ವಿಷಯಕ್ಕೆ ಹೋಗು

ಸಂದೇಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂದೇಹ ಒಂದು ಸ್ಥಾನವನ್ನು ನಿರೂಪಿಸುತ್ತದೆ ಮತ್ತು ಇದರಲ್ಲಿ ಮನಸ್ಸು ಎರಡು ವಿರೋಧಾತ್ಮಕ ಪ್ರತಿಪಾದನೆಗಳ ನಡುವೆ ನೇತಾಡುತ್ತಿರುತ್ತದೆ ಮತ್ತು ಎರಡರಲ್ಲಿ ಒಂದಕ್ಕೂ ಒಪ್ಪಿಗೆ ಕೊಡಲು ಅಸಮರ್ಥವಾಗಿರುತ್ತದೆ.[] ಭಾವನಾತ್ಮಕ ಮಟ್ಟದಲ್ಲಿ ಸಂದೇಹವು ನಂಬಿಕೆ ಮತ್ತು ಅಪನಂಬಿಕೆ ಮಧ್ಯೆ ನಿರ್ಣಯಕ್ಕೆ ಬರಲಾಗದಿರುವುದು. ಸಂದೇಹವು ಒಂದು ಹೇಳಲಾದ ವಾಸ್ತವಾಂಶ, ಒಂದು ಕ್ರಿಯೆ, ಉದ್ದೇಶ, ಅಥವಾ ನಿರ್ಣಯದ ವಿಷಯದಲ್ಲಿ ಅನಿಶ್ಚಿತತೆ, ಅವಿಶ್ವಾಸ ಅಥವಾ ಖಚಿತತೆಯ ಅಭಾವವನ್ನು ಒಳಗೊಳ್ಳುತ್ತದೆ. ಸಂದೇಹವು ಗ್ರಹಿಸಲಾದ ವಾಸ್ತವದ ವಿಚಾರವನ್ನು ಪ್ರಶ್ನಿಸುತ್ತದೆ, ಮತ್ತು ತಪ್ಪುಗಳು, ದೋಷಗಳು ಅಥವಾ ಸೂಕ್ತತೆಯ ಕಾಳಜಿಯಿಂದ ಸಂಬಂಧಿತ ಕ್ರಮವನ್ನು ವಿಳಂಬಮಾಡುವ ಅಥವಾ ತಿರಸ್ಕರಿಸುವುದನ್ನು ಒಳಗೊಳ್ಳಬಹುದು. ಮನಸ್ಸಿನ ಮಟ್ಟದಲ್ಲಿ ಅದು ತರ್ಕಮಾಡುವುದು, ವಾಸ್ತವಾಂಶಗಳು ಮತ್ತು ಸಾಕ್ಷ್ಯಾಧಾರಗಳ ಪರೀಕ್ಷೆಯನ್ನು ಒಳಗೊಳ್ಳುತ್ತದೆ ಮತ್ತು ಭಾವನಾತ್ಮಕ ಮಟ್ಟದಲ್ಲಿ ನಂಬುವುದು ಮತ್ತು ನಂಬದಿರುವುದನ್ನು ಒಳಗೊಳ್ಳುತ್ತದೆ.

ಸಂದೇಹವು ಕೆಲವೊಮ್ಮೆ ತಾರ್ಕಿಕತೆಯನ್ನು ಆಯ್ಕೆಮಾಡಲು ಪ್ರಯತ್ನಿಸುತ್ತದೆ. ಸಂದೇಹವು ಕೆಲಸ ನಡೆಸುವ ಮುನ್ನ ಜನರು ಹಿಂಜರಿಯುವಂತೆ ಪ್ರೋತ್ಸಾಹಿಸಬಹುದು, ಮತ್ತು/ಅಥವಾ ಹೆಚ್ಚು ಉಗ್ರ ವಿಧಾನಗಳನ್ನು ಪ್ರಯೋಗಿಸುವಂತೆ ಮಾಡಬಹುದು. ಸಂದೇಹವು ಅಪನಂಬಿಕೆ ಅಥವಾ ಅಸಮ್ಮತಿಯತ್ತ ಕರೆದೊಯ್ಯುವ ನಿರ್ದಿಷ್ಟ ಪ್ರಾಮುಖ್ಯವನ್ನು ಹೊಂದಿರಬಹುದು.

ಹಲವುವೇಳೆ ವೈಯಕ್ತಿಕ ಜೀವನದ ಹಾದಿಯನ್ನು ನಿರ್ಧರಿಸುವ ತೀರ್ಮಾನಗಳಿರುವ, ರಾಜ್ಯಶಾಸ್ತ್ರ, ನೀತಿಶಾಸ್ತ್ರ ಮತ್ತು ಕಾನೂನು ಸಂದೇಹದ ಮೇಲೆ ಭಾರಿ ಪ್ರಾಮುಖ್ಯತೆ ಕೊಡುತ್ತವೆ, ಮತ್ತು ಲಭ್ಯವಾದ ಎಲ್ಲ ಸಾಕ್ಷ್ಯಾಧಾರವನ್ನು ಎಚ್ಚರಿಕೆಯಿಂದ ನೋಡಲು ಹಲವುವೇಳೆ ವಿಸ್ತಾರವಾದ ಪ್ರತ್ರಿಕೂಲ ಪ್ರಕ್ರಿಯೆಗಳನ್ನು ಪ್ರೋತ್ಸಾಹಿಸುತ್ತವೆ.

ಸಾಮಾಜಿಕವಾಗಿ, ಸಂದೇಹವು ಅವಿಶ್ವಾಸದ ವಾತಾವರಣ ಸೃಷ್ಟಿಸುತ್ತದೆ, ಏಕೆಂದರೆ ಅದು ಸ್ವರೂಪದಲ್ಲಿ ಆಪಾದಿಸುವಂಥದ್ದು ಮತ್ತು ವಸ್ತುತಃ ಮತ್ತೊಬ್ಬರ ಕಡೆಯಿಂದ ಮೂರ್ಖತನ ಅಥವಾ ಮೋಸವನ್ನು ಆಪಾದಿಸುವಂಥದ್ದು. ಜ್ಞಾನೋದಯದ ಕಾಲದಿಂದ ಪಾಶ್ಚಾತ್ಯ ಐರೋಪ್ಯ ಸಮಾಜದಲ್ಲಿ ಅಂತಹ ನಿಲುವನ್ನು ಪ್ರೋತ್ಸಾಹಿಸಲಾಗಿದೆ, ಸಂಪ್ರದಾಯ ಮತ್ತು ಅಧಿಕಾರಕ್ಕೆ ವಿರೋಧವಾಗಿ.

ಉಲ್ಲೇಖಗಳು

[ಬದಲಾಯಿಸಿ]
  1. Sharpe, Alfred. "Doubt". The Catholic Encyclopedia, Vol. 5. New York: Robert Appleton. Retrieved 2008-10-21. A state in which the mind is suspended between two contradictory propositions and unable to assent to either of them. {{cite news}}: Cite has empty unknown parameter: |coauthors= (help)


"https://kn.wikipedia.org/w/index.php?title=ಸಂದೇಹ&oldid=778147" ಇಂದ ಪಡೆಯಲ್ಪಟ್ಟಿದೆ