ಪರಾವಲಂಬಿ ಜೀವಿಶಾಸ್ತ್ರ(ಪ್ಯಾರಸೈಟಾಲಜಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೇನು (ಎಕ್ಟೋಪ್ಯಾರಸೈಟ್)
ಎಸ್ಚಿರೀಶಿಯಾ ಕೊಲೈ {ರೋಗಕಾರಕವಲ್ಲದ (ಸಹಜೀವಿ) ಪರಾವಲಂಬಿ}

ಪರಾವಲಂಬಿ ಜೀವಿಶಾಸ್ತ್ರ(ಪ್ಯಾರಸೈಟಾಲಜಿ) ಎಂದರೆ ಪರಾವಲಂಬಿ ಜೀವಿಗಳ ಕುರಿತು, ಅವುಗಳು ಅವಲಂಬಿಸುವ ಪೋಷಕ ಜೀವಿಗಳು ಹಾಗೂ ಅವುಗಳ ನಡುವೆ ಇರುವಂಥ ಸಂಬಂಧದ ಕುರಿತಾಗಿರುವ ಅಧ್ಯಯನ.

ಪರಾವಲಂಬಿ ಜೀವಿ[ಬದಲಾಯಿಸಿ]

ಪರಾವಲಂಬಿ ಜೀವಿ ಎಂದರೆ ಬೇರಂದು ಜೀವಿಯ(ಪೋಷಕ ಜೀವಿ) ಮೇಲೆ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ವಾಸಿಸುವ ಜೀವಿಯಾಗಿದೆ. ಇವುಗಳು ದೈಹಿಕವಾಗಿ ಅಥವಾ ಶಾರೀರಿಕವಾಗಿ ಅತಿಥಿ ಜೀವಿಗಳ ಮೇಲೆ ಅವಲಂಬಿತವಾಗಿರುತ್ತವೆ.[೧]

ಪರಾವಲಂಬಿ ಜೀವಿಗಳ ಸ್ವರೂಪ[ಬದಲಾಯಿಸಿ]

ಏಕಕೋಶೀಯ ಜೀವಿ, ಹುಳಗಳು, ಸಂಧಿಪದಿಗಳು- ಇವುಗಳು ಪರಾವಲಂಬಿ ಜೀವಿಗಳು

ವೈದ್ಯಕೀಯ ಪ್ಯಾರಸೈಟಾಲಜಿ[ಬದಲಾಯಿಸಿ]

ವೈದ್ಯಕೀಯ ಪ್ಯಾರಸೈಟಾಲಜಿ ಎಂದರೆ ಮನುಷ್ಯರ ಮೇಲೆ ರೋಗ ಉಂಟುಮಾಡುವ ಪರಾವಲಂಬಿಗಳ ಕುರಿತಾಗಿರುವ ಅಧ್ಯಯನ.

ಪರಾವಲಂಬಿ ಜೀವಿಗಳ ಹಾಗೂ ಅತಿಥಿ ಜೀವಿಗಳ ನಡುವಿನ ಸಂಬಂಧದ ರೀತಿಗಳು[ಬದಲಾಯಿಸಿ]

ಮ್ಯುಚುವಲಿಸಂ[ಬದಲಾಯಿಸಿ]

ಪರಸ್ಪರ ಲಾಭ ದೊರೆಯುವಂಥ ಸಂಬಂಧವು ಪರಾವಲಂಬಿ ಜೀವಿ ಹಾಗೂ ಪೋಷಕ ಜೀವಿಯ ನಡುವೆ ಇರುತ್ತದೆ.

ಸಹಜೀವನ (ಸಿಂಬಯೋಸಿಸ್) [ಬದಲಾಯಿಸಿ]

ಪರಾವಲಂಬಿ ಜೀವಿ ಹಾಗೂ ಪೋಷಕ ಜೀವಿಯ ನಡುವೆ ಶಾಶ್ವತ ಸಂಬಂಧ ಇರುತ್ತದೆ. ಇವುಗಳು ಪರಸ್ಪರ ಅವಲಂಬಿತವಾಗಿರುವ ಕಾರಣ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕಲು ಸಾಧ್ಯವಿರುವುದಿಲ್ಲ.

