ತರಬೇತಿ
ಗೋಚರ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಪೀಠಿಕೆ
[ಬದಲಾಯಿಸಿ]ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ,ಅವರಿಗೆ ಕೆಲಸಗಳನ್ನು ವಹಿಸಿದ ನಂತರ ಅವರ ತರಬೇತಿ ಮತ್ತು ಅಭಿವೃದ್ಧಿಗೆ ಏರ್ಪಾಟು ಮಾಡುವುದು ಸಂಸ್ಥೆಯ ಜವಾಬ್ದಾರಿಯಾಗಿದೆ.ಒಟ್ಟಿನಲ್ಲಿ ಹೇಳುವುದಾದರೆ,ತರಬೇತಿಯು,ನೌಕರನ ಜ್ಞಾನ,ಸಾಮರ್ಥ್ಯ,ಕೌಶಲ್ಯತೆ,ವ್ಯಕ್ತಿತ್ವ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ಸಂಘಟಿತ ಕಾರ್ಯಕ್ರಮವಾಗಿರುತ್ತದೆ.
ಅರ್ಥ
[ಬದಲಾಯಿಸಿ]ಒಂದು ನಿರ್ದಿಷ್ಟ ಕೆಲಸವನ್ನು ಮಾಡಲು,ಒಬ್ಬ ನೌಕರನ ಜ್ಞಾನ ಮತ್ತು ಕೌಶಲ್ಯತೆಯನ್ನು ಹೆಚ್ಚಿಸುವ ಒಂದು ಕ್ರಯೆ ತರಬೇತಿ.
ವ್ಯಾಖ್ಯೆ
[ಬದಲಾಯಿಸಿ]ಡೇಲ್ ಎಸ್.ಬೀಚ್ರವರ ಮಾತಿನಲ್ಲಿ,"ತರಬೇತಿಯು ಒಂದು ಸಂಘಟಿತ ಕಾರ್ಯಕ್ರಮವಾಗಿದ್ದು ಜನರ ಜ್ಞಾನ ಹಾಗೂ ಕೌಶಲ್ಯತೆಯನ್ನು,ನಿರ್ದಿಷ್ಟ ಉದ್ದೇಶಗಳಿಗಾಗಿ ವೃದ್ಧಿಸುವ ಪ್ರಕ್ರಿಯೆಯಾಗಿದೆ."
ತರಬೇತಿಯ ವಿಧಾನಗಳು ಮತ್ತು ವಿವರಗಳು
[ಬದಲಾಯಿಸಿ]೧. ಕಾರ್ಯನಿರತ ತರಬೇತಿ
[ಬದಲಾಯಿಸಿ]- ಸಹಾಯಕನಾಗಿ ಕಲಿಯುವುದು
- ಪ್ರತ್ಯೇಕ/ವ್ಯಕ್ತಿಗತ ಶಿಕ್ಷಣ
- ನಿರ್ಬಂಧ ತರಬೇತಿ
- ಕಾರ್ಯ ಆವರ್ತನ/ಕಾರ್ಯ ಬದಲಾವಣೆ
೨. ಕಾರ್ಯೇತರ ತರಬೇತಿ
[ಬದಲಾಯಿಸಿ]- ವಿಶೇಷ ತರಗತಿಗಳು ಹಾಗೂ ಉಪನ್ಯಾಸಗಳು
- ವಿದ್ಯಮಾನಗಳ ಅಧ್ಯಯನ/ಪ್ರಕರಣ ಅಧ್ಯಯನ
- ಮಾದರಿ ಮೂಲಕ ತರಬೇತಿ
- ಕಂಪ್ಯೂಟರ್ ಮಾದರಿ ಮೂಲಕ ತರಬೇತಿ