ಮೊಹಾತೀರ್ ಮೊಹಮದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Mahathir Mohamad

ಆಧುನಿಕ ಮಲೇಷಿಯಾದ ರೂವಾರಿ

ದಾತು ಡಾ. ಮೊಹಾತೀರ್ ಬಿನ್ ಮೊಹಮದ್ (೧೦ ಜುಲೈ ೧೯೨೫-) ೧೯೮೧-೨೦೦೩ರವರೆಗೆ ಮಲೇಷಿಯಾದ ಪ್ರಧಾನಮಂತ್ರಿಯಾಗಿದ್ದರು. ಆಧುನಿಕ ಮಲೇಷಿಯಾದ ರೂವಾರಿಯೆಂದೇ ಬಿಂಬಿತರಾಗಿರುವ ಡಾ. ಮೊಹಾತೀರ್ ಮಲೇಷಿಯಾ ಎರಡನೆಯ ಹಂತದ ಏಷ್ಯಾದ ಆರ್ಥಿಕ ಹುಲಿ ಎಂದು ಖ್ಯಾತವಾಗಲು ಕಾರಣರಾದರು.

ಜನನ[ಬದಲಾಯಿಸಿ]

ಮಲೇಷಿಯಾದ ಕೇಡಾ ಪ್ರಾಂತ್ಯದ ಅಲೋರ್ ಸೆಟಾರ್ ಎಂಬಲ್ಲಿ ೧೦ ಜುಲೈ ೧೯೨೫ರಂದು ಕೇರಳ ಮೂಲದ ಮೊಹಮದ್ ಬಿನ್ ಇಸ್ಕಂದರ್ ಮತ್ತು ವಾನ್ ತೆಂಪಾವನ್ ದಪತಿಗಳಿಗೆ ಜನಿಸಿದ ಮೊಹಾತೀರ್, ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ಮೊಹಮದ್ ಬಿನ್ ಇಸ್ಕಂದರ್ ಶಾಲಾ ಪ್ರಾಂಶುಪಾಲರಾಗಿದ್ದರು.[೧] ಇಬ್ಬರು ಸೋದರರು ಮತ್ತು ಆರು ಮಂದಿ ಮಲಸೋದರರಿದ್ದ ತುಂಬು ಕುಟುಂಬ ಇಸ್ಕಂದರ್ ರದು.[೨]

ಓದು[ಬದಲಾಯಿಸಿ]

ಪ್ರಾಂಶುಪಾಲರಾಗಿದ್ದ ತಂದೆಯಿಂದ ಶಿಸ್ತು ರೂಢಿಸಿಕೊಂಡ ಮೊಹಾತೀರ್, ಕ್ರೀಡೆಯಲ್ಲಿ ಮತ್ತು ಇಂಗ್ಲೀಷ್ ನಲ್ಲಿ ಎತ್ತಿದ ಕೈ ಆಗಿದ್ದರು. ದ್ವಿತೀಯ ವಿಶ್ವಯುದ್ಧದಲ್ಲಿ ಜಪಾನ್ ಮಲಯಾವನ್ನು ಆಕ್ರಮಿಸಿಕೊಂಡಾಗ, ಮೊಹಾತೀರರ ಓದು ನಿಲ್ಲಬೇಕಾಯಿತು.ಕಾಫಿ, ಬಾಳೆಹಣ್ಣಿನ ಸಿಹಿತಿನಿಸು ಮಾರಿ ಜೀವನ ಸಾಗಿಸಿದ ಮೊಹಾತೀರ್ ಯುದ್ಧದ ನಂತರ ಸಿಂಗಾಪುರದ ಕಿಂಗ್ ಎಡ್ವರ್ಡ್ ವೈದ್ಯಶಾಲೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದರು. ಸರ್ಕಾರಿ ವೈದ್ಯಕೀಯಸೇವೆ ಸೇರಿದ ನಂತರ ತಮ್ಮ ವೈದ್ಯಕೀಯ ಶಿಕ್ಷಣ ಸಹಪಾಠಿ ಸೀತಿ ಸಸ್ಮಾಹ್ ಮೊಹಮದ್ ಅಲಿರನ್ನು ೧೯೫೬ರಲ್ಲಿ ವರಿಸಿದರು.[೩] ಹುಟ್ಟೂರು ಅಲೋರ್ ಸೆಟಾರ್ ಗೆ ಹಿಂದಿರುಗಿ ಸ್ವಂತ ವೈದ್ಯಕೀಯ ವೃತ್ತಿ ಆರಂಭಿಸಿ ಹಣ, ಕೀರ್ತಿ ಗಳಿಸಿದರು. ೧೯೫೭ರಲ್ಲಿ ಮಗಳು ಮರೀನಾ ಹುಟ್ಟಿದ ನಂತರ ಮೂರು ಮಕ್ಕಳನ್ನು ದತ್ತು ಪಡೆದು ಓದಿಸಿದರು.

ರಾಜಕೀಯ[ಬದಲಾಯಿಸಿ]

ದ್ವಿತೀಯ ವಿಶ್ವಯುದ್ಧದ ನಂತರ ಮಲಯಾದಲ್ಲಿ ಮೂಲನಿವಾಸಿಗಳಲ್ಲದವರಿಗೆ ಪೌರತ್ವ ನೀಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆದ ಚಳುವಳಿಯಲ್ಲಿ ಭಾಗವಹಿಸಿದ ಮೊಹಾತೀರ್, ವೈದ್ಯಕೀಯ ಶಿಕ್ಷಣದಲ್ಲಿ ಮಲಯಾ ಮೂಲನಿವಾಸಿಗಳಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಿದರು. ಯುನೈಟೆಡ್ ಮಲಯಾ ನ್ಯಾಷನಲ್ ಆರ್ಗನೈಸೇಷನ್ (UMNO) ದ ಸಕ್ರೊಯ ಸದಸ್ಯರಾಗಿದ್ದ ಮೊಹಾತೀರ್, ೧೯೫೯ರ ಹೊತ್ತಿಗೆ UMNO ದ ಕೇಡಾ ಪ್ರಾಂತೀಯ ಅಧ್ಯಕ್ಷರಾದರು. ಮಲಯಾದ ರಾಷ್ಟ್ರಪಿತ ಎಂದು ಖ್ಯಾತರಾಗಿದ್ದ ಪ್ರಧಾನಿ ತುಂಕು ಅಬ್ದುಲ್ ರೆಹಮಾನರ ಕೆಲವು ನೀತಿಗಳು ಮೊಹಾತೀರರಿಗೆ ಸರಿಕಾಣಲಿಲ್ಲ. ಬ್ರಿಟಿಷ್ ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ ಮಲೇಷಿಯಾವನ್ನು ಸೇರಿಸಿದ್ದು ಮತ್ತು ಪಕ್ಷದ ಹುದ್ದೆಗಳಿಗೆ ಏರಲು ಕನಿಷ್ಠ ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸದ ತುಂಕು ಅಬ್ದುಲ್ ರೆಹಮಾನರ ನೀತಿಯನ್ನು ಟೀಕಿಸಿದ ಮೊಹಾತೀರರಿಗೆ ೧೯೬೪ರವರೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ತುಂಕು ಅಬ್ದುಲ್ ರೆಹಮಾನ ಮತ್ತು ಮೊಹಾತೀರ್ ಇಬ್ಬರೂ ಕೇಡಾ ಪ್ರಾಂತ್ಯದವರೇ ಆಗಿದ್ದರು ಸಹಿತ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದವು.

೧೯೬೮ರ ಹೊತ್ತಿಗೆ ಜನಾಂಗೀಯ ಗಲಭೆಗಳು ಉಂಟಾಗ ಬಹುದು ಎಂದು ಮೊಹಾತೀರರು ಸರ್ಕಾರವನ್ನು ಎಚ್ಚರಿಸಿದ್ದರು. ಮೊಹಾತೀರರು ೧೯೬೯ರ ಚುನಾವಣೆಯಲ್ಲಿ ಸೋತರು. ೧೩ ಂಎ ೧೯೬೯ರಂದು ಮಲಯಾ ಮತ್ತು ಚೀನಿ ಜನಾಂಗದ ಮಧ್ಯೆ ಜನಾಂಗೀಯ ಗಲಭೆಗಳು ಉಂಟಾಗಿ, ನೂರಾರು ಮಂದಿ ಅಸು ನೀಗಿದರು. ತುಂಕು ಅಬ್ದುಲ್ ರೆಹಮಾನರ ಆಡಳಿತವನ್ನು ಉಗ್ರವಾಗಿ ಖಂಡಿಸಿದ ಮೊಹಾತೀರರನ್ನು UMNO ಪಕ್ಷದಿಂದ ಉಚ್ಚಾಟಿಸಲಾಯಿತು.

ದಿ ಮಲಯ್ ಡೈಲೆಮಾ ಎಂಬ ಪುಸ್ತಕ ಬರೆದ ಮೊಹಾತೀರರು, ಶಾಂತಿ ಮತ್ತು ಸಮಾನತೆಯನ್ನು ಜನಾಂಗಗಳ ಮಧ್ಯೆ ತರುವ ಆರ್ಥಿಕ ಕ್ರಮಗಳನ್ನು ಪುಸ್ತಕದಲ್ಲಿ ಬಣ್ಣಿಸಿದರು. ಆ ಪುಸ್ತಕವನ್ನು ನಿಷೇಧಿಸಲಾಯಿತು.

೧೯೭೦ರಲ್ಲಿ ತುಂಕು ಅಬ್ದುಲ್ ರೆಹಮಾನರು ರಾಜೀನಾಮೆ ನೀಡಿದರು. ಅಬ್ದುಲ್ ರಜಾಕ್ ಹುಸೇನ್ ಪ್ರಧಾನಿಯಾದರು. ಮೊಹಾತೀರರ ಆಡಳಿತ ಸಾಮರ್ಥ್ಯದ ಅರಿವಿದ್ದ ಹುಸೇನ್, UMNO ಪಕ್ಷಕ್ಕೆ ಮತ್ತೆ ಮೊಹಾತೀರರನ್ನು ಸೇರಿಸಿಕೊಂಡರು. ೧೯೭೩ರಲ್ಲಿ ಶಾಸಕರಾಗಿ, ೧೯೭೪ರಲ್ಲಿ ಕೇಂದ್ರ ಶಿಕ್ಷಣ ಸಚಿವರಾಗಿ ಆಯ್ಕೆಯಾದರು ಮೊಹಾತೀರರು. ವಿಶ್ವವಿದ್ಯಾಲಯಗಳನ್ನು ಸರ್ಕಾರದ ಸುಪರ್ದಿಯಲ್ಲಿ ತಂದ ಅವರ ಕ್ರಮ ಟೀಕೆಗೊಳಗಾಯಿತು.

೧೯೭೫ರಲ್ಲಿ ಮಲೇಷಿಯಾದ ಮೂರು ಉಪಪ್ರಧಾನಿ ಹುದ್ದೆಗೆ ಮೊಹಾತೀರರು, ಗಹಾರ್ ಬಾಬ, ತೆಂಗ್ಕು ರಾಜ಼ಾಲೆಯ್ ಹಂಜ಼ಾರೊಂದಿಗೆ ಆಯ್ಕೆಯಾದರು., ಇತರ ಇಬ್ಬರು ಉಪಪ್ರಧಾನಿಗಳಿಗಿಂತ ಶಿಕ್ಷಣ, ಅಂತರ್ರಾಷ್ಟ್ರೀಯ ಅನುಭವ ಮತ್ತು ಆಂಗ್ಲ ಭಾಷೆಯ ಹೆಚ್ಚುಗಾರಿಕೆಗ ಕಾರಣ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು. ೧೯೭೫ರಲ್ಲಿ ಅಬ್ದುಲ್ ರಜಾಕ್ ಹುಸೇನ್ ಅಸುನೀಗಿದಾಗ ಅಬ್ದುಲ್ ರಜಾಕ್ ಹುಸೇನ್ ರ ಅನುಯಾಯಿ ಹುಸೇನ್ ಓನ್ನ್ ಪ್ರಧಾನಮಂತ್ರಿಯಾದರು.

