ವಿಷಯಕ್ಕೆ ಹೋಗು

ಮ್ಯಾಕ್ಸ್ ವೆಬರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಮ್ಯಾಕ್ಸ್ ವೆಬರ್
ಜನನಕಾರ್ಲ್ ಎಮಿಲ್ ಮ್ಯಾಕ್ಸಿಮಿಲಿಯನ್ ವೆಬರ್
(೧೮೬೪-೦೪-೨೧)೨೧ ಏಪ್ರಿಲ್ ೧೮೬೪
{{ಜರ್ಮನಿಯ, ಬರ್ಲಿನ್}}
ಮರಣ14 June 1920(1920-06-14) (aged 56)
[[ಜರ್ಮನಿ]]
ರಾಷ್ಟ್ರೀಯತೆಜರ್ಮನ್
ಕಾರ್ಯಕ್ಷೇತ್ರ
ಸಂಸ್ಥೆಗಳು
  • ಫ್ರೀಯಿಬರ್ಗ್ ವಿಶ್ವವಿದ್ಯಾನಿಲಯ
  • ಹೀಡಲ್ ಬರ್ಗ್ ವಿಶ್ವವಿದ್ಯಾನಿಲಯ
ಶೈಕ್ಷಣಿಕ ಸಲಹೆಗಾರರುಮೋಮ್ ಸೆನ್ ಮತ್ತು ಅಡಾಲ್ಪ್ ಗೋಲ್ಡ್ ಸ್ಮಿತ್

ಪ್ರತಿಯೊಂದು ವಿಜ್ಞಾನದ ಅಭಿವೃದ್ಧಿಯ ಹಿಂದೆ ಅಸಂಖ್ಯಾತ ವ್ಯಕ್ತಿಗಳು ತಮ್ಮ ತನು-ಮನ ಧನಗಳನನ್ನು ಧಾರೆ ಎರೆದು ಕೀರ್ತಿಶೇಷರಾಗಿದ್ದಾರೆ. ಸಮಾಜ ವಿಜ್ಞಾನಿಗಳು ವಿವಿಧ ಸಾಮಾಜಿಕ ಸಂಸ್ಥೆಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅಂತಹ ಸಮಾಜವಿಜ್ಞಾನಿಗಳಲ್ಲಿ ಒಬ್ಬರು ಮ್ಯಾಕ್ಸ್ ವೆಬರ್.

೧೮೬೪ರ ಏಪ್ರಿಲ್ ೨೧ರಂದು ಮ್ಯಾಕ್ಸ್ ವೆಬರ್ ಜರ್ಮನಿಯ, ಬರ್ಲಿನ್ ನಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಕಾರ್ಲ್ ಎಮಿಲ್ ಮ್ಯಾಕ್ಸಿಮಿಲಿಯನ್ ವೆಬರ್. ಆ ದಿನಗಳ ರಾಜಕೀಯದಲ್ಲಿ ವೆಬರ್ ರವರ ತಂದೆ ಪ್ರಮುಖ ವ್ಯಕ್ತಿಯಾಗಿದರು. ಹೀಗಾಗಿ ವೆಬರ್ ತಮ್ಮ ಬಾಲ್ಯದಲ್ಲಿಯೇ ಅನೇಕ ಪ್ರಮುಖರನ್ನು ತಮ್ಮ ಮನೆಯಲ್ಲಿಯೇ ಸಂದಿಸುವ ಅವಕಾಶ ದೊರೆಯಿತು. ಕಾನೂನಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಆಗಿದರು ವೆಬರ್. ವೆಬರ್ ರವರ ಕಾನೂನಿನ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿದ್ದ ಮೋಮ್ ಸೆನ್ ಮತ್ತು ಅಡಾಲ್ಪ್ ಗೋಲ್ಡ್ ಸ್ಮಿತ್ ಇವರ ಮೇಲೆ ಅಪಾರ ಪ್ರಭಾವ ಬೀರಿದರು. ೧೮೯೩ರಲ್ಲಿ ಆಶ್ಚ್ ರ‍್ಯಕರ ರೀತಿಯಲ್ಲಿ ಫ್ರೀಯಿಬರ್ಗ್ ವಿಶ್ವವಿದ್ಯಾನಿಲಯವು ಅರ್ಥಶಾಸ್ತ್ರದ ಪ್ರಾಧ್ಯಾಪಕ ಹುದ್ದೆಯನ್ನು ನೀಡಿ ಅವರ ವೃತ್ತಿಗೆ ತಿರುವು ನೀಡಿತು. ನಂತರ ಮ್ಯಾಕ್ಸ್ ವೆಬರ್ ಹೀಡಲ್ ಬರ್ಗ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಪೀಠದ ಮುಖ್ಯಸ್ಥರಾದರು. ಆದರೆ ವೆಬರ್ ರವರಿಗೆ ೧೯೦೦ ನಲ್ಲಿ ತೀವ್ರ ನರಕುಸಿತ ರೋಗದಿಂದ ನರಳಿ, ಕೆಲಕಾಲ ತಮ್ಮ ಕೆಲಸದಿಂದ ದೂರವಾದರು. ೧೯೧೮ ರಲ್ಲಿ ಮ್ಯೂನಿಚ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾದರು. ತಮ್ಮ ೫೬ನೆ ವಯಸ್ಸಿನಲ್ಲಿ ವೆಬರ್ ನ್ಯೂಮೋನಿಯ ಜ್ವರಕ್ಕೆತುತ್ತಾಗಿ, ಇದ್ದಕ್ಕಿದ್ದಂತೆ ನಿಧನರಾದರು.

೧೯೦೫ರಲ್ಲಿ ರ‍‍‍‍‍‍‍‍‍ಷ್ಯನ್ ಭಾಷೆಯನ್ನು ಓದಲು ಕಲಿತ ವೆಬರ್, ಮಹತ್ವದ ರಾಜಕೀಯ ನಿರ್ನಯಗಳಿಗೆ ಸೂತ್ರಧಾರರಾಗಿದ್ದರು. "Archiv für Sozialwissenschaft und Sozialpolitik" ಎನ್ನುವ ಸಾಮಾಜಿಕ ವಿಜ್ಞಾನ ಪತ್ರಿಕೆಯನ್ನು ವೆಬರ್ ಪ್ರಸಿದ್ಧಗೊಳಿಸಿದರು. ಅವರ ಬಹುಮುಖ ಪ್ರತಿಭೆಯನ್ನು ವ್ಯಕ್ತಪಡಿಸುವ ಅನೇಕ ಸಮಾಜಿಕ ಲೇಖನಗಳು, ಸಮಾಜಶಾಸ್ತ್ರದ ಬೆಳವಣಿಗೆಗೆ ಕಾರಣವಾಗಿವೆ.

ಹೀಡಲ್ ಬರ್ಗ್ ನಲ್ಲಿನ ವೆಬರ್ ರ ಸಮಾಧಿ

ವೆಬರ್ ರವರ ಸಮಾಜಶಾಸ್ತ್ರ ಬರಹಗಳು

[ಬದಲಾಯಿಸಿ]

ಕಾನೂನಿನ ಲೋಪದೋಷಗಳು, ಎರಡನೆಯ ಮಹಾ ಯುದ್ಧದ ಸನ್ನಿವೇಶ, ಆಡಳಿತಶಾಹಿಯ ದೋರಣೆಗಳು ವೆಬರ್ ಮೇಲೆ ಪ್ರಭಾವ ಬೀರಿದವು.

  • ಪ್ರಾಟಸ್ಟೆಂಟ್ ಎಥಿಕ್ಸ್
  • ಎಂಪೆರಿಕಲ್ ಮೆಥೆಡ್
  • ರಿಲಿಜಿಯನ್ ಇನ್ ಚೈನಾ
  • ರಿಲಿಜಿಯನ್ ಇನ್ ಇಂಡಿಯಾ


ವೆಬರ್ ರವರ ಪರಿಕಲ್ಪನೆಗಳು

[ಬದಲಾಯಿಸಿ]

ಜರ್ಮನ್ ಸಮಾಜಶಾಸ್ತ್ರಜ್ಞನಾದ ಮಾಕ್ಸ್ ವೆಬರ್ ಸಮಾಜಶಾಸ್ತ್ರದ ತನ್ನ ಆವಲೋಕನದ ಹೆಚ್ಚು ಭಾಗವನ್ನು ವಿಶೇಷ ಪದ್ಧತಿಗಳನ್ನು ವಿಸ್ತ್ರತಗೊಳಿಸುವಲ್ಲಿ ತೊಡಗಿದ್ದಾನೆ. ಇದನ್ನು ಅರ್ಥೈಸಿಕೊಳ್ಳುವ ವಿಧಾನ ಎಂದು ಕರೆಯಬಹುದು.ಅವರು ವ್ಯಾಖ್ಯಾನಿಸಿರುವಂತೆ ಸಮಾಜಶಾಸ್ತ್ರವು " ಸಾಮಾಜಿಕ ಕ್ರಿಯೆಯ ಅಥವಿವರಣೆ ನೀಡುವ ರೀತಿಯಲ್ಲಿ ಅಧ್ಯಯನ ಮಾಡುವುದು ಹಾಗೂ ಆ ಮೂಲಕ ಗತಿ ಮತ್ತು ಪರಿಣಾಮಗಳ ಕಾರಣೀಯ ವಿಶ್ಲೇಷಣೆಯನ್ನು ಹೊಂದುವ ವಿಜ್ಞಾನವಾಗಿದೆ". ವೆಬರ್ ರವರ ಪ್ರಕಾರ ಸಾಮಾಜಿಕ ಕ್ರಿಯೆ ಮಾನವನ ಎಲ್ಲಾ ವರ್ತನೆಗಳನ್ನೊ, ವರ್ತಿಸುವ ವ್ಯಕ್ತಿಯು ಯಾವ ಸಂದರ್ಭದಲ್ಲಿ ಮತ್ತು ಹೇಗೆ ಅದಕ್ಕೆ ಕರ್ತೃ ಸಂಬಂಧದ ಅರ್ಥವನ್ನು ನೀಡುತ್ತಾನೆ ಎಂಬುದನ್ನೂ ಒಳಗೊಂಡಿದೆ. ಆದ್ದರಿಂದ ವೆಬರ್ ಸಾಮಾಜಿಕ ಕ್ರಿಯೆ ಮತ್ತು ಸಾಮಾಜಿಕ ಸಂಬಂಧಗಳನ್ನು ಸಮಾಜಶಾಸ್ತ್ರದ ನಿರ್ದಿಷ್ಟ ವಸ್ತುವಿಷಯ ಎಂದು ತಿಳಿಸಿದ್ದಾರೆ.

೧. ಆದರ್ಶ ಪ್ರರೂಪಗಳು-

ಆದರ್ಶ ಪ್ರರೂಪಗಳೆಂದಕೂಡಲೇ ಎಲ್ಲರೂ ಅನುಸರಿಸಲು ಸಾಧ್ಯವಾಗುವಂತಹ ಕಲ್ಪನೆ ಅಲ್ಲ. ಈ ಕಲ್ಪನೆಯಲ್ಲಿ ಆದರ್ಶವು ತರ್ಕದ ತಳಹದಿಯ ಮೇಲೆ ನಿಂತಿದೆ. ಆದರ್ಶ ಪ್ರರೂಪಗಳು ಒಂದು ವಸ್ತು ಅಥವಾ ತತ್ವಗಳ ಯಥಾಸ್ಥಿತಿಯನ್ನು ವಿಶ್ಲೇಷಿಸುತ್ತವೆ. ಹೀಗಾಗಿ ಆದರ್ಶ ಪ್ರರೂಪಗಳು, ವಿಷಯಗಳ ಅಧ್ಯಯನವನ್ನು ಮಾಡುವಾಗ, ಅರ್ಥ ನೀಡುವ, ಸಂಶೋಧನೆಗೆ ನೆರವಾಗುವ ಉಪಕರಣಗಳೆಂದು ವೆಬರ್ ಭಾವಿಸುತ್ತಾರೆ.ಆದರ್ಶ ಪ್ರರೂಪಗಳು ಸತ್ಯವೂ ಅಲ್ಲ, ಅಸತ್ಯವೂ ಅಲ್ಲದ, ಕೇವಲ ಸಾಧನಗಳಾಗಿರುತ್ತವೆ.ಈ ಸಿದ್ದಾಂತವು ಮಾನವ ಶಾಸ್ತ್ರಗಳಲ್ಲಿ ಉಪಯೋಗಿಸುವ ಪ್ರರೂಪಗಳನ್ನು ಸಹಜವಾಗಿಸುವ, ದೋಷ ಮುಕ್ತವಾಗಿಸುವ ಪ್ರಯತ್ನವನ್ನು ಮಾಡಿದೆ. ಆದರ್ಶ ಪ್ರರೂಪಗಳ ಬಗ್ಗೆ ವಿಚಾರ ಮಾಡುವಾಗ ಪ್ರಾಮಾಣಿಕ ದೃಷ್ಥಿ ಬೆಳೆಸಿಕೊಳಬೇಕು ಎಂದು ವೆಬರ್ ಹೇಳುತ್ತಾರೆ.

