ವಿಷಯಕ್ಕೆ ಹೋಗು

ಸದಸ್ಯ:Sachidananda79

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು - ಡಾ.ಸಚ್ಚಿದಾನಂದ ಜಮದಗ್ನಿ.ಉಪನ್ಯಾಸಕರಾಗಿ ಸಿ.ಟಿ.ಇ ಕಾಲೆಜು ಚಿತ್ರದುರ್ಗ ಇಲ್ಲಿ ಆರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ.ನನ್ನ ವಿದ್ಯಾರ್ಹತೆ ಎಂ.ಎ: ಎಂ.ಫಿಲ್: ಎಂ ಎಸ್ ಸಿ ಪಿ:ಎಂ ಎಡ್: ಪಿ.ಹೆಚ್.ಡಿ. ನನ್ನ ಜನ್ಮ ದಿನಾಂಕ ೦೮-೧೨-೧೯೬೪. ನನ್ನ ಬೋಧನಾ ಅನುಭವ ಷಿಕ್ಷಣ ಇಲಾಖೆಯ ವಿವಿಧ ಹುಧ‍್ದೆಗಳಲ್ಲಿ ಇಪ್ಪತ್ತು ವರ್ಷಗಳು. ನನ್ನ ಷಿಕ್ಷಣದ ಐಚ್ಛಿಕ ವಿಷಯಗಳು -ಯೋಗ, ತತ್ವಜ್ಞಾನ,ಕೌನ್ಸೆಲಿಂಗ್,ಭಾಷಾ ತರಬೇತಿ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು..... ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಗಳಿಸಿದೆನು.ಜೀವನ ವಿಜ‍್ಞಾನ ವಿಷಯದಡಿ ರಾಜ್ಯದಾದ್ಯಂತ ಸಹಸ್ರಾರು ಪ್ರಾಥಮಿಕ ಶಿಕ್ಷಕರಿಗೆ ತರಬೇತಿ ನೀಡಿರುತ್ತೇನೆ.

ಭಾಷಾ ವಿಷಯಗಳಾದ ಆಂಗ್ಲ ಹಾಗು ಕನ್ನಡದಲ್ಲಿ ಸಾವಿರಾರು ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿ ತರಬೇತಿ ನೀಡಿರುತ್ತೇನೆ. ಆರ್ ಐ ಈ ಬೆಂಗಳೂರು ಹಾಗು ಡಿ ಎಸ್ ಇ ಆರ್ ಟಿ ಬೆಂಗಳೂರು ಇಲ್ಲಿ ಎಸ್ಎಸ್ಎಲ್ಸಿ ಪ್ರಶ್ನಕೋಠಿ ತಯಾರಿಕೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಸಿದ್ಧಪಡಿಸಲಾಯಿತು.

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸಮನ್ವಯ ಸಮಿತಿಯ ಸದಸ್ಯನಾಗಿ ಬಿ ಎಡ್ ಕಾಲೆಜುಗಳ ನವೀಕರಣ ಸಮಿತಿಯ ಸದಸ್ಯನಾಗಿ ಹಾಗು ಬಿ ಎಡ್ ಪ್ರಶ್ನಪತ್ರಿಕೆಯನ್ನು ಸಿದ್ಧಪಡಿಸುವಲ್ಲಿ ಹಾಗು ಉತ್ತರ ಪತ್ರಿಕೆಗಳ ಮೌಲ್ಯಮಾಪಕನಾಗಿ ಕಾರ್ಯ ನಿರ್ವಹಿಸಿರುತ್ತೇನೆ.