ಸದಸ್ಯ:SamsonD993/sandbox/1
ಲೇಸರ್: ಇದರ ವಿಸ್ತ್ರುತ ರೂಪ ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮುಲೇಟೆಡ್ ಎಮಿಷನ್ ಆಫ್ ರೇಡಿಯೇಶನ್ ಅಂದರೆ ವಿಕಿರಣ ಚೋದಿತ ಉತ್ಸರ್ಜನೆಯಿಂದ ಬೆಳಕಿನ ವರ್ಧನೆ.
ನೂತನ ಜೀವನದಲ್ಲಿ ಕೈಗಾರಿಕೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಲೇಸರ್ ಸಾಕಷ್ಟು ಬದಲಾವಣೆ ತಂದಿದೆ. ಲೇಸರ್ ಕೂಡ ಒಂದು ವಿದ್ಯುತ್ ಕಾಂತೀಯ ವಿಕಿರಣ. ಇದು ವಿಶೇಷವಾದ ಶಿಸ್ತುಬದ್ಧ ಬೆಳಕು ಅಂದರೆ ಲೇಸರ್ ನಲ್ಲಿರುವ ಎಲ್ಲಾ ಫೋಟಾನ್ ಗಳು ಒಂದೇ ಆವೃತ್ತಿಯನ್ನು ಹೊಂದಿರುತ್ತವೆ.
ಲೇಸರ್ ವಿಧಗಳು:
1)ಘನ-ಸ್ಥಿತಿ ಲೇಸರ್ 2)ಅನಿಲ ಲೇಸರ್ 3)ಎಕ್ಸಮೈಲ್ ಲೇಸರ್ 4)ಬಣ್ಣದ ಲೇಸರ್ ಗಳು 5)ಅರೆವಾಹಕ ಲೇಸರ್
ಹೀಲಿಯಂ-ನಿಯಾನ್ ಲೇಸರ್:
ಈ ಲೇಸರ್ ಅನಿಲ ಲೇಸರ್ ಗೆ ಉದಾಹರಣೆ. ಹೀಲಿಯಂ-ನಿಯಾನ್ ಲೇಸರ್ ನಲ್ಲಿ ಚಿಕ್ಕ ವಿಸರ್ಜನಾ ನಳಿಕೆ ಇರುತ್ತದೆ. ಅದರಲ್ಲಿ ೧0:೧ ಅನುಪಾತದಲ್ಲಿ ಹೀಲಿಯಂ ನಿಯಾನ್ ಅನಿಲಗಳ ಮಿಶ್ರಣವನ್ನು ತುಂಬಿರುತ್ತಾರೆ. (ಕೊಳವೆಯಲ್ಲಿ ಒತ್ತಡವನ್ನು ಪಾದರಸದ ೧:೨ನಷ್ಟು ಪೋಷಣೆ ಮಾಡಬೇಕು.) ಒಂದು ತುದಿಗೆ ಪೂರ್ಣ ಪ್ರತಿಫಲನ ನೀಡುವ ಸಮತಲ ದರ್ಪಣ ಮತ್ತು ಇನ್ನೊಂದು ತುದಿಗೆ ಭಾಗಶಃ ಪ್ರತಿಫಲನ ನೀಡುವ ದರ್ಪಣವನ್ನು ಪರಸ್ಪರ ಸಮಾಂತರವಾಗಿರುವಂತೆ ಎರಡು ದರ್ಪಣಗಳನ್ನು ಜೋಡಿಸಬೇಕು. ಅನಿಲಗಳ ಮಿಶ್ರಣವನ್ನು ನೇರ ವಿದ್ಯುತ್ ಪ್ರವಾಹ ಹರಿಸಿ ಅಯಾನೀಕರಿಸಲಾಗುತ್ತದೆ. ಇದು ಸಂದಣಿ ವಿಲೋಮನ ಕ್ರಿಯೆಯನ್ನು ಉಂಟು ಮಾಡುತ್ತದೆ. ಚೋದಿತ ಉತ್ಸರ್ಜನೆಯಿಂದ ಬಿಡುಗಡೆಯಾದ ಪೋಟಾನ್ ದರ್ಪಣಗಳಿಗೆ ಲಂಬವಾಗಿ ಚಲಿಸಿ, ಪ್ರತಿಫಲಿಸಿ ಹಿಂದಕ್ಕೂ ಮುಂದಕ್ಕೂ ಚಲಿಸುತ್ತಿರುತ್ತದೆ. ಹೀಗೆ ಅನೇಕ ಪ್ರತಿಫಲನಗಳಿಂದ ಬೆಳಕಿನ ತೀವ್ರತೆ ಹೆಚ್ಚಾಗುತ್ತದೆ. ತೀವ್ರತೆಯು ಒಂದು ನಿರ್ದಿಷ್ಟ ಮಟ್ಟವನ್ನು ತಲುಪಿದ ನಂತರ ಬೆಳಕು ಭಾಗಶಃ ಪ್ರತಿಫಲಿಸುವ ದರ್ಪಣದ ಮೂಲಕ ಸತತವಾಗಿ ಒಂದು ಶಕ್ತಿಶಾಲಿ ಏಕವರ್ಣೀಯ ಪುಂಜವಾಗಿ ಹೊರಬರುತ್ತದೆ.