ಅಡಿಗೆ ಸೋಡಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಅಡುಗೆ ಸೋಡ

ಅಡಿಗೆ ಸೋಡವು ದೋಸೆ, ಇಡ್ಲಿ, ಬೋಂಡ ಮುಂತಾದುವುಗಳಿಗೆ ಹಾಕುವ ಸೋಡಿಯಮ್ ಬೈಕಾರ್ಬೊನೇಟ್. ಬಿಸಿಯಲ್ಲಿ ಇದು ವಿಭಜಿಸಲ್ಪಟ್ಟು ಇಂಗಾಲಾಮ್ಲವು ಉತ್ಪತ್ತಿಯಾಗಿ ಪದಾರ್ಥಗಳನ್ನು ಉಬ್ಬಿಸಿ ಮೃದುವಾಗುವಂತೆ ಗರಿಗರಿಯಾಗುವಂತೆ ಮಾಡುತ್ತದೆ. ಇದು ಕ್ಷಾರ ಗುಣವುಳ್ಳದ್ದು. ಆದ್ದರಿಂದ ಕೇಕ್ ಬಿಸ್ಕತ್ ಮುಂತಾದುವನ್ನು ಉಬ್ಬುವಂತೆ ಮಾಡಲು ಉಪಯೋಗಿಸುವ ಬೇಕಿಂಗ್ ಪೌಡರ್‍ನಲ್ಲಿ ಅಡಿಗೆ ಸೋಡ, ಟಾರ್‍ಟಾರಿಕ್ ಆಮ್ಲ ಅಥವಾ ಪೊಟಾಸಿಯಮ್ ಆಸಿಡ್ ಟಾರ್‍ಟರೇಟ್ ಇವುಗಳ ಸೂಕ್ತ ಮಿಶ್ರಣವಿರುತ್ತದೆ. ತೇವದಲ್ಲಿ ಬಿಸಿ ಮಾಡಿದಾಗ ಇವೆರಡರ ರಾಸಾಯನಿಕ ಕ್ರಿಯೆಯಿಂದ ಇಂಗಾಲಾಮ್ಲ ಉತ್ಪತ್ತಿಯಾಗಿ ಒಲೆಯಲ್ಲಿ ಇಟ್ಟ ಕೇಕ್ ಉಬ್ಬುತ್ತದೆ. ಕ್ಷಾರಪದಾರ್ಥ ಆಮ್ಲ ಪದಾರ್ಥದೊಂದಿಗೆ ಬೆರೆಯುವುದರಿಂದ ಬೇಯಿಸಿದ ಕೇಕ್‍ನಲ್ಲಿ ಕ್ಷಾರಗುಣ ಉಳಿಯುವುದಿಲ್ಲ. ಇದರ ಉಪಯೋಗದಿಂದ ಪದಾರ್ಥಗಳು ರುಚಿಕಟ್ಟಾಗುತ್ತವಾದರೂ ಆರೋಗ್ಯ ದೃಷ್ಟಿಯಿಂದ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬಾರದು.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: