ಗೇಬ್ರಿಯೆಲೊ ಕ್ಯಾಬ್ರರಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೇಬ್ರಿಯೆಲೊ ಕ್ಯಾಬ್ರರಾ

ಗೇಬ್ರಿಯೆಲೊ ಕ್ಯಾಬ್ರರಾ (ಜೂನ್ 8, 1552 – ಒಕ್ಟೋಬರ್ 14, 1638) . ಇಟಲಿಯ ಕವಿ.ಇವರು ಇಟಲಿಯ ಸವೋನದಲ್ಲಿ ಜನಿಸಿದರು.ಇವರು ರೋಮ್ ನಲ್ಲಿ ವಾಸವಾಗಿದ್ದರು,ಆದರೆ ತನ್ನ ಚಿಕ್ಕಪ್ಪನವರು ತೀರಿಕೊಂಡಾಗ ಸವೋನಾಗೆ ಬಂದಿದ್ದರು ನಂತರ ಕೆಲ ದಿನಗಳಲ್ಲಲ್ಲೆ ರೋಮ್ ಗೆ ವಾಪಸ್ಸಾದರು. ತನ್ನ ಕಾಲದ ರಾಜರುಗಳನೇಕರ ಕೃಪಾದೃಷ್ಟಿಗೆ ಪಾತ್ರನಾಗಿ ಸುಖಜೀವನವನ್ನು ನಡೆಸಿದವ. ಭಾವಗೀತೆಯ ರಚನೆಯಲ್ಲಿ ನೂತನ ಪ್ರಯೋಗಗಳನ್ನು ಮಾಡಿದ್ದಾನೆ. ಪಿಂಡಾರ್ ಕವಿಯನ್ನು ಅನುಸರಿಸಿ ಬರೆದ ಹಲವು ವಿಡಂಬನ ಕಾವ್ಯಗಳಲ್ಲಿ ಮತ್ತು ಲಘುಕವನಗಳಲ್ಲಿ ಈತನ ಕಲಾಪ್ರೌಢಿಮೆ ವ್ಯಕ್ತವಾಗಿದೆ. ವಡ್ರ್ಸ್‍ವರ್ತ್ ಕವಿ ಈತನನ್ನು ಬಹಳವಾಗಿ ಮೆಚ್ಚಿಕೊಂಡು ಈತನ ಕೆಲವು ಚರಮವಾಕ್ಯಗಳನ್ನು ಅನುವಾದಿಸಿದ್ದಾನೆ.ತನ್ನ ಆಯ್ಕೆಯ ಕವಿಗಳು ಪಿಂಡಾರ್ ಮತ್ತು ಅನಕ್ರೀಯಾನ್ ಆಗಿದ್ದರು, ಮತ್ತು ಈ ಅಧ್ಯಯನವನ್ನು ಎಲ್ಲಿಯವರೆಗೆ ಮುಂದುವರೆಸಿದನೆಂದರೆ,ತನ್ನ ನಾಲಿಗೆಯಲ್ಲಿ ಲಯ ಮತ್ತು ರಚನೆಗಳು ಸಂತಾನೋತ್ಪತ್ತಿ ಆಗುವವರೆಗು ತನ್ನ ಮಹತ್ವಾಕಾಂಕ್ಷೆಯನ್ನು ಬೆಳೆಸಿಕೊಂಡನು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]