ವಿಷಯಕ್ಕೆ ಹೋಗು

ಕೊಂಡನ್ ಮೀನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Slender rainbow sardine
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
D. elopsoides
Binomial name
Dussumieria elopsoides
(Bleeker, 1849)

ಕೊಂಡನ್ ಮೀನು ಬೈಗೆ (ಸಾರ್ಡಿನ್) ಜಾತಿಗೆ ಸೇರಿದ ಒಂದು ಬಗೆಯ ಎಲುಬು ಮೀನು. ಇದರ ವೈಜ್ಞಾನಿಕ ಹೆಸರು ದಸುಮಿಯೆರ ಹ್ಯಾಸೆಲ್ಟಿಯೈ.

ಭೌಗೋಳಿಕ

[ಬದಲಾಯಿಸಿ]

ಭಾರತದ ಕೋರಮಂಡಲ ತೀರದಿಂದ ಮಲಯದ್ವೀಪ ಸಮುದಾಯದ ವರೆಗೂ ಮತ್ತು ಆಸ್ಟ್ರೇಲಿಯ, ಜಪಾನ್, ಈಸ್ಟ್ ಇಂಡೀಸ್ ಹಾಗೂ ಚೀನದ ಸಮುದ್ರ ತೀರಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ.

ಲಕ್ಷಣಗಳು

[ಬದಲಾಯಿಸಿ]

ಇದರ ಉದ್ದ ಸುಮಾರು 8(. ತಲೆಯ ಉದ್ದವೇ 4 1/2 (-5( ಗಳಷ್ಟಿರುತ್ತದೆ. ದೇಹ ಪಕ್ಕದಿಂದ ಪಕ್ಕಕ್ಕೆ ಚಪ್ಪಟೆಯಾಗಿದೆ. ತಲೆಯ ಮೇಲ್ಭಾಗವನ್ನು ಬಿಟ್ಟು ದೇಹದ ಮೇಲೆಲ್ಲ ಅಸ್ಥಿರವಾದ ಹುರುಪೆಗಳಿವೆ. ಬಾಯಿ ಅಗಲ. ಮೇಲಿನ ಹಾಗೂ ಕೆಳಗಿನ ದವಡೆಗಳು ಮುಂಭಾಗದಲ್ಲಿ ಒಂದೇ ಸಮನಾಗಿ ಚಾಚಿರಬಹುದು, ಇಲ್ಲವೆ ಕೆಳದವಡೆ ಸ್ವಲ್ಪ ಮುಂದಕ್ಕೆ ಚಾಚಿ ಕೊಂಡಿರಬಹುದು. ಹಲ್ಲುಗಳೂ ದವಡೆಗಳಲ್ಲಿ ಮಾತ್ರವಲ್ಲದೆ ಪ್ಯಲಟೈನ್ ಮತ್ತು ಟೆರಿಗಾಯಿಡ್ ಮೂಳೆಗಳಲ್ಲೂ ಇರುತ್ತವೆ. ಬೆನ್ನಿನ ಮೇಲಿರುವ ಒಂದೇ ಒಂದು ಈಜುರೆಕ್ಕೆ ಕಣ್ಣಿನ ಕೊನೆಯ ಭಾಗದಿಂದ ಬಾಲದ ವರೆಗೂ ವಿಸ್ತರಿಸಿದೆ. ಉದರದ ಕೆಳಭಾಗ ಹಾಗೂ ಎದೆಯ ಭಾಗಗಳಲ್ಲಿಯೂ ಈಜು ರೆಕ್ಕೆಗಳಿವೆ. ಕೊಂಡನ್ ಮೀನು ಕಿವಿರುಗಳ ಸಹಾಯದಿಂದ ಉಸಿರಾಡುತ್ತದೆ. ಕಿವಿರುಗಳ ಜೊತೆಗೆ ಸರಳವಾದ ದೊಡ್ಡದಾದ ಗಾಳಿಯ ಚೀಲವೂ ಇದೆ. ಈ ಚೀಲ ಸಾಮಾನ್ಯವಾಗಿ ಮೂತ್ರಪಿಂಡಗಳ ತಳ ಭಾಗಕ್ಕೆ ಅಂಟಿಕೊಂಡು ಅನ್ನಕೋಶದ ಮೇಲ್ಭಾಗದಲ್ಲಿ ಬೆನ್ನೆಲುಬಿಗೆ ತಾಗಿಕೊಂಡಂತಿದೆ. ಈ ಚೀಲದಲ್ಲಿ ಆಕ್ಸಿಜನ್, ನೈಟ್ರೊಜನ್ ಮತ್ತು ಸ್ವಲ್ಪ ಕಾರ್ಬಾನಿಕ್ ಆಮ್ಲ ಇವೆ. ಚೀಲದ ಸಣ್ಣದಾದ ಮುಂಭಾಗ ತಲೆಯ ಹಿಂಭಾಗದ ಬೇಸಿಆಕ್ಸಿಪೀಟಲ್ ಮೂಳೆಯಲ್ಲಿರುವ ನಾಳವನ್ನು ಪ್ರವೇಶಿಸಿ ಎರಡು ಕವಲುಗಳಾಗಿ ಒಡೆದು ಅನಂತರ ಮೂಳೆಯ ಒಳಗಡೆ ಉಬ್ಬಿಕೊಂಡು ಮತ್ತೆ ಎರಡಾಗಿ ಒಡೆದು, ದುಂಡಗೆ ಉಬ್ಬಿದ ಚೀಲಗಳಾಗಿ ರೂಪುಗೊಂಡಿದೆ. ಈ ಚೀಲಗಳಿಗೂ ಒಳಕಿವಿಯಲ್ಲಿರುವ ಯುಟ್ರಿಕಲ್ ಎಂಬ ಅಂಗಕ್ಕೂ ಒಂದು ನಾಳದ ಮೂಲಕ ಸಂಪರ್ಕ ಕಲ್ಪಿತವಾಗಿದೆ. ದೇಹದ ಎರಡು ಕಡೆಯ ಯುಟ್ರಿಕಲ್‍ಗಳು ಒಂದು ಅಡ್ಡನಾಳದಿಂದ ಪರಸ್ಪರ ಸೇರಿಕೊಂಡಿವೆ. ಇವು ಶಬ್ದವನ್ನು ಗ್ರಹಿಸಲೂ ಅದನ್ನು ಒಳಕಿವಿಗೆ ಕಳುಹಿಸಲೂ ಸಹಾಯ ಮಾಡುತ್ತವೆ. ಸಾಧಾರಣವಾಗಿ ಎಲ್ಲ ಮೀನುಗಳಿಗಿರುವ ಪಾಶ್ರ್ವರೇಖಾ ಜ್ಞಾನೇಂದ್ರಿಯಗಳು ಈ ಮೀನಿನಲ್ಲಿ ಇಲ್ಲ.

