ವಿಷಯಕ್ಕೆ ಹೋಗು

ಸದಸ್ಯ:Harish.hl/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಡುಗಣಿ
[ಬದಲಾಯಿಸಿ]

ಶಿಕಾರಿಪುರದಿಂದ ಸುಮಾರು ೧೦ ಕಿ.ಮೀ ದೂರದಲ್ಲಿರುವ ಗ್ರಾಮ.ಈ ಕ್ಷೇತ್ರದ ಹೆಸರನ್ನು ನೆನಪಿಸಿಕೊಂಡರೆ ಎದುರು ನಿಲ್ಲುವುದು ೧೨ ನೇ ಶತಮಾನದ ಶ್ರೇಷ್ಠ ವಚನಕಾರ್ತಿ ಹಾಗೂ ಅಕ್ಕ ಎಂದೇ ಖ್ಯಾತಿ ಪಡೆದ ಅಕ್ಕಮಹಾದೇವಿಯ ಭಾವಚಿತ್ರ.ಅಕ್ಕಮಹಾದೇವಿ ಜನಿಸಿದ ಪುಣ್ಯ ಭೂಮಿಯೇ ಉಡುಗಣಿ.ಇವಳು ಸೌಂದರ್ಯವತಿ, ಸದ್ಗುಣ ಸಂಪನ್ನಳಾಗಿದ್ದಳು.ಉಡುಗಣಿಯಲ್ಲಿ ಕೌಶಿಕ ಮಾಹಾರಾಜ ಆಳ್ವಿಕೆ ನಡೆಸುತ್ತಿದ್ದು.ಮಹಾದೇವಿ ಸೌಂದರ್ಯಕ್ಕೆ ಮಾರು ಹೋಗಿ ಮದುವೆಯಾಗಲು ಪೀಡಿಸಲು ತೊಡಗಿದಾಗ ಒಪ್ಪಂದದನ್ವಯ ಮದುವೆಯಾಗುತ್ತದೆ..ನಂತರ ಕೌಶಿಕ ಮಹಾದೇವಿ ಷರತ್ತುಗಳನ್ನು ಮುರಿದಾಗ ಅವರ ದಾಂಪತ್ಯ ಜೀವನವು ಮುರಿದು ಬೀಳುತ್ತದೆ.ಅಕ್ಕಮಹಾದೇವಿ ಕೌಶಿಕನನ್ನು ತೊರೆದು ತನ್ನ ಆರಾಧ್ಯ ದೈವ ಶ್ರೀ ಚನ್ನಮಲ್ಲಿಕಾರ್ಜುನನನ್ನು ಹುಡುಕುತ್ತಾ ಶ್ರೀಶೈಲದಲ್ಲಿ ಐಕ್ಯಳಾದಳು. ತಾಲ್ಲೂಕು: ಶಿಕಾರಿಪುರ ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ ಜಿಲ್ಲಾ ಕೇಂದ್ರದಿಂದ: ೬೦ ಕಿ.ಮೀ

ಇತಿಹಾಸ

[ಬದಲಾಯಿಸಿ]

