ಸದಸ್ಯ:Madan aradhya/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                    ಗುಲ್ಬರ್ಗಾ ವಿಶ್ವವಿದ್ಯಾಲಯ ಗುಲ್ಬರ್ಗಾ
        ಗುಲ್ಬರ್ಗಾ ವಿಶ್ವವಿದ್ಯಾಲಯವೂ[೧] ೧೯೮೦ ರಲ್ಲಿ ಸ್ಥಾಪನೆಯಾಯಿತು. ಇದು ವಿಶ್ವವಿದ್ಯಾಲಯವಾಗುವ ಮೊದಲು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದ ಒಂದು ಗುಲ್ಬರ್ಗಾ ಸ್ನಾತಕ್ಕೋತ್ತರ ಪದವಿ ಕಾಲೇಜು ಆಗಿತ್ತು, ನಂತರ ಈ ಕಾಲೇಜನ್ನು ಕರ್ನಾಟಕ ವಿಶ್ವವಿದ್ಯಾಲಯವೂ ೧೯೮೦ ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ಎಂದು ಘೋಷಣೆ ಮಾಡಿತು. ಈ ವಿಶ್ವವಿದ್ಯಾಲಯವೂ ಗುಲ್ಬರ್ಗಾ ನಗರದಿಂದ ಸುಮಾರು ೧೦ ಕೀ.ಮೀ. ದೂರದಲ್ಲಿದೆ. ಈ ಕಟ್ಟಡವೂ ಗ್ರಾಮಾಂತರ ಪ್ರದೇಶದಲ್ಲಿದೂ ಇದು ಭವ್ಯ ಕಟ್ಟಡಗಳಿಂದ ಕೂಡಿದೆ. ಹಾಗೂ ದೊಡ್ಡ ಗ್ರಂಥಾಲಯ ಮತ್ತು ವಿಶಾಲವಾದ ಆಟದ ಮೈದಾನಗಳಿಂದ ಸೇರಿದ ಸುಮಾರು ೮೬೦ ಎಕರೆಗಳಷ್ಟು ವಿಸ್ತೀರ್ಣವೊಂದಿರುವ ಬಹು ದೊಡ್ಡ ವಿಶ್ವವಿದ್ಯಾಲಯ ಇದಾಗಿದೆ.ಈ ವಿಶ್ವವಿದ್ಯಾಲಯದ ಪ್ರಥಮ ಉಪಕುಲಪತಿಗಳಾಗಿ ಎಂ.ನಾಗರಜ್ ರವರು ೧೯೮೪ ರಲ್ಲಿ ಆಯ್ಕೆಗೊಂಡು ೧೯೮೭ ರ ವರೆಗೆ ಉಪಕುಲಪತಿಗಳಾಗಿ ಸೇವೆಸಲ್ಲಿಸಿದ್ದಾರೆ. ಇದುವರೆಗೂ ಈ ವಿಶ್ವವಿದ್ಯಾಲಯದಲ್ಲಿ ೧೦ ಜನ ಕುಲಪತಿಗಳಾಗಿ ಕೆಲಸ ನಿರ್ವಹಿಸಿದ್ದಾರೆ. ನಂತರ ೧೧ನೇ ಉಪಕುಲಪತಿ ಇ.ಟಿ.ಪುಟ್ಟಣಯ್ಯರವರು ೨೦೧೦ರಲ್ಲಿ ಆಯ್ಕೆಯಾಗಿ ಇಗಲು ಉಪಕುಲಪತಿಗಳಾಗಿಯೇ ಸೇವೆಸಲ್ಲಿಸುತ್ತಿದ್ದಾರೆ. ಈ ಗುಲ್ಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯು ಗುಲ್ಬರ್ಗಾ,ಬೀದರ್,ರಾಯಚೂರು ಮತ್ತು ಯಾದಗಿರಿ(ಕಲಬುರ್ಗಿ) ಜಿಲ್ಲೆಗಳೂ ಒಳಗೊಂಡಿದೆ. ಬೀದರ್ ನ ೧೨೧ ಕಾಲೇಜುಗಳೂ,ರಾಯಚೂರಿನ ೧೦೧ ಕಾಲೇಜುಗಳು ಹಾಗೂ ಯಾದಗಿರಿಯ ೨೬೬ ಕಾಲೇಜುಗಳು ಈ ವಿಶ್ವವಿದ್ಯಾಲಯದ ಕೆಳಗೆ ಕಾರ್ಯ ನಿರ್ವಹಿಸುತ್ತಿವೆ. ಈ ವಿಶ್ವವಿದ್ಯಾಲಯದಲ್ಲಿ ೩೭ಕ್ಕಿಂತ ಹೆಚ್ಚು ಶಿಕ್ಷಕ ವರ್ಗ,ನಾಲ್ಕು ಸಂಶೋಧನ ಕೇಂದ್ರಗಳು, ೨೦೦ಕ್ಕೂ ಹೆಚ್ಚು ಶಿಕ್ಷಣೇತರ ವರ್ಗ ಹಾಗೂ ೧೦೦೦ಕ್ಕೂ ಹೆಚ್ಚು ತಾಂತ್ರಿಕೇತರ ಉದ್ಯೋಗಸ್ಥರನ್ನು ಹೊಂದಿದೆ. ಮತ್ತು ಈ ವಿಶ್ವವಿದ್ಯಾಲಯದ ಕೆಳಗೆ ೪೦೫ಕ್ಕೂ ಹೆಚ್ಚು ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. 