೨. ಧರ್ಮ ಸಿದ್ಧಾಂತ-

ಧಾರ್ಮಿಕ ಸಂಗತಿಗಳು ಹಾಗೂ ಆರ್ಥಿಕ ಸಂಗತಿಗಳ ಪರಸ್ಪರಾವಲಂಬನೆಯನ್ನು ಕುರಿತು ವೆಬರ್ ಈ ಸಿದ್ಧಾಂತದಲ್ಲಿ ಚರ್ಚಿಸಿದ್ದಾರೆ. ಧಾರ್ಮಿಕತೆಯ ಯಾವ ಅಂಶಗಳು ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಲ್ಲವು ಎಂದು ವೆಬರ್ ಪ್ರಶ್ನಿಸಿ ಅದಕ್ಕೆ ಹೀಗೆ ಉತ್ತರಿಸಿದ್ದಾರೆ. "ಧಾರ್ಮಿಕ ಸಂಗತಿಗಳನ್ನು ವ್ಯತ್ಯಯವನ್ನಾಗಿ ಅವುಗಳು ಆರ್ಥಿಕ ವಿಷಯಗಳನ್ನು ಹೇಗೆ ಪ್ರಭಾವಿಸುತ್ತವೆ ಎಂದು ಹೇಳಿ ಲಾಭಾಂಶವನ್ನು ಪಡೆಯುವಲ್ಲಿ. ಧಾರ್ಮಿಕ ಅಂಶ, ದುರಾಶೆಯ ಲಾಭವನ್ನು ತೆಗೆದುಕೊಳ್ಳುವ ಬಗ್ಗೆ ಪ್ರತಿಬಂಧಗಳನ್ನು ಹೇರುತ್ತದೆ" ಎಂದಿದ್ದಾರೆ ವೆಬರ್. ವೆಬರ್ ಬರೆದಿರುವ ಪ್ರಾಟಸ್ಟೆಂಟ್ ಎಥಿಕ್ಸ್ ಅಂಡ್ ಮಾಡ್ರನ್ ಕ್ಯಾಪಿಟ್ಯಾಲಿಸಂ ಲೇಖನದಲ್ಲಿ, ಆಧುನಿಕ ಬಂಡವಾಳದ ಮೇಲೆ ಪರಂಪರಾನುಗತವಾಗಿ ಬಂದ ಧರ್ಮವು ಹೇಗೆ ಪ್ರಭಾವ ಬೀರಿದೆ ಎಂಬುದನ್ನು ವಿವರಿಸಿದ್ದಾರೆ. ವಿಶಿಷ್ಟ ಗುಣಗಳುಳ್ಳ ಬಂಡವಾಳವು, ಧರ್ಮದಿಂದ ಬಂದುದಾಗಿದೆ ಎಂದು ವೆಬರ್ ನುಡಿದಿದ್ದಾರೆ. ಪ್ರಾಟಸ್ಟೆಂಟ್ ಧರ್ಮವು ಜನತೆಯಲ್ಲಿ ಆತ್ಮ ವಿಶ್ವಾಸ ಮೂಡಿಸುತ್ತದೆ. ಮಾನವನ ಭವಿಷ್ಯವು ಅವನು ಹುಟ್ಟುವ ಮೊದಲೇ ನಿರ್ಧಾರಿತವಾಗಿದೆ. ಹೀಗಾಗಿ ಅವನು ಪ್ರಸಕ್ತ ಜೀವನದಲ್ಲಿ ಯಾವುದೇ ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡರೂ ತಪ್ಪಿಲ್ಲ. ಆದರೆ ಧರ್ಮಾಚರಣೆಯ ಮಾರ್ಗದಿಂದಲೇ ಆರ್ಥಿಕ ಚಟುವಟಿಕೆಗಳನ್ನು ಕೈಕೊಳ್ಳಬೇಕು. ಧನ ಸಂಚಯನವು ಪ್ರಾಟಸ್ಟೆಂಟ್ ಧರ್ಮದಂತೆ ಜೀವನಾವಶ್ಯಕ ಕರ್ಮವೆನಿಸಿದೆ. ಐಹಿಕ ಸುಖ ಭೋಗಗಳನ್ನು ಇತಿ-ಮಿತಿಯಲ್ಲಿ ಅನುಭವಿಸಲು ಪ್ರಾಟಸ್ಟೆಂಟ್ ಧರ್ಮ ಪ್ರೋತ್ಸಾಹಿಸಿತು.

೩. ಆಡಳಿತಶಾಹಿ-

೧೯ನೇ ಶತಮಾನದ ನಂತರ ಅಭಿವೃದ್ಧಿ ಮತ್ತು ಉತ್ಪಾದನೆಯ ಗತಿ ಹೆಚ್ಚಾಗಲು ಅಧಿಕಾರಶಾಹಿ ಅಥವಾ ಆಡಳಿತಶಾಹಿ ಕಾರಣವೆಂದು ಮತ್ತು ಅನಿವಾರ್ಯವೆಂದು ವೆಬರ್ ತಿಳಿಸಿದಾರೆ. ನಿಧಾನಗತಿ, ಸ್ವಜನ ಪಕ್ಷಪಾತ ಮುಂತಾದ, ಅಮಾನವೀಯ ಪರಿಣಾಮಗಳಿದ್ದರೂ, ಆಡಳಿತಶಾಹಿಯು ಬೇರಲ್ಲ ಸಾಮಾಜಿಕ ವ್ಯವಸ್ಥೆಗಳಿಗಿಂತ ಶ್ರೇಷ್ಠವೆಂದು ವೆಬರ್ ಹೇಳಿದ್ದಾರೆ. ಆಡಳಿತ ಷಾಹಿಯಲ್ಲಿ ತತ್ವಗಳ ಆಧಾರದ ಮೇಲೆ ಅಧಿಕಾರಗಳನ್ನು ನಿಯೋಜಿಸಿ, ಶ್ರೇಯಾಂಕಗಳನ್ನು ನಿರ್ಧರಿಸಲಾಗುತ್ತದೆ. ಈ ಶ್ರೇಯಾಂಕಗಳನ್ನು ಅನುಸರಿಸಿ, ಕೆಲಸಕಾರ್ಯಗಳನ್ನು ವ್ಯಕ್ತಿಗಳು ನಿರಪೇಕ್ಷಿತರಾಗಿ ಅಚರಿಸಬೇಕು.ವ್ಯಕ್ತಿಯ ವಿಶೇಷ ಯೋಗ್ಯತೆ, ಅರ್ಹತೆಗಳನ್ನನುಸರಿಸಿ ಆತನನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳಲಾಗುವುದು.ಆಧುನಿಕ ಸಮಾಜದಲ್ಲಿ ಇಂತಹ ಬೃಹತ ವ್ಯವಸ್ಥೆಯು ಅನಿವಾರ್ಯವಾಗಿದೆ. ದೊಡ್ದ ಪ್ರಮಾನದ ಯೋಜನೆಗಳನ್ನು ವ್ಯವಸ್ಥಿತ ರೀತಿಯಲ್ಲಿ ರೂಪಿಸಿ, ಕಾರ್ಯಗತಗೊಳಿಸಲು ಆಡಳಿತಶಾಹಿಯ ಅವಶ್ಯಕತೆ ಅನಿವಾರ್ಯವಾಗಿದೆ.

