ವಿಷಯಕ್ಕೆ ಹೋಗು

ಕುಚ್ಚು ಮೀನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಚ್ಚು ಮೀನು
Chiana striata, after Bleeker, 1879
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
C. striata
Binomial name
Channa striata
(Bloch, 1793)
Distribution of Channa striata.[] Madagascar reports are misidentifications of C. maculata
Synonyms[]
  • Ophiocephalus striatus Bloch
  • Ophiocephalus vagus Peters

ಕುಚ್ಚು ಮೀನು ಹಾವಿನ ತಲೆಯಂತಹ ತಲೆ ಇರುವ ಒಂದು ಜಾತಿಯ ಮೀನು. ಇದಕೆ ಮರಲ್ ಎಂದೂ ಕರೆಯುತ್ತಾರೆ.

ವೈಜ್ಞಾನಿಕ ವರ್ಗೀಕರಣ

[ಬದಲಾಯಿಸಿ]

ಓಫಿಯೋಸೆಫಾಲಿq ಅಥವಾ ಚಾನಿಡೆ ಕುಟುಂಬಕ್ಕೆ ಓಫಿಯೊಸೆಫಾಲಸ್ ಸ್ಟ್ರೈಯೇಟಸ್ ಎಂಬ ವೈಜ್ಞಾನಿಕ ಹೆಸರಿನ ಮೀನು.

ಭೌಗೋಳಿಕ ಹರಡುವಿಕೆ

[ಬದಲಾಯಿಸಿ]

ಕುಚ್ಚು ಮೀನು ದಕ್ಷಿಣ ಏಷಿಯಾ,ಆಗ್ನೇಯ ಏಷ್ಯಾ ಭಾಗಗಳಲ್ಲಿ ಸ್ವಾಭಾವಿಕವಾಗಿದ್ದರೆ,ಕೆಲವು ಫೆಸಿಫಿಕ್ ಸಾಗರ ದ್ವೀಪಗಳಲ್ಲಿಯೂ ಕಂಡು ಬರುತ್ತವೆ.[]

ಲಕ್ಷಣಗಳು

[ಬದಲಾಯಿಸಿ]

ಇದಕ್ಕೆ ಹಾವಿನ ತಲೆಯಂಥ ತಲೆಯಿದೆ. ಇದರಿಂದಲೇ ಇದಕ್ಕೆ ಓಫಿಯೊಸೆಫಾಲಸ್ ಎಂಬ ಹೆಸರು (ಓಯೊಸ್ ಎಂದರೆ ಹಾವು, ಸೆಫಾಲಸ್ ಎಂದರೆ ತಲೆ), ಈ ಮೀನಿನ ತಲೆಯಲ್ಲಿ ಅನೇಕ ಕುಹರಗಳಿದ್ದು ಅವು ಹೆಚ್ಚುಕಡಿಮೆ ಶ್ವಾಸಕೋಶಗಳಂತೆಯೇ ನೇರವಾಗಿ ಗಾಳಿಯ ಉಸಿರಾಟಕ್ಕೆ ಸಹಕಾರಿಯಾಗಿವೆ. ಇದರಿಂದಾಗಿ ಈ ಮೀನು ನೀರಿನ ಹೊರಗೂ ಬಹಳ ಕಾಲ ಜೀವಂತವಾಗಿರಬಲ್ಲುದು. ಕುಚ್ಚುಮೀನಿನ ದೇಹ ನೀಳವಾಗಿದೆ. ದೇಹದ ಬಣ್ಣ ಬೆನ್ನುಭಾಗದಲ್ಲಿ ಕಂದು, ಪಕ್ಕೆ ಹಾಗೂ ತಳಭಾಗದಲ್ಲಿ ಮಾಸಲು ಬಿಳಿ. ಪಕ್ಕೆಗಳಲ್ಲಿ ಮಚ್ಚೆಗಳೂ ಇವೆ. ದೇಹದುದ್ದಕ್ಕೂ ಎರಡು ಪಕ್ಕೆಗಳಲ್ಲೂ ಪಾರ್ಶ್ವರೇಖೆ ಇದೆ. ಈ ರೇಖೆ ಬೆನ್ನಿನ ಈಉ ರೆಕ್ಕೆಯ 12ನೆಯ ರೆಕ್ಕೆಕಡ್ಡಿಯ (ರೇ) ಬಳಿ ಕೊಂಚ ಡೊಂಕಾಗಿದೆ. ತಲೆ ಅಗಲ, ಅದರ ಮೇಲೆಲ್ಲ ಹುರುಪೆಗಳಿವೆ. ಬಾಯಿ ದೊಡ್ಡದು. ನಾಲ್ಕು ಕಿರುಗಳೂ ಅಗಲವಾದ ಕಿವಿರುರಂಧ್ರಗಳೂ ಇವೆ.

