ಮೊರ್ಮುಗಾವೋ ಯುದ್ಧನೌಕೆ
ಗೋಚರ
- ಸಮರನೌಕೆಯ ಒಟ್ಟಾರೆ ತೂಕ =7300 ಟನ್,
- ಭೂಮಿಯ&ಆಕಾಶದ ಗುರಿ ಹೊಡೆವ ಕ್ಷಮತೆ= 2 ಸಾಮರ್ಥ್ಯ,
- ನೌಕಾಸಿಬ್ಬಂದಿ= 300 ಮಂದಿ;(50 ಅಧಿಕಾರಿಗಳು+250ಸಿಬ್ಬಂದಿ
- ಹೆಲಿಕಾಪ್ಟರ್ ಅಳವಡಿಕೆ = 2 ಕಾಪrರ್,ಸಬ್ಮರೀನ್ಗೆ ದಾಳಿಗೆ
- ರಾಡಾರ್ = 1 ರಾಡಾರ್,(ಇಸ್ರೇಲ್ ತಂತ್ರಜ್ಞಾನ)
- ಉದ್ಘಾಟನೆ =18 ಸೆಪ್ಟಂ, 2016; ಮುಂಬೈನಲ್ಲಿ
- ಉದ್ಘಾಟಕರು = ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸನೀಲ್ ಲಾಂಬಾ.
- ತೂಕ = 7,300 ಟನ್
ಸ್ವದೇಶಿ ನಿರ್ಮಿತ ವಿಶ್ವ ದರ್ಜೆಯ ಯುದ್ಧ ನೌಕೆ ಮೊರ್ಮುಗಾವೋ
[ಬದಲಾಯಿಸಿ]- ಸಂಪೂರ್ಣ ಸ್ವದೇಶಿ ನಿರ್ಮಿತ ವಿಶ್ವ ದರ್ಜೆಯ ಯುದ್ಧ ನೌಕೆ ಮೊರ್ಮುಗಾವೋ (Mormugao) ಅಥವಾ‘ಮರ್ಮಗೋವಾ’:
- ರಾಡಾರ್ಗಳ ಕಣ್ತಪ್ಪಿಸಿ ನುಗ್ಗಿ ಸುಮಾರು 100 ಕಿ.ಮೀ. ದೂರದಲ್ಲಿ ಬರುತ್ತಿರುವ ಕ್ಷಿಪಣಿ ಅಥವಾ ವೈರಿ ವಿಮಾನಗಳನ್ನು ಪತ್ತೆ ಹಚ್ಚಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುವ, ವಿಶ್ವದ ದರ್ಜೆಯ ಸ್ವದೇಶಿ ನಿರ್ಮಿತ ಯುದ್ಧನೌಕೆ ಮೊರ್ಮುಗಾವೋ.
- ಈ ಅತ್ಯಾಧುನಿಕ ಕ್ಷಿಪಣಿಗಳನ್ನು ಅಳವಡಿಸಿದ ಸಂಪೂರ್ಣ ಸ್ವದೇಶಿ ನಿರ್ಮಿತ ವಿಶ್ವ ದರ್ಜೆಯ ಯುದ್ಧ ನೌಕೆಯನ್ನು ‘ಮರ್ಮಗೋವಾ’ವನ್ನು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸನೀಲ್ ಲಾಂಬಾ ಅವರಿಂದ ಶನಿವಾರ ಮುಂಬೈನಲ್ಲಿ ಉದ್ಘಾಟನೆಗೊಂಡಿತು.
- ಸರ್ಕಾರಿ ಒಡೆತನದ ಮುಂಬೈನ ಮಜಗಾಂವ್ ಹಡಗುಗಟ್ಟೆಯಲ್ಲಿ ಇದನ್ನು ನಿರ್ಮಿಸಲಾಗಿದ್ದು, ಐಎನ್ಎಸ್ ವಿಶಾಖಪಟ್ಟಣಂ ಶ್ರೇಣಿಗೆ ಈ ಹಡಗು ಸೇರುತ್ತದೆ. 15ಬಿ ಯೋಜನೆಯಡಿ ನಿರ್ಮಿಸ ಲಾದ ಈ ನೌಕೆಯನ್ನು ಲಾಂಬಾ ಅವರು ಪತ್ನಿ ರೀನಾ ಜತೆ ಉದ್ಘಾಟನೆ ಮಾಡಿದ ನಂತರ ಅರಬ್ಬಿ ಸಮುದ್ರದಲ್ಲಿ ಪರೀಕ್ಷಾರ್ಥ ಸಂಚಾರಕ್ಕೆ ಬಿಡಲಾಯಿತು. ಕೆಲವು ಪರೀಕ್ಷೆಗಳನ್ನು ನಡೆಸಿದ ನಂತರ ಈ ಯುದ್ಧ ನೌಕೆಯನ್ನು ಅಧಿಕೃತವಾಗಿ ನೌಕಾಪಡೆಗೆ ಸೇರಿಸಿ ಕೊಂಡು ‘ಐಎನ್ಎಸ್ ಮರ್ಮಗೋವಾ’ಅಥವಾ ಮೊರ್ಮುಗಾವೋ (Mormugao) ಎಂದು ಕರೆಯಲಾಗುತ್ತದೆ.ಈ ನೌಕೆಗೆ "ಮೊರ್ಮುಗಾವೋ' (ಗೋವಾ ಬಂದರಿನ ಹೆಸರು) ಎಂದು ನಾಮಕರಣ ಮಾಡಲಾಗಿದೆ.
