಖೀರ್ ಗಂಗಾ

ಪ್ರತಿ ಹೊಸ ವರ್ಷದಂದು,ಕಸೋಲ್ ನಲ್ಲಿ ನಡೆಯುವ ಕಸೋಲ್ ಸಂಗೀತ ಹಬ್ಬ ಬಹಳ ಪ್ರಸಿದ್ಧವಾದದ್ದು. ಈ ಹಬ್ಬವನ್ನು ನೋಡಲು ಪ್ರವಾಸಿಗರು ವಿಶ್ವದೆಲ್ಲೆಡೆ ಇಂದ ಬರುತ್ತಾರೆ.

ಗ್ಯಾಲರಿ

[ಬದಲಾಯಿಸಿ]

ಉಲ್ಲೇಖನಗಳು

[ಬದಲಾಯಿಸಿ]
  1. "Say 'High' - Kasol". Archived from the original on 2014-05-11. Retrieved 2017-06-03.
  2. NREGA report
  3. http://indianexpress.com/article/auto-travel/travelogue/rejuvenate-yourself-with-serenity-peace-in-the-natures-lap-2944257
  4. "My first trip to India - Kasol & Tosh".
"https://kn.wikipedia.org/w/index.php?title=ಕಸೊಲ್&oldid=1054254" ಇಂದ ಪಡೆಯಲ್ಪಟ್ಟಿದೆ