ಅವಲಕ್ಕಿ ಕುಟ್ಟುವುದು
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಪಿಲಿಕುಳದಲ್ಲಿ ಆರಂಭಗೊಂಡ ಅವಲಕ್ಕಿ ತಯಾರಿಕ ಘಟಕವು ೧೦ ವರ್ಷಗಳ ಹಿಂದೆ ಆರಂಭಗೊಂಡಿತ್ತು. ಗ್ರಾಮ ಸಂಸ್ಕೃತಿಯನ್ನು ಉಳಿಸುವ ದೃಷ್ಟಿಯಿಂದ ಆರಂಭಿಸಲಾಯಿತು. ಹಿಂದೆ ಸುಳ್ಯದ ಕೆಂಚಪ್ಪ ನಾಯಕ್‍ರವರು ತರಬೇತಿಯನ್ನು ನೀಡಿದರು. ಬಳಿಕ ಕೇರಳ ಮೂಲದವರು ಈ ಕೆಲಸವನ್ನು ಮುಂದುವರಿಸಿದ್ದಾರೆ.
ಬಳಕೆಯಾಗುವ ಸಾಧನಗಳು
[ಬದಲಾಯಿಸಿ]- ಮಣ್ಣಿನ ಮಡಿಕೆ.
- ಹಿಡಿಸೂಡಿ(ಕಸಪೊರಕೆ)
- ಅವಲಕ್ಕಿ ಕುಟ್ಟುವ ಸಾಧನ
- ಅವಲಕ್ಕಿ ಹಾಕಲು ಪಾತ್ರೆ
- ಕಟ್ಟಿಗೆ(ಯಾವುದೆ ಮಿತಿಗಳು ಇಲ್ಲ)
ಅವಲಕ್ಕಿವಿಧಗಳು
[ಬದಲಾಯಿಸಿ]- ಪೇಪರ್ ಅವಲಕ್ಕಿ
- ದಪ್ಪ ಅವಲಕ್ಕಿ
ಭತ್ತದ ವಿಧಗಳು
[ಬದಲಾಯಿಸಿ]- ಸ್ಥಳೀಯ ಭತ್ತ.
- ಭತ್ತ ಚಿಕ್ಕದು.
ತಯಾರಿಸುವ ವಿಧಾನ
[ಬದಲಾಯಿಸಿ]ಭತ್ತದ ತಳಿಯನ್ನು ಹೊಂದಿಕೊಂಡು ಬೇಯಿಸಬೇಕು. ೧೦ ರಿಂದ ೧೫ ನಿಮಿಷಗಳಷ್ಟು ಕಾಲ ಬೇಯಿಸಿದ ಬಳಿಕ ಅದನ್ನು ಪ್ರತ್ಯೇಕ ಪಾತ್ರಕ್ಕೆ ಹಾಕಿ ನೀರು ಬಸಿಯುವಂತೆ ಮಾಡಬೇಕು. ಬಳಿಕ ಒಲೆಯ ಮೇಲೆ ಇಟ್ಟಿರುವ ಮಣ್ಣಿನ ಪಾತ್ರೆಯನ್ನು ಬಳಸಿಕೊಂಡು ಅದರಲ್ಲಿ ಭತ್ತವನ್ನು ಹಾಕಿ ಹುರಿಯಬೇಕು. ಬಳಿಕ ಮಂಡಕ್ಕಿಯ ಹದಕ್ಕೆ ಬರುವಾಗ ಅವಲಕ್ಕಿ ಕುಟ್ಟುವ ಯಂತ್ರಕ್ಕೆ ಹಾಕಿ ಸುಮಾರು ೧೦ ನಿಮಿಷಗಳ ಕಾಲ ಕುಟ್ಟಬೇಕು. ಜೊತೆಗೆ ಕೈ ಹಾಕಿ ತಿರುವುತ್ತಿರಬೇಕು. ಕೊನೆಗೆ ಅವಲಕ್ಕಿ ಸಿದ್ಧವಾಗಿರುತ್ತದೆ. ಒಂದು ದಿನಕ್ಕೆ ೩ ರಿಂದ ೫ ಕೆ.ಜಿ.ಯ ವರೆಗೆ ಅವಲಕ್ಕಿಯನ್ನು ತಯಾರಿಸಬಹುದು.