ಗುಲ್ಬರ್ಗಾ ವಿಶ್ವವಿದ್ಯಾಲಯ ,ಗುಲ್ಬರ್ಗಾ
      ಈ ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಮುಖ ಗುರಿ ಅಲ್ಲಿನ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಹೋದಗಿಸುವುದಾಗಿದೆ. ಹಾಗೂ ಈ ವಿಶ್ವವಿದ್ಯಾಲಯದ ಗ್ರಂಥಾಲಯವೂ ಬಹಳ ವಿಶಾಲವಾಗಿದು ೨,೨೭,೮೧೩ಕ್ಕಿಂತ ಹೆಚ್ಚು ಪುಸ್ತಕಗಳಿವೆ ಮತ್ತು ೬೫೪ಕಕ್ಕಿಂತ ಹೆಚ್ಚು ವೈಜ್ನ್ಯಾನಿಕ ವರ್ತಮಾನ ಪತ್ರಿಕೆಗಳೂ ಹಾಗೂ ೧೫೦ ಗಣಕಯಂತ್ರಗಳು ಇದ್ದು ಈ ಗ್ರಂಥಾಲಯದಲ್ಲಿ ವೈಫೈ ಸೌಲಭ್ಯವಿದೆ. ಈ ಗ್ರಂಥಾಲಯಕ್ಕೇ ಡಾ.ಪದ್ಯ ಉತ್ತಮ ಪ್ರಶಸ್ತಿ ೨೦೦೭ರಲ್ಲಿ ಇಂಡಿಯನ್ ಲೈಬ್ರರಿ ಅಸೋಸಿಯೇಷನ್ ವತಿಯಿಂದ ದೊರತಿದೆ ಹಾಗೂ ೨೦೧೧ ರಲ್ಲಿ ನವದೆಹಲಿಯಲ್ಲಿ ಇಂಡಿಯನ್ ಆವಾರ್ಡ್ ಇನ್ನೂ ಮುಂತಾದ ಪ್ರಶಸ್ತಿಗಳು ಈ ಗ್ರಂಥಾಲಯಕ್ಕೆ ದೊರತಿದೆ.[೨]
ಗುಲ್ಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ
     ಈ ಗುಲ್ಬರ್ಗಾ ವಿಶ್ವವಿದ್ಯಾಲಯವೂ ದೈಹಿಕ ಶಿಕ್ಷಣಕ್ಕೂ ಕೂಡ ಸಮಾನ ಪ್ರಮುಖ್ಯಾತೆ ಕೊಟ್ಟಿದೆ.ಇಲ್ಲಿ ೧೭೫೦ ಜನ ಕುಳಿತು ನೋಡಬಹುದಾದ ಒಳ ಕ್ರೀಡಾಂಗಣವಿದೆ. ೨೦೦ಮೀ ಟ್ರ್ಯಾಕ್,೪೦೦ಮೀ ಟ್ರ್ಯಾಕ್ ಹಾಗೂ ಪುಟ್ಬಾಲ್,ವಾಲಿಬಾಲ್,ಹಾಕಿ ಆಟಗಳಲ್ಲಿ ರಾಜ್ಯಮಟ್ಟದಲ್ಲಿ,ರಾಷ್ಟೀಯ ಮಟ್ಟದಲ್ಲಿ ಹಾಗೂ ಅಂತರಾಷ್ಟೀಯ ಮಟ್ಟದಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಭಾಗವಾಹಿಸಿ ಹಲವಾರು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ  ಹಾಗೂ  ಈ ವಿಶ್ವವಿದ್ಯಾಲಯವೂ ಎನ್.ಎಸ್.ಎಸ್,ಎನ್.ಸಿ.ಸಿ ಇನ್ನೂ ಮುಂತಾದ ರಾಷ್ಟೀಯ ಸ್ವಯಂ ಸೇವಾ ದಳಗಳನ್ನೂ ಆರಂಭಿಸಿ ಸಮಾಜಕ್ಕೆ ಮಾಡಿರುವ ಸೇವೆ ಅಪಾರವಾದದು. ಈ ಸೇವಾ ದಳಗಳನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ೧೯೮೧ ರಲ್ಲಿ ಸುಮಾರು ೨೭೦೦ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಈ ದಳ ಈಗ ೧೬೦೦೦ ವಿದ್ಯಾರ್ಥಿಗಳನ್ನೊಳಗೊಂಡ ಬಹುದೊಡ್ಡ ಸ್ವಯಂ ಸೇವಾ ದಳವಾಗಿ ಬೆಳೆದು ನಿಂತಿದೆ. ಈ ವಿಶ್ವವಿದ್ಯಾಲಯದ ಪ್ರಮುಖ ಗುರಿ ಆ ಪ್ರದೇಶದ ವಿದ್ಯಾರ್ಥಿಗಳಿಗೆ ಒಳ್ಳೆಯ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವುದು ಆದ್ದರಿಂದ ಈ ವಿಶ್ವವಿದ್ಯಾಲಯದ ಉಪ ಪದ(ಟ್ಯಾಗ್ ಲೈನ್) "ವಿದ್ಯೆಯೇ ಅಮೃತ" ಎಂಬುವುದಾಗಿದೆ.
  1. http://www.gulbargauniversity.kar.nic.in/authorities/AboutUs.html
  2. http://www.interlinepublishing.com/store-18/user-free-chapters.php