ವಿಷಯಕ್ಕೆ ಹೋಗು

ನಿತಂಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿತಂಬಗಳು ಮಂಗಮಾನವರು (ಮಾನವರನ್ನೂ ಒಳಗೊಂಡಂತೆ) ಮತ್ತು ಇತರ ಅನೇಕ ದ್ವಿಪಾದಿಗಳು ಹಾಗೂ ಚತುಷ್ಪಾದಿಗಳ ಶ್ರೋಣಿ ಪ್ರದೇಶದ ಹಿಂಭಾಗದಲ್ಲಿ ಸ್ಥಿತವಾಗಿರುವ ಶರೀರದ ಎರಡು ದುಂಡಾದ ಭಾಗಗಳು. ಇವು ಗ್ಲೂಟಿಯಸ್ ಮ್ಯಾಕ್ಸಿಮಸ್ ಸ್ನಾಯು ಮತ್ತು ಗ್ಲೂಟಿಯಸ್ ಮೀಡಿಯಸ್ ಸ್ನಾಯುಗಳ ಮೇಲೆ ಕೊಬ್ಬಿನ ಪದರವನ್ನು ಹೊಂದಿರುತ್ತವೆ. ಶಾರೀರಿಕವಾಗಿ, ನಿತಂಬಗಳು ಕುಳಿತುಕೊಳ್ಳುವಾಗ ಪಾದಗಳಿಂದ ಭಾರವನ್ನು ತೆಗೆದುಕೊಳ್ಳುವುದನ್ನು ಸಾಧ್ಯವಾಗಿಸುತ್ತವೆ. ಅನೇಕ ಸಂಸ್ಕೃತಿಗಳಲ್ಲಿ, ಅವು ಲೈಂಗಿಕ ಆಕರ್ಷಣೆಯಲ್ಲಿ ಪಾತ್ರವಹಿಸುತ್ತವೆ.[] ಅನೇಕ ಸಂಸ್ಕೃತಿಗಳು ನಿತಂಬಗಳನ್ನು ದೈಹಿಕ ಶಿಕ್ಷೆಯ ಪ್ರಾಥಮಿಕ ಗುರಿಯಾಗಿಯೂ ಬಳಸಿವೆ, ಏಕೆಂದರೆ ನಿತಂಬಗಳ ಚರ್ಮದಡಿಯ ಕೊಬ್ಬಿನ ಪದರ ಪೆಟ್ಟಿನ ವಿರುದ್ಧ ರಕ್ಷಣೆ ನೀಡುತ್ತದೆ, ಅದೇ ಸಮಯದಲ್ಲಿ ನೋವು ಕೊಡುತ್ತದೆ. ಮಾನವರಲ್ಲಿ ನಿತಂಬಗಳು ಬೆನ್ನಿನ ಕೆಳಭಾಗ ಮತ್ತು ಮೂಲಾಧಾರದ ನಡುವೆ ಸ್ಥಿತವಾಗಿವೆ.

ಮಾನವರಲ್ಲಿ ಅವು ಮುಂಚಲನೆಯಲ್ಲಿ ಶರೀರದ ಮುಂದೂಡುವಿಕೆ ಮತ್ತು ಕರುಳಿನ ಚಲನೆಗೆ ಸಹಾಯಮಾಡುವಲ್ಲಿ ಪಾತ್ರಹೊಂದಿವೆ.

ವಯಸ್ಕ ಪುರುಷರು ಮತ್ತು ಸ್ತ್ರೀಯರು ನಿತಂಬ ಪ್ರದೇಶದಲ್ಲಿ ವಿಭಿನ್ನ ಪ್ರಮಾಣದಲ್ಲಿ ಕೂದಲ ಬೆಳವಣಿಗೆಯನ್ನು ಹೊಂದಿರುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. Hennig, Jean-Luc (1995). The rear view: A brief and elegant history of bottoms through the ages. London: Souvenir. ISBN 0-285-63303-1.


"https://kn.wikipedia.org/w/index.php?title=ನಿತಂಬ&oldid=1251113" ಇಂದ ಪಡೆಯಲ್ಪಟ್ಟಿದೆ