ಸೋಡಿಯಂ ಕಾರ್ಬೊನೇಟ್
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಅಡುಗೆ ಸೋಡಾದ ರಾಸಾಯನಿಕ ಹೆಸರು ಸೋಡಿಯಂ ಬೈ ಕಾರ್ಬೊನೇಟ್. ಇದೊಂದು ಪ್ರತ್ಯಾಮ್ಲ. ಇದನ್ನು ಬಿಸ್ಕತ್ತು, ಬ್ರೆಡ್, ಕೇಕ್ ಮುಂತಾದ ಬೇಕರಿ ಪದಾರ್ಥಗಳನ್ನು ತಯಾರಿಸುವಾಗ ಅಲ್ಪ ಪ್ರಮಾಣದಲ್ಲಿ ಹಾಕುತ್ತಾರೆ. ಇದರಿಂದ ಈ ಆಹಾರ ಪದಾರ್ಥಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೂಕ್ಷ್ಮ ರಂಧ್ರಗಳಾಗಿ, ಅವು ಗಾತ್ರದಲ್ಲಿ ಹಿಗ್ಗಿಕೊಂಡು, ತಿನ್ನುವಾಗ ಹಗುರವಾದ ಭಾವನೆ ನೀಡುತ್ತವೆ.ಸಾಮಾನ್ಯವಾಗಿ ಬ್ರೆಡ್ನ ತಯಾರಿಕೆಯಲ್ಲಿ ಯೀಸ್ಟ್ ಅನ್ನು ಗಾತ್ರ ಹಿಗ್ಗಿಸುವಿಕೆಗೆ ಬಳಸುತ್ತಾರೆ. ಆದರೆ ಈ ವಿಧಾನ ಸ್ವಲ್ಪ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ `ತ್ವರಿತ ಬ್ರೆಡ್’ನ (ಇನ್ಸ್ಟೆಂಟ್ ಬ್ರೆಡ್) ತಯಾರಿಕೆಯಲ್ಲಿ ಅಡುಗೆ ಸೋಡವನ್ನು ಬಳಸುತ್ತಾರೆ.ಬ್ರೆಡ್ ಅಥವಾ ಕೇಕ್ ತಯಾರಿಸುವಾಗ, ಅದನ್ನು ಸುಡುವುದರಿಂದ ಹಿಟ್ಟಿನಲ್ಲಿರುವ ಸೋಡಿಯಂ ಬೈ ಕಾರ್ಬೊನೇಟ್ ವಿಭಜನೆಯಾಗಿ ಸೋಡಿಯಂ ಹಾಗೂ ಇಂಗಾಲದ ಡೈ ಆಕ್ಸೈಡ್ ಅನಿಲ ಉಂಟಾಗುತ್ತದೆ. ಬ್ರೆಡ್ನ ಹಿಟ್ಟಿನಿಂದ ಇಂಗಾಲದ ಡೈ ಆಕ್ಸೈಡ್ ಹೊರಹೊಮ್ಮುವುದರಿಂದ ಹಿಟ್ಟಿನಲ್ಲಿ ಸೂಕ್ಷ್ಮ ರಂಧ್ರಗಳಾಗಿ ಅವು ಅದರ ಗಾತ್ರವನ್ನು ವಿಪರೀತವಾಗಿ ಹಿಗ್ಗಿಸುತ್ತವೆ.