ಸಿಹಿನೀರು ಮೀನುಗಳಲ್ಲೆಲ್ಲ ಹೆಸರುವಾಸಿಯಾಗಿರುವ ಕುಚ್ಚುಮೀನು ಆಳವಿಲ್ಲದ ಮತ್ತು ಜೊಂಡು ಬೆಳೆದ ಕೆರೆ, ಕುಂಟೆ ಮತ್ತು ಹೊಂಡಗಳಲ್ಲಿ ವಾಸಿಸುತ್ತದೆ. ಆಹಾರಮೀನುಗಳಲ್ಲಿ ಬಹಳ ರುಚಿಯಾದ ಮೀನೆಂದು ಪರಿUಣಿಸಲ್ಪಟಿರುವ ಇವನ್ನು ಕೆರೆಗಳಲ್ಲಿ ಬೆಳೆಸುವುದು ಉಂಟು. ಸ್ವಜಾತಿಯ ಹಾಗೂ ಕಾರ್ಪ್ ಜಾತಿಯ ಮೀನುಗಳು, ಕಪ್ಪೆ ಸೀಗಡಿ, ಕೀಟಗಳು ಮುಂತಾದವು ಇದರ ಪ್ರಧಾನ ಆಹಾರ.

ವಂಶಾಭಿವೃದ್ಧಿ

[ಬದಲಾಯಿಸಿ]

ಕುಚ್ಚುಮೀನಿನ ವಂಶಾಭಿವೃದ್ಧಿ ಮೊಟ್ಟೆಗಳ ಮೂಲಕ, ನೀರಿನ ಮೇಲೆ ತೇಲುವ ಮೊಟ್ಟೆಗಳನ್ನಿಡುವುದು ಇದರ ವೈಶಿಷ್ಟ. ವರ್ಷಪೂರ್ತಿ ಮೊಟ್ಟೆಯಿಡುವುದಾದರೂ ಮಳೆಗಾಲದಲ್ಲಿ ಈ ಚಟುವಟಿಕೆ ಹೆಚ್ಚು. ಮೊಟ್ಟೆಗಳು ಒಂದೆರಡು ದಿನಗಳಲ್ಲಿ ಒಡೆದು ಮರಿಯಾಗುತ್ತವೆ. ಮೊಟ್ಟೆ ಮತ್ತು ಮರಿಗಳ ಸಂರಕ್ಷಣೆಯನ್ನು ತಾಯಿಮೀನು ನೋಡಿಕೊಳ್ಳುತ್ತದೆ. ಮರಿಗಳು 2"-3" ಉದ್ದ ಬೆಳೆದಾಗ ಅವುಗಳ ಬಣ್ಣ ಕಿತ್ತಳೆಗೆಂಪು. ಸುಮಾರು ಒಂದು ಅಡಿ ಉದ್ದವಾದಾಗ ಪ್ರೌಢಾವಸ್ಥೆಗೆ ಬರುತ್ತವೆ.

ಉಪಯೋಗ

[ಬದಲಾಯಿಸಿ]
Snakehead fish packed with lemon grass and lime leaves ready for steaming

ಅತಿರುಚಿಯಾದ ಆಹಾರ ಮೀನಾದ ಕುಚ್ಚುಮೀನಿಗೆ ಬೇಡಿಕೆಯೂ ಅಧಿಕ, ಇದರ ಬೆಲೆಯೂ ಹೆಚ್ಚು, ಇದನ್ನು ಹಿಡಿಯಲು ಬಲೆ, ದಾವಣಿಗಾಳ, ಕುಚ್ಚು ಉರಲು ಮತ್ತು ಇರ್ಗುಳಿ (ಪ್ಲಂe ಬ್ಯಾಸ್ಕೆಟ್) ಮುಂತಾದವನ್ನು ಉಪಯೋಗಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. Chaudhry,S. (2010). "Channa striata". IUCN Red List of Threatened Species. Version 2010.2. International Union for Conservation of Nature. Retrieved 8 July 2013. {{cite web}}: Invalid |ref=harv (help)
  2. ೨.೦ ೨.೧ Courtenay, Jr., Walter R. and James D. Williams. Channa striata USGS Circular 1251: Snakeheads (Pisces, Chinnidae) - A Biological Synopsis and Risk Assessment. U.S. Department of the Interior, U.S. Geological Survey. 2004-04-01. Retrieved 2007-07-15.
  3. USGS, Southeast Ecological Science Center: Channa striata. Retrieved 27 June 2014.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: