ವಿಷಯಕ್ಕೆ ಹೋಗು

ಸದಸ್ಯ:Aina kurian/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವಾಲಿಕ್ ಪರ್ವತ

[ಬದಲಾಯಿಸಿ]

thumb|ಶಿವಾಲಿಕ್ ಪರ್ವತ

ಶಿವಾಲಿಕ ಪರ್ವತಗಳ ವಿವರಣೆ

[ಬದಲಾಯಿಸಿ]

ಶಿವಾಲಿಕ ಪರ್ವತಗಳ ನಡುವೆ ಇರುವ ಸಿಕ್ಕಿಂನ ಕಾಲಿಂಪಾಂಗ್ನಗರದಒಂದು ನೋಟ. ಶಿವಾಲಿಕ ಪರ್ವತಗಳು ಹಿಮಾಲಯ ಪರ್ವತಶ್ರೇಣಿಗಳ ದಕ್ಷಿಣದಂಚಿನ ಬೆಟ್ಟಸಾಲುಗಳಾಗಿವೆ. ಪೂರ್ವ-ಪಶ್ಚಿಮಾಭಿಮುಖವಾಗಿ ಹಬ್ಬಿರುವ ಶಿವಾಲಿಕ ಪರ್ವತಗಳು ಭೂಗರ್ಭಶಾಸ್ತ್ರದ ಪ್ರಕಾರ ಇಡಿಯ ಹಿಮಾಲಯದಲ್ಲಿ ಅತಿಕಿರಿಯ ವಯಸ್ಸಿನವು. ಕೆಲವೊಮ್ಮೆ ಈ ಶ್ರೇಣಿಯನ್ನು ಹೊರಗಣ ಹಿಮಾಲಯ ಎಂದು ಸಹ ಕರೆಯಲಾಗುತ್ತದೆ. ಉಗಮ ಪೂರ್ವದ ಸಿಕ್ಕಿಂ ನ ಟೀಸ್ಟಾ ನದಿಯಿಂದ ಆರಂಭವಾಗಿ ನೇಪಾಳ, ಉತ್ತರಾಖಂಡ, ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರಗಳನ್ನು ಹಾದು ಪಾಕಿಸ್ತಾನದ ಉತ್ತರಭಾಗದಲ್ಲಿ ಕೊನೆಗೊಳ್ಳುವ ಶಿವಾಲಿಕ ಪರ್ವತ ಶ್ರೇಣಿಯ ಒಟ್ಟು ಉದ್ದಸುಮಾರು ೧೬೦೦ಕಿ.ಮೀ. ಇವುಗಳ ಸರಾಸರಿ ಎತ್ತರ ೯೦೦ ರಿಂದ ೧೨೦೦ ಮೀಟರ್ಗಳಷ್ಟು .

ಶಿವಾಲಿಕ್ ಪರ್ವತ

ಶಿವಾಲಿಕ ಪರ್ವತಗಳ ಇತಿಹಾಸ

[ಬದಲಾಯಿಸಿ]

ಶಿವಾಲಿಕಪರ್ವತಗಳು ಹೊರಹಿಮಾಲಯದ ಪರ್ವತಶ್ರೇಣಿಯಲ್ಲಿದೆ. ಈ ಪರ್ವತಗಳು ಸಾಂಸೃತಿಕ ಗ್ರಂಥಗಳಲ್ಲಿ 'ಮನಾಕ್ಪರ್ವತ್' ಎಂದು ಗುರುತಿಸಲಾಗಿದೆ. ಶಿವಾಲಿಕ್ ಎಂದರೆ 'ಶಿವನನಾವಿರು'. ಇದರ ಉದ್ದ ೨೪೦೦ಕಿಮಿ. ಈ ಪರ್ವತ ಸಿಂಧೂ ಪ್ರದೇಶದಲ್ಲಿ ಬ್ರಮ್ಹಪುತ್ರ ಪ್ರದೇಶದ ವರೆಗೂ ಸುತ್ಥುಗಟ್ಟಿದೆ. ಇದರ ಅಗಲ ೧೦ ರಿಂದ ೫೦ ಕಿಮಿ ವರಗೆ ಬದಲಾಗುತ್ತದೆ. ಈ ಪರ್ವತಗಳ ಮುಖ್ಯವಾದ ಸಂಯೋಜನೆ ಮರಳು, ಕಲ್ಲು, ಮತ್ತು ಕಂಗ್ಲೋಮೆರೇಟ್ಕಲ್ಲು ಅಂದರೆ ಗಟ್ಟಿಗೊಳಿಸಿದ ಪರ್ವತಶ್ರೇಣಿಗಳು ಉಳಿಕೆದ್ರವ್ಯಗಳು. ಶಿವಾಲಿಕ್ಪರ್ವತದ ಹಳೆಯ ಭಾಗ ನೇಪಾಲದಲ್ಲಿದೆ.ಈ ಪರ್ವತಕ್ಕೆ ಅನೇಕ ಉಪವ್ಯಪ್ತಿಗಳು ಇವೆ.ಇವುಗಳು ಭೂತಾ ಪಶ್ಚಿಮದಲ್ಲಿ ಅರುಣಾಚಲಪ್ರದೆಶದಿಂದ ಪಶ್ಚಿಮಬೆಂಗಾಲತಂಕ ವಿಸ್ತರಿಸಿದೆ. ಪರ್ವತಪ್ರದೇಶದಲ್ಲಿರುವ ಮುಖ್ಯವಾದ ಪಳೆಯುಳಿಕೆ ಶಿವಪಿತಕಸ್/ರಾಮಪಿತಕಸ್ ಇವುಗಳು ವಾನರ ಕುಲದ ಒಂದು ರೀತಿಯ ಪ್ರಾಣಿ. ಶಿವಾಲಿಕ ಪರ್ವಗಳು ಏಷ್ಯಾಖಂಡದಲ್ಲೇ ವಿಶಾಲವಾದ ಪ್ರಾಣಿಗಳ ಶ್ರೀಮಂತ ಪಳೆಯುಳಿಕೆಪ್ರದೇಶವಾಗಿದೆ. ಈ ಪರ್ವತಗಳಿಂದ ಈ ಪ್ರದೇಶದಲ್ಲಿ ಅನೇಕ ಪ್ರಾಣಿಗಳುವಾಸಿಸುತ್ತಿದ್ದರೆಂದು ತಿಳಿದುಬಂದಿದೆ. ಭಾರತಿಯ ನೌಕಾಪಡೆಯ ಶಿವಲಿಕ್ಕ್ಲಾಸ್ಫ಼್ರಿಗೆಟ್ ಈ ಪರ್ವತದ ಹೆಸರಿಂದ ಬಂದಿದೆ . ಶಿವಾಲಿಕ್ನ್ಕೆಳ ಭಾಗಗಳ ಸಂಚಿತರಚನೆ ಬೂದುಮರಳುಕಲ್ಲುಹೂಳಿನಿಂದಾದಶಿಲೆಗಳಿಂದ ಕೂಡಿದೆ. ಮರಳುಕಲ್ಲುಗಳು ಕಟೀಣವಾದ್ದದ್ದು ಮತ್ತು ಕೆಂಪುಮಣ್ಣುಕಲ್ಲು ಕ್ಷರಣಗಳಿಗೆ ನಿರೋದಕವಾಗಿವೆ.