ಫೋಟೊ:[[೧]]
ಸಾಮರ್ಥ್ಯ
[ಬದಲಾಯಿಸಿ]- 7,300 ಟನ್ ಭಾರ ಇರುವ ಈ ನೌಕೆ ಗಂಟೆಗೆ 30 ನಾಟಿಕಲ್ ಮೈಲಿಗಿಂತಲೂ (55 ಕಿ.ಮೀ) ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ. ಹಡಗಿನಿಂದ ಹಡಗಿಗೆ, ಹಡಗಿನಿಂದ ವಿಮಾನಕ್ಕೆ ಮತ್ತು ಹಡಗಿನಿಂದ ಜಲಾಂತರ್ಗಾಮಿಗೆ ಕ್ಷಿಪಣಿ ದಾಳಿ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದಲ್ಲದೆ ಜಲಾಂತರ್ಗಾಮಿಗಳನ್ನು ನಾಶ ಮಾಡುವ ಸಾಮರ್ಥ್ಯದ ಎರಡು ಹೆಲಿಕಾಪ್ಟರ್ಗಳನ್ನು ಈ ನೌಕೆ ಹೊಂದಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ತಜ್ಞರು, ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ತಜ್ಞರು ಈ ನೌಕೆಯ ವಿನ್ಯಾಸಕ್ಕೆ ಶ್ರಮಿಸಿದ್ದಾರೆ. ಈ ಶ್ರೇಣಿಯ ಮೊದಲ ಯುದ್ಧ ನೌಕೆ ವಿಶಾಖಪಟ್ಟಣಂನ್ನು 2015ರ ಏಪ್ರಿಲ್ 20ರಂದು ನೌಕಾಪಡೆಗೆ ಸೇರಿಸಿಕೊಳ್ಳಲಾಗಿದೆ. ಇದೇ ಶ್ರೇಣಿಯ ಇನ್ನೂ ನಾಲ್ಕು ನೌಕೆಗಳನ್ನು 2020–24ರ ಅವಧಿಯಲ್ಲಿ ನಿರ್ಮಿಸಿ ನೌಕಾಪಡೆಗೆ ಸೇರಿಸಿಕೊಳ್ಳುವ ಯೋಜನೆ ಇದೆ.
- ರಾಡಾರ್ಗಳ ಕಣ್ತಪ್ಪಿಸಿ ನುಗ್ಗಿ ಸುಮಾರು 100 ಕಿ.ಮೀ. ದೂರದಲ್ಲಿ ಬರುತ್ತಿರುವ ಕ್ಷಿಪಣಿ ಅಥವಾ ವೈರಿ ವಿಮಾನಗಳನ್ನು ಪತ್ತೆ ಹಚ್ಚಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುವ, ವಿಶ್ವದ ದರ್ಜೆಯ ಸ್ವದೇಶಿ ನಿರ್ಮಿತ ಯುದ್ಧನೌಕೆ.[೧]
ವೆಚ್ಚ
[ಬದಲಾಯಿಸಿ]- ಒಟ್ಟು 29,700 ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕು ನೂತನ ಯುದ್ಧನೌಕೆ ತಯಾರಾಗಲಿದ್ದು, ಈ ಶ್ರೇಣಿಯನೌಕೆಗಳಲ್ಲಿ "ಮೊರ್ಮುಗಾವೋ' ಒಂದಾಗಿದೆ. ಸರಿಸುಮಾರು ಈ ಒಂದೇ ಯುದ್ಧನೌಕೆಯ ವೆಚ್ಚ ಸುಮಾರು 7 ಸಾವಿರ ಕೋಟಿ ರೂ. ಆಗಲಿದೆ. ಈ ಹಿಂದೆ ಐಎನ್ಎಸ್ ವಿಶಾಖಪಟ್ಟಣಂ ಎಂಬ ಯುದ್ಧನೌಕೆಯನ್ನು ಕಳೆದ ವರ್ಷ ಲೋಕಾರ್ಪಣೆ ಮಾಡಲಾಗಿತ್ತು. ಮಜಗಾಂವ್ ಡಾಕ್ಶಿಪ್ ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ…) 15ಬಿ ಪ್ರಾಜೆಕ್ಟ್ ಅಡಿಯಲ್ಲಿ ಈ ನೌಕೆಯನ್ನು ನಿರ್ಮಿಸಿದೆ. ಈ ಯುದ್ಧನೌಕೆಯನ್ನು ನೌಕಾಪಡೆಯಲ್ಲಿ 2020ಕ್ಕೆ ಮುನ್ನ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತದೆ.
ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ ನೌಕಾಪಡೆ ಬಲವೃದ್ಧಿಗೆ ‘ಮರ್ಮಗೋವಾ’18 Sep, 2016
- ↑ "100 ಕಿಮೀ ದೂರದಲ್ಲೇ ಕ್ಷಿಪಣಿ ಹೊಡೆವ ಯುದ್ಧನೌಕೆ; Sep 18, 2016". Archived from the original on ಸೆಪ್ಟೆಂಬರ್ 19, 2016. Retrieved ಸೆಪ್ಟೆಂಬರ್ 18, 2016.
- ↑ Mormugao, Indian Navy’s advanced guided missile destroyer, launched in Mumbai