೧೯೭೮-೮೧ರ ಅವಧಿಯಲ್ಲಿ ಶಿಕ್ಷಣ, ಕೈಗಾರಿಕೆ ಮತ್ತು ವ್ಯವಹಾರ ಮಂತ್ರಿಯಾದ ಮೊಹಾತೀರರು, ಉತ್ಪಾದನಾ ವಲಯಕ್ಕೆ ಹೆಚ್ಚು ಒತ್ತು ನೀಡಿದರು. ವಿದೇಶಗಳಲ್ಲಿ ಮಲೇಷಿಯದಲ್ಲಿ ಬಂಡವಾಳ ಹೂಡಿಕೆಗಾಗಿ ಹಲವು ಸಮ್ಮೇಳನ ನಡೆಸಿದರು. ೧೯೮೧ರಲ್ಲಿ ಹುಸೇನ್ ಓನ್ನ್ ಅನಾರೋಗ್ಯದ ಕಾರಣ ರಾಜೀನಾಮೆ ಇತ್ತಾಗ, ಮೊಹಾತೀರರು ಮಲೇಷಿಯ ಪ್ರಧಾನಿಯಾದರು.

ಪ್ರಧಾನಿ[ಬದಲಾಯಿಸಿ]

೧೬ ಜುಲೈ ೧೯೮೧ರಂದು ಪ್ರಧಾನಿಯಾದ ಮೊಹಾತೀರರು, ಮೂಸಾ ಹಿತಂ ರನ್ನು ಉಪ ಪ್ರಧಾನಿಯಾಗಿಸಿದರು.[೪] ಹುಸೇನ್ ಓನ್ನ್ ರ ಹೊಸ ಆರ್ಥಿಕ ನೀತಿಯನ್ನು ಮುಂದುವರೆಸಿದ ಮೊಹಾತೀರರು, ಪ್ರತಿ ವರ್ಷ ೫೦ ಸರ್ಕಾರೀ ಕಂಪನಿಗಳ ಖಾಸಗೀಕರಣ, ಮೂಲಮಲಯಾನಿವಾಸಿಗಳಿಗೆ ಮೀಸಲಾತಿ ನೀಡುವ ಭೂಮಿಪುತ್ರ ಯೋಜನೆ, ಉತ್ತರ-ದಕ್ಷಿಣ ಎಕ್ಸ್ ಪ್ರೆಸ್ಸ್ ಹೆದ್ದಾರಿ, ಪ್ರೋಟಾನ್ ಕಾರು ಉತ್ಪಾದನೆ ಇವೇ ಮುಂತಾದ ಕ್ರಮಗಳಿಂದ ಆರ್ಥಿಕ ಅಭಿವೃದ್ದ್ಧಿ ಸಾಧಿಸಿದರು. ASEAN, G77, ಆಲಿಪ್ತ ದೇಶ ಒಕ್ಕೂಟ, ಇಸ್ಲಾಮಿಕ್ ರಾಷ್ಟ್ರಗಳ ಒಕ್ಕೂಟ, G22 ಇವೇ ಮುಂತಾದ ಬಣಗಳಲ್ಲಿ ಮಲೇಷಿಯಾವನ್ನು ಗುರುತಿಸಿಕೊಂಡ ಮೊಹಾತೀರರು ಇಸ್ಲಾಮೀ ದೇಶಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತಿದ್ದರು.