ಶಿವಾಲಿಕ್ ಪ್ರವಾಸೋದ್ಯಮ

[ಬದಲಾಯಿಸಿ]

ಕೆಲವು ಸ್ಥಳಗಳಲ್ಲಿ ಇತ್ತೀಚಿಗೆ 'ರೇಣುಕಾ ಲೇಕ್' ನಂತಹ ಪ್ರವಾಸಿ ತಾಣಗಳನ್ನು ಮುಂದುವರೆಸಲು ಸಾಧ್ಯವಾಗುತ್ತಿದೆ. 'ಶಿವಾಲಿಕ್ ಪಳೆಯುಳಿಕೆ ಪಾರ್ಕ್'( shivalik fossil park) ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಶಿವಾಲಿಕ್ ಬೆಟ್ಟಗಳ ಸಾಲಿನಲ್ಲಿ ನೆಲೆಗೊಂಡಿರುವ ಒಂದು ಆಕರ್ಷಕ ಚಿಕ್ಕ ಗಿರಿಧಾಮ ಮತ್ತು ಅನೇಕ ದೇವಾಲಯಗಳು ಶಿವಾಲಿಕ್ ಬೆಟ್ಟಗಳಲ್ಲಿ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದೆ. ಶಿವಾಲಿಕ್ ಬೆಟ್ಟಗಳ ಸೌಂದರ್ಯ ಮತ್ತು ಶಾಂತಿ ಒಂದು ಅಚ್ಚರಿಯೇ ಸರಿ. ಇಲ್ಲಿರುವ ಜನರು ಅಲ್ಲಿನ ವಾತಾವರಣವನ್ನು ಮೀರಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆಸ್ವದಿಸುತಿದ್ದಾರೆ.ಭೂವೈಜ್ಞಾನಿಕವಾಗಿ, ಶಿವಾಲಿಕ್ ಪರ್ವತಶ್ರೇಣಿಯು ಹೊರ ಹಿಮಾಲಯದ ಪ್ರಾದೇಶಿಕ ಸಂಗ್ರಹಗಳಿಂದ ಸೇರಿದೆ. ಇದು ಮುಖ್ಯವಾಗಿ ಹಿಮಾಲಯದ ಉತ್ತರಕ್ಕಿರುವ ದೊಡ್ಡ ಪರ್ವತ ಶ್ರೇಣಿಯ ಘನೀಕೃತ ಉಳಿಕೆ ದ್ರವ್ಯದಿಂದ ರೂಪಿಸಲಾಗಿದೆ ಆದರೆ ಇದು ಮರಳುಶಿಲೆ ಹಾಗೂ ಕಲ್ಲಿನ ರಚನೆಗಳಿಂದ ಕೂಡಿದೆ. ಮರಳುಗಲ್ಲಿನ ಅವಶೇಷವೂ ಕೂಡಿರಬಹುದಾಗಿ ತಿಳಿಸಲಾಗಿದೆ. ನೇಪಾಳದಲ್ಲಿ ಶಿವಾಲಿಕ್ ಪರ್ವತಶ್ರೇಣಿಯ ಅತ್ಯಂತ ಹಳೆಯ ಭಾಗವು ೫.೨-೧೬ ಮಿಲಿಯನ್ ವರ್ಷಗಳ ಪುರಾಣವನ್ನು ಹೊಂದಿದೆ ಎಂದು ಕರ್ನಾಲಿ ನದಿ ಸೂಚಿಸುತ್ತದೆ.

ಹೊರ ಸಂಪರ್ಕಗಳು

[ಬದಲಾಯಿಸಿ]

<<ref>>http://www.indianetzone.com/4/shivalik_hills.html<<ref>> <<ref>>https://www.britannica.com/place/Siwalik-Range<<ref>>