ಕೊಂಡನ್ ಮೀನು ವರ್ಣರಂಜಿತವಾಗಿದೆ. ದೇಹದ ಮೇಲ್ಭಾಗದ ಬಣ್ಣ ನೀಲಿ ಮಿಶ್ರಿತ ಹಸಿರು, ಉದರಭಾಗ ಬಿಳಿ, ಕಿವಿರುಗಳ ಮುಚ್ಚಳದ ಮೇಲಿನ ಅಂಚು ಮತ್ತು ಹಿಂಭಾಗ ತಿಳಿನೀಲಿ, ಬಾಲ ನೀಲಿಹಸಿರು ಮಿಶ್ರಿತ ಬಂಗಾರದ ಬಣ್ಣ, ಕಣ್ಣು, ಬೆನ್ನಿನ ಈಜುರೆಕ್ಕೆ ಹಳದಿಮಿಶ್ರಿತ ಹಸಿರು, ಉಳಿದ ಈಜು ರೆಕ್ಕೆಗಳು ಬಿಳಿ-ಇದರಿಂದಾಗಿ ಕೊಂಡನ್ ಮೀನು ಸುಂದರವಾಗಿ ಕಾಣುವುದಲ್ಲದೆ ಇದಕ್ಕೆ ಕಾಮನ ಬಿಲ್ಲಿನ ಬೈಗೆ ಮೀನು ಎಂಬ ಹೆಸರು ಬಂದಿದೆ. ಇದರ ಆಹಾರ ಸಮುದ್ರದಲ್ಲಿ ತೇಲುವ ಪ್ರಾಣಿ ಹಾಗೂ ಸಸ್ಯಗಳು. ವರ್ಷದ ಕೆಲವು ತಿಂಗಳಲ್ಲಿ ಮಾತ್ರ ಈ ಮೀನು ಹಿಂಡುಹಿಂಡಾಗಿ ಕಾಣಿಸಿಕೊಳ್ಳುತ್ತದೆ. ಇದು ಒಳ್ಳೆಯ ಆಹಾರಮೀನೆಂದು ಹೆಸರಾಗಿದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]