ಸದಸ್ಯ:Adorea1019/ನನ್ನ ಪ್ರಯೋಗಪುಟ
ಕಪ್ಪು ಕುಳಿ
[ಬದಲಾಯಿಸಿ]ಕಪ್ಪು ಕುಳಿ (Black Hole)- [ಕುಳಿ] ಎಂಬುದು ಬಾಹ್ಯಾಕಾಶದಲ್ಲಿ ಅತಿಹೆಚ್ಚು ಗುರುತ್ವಾಕರ್ಷಣೆಯನ್ನು ಹೊಂದಿರುವ ಪ್ರದೇಶವಾಗಿದೆ. ಬೆಳಕು ಸಹ ಆ ಪ್ರದೇಶದಿಂದ ಹೊರಬರಲು ಸಾಧ್ಯವಿಲ್ಲ. ಕಾರನ ಕಪ್ಪು ಕುಳಿ ಪ್ರದೇಶವು ಅತಿ ಚಿಕ್ಕ ಪ್ರದೇಶವಾಗಿದ್ದು ಎಲ್ಲವು ಅತಿಹೆಚ್ಚು ಗುರುತ್ವ ಬಲದಿಂದ ಹಿಡಿಯಲ್ಪಡುತ್ತವೆ. ನಕ್ಷತ್ರಗಳು ಸಾಯುವುದು ಇಲ್ಲೇ. ಯಾವ ಬೆಳಕು ಸಹ ಅಲ್ಲಿ ಕಂಡುಬರುವುದಿಲ್ಲ. ಮನುಷ್ಯರಂತು ಕಪ್ಪು ಕುಳಿಯನ್ನು ನೋಡಲು ಸಾಧ್ಯವೇ ಇಲ್ಲ.ಕಪ್ಪು ಕುಳಿ ಸಂಯೋಜನೆ ಹೊಂದಿರುವುದೇ ಅಗಾಧ ಪ್ರಮಾಣದ ನಕ್ಷತ್ರಗಳ ನಾಶದಿಂದ ಎಂದು ವಿಜ್ಞಾನ ಕ್ಷೇತ್ರದ ಪ್ರಭಾವಿ ಸಿದ್ದಾಂತಗಳು ಹೇಳಿವೆ. ವಿಜ್ಞಾನಿಗಳು ಸಹ ಕಪ್ಪು ಕುಳಿಯ ಗುರುತ್ವದಿಂದ ಸೆಳೆಯಲ್ಪಡುವ ನಕ್ಷತ್ರಗಳು ಹೊರಬರದಿರುವುದರ ಬಗ್ಗೆ ಹಲವು ಸಂಶೋಧನೆಯನ್ನು ಕೈಗೊಂಡಿವೆ. ಆದರೆ ಇದುವರೆಗೆ ಸಹ ಯಾವುದೇ ಮಾಹಿತಿಯನ್ನು ಪತ್ತೆ ಹಚ್ಚಲು ಆಗಿಲ್ಲ. ಆದರೆ ಕೆಲವು ಸಂಶೋಧಕರು ಮತ್ತು ವಿಜ್ಞಾನಿಗಳು ಹೇಳಿರುವ ಕಪ್ಪು ಕುಳಿಯ ಬಗೆಗಿನ ಅದ್ಭುತ ಸತ್ಯಗಳನ್ನು ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಓದುಗರಿಗೆ ಪರಿಚಯಿಸುತ್ತಿದ್ದೇವೆ. ಬ್ಲಾಕ್ ಹೋಲ್ ಬಗೆಗಿನ ಅದ್ಭುತ ಸತ್ಯಾಂಶಗಳು ಏನು ಎಂಬುದನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.
1. ಬ್ಲಾಕ್ ಹೋಲ್ ವಸ್ತುಗಳನ್ನು ಒಳಗೆ ಎಳೆಯುವುದಿಲ್ಲ
ಬಹುಸಂಖ್ಯಾತರು ಹಾಲಿವುಡ್ ಸಿನಿಮಾಗಳನ್ನು ನೋಡಿ ಬ್ಲಾಕ್ ಹೋಲ್ ಇತರೆ ವಸ್ತುಗಳನ್ನು ಎಳೆಯುತ್ತದೆ ಎಂದು ಭಾವಿಸಿದ್ದಾರೆ. ಆದರೆ ಬ್ಲಾಕ್ ಹೋಲ್ ಇತರೆ ಖಗೋಳ ಕಾಯಗಳಂತೆ ಅದು ಸಹ ಇದೆಯಷ್ಟೆ. ಸೂರ್ಯ ಬ್ಲಾಕ್ ಹೋಲ್‌ನಿಂದ ತನ್ನ ಸ್ಥಾನ ಬದಲಿಸಿದರು ಸಹ ಭೂಮಿ ತನ್ನ ಸಾಮಾನ್ಯ ಕಕ್ಷೆಯ ಚಲನೆಯನ್ನು ಮುಂದುವರೆಸುತ್ತದೆ.
2. ಬ್ಲಾಕ್ ಹೋಲ್ ಎಲ್ಲವನ್ನು ಹಿಗ್ಗಿಸುತ್ತದೆ
ಬ್ಲಾಕ್‌ಹೋಲ್ ತನ್ನ ಗುರುತ್ವ ಬಲದಿಂದ ಎಲ್ಲವನ್ನು ಉದ್ದವಾಗಿ ಹಿಗ್ಗಿಸುತ್ತದೆ. ಈ ಪ್ರಕ್ರಿಯೆಯನ್ನು "spaghettification' ಎಂದು ಕರೆಯಲಾಗುತ್ತದೆ. ಬ್ಲಾಕ್ ಹೋಲ್ ಪ್ರತಿ ವಸ್ತುವನ್ನು ತನ್ನ ಕೇಂದ್ರಕ್ಕೆ ಸೆಳೆದುಕೊಂಡು ಆಕರ್ಷಣೆಯಲ್ಲಿ ವಿಭಿನ್ನತೆಯನ್ನು ಉಂಟುಮಾಡುತ್ತದೆ.
3. ಬ್ಲಾಕ್ ಹೋಲ್ ಹೊಸ ಬ್ರಹ್ಮಾಂಡಕ್ಕೆ ಜನ್ಮ ನೀಡುತ್ತದೆ
ಎಲ್ಲಾ ಭೌತ ವಿಜ್ಞಾನ ಸಿದ್ದಾಂತಗಳ ಪ್ರಕಾರ ' ಬ್ಲಾಕ್ ಹೋಲ್' ಪ್ರಸ್ತುತ ಬ್ರಹ್ಮಾಂಡದ ಪರಿಸ್ಥಿತಿ ಬದಲಿಸಿ ಹೊಸ ಬ್ರಹ್ಮಾಂಡ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹೊಸ ಬ್ರಹ್ಮಾಂಡವು ನಮ್ಮ ಬ್ರಹ್ಮಾಂಡಕ್ಕಿಂತ ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿರುತ್ತದಂತೆ.
4. ಬ್ಲಾಕ್ ಹೋಲ್ ಅಕ್ಷರಶಃ ತನ್ನ ಸುತ್ತಲ ಬಾಹ್ಯಾಕಾಶವನ್ನು ಸೆಳೆಯುತ್ತದೆ
ಐನ್‌ಸ್ಟೈನ್'ರವರ ಸಾಮಾನ್ಯ ಸಾಪೇಕ್ಷತಾ ಸಿದ್ದಾಂತದ ಪ್ರಕಾರ " ಸ್ಪೇಸ್ ಗ್ರಿಡ್ ಲೈನ್‌ನ ರಬ್ಬರ್ ಶೀಟ್‌ನಂತೆ. ಒಂದು ವಸ್ತುವಿನಂ ತೂಕದಂತೆ ಇದು ಸಹ ಬ್ಲಾಕ್ ಹೋಲ್‌ನಿಂದ ಸೆಳೆಯಲ್ಪಡುತ್ತದೆ. ಬ್ಲಾಕ್ ಹೋಲ್ ಇತರೆ ಖಗೋಳ ಕಾಯಗಳಿಗಿಂತ ಸ್ಪೇಸ್ ಟೈಮ್ ಚೌಕಟ್ಟನ್ನು ಹೀರುತ್ತದೆ. ಬ್ಲಾಕ್ ಹೋಲ್‌ನಿಂದ ಬೆಳಕು ಸಹ ಹೊರ ಬರಲು ಸಾಧ್ಯವಿಲ್ಲ ಎನ್ನಲಾಗಿದೆ.
5.ಅತ್ಯಧಿಕ ದಕ್ಷ ಶಕ್ತಿ ಉತ್ಪಾದನೆಯ ಮೂಲ
ಸೌರ ಮಂಡಲದಲ್ಲಿ ಸೂರ್ಯನನ್ನು ಹೊರತು ಪಡಿಸಿದರೆ ಬ್ಲಾಕ್ ಹೋಲ್ ಅತ್ಯಧಿಕ ದಕ್ಷ ಶಕ್ತಿ ಉತ್ಪಾದನೆಯ ಮೂಲವಾಗಿದೆ. ಬ್ಲಾಕ್ ಹೋಲ್ ಸುತ್ತ ಸುತ್ತುವ ವಸ್ತುಗಳು ವೇಗದ ಆಧಾರದಲ್ಲಿ ಸ್ಥಳ ಪಡೆಯಲಿವೆ.
- ↑ https://en.wikipedia.org/wiki/Black_hole. Retrieved 15 ಫೆಬ್ರುವರಿ 2018.
{{cite web}}
: Missing or empty|title=
(help) - ↑ https://www.space.com/15421-black-holes-facts-formation-discovery-sdcmp.html. Retrieved 15 ಫೆಬ್ರುವರಿ 2018.
{{cite web}}
: Missing or empty|title=
(help)