ಚುನಾವಣಾ ಕ್ರಮಗಳು[ಬದಲಾಯಿಸಿ]

೧೯೮೭ರ ಚುನಾವನೆಯಲ್ಲಿ ಬಲು ಕಡಿಮೆ ಅಂತರದಿಂದ ಗೆದ್ದ ಮೊಹಾತೀರರ ವಿರುದ್ಧ ಪಕ್ಷದಲ್ಲಿ ತೆಂಗ್ಕು ರಾಜ಼ಾಲೆಯ್ ಹಂಜ಼ಾ ಬಣದಿಂದ ಬಂಡಾಯ ಭುಗಿಲೆದ್ದಿತು. UMNO ಬಾರು ಎಂಬ ಹೊಸ ಪಕ್ಷ ಕಟ್ಟಿದ ಮೊಹಾತೀರರು ಸಂವಿಧಾನ ತಿದ್ದುಪಡಿಯ ಮೂಲಕ ತಮ್ಮ ರಾಜಕೀಯ ವಿರೋಧಿಗಳು ನ್ಯಾಯಲಯವನ್ನು ಹತ್ತದಂತೆ ಅಧಿಕಾರವನ್ನು ತಮ್ಮದಾಗಿಸಿಕೊಂಡರು.

ಆರ್ಥಿಕ ನೀತಿ[ಬದಲಾಯಿಸಿ]

ಬ್ರಿಟಿಷ್ ವಿಶ್ವವಿದ್ಯಾಲಯಗಳ ಹೆಚ್ಚುವರಿ ಫ಼ೀಸನ್ನು ವಿರೋಧಿಸಿ, ಬ್ರಿಟಿಷ್ ಸರಕುಗಳನ್ನು ಮಲೇಷಿಯಾದಲ್ಲಿ ನಿಷೇಧಿಸುವ ಮಟ್ಟಕ್ಕೆ ಗಲಭೆಯಾಯಿತು. ಬ್ರಿಟಿಷ್ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಮಧ್ಯಸ್ಥಿಕೆ ವಹಿಸಿದ ನಂತರ ನಿಷೇಧ ಹಿಂಪಡೆಯಲಾಯಿತು. ಲುಕ್ ಈಸ್ಟ್ ಎಂಬ ಹೊಸ ಅನುರಣಿತಕ್ಕೆ ಇದು ಕಾರಣವಾಯಿತು. ೧೯೯೦ರ ಚುನಾವನೆಯಲ್ಲಿ ಹೃದಯದ ಕಾಯಿಲೆಯ ಹೊರತಾಗಿಯೂ ಗೆಲುವು ಸಾಧಿಸಿದರು.[೫]

೧೯೯೧ರಲ್ಲಿ ಹುಸೇನ್ ಓನ್ನ್ ರ ಹೊಸ ಆರ್ಥಿಕ ನೀತಿ ಅಂತ್ಯವಾದಾಗ, ವಿಷನ್ ೨೦೨೦ ಎಂಬ ತಮ್ಮ ಹೊಸ ಉದಾರವಾದಿ ಆರ್ಥಿಕ ನೀತಿಯೋಜನೆಯನ್ನು ಜಾರಿಗೆ ತಂದರು. ಹಣಕಾಸು ಸಚಿವರಾಗಿದ್ದ ಅನ್ವರ್ ಇಬ್ರಾಹಿಂ ಇಅದರ ಪ್ರವರ್ತಕರಾಗಿದ್ದರು. ಪುಟ್ರಜಯವನ್ನು ಹೊಸ ರಾಜಧಾನಿಯಾಗಿಸುವ ಯೋಜನೆ, ಸರವಾಕ್ ನಲ್ಲಿ ಬಕುನ್ ಆಣೆಕಟ್ಟು ಯೋಜನೆ ಹೀಗೆ ಹಲವು ಕನಸುಗಳಿಗೆ ಅಡಿಗಲ್ಲು ಇಟ್ಟರು.೧೯೯೫ರ ಹೊತ್ತಿಗೆ ಕೇವಲ ೯% ಮಲೇಷಿಯನ್ನರು ಬಡತನ ರೇಖೆಗಿಂತ ಕೆಳಗಿದ್ದರು.

೧೯೯೭ರ ಏಷ್ಯನ್ ಆರ್ಥಿಕ ಬಿಕ್ಕಟ್ಟು[ಬದಲಾಯಿಸಿ]

೧೯೯೭ರ ಏಷ್ಯನ್ ಆರ್ಥಿಕ ಬಿಕ್ಕಟ್ಟು ಮಲೇಷಿಯಾವನ್ನು ಕಂಗೆಡಿಸಿತು. ೭೫% ಇಳಿತ ಕಂದ ಶೇರು ಮಾರುಕಟ್ಟೆ, ಮಲೇಷಿಯಾದ ರಿಂಗಿಟ್ ನ ಮೌಲ್ಯ ಇಳಿಕೆ, ಇವು ದೇಶಕ್ಕೆ ಸಂಕಷ್ಟ ತಂದುವು.

ಮೊಹಾತೀರರು ಅಂತರ್ರಾಷ್ಟ್ರೀಯ ವಿತ್ತ ಸಂಸ್ಥೆಯ(IMF) ಸಲಹೆಗೆ ವಿರುದ್ಧವಾಗಿ ಸರ್ಕಾರಿ ಹೂಡಿಕೆಯನ್ನು ಹೆಚ್ಚಿಸಿ, ಏಷ್ಯನ್ ಆರ್ಥಿಕ ಬಿಕ್ಕಟ್ಟು ಹಾನಿ ಮಾಡಿದ ಇತರ ದೇಶಗಳಿಗಿಂತಲೂ ಶೀಘ್ರವಾಗಿ ಮಲೇಷಿಯಾದ ಆರ್ಥಿಕತೆಯನ್ನು ಸುಧಾರಿಸಿದರು. ಅನ್ವರ್ ಇಬ್ರಾಹಿಂರನ್ನು ಭ್ರಷ್ಟಾಚಾರ ಮತ್ತು ಲೈಂಗಿಕ ಹಗರಣದ ಆರೋಪದ ಮೇಲೆ ೧೯೯೮ ಪಕ್ಷದಿಂದ ಉಚ್ಚಾಟಿಸಿದ ಮೊಹಾತೀರರು, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಒಳಗಾದರು. ೨೦೦೨ರಲ್ಲಿ ತಾವು ರಾಜಿನಾಮೆ ನೀಡುವುದಾಗಿ ಘೋಷಿಸಿದ ಮೊಹಾತೀರರು, ೨೦೦೩ರಲ್ಲಿ ೨೨ ವರ್ಷಗಳ ಕಾಲ ಪ್ರಧಾನಿಯಾದ ನಂತರ ಅಬ್ದುಲ್ಲಾ ಬದಾವಿಯವರಿಗೆ ಅಧಿಕಾರ ಹಸ್ತಾಂತರಿಸಿದರು.

ನಿವೃತ್ತಿಯ ನಂತರ ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸಿದ ಮೊಹಾತೀರರು ಅಬ್ದುಲ್ಲಾ ಬದಾವಿ, ನಜೀಬ್ ರಜ಼ಾಕ್ ಸರ್ಕಾರಗಳಿಗೆ ಸಲಹೆ ನೀಡುತ್ತಿದ್ದರು.


ಕೊಂಡಿಗಳು[ಬದಲಾಯಿಸಿ]


  1. "ಆರ್ಕೈವ್ ನಕಲು". Archived from the original on 2016-08-05. Retrieved 2016-11-30.
  2. "ಆರ್ಕೈವ್ ನಕಲು". Archived from the original on 2018-07-06. Retrieved 2016-11-30.
  3. http://www.biography.com/people/mahathir-mohamad-9395417#synopsis
  4. http://www.economist.com/node/2172673?story_id=2172673
  5. https://www.bloomberg.com/news/2010-10-05/ex-malaysia-prime-minister-mahathir-is-discharged-from-australian-hospital.html?cmpid=digg