ಉಡುಗಣಿ ಭಾರತ ದೇಶದ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಒಂದು ಗ್ರಾಮವಾಗಿದೆ. ಉಡುಗಣಿಯನ್ನು ಉಡುತಡಿ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರು.ಉಡುಗಣಿಯು ೨೦೦೯ರಲ್ಲಿ ಗ್ರಾಮದಿಂದ ಗ್ರಾಮಪಂಚಾಯಿತಿ ಆಯಿತು. ೨೦೧೧ರ ಜನಗಣತಿಯ ಪಿನ್ಕೋಡ್ ಸಂಖ್ಯೆ ೬೦೭೭೪೨. ಶಿಕಾರಿಪುರ, ಸಾಗರ, ಶಿರಸಿ ಇವುಗಳು ಹತ್ತಿರವಾದ ನಗರಗಳು.ಕನ್ನಡ ಭಾಷೆಯು ಇಲ್ಲಿನ ಜನರ ಆಡು ಭಾಷೆಯಾಗಿದೆ. ಉಡುಗಣಿಗೆ ತಲುಪಬೇಕಾದರೆ ಯಾವುದೇ ರೈಲು ಸಂಪರ್ಕ ಇಲ್ಲ. ಉಡುಗಣಿಯ ಬಳಿ ಯಾವುದೇ ರೀತಿಯ ರೈಲು ನಿಲ್ದಾಣಗಳು ಇಲ್ಲ.ಉಡುಗಣೆಯಿಂದ ರೈಲ್ವೆ ನಿಲ್ದಾಣಕ್ಕೆ ೧೦ ಕಿಲೋಮೀಟರ್ ಇದೆ. ಉಡುಗಣೆಯ ಒಟ್ಟು ಜನ ಸಂಖ್ಯೆ ೩೩೩೨. ಅದರಲ್ಲಿ ೧೭೦೨ ಜನ ಪುರುಷರು, ೧೬೩೦ ಜನ ಮಹಿಳೆಯರು ೨೦೧೧ರ ಜನಗಣತಿಯನ್ನು ಆಧರಿಸಿ. ಗ್ರಾಮದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಬಸ್ಸುಗಳು ವ್ಯವಸ್ಥೆ ಇದೆ.ಈ ಗ್ರಾಮದ ಒಟ್ಟು ಭೌಗೋಳಿಕ ವಲಯ ೧೧೬೫.೦೫ ಹೆಕ್ಟೇರ್. ಈ ಗ್ರಾಮದಲ್ಲಿ ಒಟ್ಟು ೬೪೦ ಮನೆಗಳು ಇವೆ. ಉಡುಗಣೆ ಪಶ್ಛಿಮಕ್ಕೆ ಸೊರಬ ತಾಲ್ಲೂಕು, ಪೂರ್ವಕ್ಕೆ ಹೀರೆಕೆರೂರು ತಾಲ್ಲೂಕು, ದಕ್ಷಿಣಕ್ಕೆ ಸಾಗರ ತಾಲ್ಲೂಕು, ಉತ್ತರಕ್ಕೆ ಬ್ಯಾಡಗಿ ಸುತ್ತುವರೆದಿದೆ.[]

=ಸಂಪ್ರದಾಯ=

[ಬದಲಾಯಿಸಿ]

