ಕಾಂತ ದೃಕ್ಶಾಸ್ತ್ರ
ಕಾಂತ ದೃಕ್ಶಾಸ್ತ್ರ
ದೃಕ್ ವಿದ್ಯಮಾನಗಳ ಮೇಲೆ ಕಾಂತ ಕ್ಷೇತ್ರದ ಪ್ರಭಾವವನ್ನು ಪರಿಶೀಲಿಸುವ ಭೌತವಿಜ್ಞಾನದ ವಿಭಾಗ (ಮ್ಯಾಗ್ನೆಟೊ ಆಪ್ಟಿಕ್ಸ್). ಬೆಳಕು ವಿದ್ಯುತ್ಕಾಂತ ವಿಕಿರಣವಾಗಿರುವ ಅಂಶವನ್ನು ಜ್ಞಾಪಿಸಿಕೊಂಡರೆ ಬೆಳಕು ಮತ್ತು ಕಾಂತ ಕ್ಷೇತ್ರಗಳ ನಡುವೆ ಅಂತರಕ್ರಿಯೆ (ಇಂಟರ್ಯಾಕ್ಷನ್) ಸಂಭವಿಸುವುದು ಸಾಧ್ಯವೆಂದು ತೋರುತ್ತದೆ. ಆದರೂ ಕಾಂತಕ್ಷೇತ್ರ ಮತ್ತು ಬೆಳಕು ಇವೆರಡರ ನೇರ ಪ್ರತಿಕ್ರಿಯೆಯಿಂದ ಕಾಂತದೃಕ್ಪರಿಣಾಮಗಳು ಉಂಟಾಗುವುದಿಲ್ಲ. ಆದರೆ ಬೆಳಕನ್ನು ಉತ್ಸರ್ಜಿಸುವ ಅಥವಾ ಅವಶೋಷಿಸುವ ಪ್ರಕ್ರಿಯೆಯಲ್ಲಿರುವ ವಸ್ತುವಿನ ಮೇಲೆ ಕಾಂತಕ್ಷೇತ್ರದ ಸ್ವಭಾವವೇ ಈ ಪರಿಣಾಮಗಳಿಗೆ ಕಾರಣ.[೧]
ಜೀóಮಾನ್ ಪರಿಣಾಮ: ರೇಖಾರೋಹಿತವನ್ನು ಉತ್ಸರ್ಜಿಸುವ ಆಕರವನ್ನು ಪ್ರಬಲ ಕಾಂತಕ್ಷೇತ್ರದಲ್ಲಿಟ್ಟಾಗ ಒಂಟಿ ರೇಖೆಗಳು ಸನ್ನಿಕಟ ರೇಖಾ ಸಮೂಹಗಳಾಗಿ ಸೀಳಲ್ಪಡುವ ವಿದ್ಯಮಾನ. ಇದೇ ಜಿûೀಮಾನ್ ಪರಿಣಾಮ. ಪ್ರತಿ ಲೋಮ (ಇನ್ವರ್ಸ್) ಜಿûೀಮಾನ್ ಪರಿಣಾಮದಲ್ಲಿ ಅವಶೋಷಿಸುವ ವಸ್ತುವನ್ನು ಕಾಂತಕ್ಷೇತ್ರದಲ್ಲಿಟ್ಟಾಗ ಅವಶೋಷಿತ ರೇಖೆಗಳು ಸೀಳುತ್ತವೆ. ಅತ್ಯಲ್ಪ ಅಂತರದ ಮಟ್ಟಗಳಿಂದ ಉತ್ಪನ್ನವಾಗುವ ರೋಹಿತ ರೇಖೆಗಳಿಗೆ ಜಿûೀಮಾನ್ ಪರಿಣಾಮವನ್ನು ಪ್ಯಾಷೆನ್-ಬ್ಯಾಕ್ ಪರಿಣಾಮ ಎಂದು ಕರೆಯುತ್ತಾರೆ. ಹೆಚ್ಚು ಕಡಿಮೆ ಎಲ್ಲ ಕಾಂತ ದೃಕ್ ಪರಿಣಾಮಗಳಿಗೆ ವಿವರಣೆ ಜಿûೀಮಾನ್ ಪರಿಣಾಮದ ಮೇಲೆಯೇ ಆಧರಿತವಾಗಿದೆ. ಆದ್ದರಿಂದ ಜಿûೀಮಾನ್ ಪರಿಣಾಮವನ್ನು ಕಾಂತದೃಕ್ ಪರಿಣಾಮಗಳಿಗೆಲ್ಲ ಮೂಲವೆಂದು ಪರಿಗಣಿಸಬಹುದು. ಇದರಿಂದ ಪರಮಾಣುವಿನ ರಚನೆ ಕುರಿತ ಮಾಹಿತಿಯನ್ನು ನಿಗಮಿಸಬಹುದು.
ಉಲ್ಲೇಖನೆಗಳು:
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]