ವಿಷಯಕ್ಕೆ ಹೋಗು

ಕುಲಾಂತರಿ ಬೆಳೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಲಾಂತರಿ ಬೆಳೆಗಳು

[ಬದಲಾಯಿಸಿ]

ಜೈವಿಕ ತಂತ್ರಜ್ಞಾನವನ್ನು ಉಪಯೋಗಿಸಿ ಸಸ್ಯಗಳ ವಂಶವಾಹಿಯನ್ನು ಕುಲಾಂತರಿ ತಳಿಗಳನ್ನು ಸೃಷ್ಟಿಸಲಾಗುತ್ತದೆ. ಕುಲಾಂತರಿ ಬೆಳೆಗಳು ಕೃಷಿ ಕೆಲಸಗಳಲ್ಲಿ ಬಹಳ ಉಪಯುಕ್ತವಾಗಿದೆ. ಕುಲಾಂತರಿ ಬೆಳೆಗಳನ್ನು ಸೃಷ್ಟಿಸುವ ವಿಧಾನವು ಪ್ರಮುಖವಾಗಿ ನೈಸರ್ಗಿಕವಾಗಿ ಪ್ರಸ್ತುತವಿಲ್ಲದ ಗುಣಲಕ್ಷಣವನ್ನು ಪ್ರಾಯೋಗಿಕ ಸಸ್ಯಕ್ಕೆ ಒಳಸೇರಿಸುವ ವಿಧಾನವನ್ನು ಒಳಗೊಂಡಿರುತ್ತದೆ. ಕುಲಾಂತರಿ ಬೆಳೆಗಳು ರೋಗ ನಿರೋಧಕ, ಕೀಟ ನಿರೋಧಕ, ವಾತಾವರಣದ ಪರಂಪರೆಗಳ ಮತ್ತು ರಾಸಾಯನಿಕಗಳ ನಿರೋಧಕ ಶಕ್ತಿಯನ್ನು ಹೊಂದಿದೆ. ಕುಲಾಂತರಿ ಆಹಾರ ಬೆಳೆಗಳಿಂದ ಮನುಷ್ಯರ ಆರೋಗ್ಯಕ್ಕೆ ಯಾವುದೇ ತೆರನಾದ ತೊಂದರೆಯಿಲ್ಲ ಎಂದು ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತಾಗಿದೆ. ಆದರೆ ಜನಸಾಮಾನ್ಯರು ಕುಲಾಂತರಿ ಬೆಳೆಗಳನ್ನು ಸುರಕ್ಷಿತ ಮತ್ತು ದಿನನಿತ್ಯ ಬಳಸಲು ಹಿಂದೆಟು ಹಾಕುತ್ತಿದ್ದಾರೆ. ಕೆಲವು ದೇಶಗಳಲ್ಲಿ ಕುಲಾಂತರಿ ಬೆಳೆಗಳನ್ನು ನಿಷೇಧ ಮಾಡಲಾಗಿದೆ. ಇನ್ನೂ ಕೆಲವು ದೇಶಗಳಲ್ಲಿ ಇವುಗಳನ್ನು ನಿಯಂತ್ರಿಸಲಾಗಿದೆ.

ಕುಲಾಂತರಿಗಳು ಪರಿಸರಕ್ಕೆ ಹಾನಿಕಾರಕ ಮತ್ತು ಜೀವವೈವಿಧ್ಯ ನಾಶಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಕೆಲವರ ವಾದ. ವಿರೋಧಾಭಾಸಗಳು ಏನಿದ್ದರೂ ಕುಲಾಂತರಿ ಬೆಳೆಗಳು ಹೆಚ್ಚುತ್ತಿರುವ ಆಹಾರ ಬೇಡಿಕೆಯನ್ನು ನೀಗಿಸಲು,ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆಯಲು ಅಥವಾ ರೋಗಗಳ ಮತ್ತು ಇತರ ತೊಂದರೆಗಳಿಂದ ಬೆಳೆ ನಾಶವಾಗಿ ಜನರು ತೊಂದರೆಗೊಳಗಾಗುವುದನ್ನು ತಡೆಯಲು ಉಪಯುಕ್ತ ಮತ್ತು ಅಗತ್ಯವಾಗಿದೆ.

ಇತಿಹಾಸ

[ಬದಲಾಯಿಸಿ]

1982ರಲ್ಲಿ ಮೊದಲ ನಿರೋಧಕ ತಂಬಾಕು ಗಿಡವು ಮೊದಲ ಕುಲಾಂತರಿ ಬೆಳೆಯಾಗಿದೆ. ಇದರ ಮೊದಲ ಪ್ರಾಯೋಗಿಕ ಪರೀಕ್ಷೆ ಫ್ರಾನ್ಸ್, ಯು.ಎಸ್.ಎ ನಲ್ಲಿ 1986ರಲ್ಲಿ ನಡೆಯಿತು. ಚೀನಾ ದೇಶವು ವೈರಾಣು ನಿರೋಧಕ ತಂಬಾಕು ಗಿಡವನ್ನು 1921ರಲ್ಲಿ ಮಾರುಕಟ್ಟೆಗೆ ಪರಿಚಯಿಸಿ ಮೊದಲ ಬಾರಿಗೆ ಕುಲಾಂತರಿ ಬೆಳೆಗಳನ್ನು ವ್ಯಾಪಾರೀಕರಣ ಮಾಡಿತು. ಮತ್ತು ಈ ಬೆಳೆಯನ್ನು 1997ರಲ್ಲಿ ಹಿಂತೆಗೆದುಕೊಂಡಿತು. ಮೊದಲ ಕುಲಾಂತರಿ ಬೆಳೆಯು ವ್ಯಾಪಾರಕ್ಕಾಗಿ ಅನುಮೋದನೆಗೊಂಡಿದ್ದು ಯು.ಎಸ್‍ನಲ್ಲಿ 1997

ಉಲ್ಲೇಖ

[ಬದಲಾಯಿಸಿ]

Biotechnology in agriculture and forestry bajaj yps series. Speinger verlage pub 1986's