ಉಡುಗಣಿ ಅಕ್ಕಮಹಾದೇವಿಯಿಂದ ಪರಿಚಿತವಾಗಿದೆ. ಈ ಕ್ಷೇತ್ರದ ಹೆಸರನ್ನು ಕೇಳಿದ ತಕ್ಷಣ ನೆನಪಿಗೆ ಬರುವುದು ೧೨ನೇ ಶತಮಾನದ ಅಕ್ಕಮಹಾದೇವಿ ಇವರು ಶ್ರೇಷ್ಟ ವಚನಗಾರ್ತಿಯಾಗಿದ್ದಳು.ಎಲ್ಲರ ಅಕ್ಕ ಎಂದೇ ಪ್ರಸಿದ್ದಿ ಪಡೆದುಕೊಂಡಿದ್ದ ಅಕ್ಕಮಹಾದೇವಿಯು ೧೨ನೇ ಶತಮಾನದಲ್ಲಿ ಸಮಾಜಿಕ ಹಾಗೂ ಧಾರ್ಮಿಕ ಸುಧಾರಣೆಗೆ ಪಣತೊಟ್ಟಿದ್ದರು.ಹಲವು ವಚನಗಳಲ್ಲಿ ಮತ್ತು ಕಾವ್ಯಗಳಲ್ಲಿ ಅಕ್ಕಮಹಾದೆವಿಯನ್ನು ಉಡುತಡಿಯ ಮಹಾದೇವಿ ಎಂದು ಗುರುತಿಸುತ್ತಾರೆ. ಉಡುಗಣಿಯನ್ನು ಉಡುತಡಿಯೆಂದು ಕರೆಯುತ್ತಿದ್ದರು.ಹರಿಹರನು ತನ್ನ ಕಾವ್ಯದಲ್ಲಿ ಉಡುತಡಿಯ "ಮಹಾದೇವಿಯಕ್ಕನ" ರಗಳೆ ಎಂದೇ ಗುರುತಿಸಿದ್ದಾನೆ. ಇದರಿಂದ ಅಕ್ಕಮಹಾದೇವಿ ಉಡುತಡಿಯವಳೆಂದು ಸ್ಪಷ್ಟವಾಗಿದೆ. ಈಗಿನ ಕಲಬುರ್ಗಿ ಜಿಲ್ಲೆಯ ಈ ಉಡುತಡಿಯೆ ಮಹಾದೇವಿಯಕ್ಕನ ಉಡುತಡಿಯೆಂದು ಕೆಲವರು ಊಹಿಸಿದ್ದರು, ಈ ಊಹೆಗೆ ತಕ್ಕ ಆಧಾರಗಳು ದೊರೆಯದ್ದರಿಂದ್ದ ಇದು ಬರಿಯ ಊಹೆಯಾಗಿಯೇ ಉಳಿಯಿತು. ಮಲೆನಾಡಿನ ಸೃಷ್ಟಿ ಸೌಂದರ್ಯದ ಬೀಡಾಗಿರುವ, ಈಗಿನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯ ಬಳಿಯಿರುವ ಉಡುಗಣಿಯೇ ಆಗಿನ ಉಡುತಡಿ. ಈ ಉಡುತಡಿ ಒಂದು ಕಾಲದಲ್ಲಿ ರಾಜಧಾನಿಯ ಸ್ಥಳವಾಗಿತ್ತು ಎಂಬ ಪ್ರತೀತಿ ಇದೆ ಕಾರಣ ಇದಕ್ಕೆ ಸಾಕ್ಷಿಯಾಗಿರುವ ಇಲ್ಲಿನ ಅವಶೇಷಗಳಾಗಿ ನಿಂತಿರುವ ಇಲ್ಲಿನ ಕೋಟೆ-ಕೊತ್ತಲಗಳೇ ಸಾಕ್ಷಿ. ಕೌಶಿಕ ಮಹಾರಾಜನು ಇಲ್ಲಿನ ದೊರೆಯಾಗಿದ್ದನು ಎಂಬುವುದು ಮೂಲಗಳಿಂದ ತಿಳಿದುಬಂದಿರುವ ವಿಷಯ. ಈಗಲು ಈ ಊರಿನ ಅಂಚಿನಲ್ಲಿ ಸೊಗಸಾದ ಕೆರೆ ಇರುವುದನ್ನುಕಾಣ ಬಹುದಾಗಿದೆ ಈ ಉಡುತಡಿಯಲ್ಲಿ ಪರದೇಸಿ ಮಲ್ಲಪ್ಪನ ಗುಡಿಯಿದೆ. ಗುರುವಾಡಿ ಮಠವೆಂದು ಗುರುತಿಸುವ ಅಂದಿನ ವಿದ್ಯಾಭ್ಯಾಸಕ್ಕೆ ಯೋಗ್ಯವಾದ ಒಂದು ಮಠದ ಕುರುಹೂ ಇದೆ.