ಡಿಜಿಟಲ್ ಇಂಡಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಿಜಿಟಲ್ ಇಂಡಿಯಾ ಒಂದು ಯೋಜನೆ. ಇದರ ಲಕ್ಶ್ಯ ಭಾರತಕ್ಕೆ ವಿಶ್ವದಲ್ಲೇ ಒಂದು ಅತ್ಯುತ್ತಮ ಸ್ಥಾನಮಾನವನ್ನು ನೀಡುವುದಾಗಿದೆ.ಇದರ ಅಭಿಯಾನ ಪ್ರಸಿದ್ದ ಉದ್ಯೊಗಪತಿಗಳ ಸಮ್ಮುಖದಲ್ಲಿ ೧ ಜುಲೈ ೨೦೧೫ ರಂದು ಇಂಧೋರ್ ನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಶುರುವಾಯಿತು. ಮಾನ್ಯ ಪ್ರಧಾನಿ (ನರೇಂದ್ರ ಮೋದಿ) ಯವರು ಇದರ ಸ್ಥಾಪಕರಾಗಿದ್ದು ಇದಕ್ಕಾಗಿ ಒಂದು ಲಕ್ಷ ಕೋಟಿ ಯನ್ನು ಇದಕ್ಕಾಗಿ ಅನುಮೋದಿಸಿದ್ದಾರೆ.ಇದು ಇವರ ಕನಸಿನ ಕೂಸು ಆಗಿದೆ.ಇದು ೨೦೧೯ ರ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.ಇದು ಸಂಪೂರ್ಣಗೊಂಡಲ್ಲಿ ಭಾರತವು ವಿಶ್ವದಲ್ಲೇ ಸುಪ್ರಸಿದ್ಧವಾಗಲಿದೆ.ಇದು ಭಾರತದ ಕೀರ್ತಿ ಪತಾಕೆಯನ್ನು ಇಡೀ ವಿಶ್ವದಲ್ಲೇ ಹಾರಡಿಸಲಿದೆ ಎಂಬುವುದರಲ್ಲಿ ಇನ್ನೊಂದು ಮಾತಿಲ್ಲ. ಇದು ಭಾರತೀಯ ನಾಗರಿಕರ ಡಿಜಿಟಲ್ ಸಬಲೀಕರಣ ಮಾಡುವುದು ಹಾಗೂ ಮಾಹಿತಿಯನ್ನು ಡಿಜಿಟಲೀಕರಣ ಗೊಳಿಸುವುದು ಇದರ ಪ್ರಮುಖ ಉದ್ಧೇಶವಾಗಿದೆ.ಇದು ಕಾಗದಪತ್ರಗಳ ಕಾರ್ಯ, ಸಮಯ ಮತ್ತು ಮಾನವಶ್ರಮವನ್ನು ಉಳಿಸುವಲ್ಲಿ ಒಂದು ಪ್ರಮುಖ ಪಾತ್ರವಹಿಸಿದೆ. ಸರ್ಕಾರ ಮತ್ತು ಖಾಸಗಿ ವಲಯಗಳ ಒಕ್ಕೂಟದಿಂದಾಗಿ ಈ ಯೋಜನೆಗೆ ಆವೇಗ ಹತ್ತಿಕೊಳ್ಳುತ್ತವೆ. ಹಳ್ಳಿಗಳು ಹೊಂದಿರುವ ಹಿಂದುಳಿದ ಪ್ರದೇಶಗಳನ್ನು ಡಿಜಿಟಲೀಕರಣ ಗೊಳಿಸುವುವುದರಿಂದಾಗಿ ಆ ಹಳ್ಳಿಗಳ ಅಭಿವ್ರುದ್ಧಿ ಸಾಧ್ಯವಾಗಿದೆ ಹಾಗೂ ಭಾರತದ ಎಲ್ಲಾ ನಗರ, ಪಟ್ಟಣ ಮತ್ತು ಹಳ್ಳಿ ಹೆಚ್ಚು ತಾಂತ್ರಿಕವಾಗಿ ಮುಂದುವರಿಯುತ್ತದೆ. ಡಿಜಿಟಲ್ ಇಂಡಿಯಾ ಭಾರತ ಸರ್ಕಾರದ ಒಂದು ಬಹುಮುಖ ಮತ್ತು ಉಪಯುಕ್ತ ಉಪಕ್ರಮವು ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ಆಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]