ಅಡುಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೊರೊಕ್ಕೊದ ಒಂದು ಉಪಾಹಾರ ಗೃಹದಲ್ಲಿ ಅಡುಗೆ

ಅಡುಗೆ ಶಾಖವನ್ನು ಬಳಸಿ ಸೇವನೆಗೆ ಆಹಾರವನ್ನು ತಯಾರಿಸುವ ಕಲೆ, ತಂತ್ರಜ್ಞಾನ ಮತ್ತು ಕುಶಲಕರ್ಮ. ತೆರೆದ ಬೆಂಕಿ ಮೇಲೆ ಆಹಾರವನ್ನು ಗ್ರಿಲ್ ಮಾಡುವುದರಿಂದ ಹಿಡಿದು ವಿದ್ಯುತ್ ಒಲೆಗಳನ್ನು ಬಳಸುವುದರವರೆಗೆ, ವಿವಿಧ ಬಗೆಯ ಅವನ್‍ಗಳಲ್ಲಿ ಬೇಕ್ ಮಾಡುವುದರವರೆಗೆ, ಅಡುಗೆ ತಂತ್ರಗಳು ಮತ್ತು ಪದಾರ್ಥಗಳು ವಿಶ್ವದಾದ್ಯಂತ ವ್ಯಾಪಕವಾಗಿ ಬದಲಾಗುತ್ತವೆ, ಮತ್ತು ಅನನ್ಯ ಪಾರಿಸರಿಕ, ಆರ್ಥಿಕ, ಮತ್ತು ಸಾಂಸ್ಕೃತಿಕ ಪರಂಪರೆಗಳು ಮತ್ತು ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಅಡುಗೆಯ ರೀತಿಗಳು ಮತ್ತು ಪ್ರಕಾರಗಳು ಒಬ್ಬ ವೈಯಕ್ತಿಕ ಅಡುಗೆಗಾರನು ಹೊಂದಿರುವ ಕೌಶಲ ಮತ್ತು ತರಬೇತಿಯ ಬಗೆಯನ್ನು ಅವಲಂಬಿಸಿವೆ. ತಮ್ಮ ಸ್ವಂತ ಮನೆಗಳಲ್ಲಿ ಜನರು ಮತ್ತು ಉಪಾಹಾರ ಗೃಹಗಳು ಮತ್ತು ಇತರ ಆಹಾರ ಮಳಿಗೆಗಳಲ್ಲಿ ವೃತ್ತಿಪರ ಬಾಣಸಿಗರು ಮತ್ತು ಶೆಫ್‍ಗಳು ಅಡುಗೆ ಮಾಡುತ್ತಾರೆ. ಮೀನ ನ್ನು ನಿಂಬೆ ರಸದಲ್ಲಿರುವ ಆಮ್ಲಗಳಿಂದ ಬೇಯಿಸುವ ಒಂದು ಸಾಂಪ್ರದಾಯಿಕ ದಕ್ಷಿಣ ಅಮೇರಿಕಾದ ಖಾದ್ಯವಾದ ಸವೀಚೆಯಂತಹ, ಶಾಖದ ಉಪಸ್ಥಿತಿಯಿರದೆ ರಾಸಾಯನಿಕ ಕ್ರಿಯೆಗಳ ಮೂಲಕವೂ ಅಡುಗೆ ಆಗಬಹುದು.

ಶಾಖ ಅಥವಾ ಬೆಂಕಿಯಿಂದ ಆಹಾರವನ್ನು ತಯಾರಿಸುವುದು ಮಾನವರಿಗೆ ಅನನ್ಯವಾದ ಒಂದು ಚಟುವಟಿಕೆ. ಅದು ಸುಮಾರು ೨ ಮಿಲಿಯ ವರ್ಷಗಳ ಹಿಂದೆ ಆರಂಭವಾಗಿರಬಹುದಾದರೂ, ಅದರ ಪುರಾತತ್ವ ಸಾಕ್ಷ್ಯಗಳು ೧ ಮಿಲಿಯ ವರ್ಷ ಹಿಂದೆಗಿಂತ ಹೆಚ್ಚು ಹೋಗುವುದಿಲ್ಲ.

ಭಿನ್ನ ಪ್ರದೇಶಗಳಲ್ಲಿ ನಾಗರಿಕತೆಗಳ ನಡುವೆ ಕೃಷಿ, ವಾಣಿಜ್ಯ, ವ್ಯಾಪಾರ ಮತ್ತು ಸಾರಿಗೆಯ ವಿಸ್ತರಣೆ ಬಾಣಸಿಗರಿಗೆ ಅನೇಕ ಹೊಸ ಪದಾರ್ಥಗಳನ್ನು ನೀಡಿತು. ನೀರನ್ನು ಹಿಡಿಯಲು ಮತ್ತು ಕುದಿಸಲು ಕುಂಬಾರಿಕೆಯ ಆವಿಷ್ಕಾರದಂತಹ, ಹೊಸ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳು ಅಡುಗೆ ತಂತ್ರಗಳನ್ನು ವಿಸ್ತರಿಸಿದವು. ಬಡಿಸಲಾದ ತಿನಿಸಿನ ರುಚಿಯನ್ನು ಮತ್ತಷ್ಟು ಹೆಚ್ಚಿಸಲು ಕೆಲವು ಆಧುನಿಕ ಬಾಣಸಿಗರು ಆಹಾರ ತಯಾರಿಕೆಗೆ ಮುಂದುವರಿದ ವಿಧಾನಗಳನ್ನು ಅನ್ವಯಿಸುತ್ತಾರೆ.[೧]

ಅಡುಗೆಯಲ್ಲಿನ ಬಹುತೇಕ ಪದಾರ್ಥಗಳನ್ನು ಜೀವಿಗಳಿಂದ ಪಡೆಯಲಾಗುತ್ತದೆ. ತರಕಾರಿಗಳು, ಹಣ್ಣುಗಳು, ಧಾನ್ಯಗಳು ಮತ್ತು ಕರಟಕಾಯಿಗಳು, ಜೊತೆಗೆ ಮೂಲಿಕೆಗಳು ಮತ್ತು ಸಾಂಬಾರ ಪದಾರ್ಥಗಳು ಸಸ್ಯಗಳಿಂದ ಬಂದರೆ, ಮಾಂಸ, ಮೊಟ್ಟೆಗಳು ಮತ್ತು ಕ್ಷೀರೋತ್ಪನ್ನಗಳು ಪ್ರಾಣಿಗಳಿಂದ ಬರುತ್ತವೆ. ಅಣಬೆಗಳು ಮತ್ತು ಬೇಕಿಂಗ್‍ನಲ್ಲಿ ಬಳಸುವ ಮಡ್ಡಿ ಶಿಲೀಂಧ್ರಗಳ ಬಗೆಗಳು. ಬಾಣಸಿಗರು ನೀರು ಮತ್ತು ಉಪ್ಪಿನಂತಹ ಖನಿಜಗಳನ್ನೂ ಬಳಸುತ್ತಾರೆ. ಬಾಣಸಿಗರು ವೈನ್ ಅಥವಾ ಮದ್ಯಗಳನ್ನೂ ಬಳಸಬಹುದು.

ಉಲ್ಲೇಖಗಳು[ಬದಲಾಯಿಸಿ]

  1. W. Wayt Gibbs; Nathan Myhrvold. "A New Spin on Cooking".
"https://kn.wikipedia.org/w/index.php?title=ಅಡುಗೆ&oldid=855879" ಇಂದ ಪಡೆಯಲ್ಪಟ್ಟಿದೆ