ದಂಡಕಾರಣ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಸ್ತರ್ ವಿಭಾಗ ಕೆಳಗಿನ ಮೂರು ಜಿಲ್ಲೆಗಳನ್ನು ಒಳಗೊಂಡಿದೆ

ದಂಡಕಾರಣ್ಯ ಭಾರತದಲ್ಲಿನ ಒಂದು ಆಧ್ಯಾತ್ಮಿಕವಾಗಿ ಮಹತ್ವದ ಪ್ರದೇಶ. ಇದು ಛತ್ತಿಸ್‍ಗಢ್ ರಾಜ್ಯದ ಬಸ್ತರ್ ವಿಭಾಗಕ್ಕೆ ಸ್ಥೂಲವಾಗಿ ಸರಿಸಮನಾಗಿದೆ. ಇದು ಸುಮಾರು ೩೫೬೦೦ ಚದರ ಮೈಲಿ ನೆಲವನ್ನು ಆವರಿಸಿದೆ, ಮತ್ತು ಪಶ್ಚಿಮದಲ್ಲಿ ಅಬುಜ್ಮಾರ್ ಗುಡ್ಡಗಳು ಮತ್ತು ಪೂರ್ವದಲ್ಲಿ ಪೂರ್ವ ಘಟ್ಟಗಳನ್ನು ಒಳಗೊಂಡಿದೆ, ಮತ್ತು ಇದರಲ್ಲಿ ತೆಲಂಗಾಣ, ಛತ್ತೀಸ್‍ಗಢ್, ಒಡಿಶಾ, ಮಹಾರಾಷ್ಟ್ರ, ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಭಾಗಗಳು ಸೇರಿವೆ.[೧]

ದಂಡಕಾರಣ್ಯ ಅಂದರೆ ದಂಡಕ ರಾಕ್ಷಸನ ವಾಸಸ್ಥಾನ. ದಂಡಕಾರಣ್ಯ ರಾಮಾಯಣದಂಥ ಪ್ರಾಚೀನ ಭಾರತೀಯ ಪಠ್ಯಗಳಲ್ಲಿ ಉಲ್ಲೇಖಿಸಲಾದ ಒಂದು ಅರಣ್ಯದ ಹೆಸರು. ಇದು ರಾಕ್ಷಸ ಬುಡಕಟ್ಟುಗಳ ಪ್ರಬಲ ಕೇಂದ್ರವಾದ ದಂಡ ರಾಜ್ಯದ ನೆಲೆಯಾಗಿತ್ತು. ಇದು ರಾವಣನ ಆಳ್ವಿಕೆಯಲ್ಲಿ ಲಂಕೆಯ ವಸಾಹತು ರಾಜ್ಯವಾಗಿತ್ತು. ರಾವಣನ ರಾಜ್ಯಪಾಲನಾದ ಖರನು ಈ ಪ್ರಾಂತ್ಯವನ್ನು ಆಳುತ್ತಿದ್ದನು.

ಈ ಅರಣ್ಯವು ರಾಮ ಮತ್ತು ಸೀತೆಯರ ಅನೇಕ ಸಾಹಸಗಳ ಸನ್ನಿವೇಶ ಸ್ಥಳವಾಗಿದೆ.

ರಾಮಾಯಣದ ಪ್ರಕಾರ, ಇದು ಅನೇಕ ಪ್ರಾಣಾಂತಿಕ ಜೀವಿಗಳು ಮತ್ತು ರಾಕ್ಷಸರ ನೆಲೆಯಾಗಿತ್ತು. ವನವಾಸದಲ್ಲಿದ್ದವರು ಇಲ್ಲಿ ನೆಲಸುತ್ತಿದ್ದರು ಮತ್ತು ಋಷಿಗಳು ವಿಂಧ್ಯ ಶ್ರೇಣಿಯನ್ನು ತಲುಪಲು ಇದನ್ನು ದಾಟಬೇಕಿತ್ತು.

ಉಲ್ಲೇಖಗಳು[ಬದಲಾಯಿಸಿ]