ಇದೇ ರೀತಿ ಅನ್ನ ಅಥವಾ ಇತರ ತಿಂಡಿ ಪದಾರ್ಥದಲ್ಲೂ ಅಡುಗೆ ಸೋಡವನ್ನು ಬೆರೆಸುವುದರಿಂದ, ಹೊಟ್ಟೆಯನ್ನು ಸೇರಿದ ಅಡುಗೆ ಸೋಡವು ಅಲ್ಲಿ ಉತ್ಪತ್ತಿಯಾಗುವ ಹೈಡ್ರೊಕ್ಲೋರಿಕ್ ಆಮ್ಲದೊಡನೆ ವರ್ತಿಸಿ, ಇಂಗಾಲದ ಡೈ ಆಕ್ಸೈಡ್ನ್ನು ಉತ್ಪತ್ತಿ ಮಾಡುತ್ತದೆ. ಇದೊಂದು ತಟಸ್ಥೀಕರಣ (ನ್ಯೂಟ್ರಲೈಜೇಷನ್) ರಾಸಾಯನಿಕ ಕ್ರಿಯೆ. ಹೀಗೆ ಊಟವಾದ ಕೆಲ ಗಂಟೆಗಳ ಕಾಲ ಇದು ಉತ್ಪತ್ತಿಯಾಗುತ್ತಲೇ ಇರುತ್ತದಾದ್ದರಿಂದ ಘೋರವಾಗಿ ಹೊಟ್ಟೆ ತುಂಬಿದ ಅನುಭವ ಆಗುತ್ತದೆ.ಸಾಮಾನ್ಯವಾಗಿ ಹೋಟೆಲ್ಗಳಲ್ಲಿ ನೀಡುವ ಅಲ್ಪ ಪ್ರಮಾಣದ ಮೊಸರನ್ನು ಸೇವಿಸಿದಾಗ, ಇದರಲ್ಲಿನ ಆಮ್ಲೀಯ ಪದಾರ್ಥವು ಅನ್ನದಲ್ಲಿನ ಅಡುಗೆ ಸೋಡದೊಡನೆ ವರ್ತಿಸಿ ಇಂಗಾಲದ ಡೈಆಕ್ಸೈಡ್ನ್ನು ಇನ್ನೂ ವೇಗವಾಗಿ ಬಿಡುಗಡೆ ಮಾಡುತ್ತದೆ. ಇದರಿಂದ ಬೇಗನೆ ಹೊಟ್ಟೆ ತುಂಬಿದ ಭಾವನೆ ಬರುತ್ತದೆ.ಅಡುಗೆ ಸೋಡ ಹೊಂದಿರುವ ಯಾವುದೇ ಆಹಾರ ವಸ್ತುವನ್ನು (ಉದಾಹರಣೆಗೆ ಬಿಸ್ಕತ್ತು, ಕೇಕ್ ಮುಂತಾದವು) ಪ್ರತಿನಿತ್ಯ ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ. ಹಲವು ವರ್ಷಗಳ ಕಾಲ ಹೀಗೆ ತಿನ್ನುವವರಿಗೆ ಕ್ರಮೇಣ ನೈಸರ್ಗಿಕವಾಗಿ ಹಸಿವಾಗುವಿಕೆಯೇ ಕಡಿಮೆಯಾಗಿ ದೈಹಿಕವಾಗಿ ಅವರು ಕೃಶರಾಗಬಹುದು.ಅಡುಗೆ ಸೋಡದಿಂದ ಬಿಡುಗಡೆಯಾದ ಸೋಡಿಯಂ ಲವಣದ ಅಂಶ ದೇಹದಲ್ಲಿ ಹೆಚ್ಚಾದರೆ ಅದು ಕೆಲವು ತೊಂದರೆಗಳನ್ನು ಉಂಟುಮಾಡುತ್ತದೆ. ಅಡುಗೆ ಸೋಡ ಬೆರೆಸಿದ ಊಟವನ್ನು ಪ್ರತಿನಿತ್ಯ ಮಾಡುವುದರಿಂದ ಗ್ಯಾಸ್ ಟ್ರಬಲ್, ಕರುಳಿಗೆ ಸಂಬಂಧಿಸಿದ ಕೆಲವು ತೊಂದರೆಗಳೂ ಉಂಟಾಗುತ್ತವೆ.ಕೇವಲ ಲಾಭದ ದೃಷ್ಟಿಯಿಂದ ಹೋಟೆಲ್ ಉದ್ಯಮ ನಡೆಸುವವರು ಗ್ರಾಹಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯದಾಯಕ ಆಹಾರ ನೀಡುವುದೂ ಅಷ್ಟೇ ಮುಖ್ಯ.