ಆಗಸ್ಟಿನ್-ಲೂಯಿ ಕೌಚಿ
ಗೋಚರ
ಆಗಸ್ಟಿನ್-ಲೂಯಿ ಕೌಚಿ | |
---|---|
Born | ಆಗಸ್ಟಿನ್-ಲೂಯಿ ಕೌಚಿ ೨೧ ಆಗಸ್ಟ್ ೧೭೮೯ ಫ್ರಾನ್ಸ್ |
Nationality | ಫ್ರಾನ್ಸ್ |
ಫ್ರಾನ್ಸಿನ ಗಣಿತಶಾಸ್ತ್ರಜ್ಞರಾಗಿದ್ದ ಆಗಸ್ಟಿನ್-ಲೂಯಿ ಕೌಚಿರವರು ೧೭೮೯ರ ಆಗಸ್ಟ್ ೨೧ರಂದು ಪ್ಯಾರಿಸ್ಸಿನಲ್ಲಿ ಜನಿಸಿದರು. ೧೮೪೮ರಲ್ಲಿ ಕೌಚಿಯವರು ಪ್ಯಾರಿಸ್ಸಿನ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರೀಯ ಖಗೋಳವಿಜ್ಞಾನದ (mathematical astronomy) ವಿಭಾಗದಲ್ಲಿ ಪ್ರೊಫೆಸರ್ ಆಗಿ ನೇಮಕಗೊಂಡರು. ಕೌಚಿಯವರು ದೀರ್ಘವೃತ್ತ ಫಲನಗಳ (elliptic functions) ಅಸ್ತಿತ್ವವನ್ನು ದೃಢಪಡಿಸಿದರು. ಹಾಗೆಯೇ ಫಲನಗಳ ಸಾಮಾನ್ಯ ಸಿದ್ಧಾಂತಕ್ಕೆ (general theory of functions) ಚಾಲನೆ ನೀಡಿದರು ಮತ್ತು ಅನಂತ ಸರಣಿಯ ಪರಿಚ್ಛಿನ್ನತೆಯ (convergence of infinite series) ಆಧುನಿಕತೆಗೆ ತಳಹದಿ ಹಾಕಿದರು. ರೇಖೀಯ ಅವಕಲ ಸಮೀಕರಣದ ಅನುಕಲನದ (integration of linear differential equations) ವಿಧಾನವನ್ನು ಕೌಚಿಯವರು ಪರಿಪೂರ್ಣತೆಯ ಹಂತಕ್ಕೆ ತಂದರು. ಶೇಷಗಳ ಕಲನಶಾಸ್ತ್ರವನ್ನು (calculus of residues) ಅವರು ಸಂಶೋಧಿಸಿದರು.[೧] ಕೌಚಿಯವರು ೧೮೫೭ರ ಮೇ ೨೩ರಂದು ಸಿಯೋಕ್ಸ್‌ನಲ್ಲಿ ನಿಧನರಾದರು.
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2016-03-23. Retrieved 2016-04-21.