ಆಡಳಿತಶಾಹಿಯ ಕೆಲವು ಅಸಮಪಕತೆಗಳನ್ನು ವೆಬರ್ ಗುರಿತಿಸಿದ್ದಾರೆ. ಅದರ ಮುಖ್ಯ ಲಕ್ಷಣವಾದ ಲೆಕ್ಕಾಚಾರವೇ ಅದರ ಅವಗುಣವಾಗಿದೆ. ವ್ಯಕ್ತಿಯ ವೈಯುಕ್ತಿಕ ಆಸೆ-ಆಕಾಂಕ್ಷೆಗಳಿಗೆ ಅದರಲ್ಲಿ ಮಹತ್ವವಿಲ್ಲ. ವೈಚಾರಿಕತೆ, ಅಧಿಕಾರಶಾಹಿ ವೆಬರ್ ರವರಿಗೆ ಅನಿವಾರ್ಯ ಅಂಶಗಳೆನಿಸಿವೆ. ಪ್ರಕೃತಿಯ ಅಂಶಗಳ ಮೇಲೆ ಪ್ರಭುತ್ವವನ್ನು ಸ್ಥಾಪಿಸುವಲ್ಲಿ, ಉತ್ಪಾದನೆಯನ್ನು ಹೆಚ್ಚಿಸುವಲ್ಲಿ, ಅಧಿಕಾರಶಾಹಿಯು ಸ್ವಾಮ್ಯವನ್ನು ಸ್ಥಾಪಿಸಿದರೂ, ಮಾನವಿಯತೆಯನ್ನು ಧಿಕ್ಕರಿಸಿ ಬೆಳೆಯುವ ಅಮಾನವೀಯ ವ್ಯವಸ್ಶೆಯೆಂದು ವೆಬರ್ ಹೇಳಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  • ಬಿ. ಆರ್. ಕೃಷ್ಣ. ಸಾಮಾನ್ಯ ಸಮಾಜಶಾಸ್ತ್ರ. ವಿದ್ಯಾನಿಧಿ ಪ್ರಕಾಶನ.
  • ಜಿ. ಸುಬ್ರಮಣ್ಯ. ಸಮಾಜಶಾಸ್ತ್ರದ ಮೂಲತತ್ವಗಳು. ಸುಭಾಷ್ ಪಬ್ಲಿಕೇಷನ್ಸ್.

ಬಾಹ್ಯ ಕೊಂಡಿಗಳು

[ಬದಲಾಯಿಸಿ]