ವಿಷಯಕ್ಕೆ ಹೋಗು

ತುಂಕು ಅಬ್ದುಲ್ ರೆಹಮಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತುಂಕು ಅಬ್ದುಲ್ ರೆಹಮಾನ್ ಪುತ್ರ ಅಲ್ ಹಜ್

ಸ್ವತಂತ್ರ ಮಲಯಾ ದೇಶದ ಮತ್ತು ಸ್ವತಂತ್ರ ಮಲೇಷಿಯಾ ದೇಶದ ಮೊದಲ ಪ್ರಧಾನಿ


ತುಂಕು ಅಬ್ದುಲ್ ರೆಹಮಾನ್ ಸ್ವತಂತ್ರ ಮಲಯಾ ದೇಶದ ಮತ್ತು ಸ್ವತಂತ್ರ ಮಲೇಷಿಯಾ ದೇಶದ ಮೊದಲ ಪ್ರಧಾನಿಯಾಗಿ ೧೯೫೭-೧೯೭೦ರ ಅವಧಿಯಲ್ಲಿ ಆಡಳಿತ ನಡೆಸಿದರು. ಬಾಪಾ ಕೆಮೆರ್ಡೆಕಾನ್, ಬಾಪಾ ಮಲೇಷಿಯಾ (ಮಲೇಷಿಯಾದ ರಾಷ್ಟ್ರಪಿತ) ಎಂದು ಖ್ಯಾತರಾದವರು.[]

೮ ಫ಼ೆಬ್ರವರಿ ೧೯೦೩ರಲ್ಲಿ ಕೇಡಾ ಪ್ರಾಂತ್ಯದ ಅಲೋರ್ ಸೆಟಾರ್ ಎಂಬಲ್ಲಿ ಖೇಡಾ ಸುಲ್ತಾನ್ ವಂಶಕ್ಕೆ ಸೇರಿದ್ದ ಪ್ರತಿಷ್ಠಿತ ಕುಟುಂಬದ ಸುಲ್ತಾನ್ ಅಬ್ದುಲ್ ಹಮೀದ್ ಹಲೀಂ ಶಾಹ್ ರ ೭ನೆ ಮಗನಾಗಿ ಜನಿಸಿದ ಅಬ್ದುಲ್ ರೆಹಮಾನ್ ೧೯೨೦ರಲ್ಲಿ ಕೇಂಬ್ರಿಬ್ಜ್ ವಿಶ್ವವಿದ್ಯಾಲಯಕ್ಕೆ ಅಧ್ಯಯನಕ್ಕೆ ತೆರಳಿದರು.

೧೯೧೯ರಲ್ಲಿ ವಿದ್ಯಾರ್ಥಿ ವೇತನದ ಮೂಲಕ ಕೇಂಬ್ರಿಬ್ಜ್ ವಿಶ್ವವಿದ್ಯಾಲಯಕ್ಕೆ ಅಧ್ಯಯನಕ್ಕೆ ತೆರಳಿದ ರೆಹಮಾನ್, ಸೇಂಟ್ ಕ್ಯಾಥರೀನ್ ಕಾಲೇಜಿನಲ್ಲಿ ಪದವಿ ಗಳಿಸಿದರು. ೧೯೨೬ರಲ್ಲಿ ಸಿಂಗಾಪುರಕ್ಕೆ ಮರಳಿದ ರೆಹಮಾನ್, ೧೯೩೦ ಮತ್ತು ೩೧ರಲ್ಲಿ ಎರಡು ಬಾರಿ ಕಾನೂನು ಪದವಿ ಪಡೆಯಲು ವಿಫಲರಾದರು.

ಕುಟುಂಬ

[ಬದಲಾಯಿಸಿ]

೧೯೩೩ರಲ್ಲಿ ಕುಲಿಂನಲ್ಲಿ ಮೆರಿಯಂ ಚೊಂಗ್ ರನ್ನು ವರಿಸಿದ ರೆಹಮಾನ್, ೧೯೩೫ರಲ್ಲಿ ಮೆರಿಯಂ ಮಲೇರಿಯದಿಂದ ನಿಧನರಾದಾಗ ಇಂಗ್ಲೆಂಡ್ ನಲ್ಲಿನ ಗೆಳತಿ ವಯೊಲೆಟ್ ಕೌಲ್ಸನ್ ರನ್ನು ವರಿಸಿದರು. ೧೯೪೭ರಲ್ಲಿ ವಿಚ್ಚೇದನವಾದ ನಂತರ ಶರೀಫ಼ಾ ಬರಕ್ಬಾಹ್ ರನ್ನು ವರಿಸಿದರು.[]

ಸರ್ಕಾರಿ ಸೇವೆ

[ಬದಲಾಯಿಸಿ]

ಪ್ರತಿಷ್ಠಿತ ಕುಟುಂಬದಲ್ಲಿ ಜನಿಸಿದ ಕಾರಣದಿಂದ ಸರ್ಕಾರಿ ಉದ್ಯೋಗ ರೆಹಮಾನ್ ರಿಗೆ ಖಾತರಿಯಾಗಿತ್ತು. ಖೇಡಾದಲ್ಲಿ, ಕುಲಿಂ ನಲ್ಲಿ ಉಪ ಜಿಲ್ಲಾಧಿಕಾರಿಯಾಗಿ ಕಾರ್ಯಗೈದ ರೆಹಮಾನ್ ಬಡಜನರ ನೋವು ಅರಿತುಕೊಂಡರು. ಸರ್ಕಾರಿ ಕಾನೂನು ಪರೀಕ್ಷೆಯಲ್ಲಿ ಉತ್ತೀರ್ಣರಾದ ರೆಹಮಾನ್, ಮಲೇರಿಯಾ ಪೀಡಿತ ಪದಂಗ್ ತೆರಪ್ ನಲ್ಲಿ ಜಿಲ್ಲಾಧಿಕಾರಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದರು.ಲಂಕಾವಿ ಜಿಲ್ಲೆಯಲ್ಲಿ ರೆಹಮಾನ್ ನಡೆಸಿದ ರಸ್ತೆ ಕಾಮಗಾರಿ ಮೆಚ್ಚುಗೆಗೆ ಪಾತ್ರವಾಯಿತು. ಸುಂಗಾಯ್ ಪೆಟಾನಿ ಕುಲಿಂ ಗಳಲ್ಲೂ ಜಿಲ್ಲಾಧಿಕಾರಿಯಾದರು. ೧೯೩೯ರಲ್ಲಿ ವಕೀಲವೃತ್ತಿ ಕೈಗೊಳ್ಳಲು ಮುಂದಾದ ರೆಹಮಾನ್ ದ್ವಿತೀಯ ವಿಶ್ವಯುದ್ಧದದ ಕಾರಣ ಕುಲಿಂ ಕಡ್ಡಾಯನೇಮಕಾತಿಯಡಿ ಜಿಲ್ಲಾಧಿಕಾರಿಯಾಗಿ ೩ ವರ್ಷ ನೇಮಕಗೊಂಡರು. ೧೯೪೧ ಅಕ್ಟೋಬರ್ ನಲ್ಲಿ ಜಪಾನೀಯರು ಮಲಯಾದ ಪೆನಾಂಗ್ ಮೇಲೆ ಬಾಂಬ್ ದಾಳಿ ಮಾಡಿದಾಗ ರೆಹಮಾನ್ ಕುಟುಂಬ ಸಿದಿಂನಲ್ಲಿ ಆಶ್ರಯ ಪಡೆಯಿತು. ಜಪಾನೀಯರ ಆಡಳಿತದಲ್ಲಿ ಒಲ್ಲದ ಮನಸ್ಸಿನಿಂದ ಜಿಲ್ಲಾಧಿಕಾರಿಯಾಗಿ ಮುಂದುವರೆದರು.

೧೯೪೫ರಲ್ಲಿ ಜಪಾನ್ ಶರಣಾದಾಗ ಹಾರೋಲ್ಡ್ ಮಾಕ್ಮಿಲನ್ ಬ್ರಿಟಿಷ್ ಸರ್ಕಾರದ ಪ್ರತಿನಿಧಿಯಾಗಿ ಮಲಯಾದ ಕೌಲಾಲಂಪುರಕ್ಕೆ ಬಂದಿಳಿದರು. ಸಂಧಾನ ಅನ್ವಯ ಖೇಡಾ, ಜೊಹೊರ್, ಸೆಲಂಗೊರ್, ಪಹಂಗ್ ಮತ್ತು ಪೇರಕ್ ಪ್ರಾಂತ್ಯಗಳ ಸುಲ್ತಾನರು ಒಂದುಗೂಡಿ ೧೯೪೬ರಲ್ಲಿ ಸಂಯುಕ್ತ ಮಲಯಾ ದೇಶ ರಚನೆ ಘೋಷಣೆಯೆಂದಾಯಿತು.

೧೯೪೬ ಡಿಸೆಂಬರ್ ನಿಂದ ಜನವರಿ ೧೯೪೯ರವರೆಗೆ ರಜೆ ಪಡೆದು ಲಂಡನ್ ನಲ್ಲಿ ಕಾನೂನು ಪದವಿಗಾಗಿ ಅಧ್ಯಯನ ನಡೆಸಿದ ರೆಹಮಾನ್ , ಪೆನಾಂಗ್ ನಲ್ಲಿ ಸರ್ಕಾರಿ ವಕೀಲರಾಗಿ ನೇಮಕಗೊಂಡರು.

ರಾಜಕೀಯ

[ಬದಲಾಯಿಸಿ]

ಖೇಡಾ ಪ್ರಾಂತ್ಯದ UMNO ಪಕ್ಷದ ಅಧ್ಯಕ್ಷರಾಗಿ ಆಗಸ್ಟ್ ೧೯೫೧ರಲ್ಲಿ ನೇಮಕಗೊಂಡ ರೆಹಮಾನ್, ಸರ್ಕಾರಿ ಕೆಲಸಕ್ಕೆ ರಾಜೀನಾಮೆಯಿತ್ತರು. ಅಬ್ದುಲ್ ರಜ಼ಾಕ್ ರೊಂದಿಗೆ ಪಕ್ಷ ಕಟ್ಟಲು ಮುಂದಾದರು. ನಾಗರೀಕ ಸರ್ಕಾರಕ್ಕೆ ಒತ್ತಾಯ ಮಂಡಿಸಿದ ರೆಹಮಾನ್, ಮೈತ್ರಿ ಪಕ್ಷಗಳೊಂದಿಗೆ ಒಪ್ಪಂದ ಮಾಡಿಕೊಂಡು ಚುನಾವನೆಗೆ ನಿಂತು ಗೆದ್ದರು.

ಮಲಯಾದ ಮುಖ್ಯಮಂತ್ರಿಯಾಗಿ ೧೯೯೫೫-೫೭ರವರೆಗೆ ಕಾರ್ಯ ನಿರ್ವಹಿಸಿದರು. ಸಿಂಗಪುರದ ಮುಖ್ಯಮಂತ್ರಿ ಡೇವಿಡ್ ಮಾರ್ಷಲ್ ರೊಂದಿಗೆ ಶೀತಲ ಸಮರ ನಡೆದಿತ್ತು. ರೆಹಮಾನ಼್ ರ ಮೈತ್ರಿ ಪಕ್ಷ ೧೯೫೯, ೧೯೬೪ರ ಚುನಾವಣೆ ಗೆದ್ದವು.ಮಲಯಾ, ಸಿಂಗಾಪುರ ಸೇರಿದ ಮಲಯಾ ಫ಼ೆಡರೇಷನ್ ರಾಷ್ತ್ರ ೧೯೬೩ರಲ್ಲಿ ಸ್ಥಾಪನೆಯಾದಾಗ ರೆಹಮಾನ್ ದೇಶದ ಪ್ರಧಾನಿಯಾದರು. ೧೯೬೦ರಿಂದ ಇಸ್ಲಾಮಿಚ್ ರಾಷ್ಟ್ರಗಳ ಒಕ್ಕೂಟ (OIC)ಯ ಸಂಸ್ಥಾಪಕರಾದ ರೆಹಮಾನ್ ಇಸ್ಲಾಂ ಅನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದರು. ಮಲೇಷಿಯಾ ಜಾತ್ಯತೀತ ರಾಷ್ಟ್ರವಾದರೂ ಇಸ್ಲಾಮ್ ತತ್ವಗಳು ಮಂಚೂಣಿಯಲ್ಲಿ ಇರತಕ್ಕದ್ದು ಎಂಬುದು ರೆಹಮಾನರ ವಿಚಾರಸರಣೀ. ಜನಾಂಗೀಯ ಕಲಹಕ್ಕೆ ತೀವ್ರವಾದುದರಿಂದ ಸಿಂಗಾಪುರವನ್ನು ೧೯೬೫ರಲ್ಲಿ ಉಚ್ಚಾಟಿಸಿದರು. ೧೯೬೯ರ ಚುನಾವಣೆಯಲ್ಲಿ ಅಲ್ಪಮತದಿಂದ ಗೆದ್ದ ರೆಹಮಾನ್, ಯುವನಾಯಕರುಗಳಾದ ಮೊಹಾತೀರ್ ಮೊಹಮದ್, ಮೂಸಾ ಹಿತಂ ಮತ್ತಿತರರ ವಿರೋಧ ಕಟ್ಟಿಕೊಂಡರು. ಉದಾರವಾದಿ ಮಾರುಕಟ್ಟೆಯ ನಿಯಮಗಳನ್ನು ಕ್ರಮಕ್ರಮವಾಗಿ ಜಾರಿಗೊಳಿಸುವ ರೆಹಮಾನರ ನಡೆ ಯುವನಾಯಕರಿಗೆ ಒಪ್ಪಿಗೆಯಾಗಲಿಲ್ಲ. ೧೯೭೦ರಲ್ಲಿ ರಾಜೀನಾಮೆಯಿತ್ತು ಅಬ್ದುಲ್ ರಜ಼ಾಕ್ ರಿಗೆ ಅಧಿಕಾರ ಹಸ್ತಾಂತರಿಸಿದರು.

೧೯೯೦ರವರೆಗೆ ಹಿರಿಯ ನಾಗರೀಕರಾಗಿ ಹಲವು ಗೌರವಗಳಿಗೆ ಪಾತ್ರರಾದ ರೆಹಮಾನ್, ೬ ಡಿಸೆಂಬರ್ ೧೯೯೦ರಂದು ನಿಧನರಾದರು.

ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು" (PDF). Archived from the original (PDF) on 2020-09-20. Retrieved 2016-11-30.
  2. "ಆರ್ಕೈವ್ ನಕಲು". Archived from the original on 2015-04-02. Retrieved 2016-11-30.