ಸಹಜೀವಿತ್ವ (ಕಮೆಂಸಾಲಿಸಮ್)[ಬದಲಾಯಿಸಿ]

ಪರಾವಲಂಬಿ ಜೀವಿಗೆ ಪೋಷಕ ಜೀವಿಯಿಂದ ಲಾಭ ಸಿಗುತ್ತದೆ. ಆದರೆ ಪೋಷಕ ಜೀವಿಗೆ ಪರಾವಲಂಬಿ ಜೀವಿಯಿಂದ ಲಾಭ ಅಥವಾ ಹಾನಿ ಇರುವುದಿಲ್ಲ.

ಪರಾವಲಂಬಿಕೆ (ಪ್ಯಾರಸೈಟಿಸಮ್)[ಬದಲಾಯಿಸಿ]

ಒಂದು ಜೀವಿಯು ಇನ್ನೊಂದು ಜೀವಿಯ ವೆಚ್ಚದಲ್ಲಿ ವಾಸಿಸುತ್ತದೆ. ನಂತರ ಆ ಇನ್ನೊಂದು ಜೀವಿವು ಈ ಸಂಬಂಧದಿಂದಾಗಿ ನರಳುತ್ತದೆ. ಅಂದರೆ ಅದು ನಷ್ಟವನ್ನು ಅನುಭವಿಸುತ್ತದೆ.

ಪರಾವಲಂಬಿ ಜೀವಿಗಳ ವರ್ಗೀಕರಣ[ಬದಲಾಯಿಸಿ]

ವಾಸಸ್ಥಾನದ ಆಧಾರದ ಮೇಲೆ ವರ್ಗೀಕರಣ[ಬದಲಾಯಿಸಿ]

ಇವುಗಳು ಪೋಷಕ ಜೀವಿಯ ಚರ್ಮದ ಮೇಲೆ ವಾಸಿಸುವ ಅಥವಾ ಮೇಲ್ಮೈನಲ್ಲಿರುವ ಜೀವಕೋಶದ ಮೇಲೆ ಪರಿಣಾಮ ತೋರಿಸುವಂತಹ ಪರಾವಲಂಬಿ ಜೀವಿಗಳು. ಉದಾಹರಣೆ: ಹೇನುಗಳು

ಇವುಗಳು ಪೋಷಕ ಜೀವಿಯ ದೇಹದ ಒಳಗೆ ವಾಸಿಸುವಂಥ ಪರಾವಲಂಬಿ ಜೀವಿಗಳು.

ಪೋಷಕ ಜೀವಿಯ ಮೇಲೆ ಅವಲಂಬಿವಾಗಿರುವ ಆಧಾರದ ಮೇಲೆ ವರ್ಗೀಕರಣ[ಬದಲಾಯಿಸಿ]

  • ತಾತ್ಕಾಲಿಕ (ಐಚ್ಚಿಕ) ಪರಾವಲಂಬಿಗಳು (ಟೆಂಪೊರರಿ ಪ್ಯಾರಸೈಟ್ಸ್)

ಪರಾವಲಂಬಿ ಜೀವನದ ಜೊತೆಗೆ ಸ್ವತಂತ್ರ ಅಸ್ತಿತ್ವವನ್ನು ಹೊಂದಿರುವಂಥ ಸಾಮರ್ಥ್ಯ ಇರುವ ಪರಾವಲಂಬಿ ಜೀವಿಗಳು.[೨]

  • ಶಾಶ್ವತ (ನಿರ್ಬಂಧಕ) ಪರಾವಲಂಬಿಗಳು (ಪರ್ಮನೆಂಟ್ ಪ್ಯಾರಸೈಟ್ಸ್)

