ವಿಷಯಕ್ಕೆ ಹೋಗು

ಸದಸ್ಯ:Sachidananda79/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಚಿತ್ರದುರ್ಗ

ಚಿತ್ರದುರ್ಗವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ,ಅವುಗಳಲ್ಲಿ ಉಕ್ಕಿನ ಕೋಟೆ-ಏಳುಸುತ್ತಿನ ಕೋಟೆ ಎಂಬ ಎರಡು ಹೆಸರುಗಳು ಪ್ರಮುಖವಾಗಿವೆ.ಬ್ರಿಟೀಷರು ಚಿತ್ರದುರ್ಗವನ್ನು ಚಿತಾಲ್ ದುರ್ಗ(chitaldoorg)ಎಂದು ಕರೆದರು.ಚಿತ್ರದುರ್ಗವು ಕ್ರಿ.ಪೂ ದಿಂದಲೂ ಹಂತಹಂತವಾಗಿ ವಿಕಾಸವಾಗಿದೆ. ಚಿತ್ರದುರ್ಗದ ಬೆಟ್ಟದ ಮೇಲ್ಭಾಗವು ಚಪ್ಪಟೆಯಾಗಿ ಕಣಿವೆಯಾಕಾರದಲ್ಲಿದೆ.ಚಿತ್ರದುರ್ಗದ ಪ್ರಾಚೀನ ಹೆಸರು ಚಿತ್ರಕಲ್ ದುರ್ಗ ಅಂದರೆ ಚಿತ್ರಸದೃಶ-ಆಕರ್ಷಕ ಎಂದರ್ಥ. ಹಾಗಾಗಿಈ ದುರ್ಗಕ್ಕೆ ಚಿತ್ತಾರದದುರ್ಗ-ಚಿತ್ರದುರ್ಗ ಎಂಬ ಹೆಸರು ಬಂದಿದೆ.ಚಿತ್ರದುರ್ಗ ಬೆಟ್ಟದ ತಪ್ಪಲಲ್ಲಿರುವ ಸ್ಥಳಕ್ಕೆ ಚಿತ್ರದುರ್ಗ ಎಂದು ಹೆಸರಿಸಿದ್ದು ಜಿಲ್ಲಾ ಕೇಂದ್ರವಾಗಿ ಗುರ್ತಿಸಲಾಗಿದೆ.

ಚಿತ್ರದುರ್ಗವು ಪ್ರಾಚೀನ ಇತಿಹಾಸವನ್ನು ಹೊದಿದ್ದರೂ,೧೭-೧೮ ನೇ ಶತಮಾನದಲ್ಲಿ ಸ್ಥಳೀಯ ನಾಯಕ ವಂಶದವರು ಚಿತ್ರದುರ್ಗ ಕೋಟೆಯನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಿದರು. ಈ ಸ್ಥಳೀಯ ನಾಯಕ ವಂಶದವರು ವಿಜಯನಗರದ ಅರಸರಿಗೆ ಸಾಮಂತರಾಗಿದ್ದರು.೧೫-೧೬ ನೇ ಶತಮಾನದಲ್ಲಿದ್ದ ಸ್ಥಳೀಯ ನಾಯಕರು ಅಥವಾ ಪಾಳ್ಳೇಗಾರರು ಚಿತ್ರದುರ್ಗ ಕೋಟೆಯ ವರ್ಧನೆಗೆ ಬುನಾಧಿಯನ್ನು ಹಾಕಿದರು.೧೮ನೇ ಶತಮಾನದಲ್ಲಿ ಚಿತ್ರದುರ್ಗ ಕೋಟೆಯು ಬಹುಪಾಲು ಪೂರ್ಣಗೊಂಡಿತು.

ಹೈದರಾಲಿಯ ನಂತರ ಇವನ ಮಗನಾದ ಟಿಪ್ಪು ಸುಲ್ತಾನ್ ಐದನೇ ಮದಕರಿನಾಯಕನ ನಂತರ ಉತ್ತರಾಧಿಕಾರಿಯಾದನು.ನಾಯಕ ವಂಶದವರಲ್ಲಿ ಐದನೇ ಮದಕರಿನಾಯಕನೇ ಕೊನೆಯವನು.ಈ ಏಳುಸುತ್ತಿನ ಕೋಟೆಯಲ್ಲಿ ವಿಶಾಲವಾದ ಮಾರ್ಗಗಳು,ದವಸ ಧಾನ್ಯಗಳ ಗೋಧಾಮುಗಳು,ಎಣ್ಣೆ ಕೊಳಗಳು,ನೀರಿನ ಹೊಂಡಗಳು,ಮಸೀದಿ-ದೇವಸ್ಥಾನಗಳೂ ಇವೆ.ಅತ್ಯಂತ ಹಳೆಯದಾದ ಹಾಗು ಆಕರ್ಷಕವಾದ ಹಿಡಿಮಬೇಶ್ವರ ದೇವಾಲಯವಿದೆ ಹಾಗು ಮಳೆನೀರನ್ನು ಸಂಗ್ರಹಿಸಿ ಪುನರ್ಬಳಕೆ ಮಾಡಲು ಅಂತರ್ ಸಂಬಂಧ ಹೊಂದಿರುವ ಕೆರೆಯ ಹೊಂಡಗಳಿವೆ,ಹಾಗಾಗಿ ಚಿತ್ರದುರ್ಗದ ಕೋಟೆ-ಏಳುಸುತ್ತಿನ ಕೋಟೆಯಲ್ಲಿ ಉಕ್ಕಿನ ಕೋಟೆಯಲ್ಲಿ,