ಅಕ್ಕಮಹಾದೇವಿಯ ಊರಾದ ಈ ಉಡುತಡಿಯ ಸಮೀಪದಲ್ಲಿ ಅಲ್ಲಮ್ಮಪ್ರಭುವಿನ ಬಳ್ಳಿಗಾವೆಯು, ಏಕಾಂತರಾಮಯ್ಯನ ತಾಳಗುಂದವು ಇದೆ. ಮಹಾದೇವಿಯನ್ನು ಪಾರ್ವತಿಯ ಅಂಶವೆಂದು, ವೃದ್ರಕನ್ಯೆಯೆಂದು ಹೇಳಿದ್ದಾರೆ , ಶಿವಭಕ್ತಿಯ ಪ್ರತಿಫಲವಾಗಿರುವ ಮಗಳು ಎಂಬುವುದು ಸ್ಪಷ್ಟ. ಮುಂದೆ ಅಕ್ಕಮಹಾದೇವಿ ಕೌಶಿಕ ಮಹಾರಾಜನ ಜೊತೆ ಮದುವೆಯಾಗುತ್ತದೆ . ಕೌಶಿಕ ಮಹಾರಾಜನು ಅಕ್ಕಮಹಾದೇವಿಯ ಶಿವ ಪೂಜೆಗೆ ಅಡ್ಡಿಪಡಿಸುತ್ತಾನೆ ಆದಕಾರಣ ಅಕ್ಕಮಹಾದೇವಿ ಕೌಶಿಕಮಹಾರಾಜನನ್ನು ಬಿಟ್ಟು ಅನುಭವ ಮಂಟಪಕ್ಕೆ ತೆರಳುತ್ತಾಳೆ ಅಲ್ಲಿ ಸ್ವಲ್ಪ ಕಾಲ ಇದ್ದು ಶ್ರೀಶೈಲಕ್ಕೆ ತೆರಳಿ ಐಕ್ಯಳಾಗುತ್ತಾಳೆ. ಉಡುಗಣಿ ಒಂದು ಸುಂದರವಾದ ಗ್ರಾಮವಾಗಬೇಕಾದರೆ ಅಕ್ಕಮಹಾದೇವಿಯೇ ಕಾರಣ . ಅಕ್ಕಮಹಾದೇವಿಯ ಪ್ರಯತ್ನ ಮತ್ತು ಚಲದಿಂದ ಈ ಉಡುತಡಿ ಗ್ರಾಮವು ಎಲ್ಲರಿಗೂ ಪರಿಚಿತವಾಗಿದೆ. ಉಡುತಡಿ ಎಂಬುದು ಉದತಡಿಯೆಂಬುದರ ಇನ್ನೊಂದು ರೂಪ. ಉಡುತಡಿ ಎಂಬುದು ಕೆರೆಯ ದಡದಲ್ಲಿಯ ಊರೆಂಬುದನ್ನು ಸೂಚಿಸುತ್ತದೆ. ಅಕ್ಕಮಹಾದೇವಿಯ ಊರಾದ ಈ ಉಡುತಡಿಯ ಸಮೀಪದಲ್ಲಿ ಅಲ್ಲಮಪ್ರಭುವಿನ ಬಳ್ಳಿಗಾವೆ ಇದೆ. ಬಿಳ್ಳಿಗಾವಿ ಒಂದು ಪ್ರಾಚೀನ ಶೈವಕೇಂದ್ರವೂ ಅಹುದು. ಶೈವಪರಂಪರೆ ಮತ್ತು ಶಿವಭಕ್ತಿಯ ಪರಿಸರ ಉಡುತಡಿಯ ಪ್ರದೇಶಕಿದ್ದು ಅಕ್ಕಮಹಾದೇವಿಯ ತಂದೆ-ತಾಯಿಗಳು ಆ ಪರಂಪರೆಯ ಪ್ರಭಾವಲಯದಲ್ಲಿ ತಮ್ಮ ಜೀವನವನ್ನು ರೂಪಿಸಿಕೊಂಡಿರುವುದು ಸಹಜವಾಗಿದೆ. ಅಂತೆಯೇ ಅವರು ಶಿವಭಕ್ತರೆಂದು ಹೆಸರಾದರು. ಈ ಎಲ್ಲಾ ಇತಿಹಾಸ ಹೊಂದಿರುವ ಉಡುತಡಿಯು ಇಷ್ಟರ ಮಟ್ಟಕ್ಕೆ ಇಂದು ಪ್ರಸಿದ್ದಿ ಪಡೆದುಕೊಳ್ಳಬೇಕಾದರೆ ಅದು ಅಕ್ಕಮಹಾದೇವಿಯ ಸಾಧನೆಯಿಂದಲೇ ಎಂದು ಹೇಳಬಹುದು. ಆಗಿನ ಉಡುತಡಿಯೇ ಈಗಿನ ಉಡುಗಣಿಯಾಗಿದೆ. ಉಡುಗಣಿಯ ಪರಿಸರ ಇಂದಿಗೂ ಮನಕಲಕುವಂತೆ ಇದೆ.ಅಲ್ಲಿನ ಜನರ ಆಡುಭಾಷೆ, ಕಸುಬು, ಅಲ್ಲಿನ ವಾತಾವರಣ, ಅಕ್ಕಮಹಾದೇವಿಯ ನೆನಪು, ವಚನಗಳು ಎಲ್ಲವೂ ಇನ್ನೂ ಎಲ್ಲರ ಮನಸ್ಸಿನಲ್ಲಿ ಬೇರೂರಿದೆ.[]

ಧನ್ಯವಾದಗಳು..!


=ಉಲ್ಲೇಖನಗಳು=

[ಬದಲಾಯಿಸಿ]
  1. http://www.onefivenine.com/india/villages/Shimoga/Shikarpur/Udugani
  2. http://www.mapsofindia.com/villages/karnataka/shimoga/shikarpur/udugani.html