ಪರಾವಲಂಬಿ ಜೀವಿಯು ಸಂಪೂರ್ಣವಾಗಿ ತನ್ನ ಚಯಾಪಚಯ ಕ್ರಿಯೆಗಾಗಿ , ಆಶ್ರಯಕ್ಕಾಗಿ, ಮತ್ತು ಸಾರಿಗೆ ವ್ಯವಸ್ಥೆಗಾಗಿ ಪೋಷಕ ಜೀವಿಯ ಮೇಲೆ ಅವಲಂಬಿತವಾಗಿದೆ. ಪರಾವಲಂಬಿ ಜೀವಿಯು ಪೋಷಕ ಜೀವಿಯ ದೇಹದ ಹೊರಗೆ ಬದುಕಲು ಸಾಧ್ಯವಿಲ್ಲ. ಉದಾ: ಪ್ಲಾಸ್ಮೋಡಿಯಂಜಾತಿಯ ಸೂಕ್ಷ್ಮ ಜೀವಿಗಳು.

ತಮ್ಮ ರೋಗಕಾರಕತೆಯ ಆಧಾರದ ಮೇಲೆ ವರ್ಗೀಕರಣ[ಬದಲಾಯಿಸಿ]

  • ರೋಗಕಾರಕ ಪರಾವಲಂಬಿಗಳು (ಪ್ಯಾತೋಜನಿಕ್ ಪ್ಯಾರಸೈಟ್ಸ್)

ಇವು ಪೋಷಕ ಜೀವಿಗೆ ಕಾಯಿಲೆಯನ್ನು ಉಂಟುಮಾಡುತ್ತವೆ. ಉದಾಹರಣೆ: ಎಂಟಮೀಬ ಹಿಸ್ಟೋಲಿಟಿಕ

  • ರೋಗಕಾರಕವಲ್ಲದ (ಸಹಜೀವಿ) ಪರಾವಲಂಬಿಗಳು (ನಾನ್-ಪ್ಯಾತೋಜನಿಕ್ ಪ್ಯಾರಸೈಟ್ಸ್)

ಪರಾವಲಂಬಿ ಜೀವಿಯು ಪೋಷಕ ಜೀವಿಗೆ ಯಾವುದೇ ಹಾನಿ ಮಾಡದೆ ಪೋಷಕ ಜೀವಿಯಿಂದ ಆಹಾರ ಮತ್ತು ರಕ್ಷಣೆ ಪಡೆಯುತ್ತದೆ. ಉದಾಹರಣೆ: ಎಸ್ಚಿರೀಶಿಯಾ ಕೊಲೈ

  • ಅವಕಾಶವಾದಿ ಪರಾವಲಂಬಿಗಳು (ಒಪರ್ಚುನಿಸ್ಟಿಕ್ ಪ್ಯಾರಸೈಟ್ಸ್)

ಇಂತಹ ಪರಾವಲಂಬಿ ಜೀವಿಗಳು ಆರೋಗ್ಯವಂತ ನಿರೋಧಕ ಶಕ್ತಿಯುಳ್ಳ ವ್ಯಕ್ತಿಗಳಲ್ಲಿ ತೀವ್ರ ಕಾಯಿಲೆ/ಬೇನೆ ಉಂಟುಮಾಡದೆ, ನಿರೋಧಕ ಶಕ್ತಿ ಕೊರತೆಯುಳ್ಳ ವ್ಯಕ್ತಿಗಳಲ್ಲಿ ತೀವ್ರ ಕಾಯಿಲೆ ಉಂಟುಮಾಡುತ್ತವೆ.

ಉದಾಹರಣೆ: ನ್ಯುಮೋನಿಯಾ ಕಾರ್ನೀ

ಉಲ್ಲೇಖ[ಬದಲಾಯಿಸಿ]

  1. https://en.wikipedia.org/wiki/Parasitology
  2. http://www.cartercenter.org/resources/pdfs/health/ephti/library/lecture_notes/med_lab_tech_students/LN_parasitology_final.pdf