ಸದಸ್ಯ:Monica sjp/sandbox
ಗೋಚರ
ಕೆ. ಬಿ. ಹೈಮವತಮ್ಮ
[ಬದಲಾಯಿಸಿ]ಕೆ. ಬಿ. ಹೈಮವತಮ್ಮ ಇವರು ೧೭ ಮೇ ೧೯೩೭ ರಂದು ಜನಿಸಿದರು.
ಇವರ ತಂದೆ- ಪಿಟೀಲು ಭಾಸ್ಕರಾಚಾರ್ಯ, ತಾಯಿ- ಗೌರಮ್ಮ.
ರಚನೆಗಳು:
[ಬದಲಾಯಿಸಿ]ಗಮಕ ರೂಪಕಗಳು
[ಬದಲಾಯಿಸಿ]- ಶ್ರೀನಿವಾಸ ಕಲ್ಯಾಣ
- ಸೀತಾ ಕಲ್ಯಾಣ
- ಶಂಕರವಿಜಯ
- ಸರಸವಿಲಾಸ
- ವಾಸವಾಂಬಾ ವೈಭವ
- ಪಂಚ ಕನ್ಯೆಯರು
- ರುಕ್ಮಿಣಿ ಸ್ವಯಂವರ
- ರೇವತಿ ಪರಿಣಯ
- ದಮಯಂತಿ ಸ್ವಯಂವರ(ಬಿ. ಎಸ್. ತಲವಾಡಿಯವರ ಶುಭೋದಯ ಕಾವ್ಯದಿಂದ)
- ಮೇರಿ ಕಲ್ಯಾಣ
- ರಾಮಧಾನ್ಯ ಚರಿತ್ರೆ
- ಗಜಗೌರೀ ವ್ರತ
- ಉತ್ತರನ ಪೌರುಷ
- ಕರ್ಣ ಚಿತ್ರಣ
- ಸೌಂದರ್ಯ ಲಹರಿ
- ದೇವಿ ಮಹಾತ್ಮೆ
- ನಳ ಚರಿತ್ರೆ
ಸಂಗೀತ ರೂಪಕಗಳು
[ಬದಲಾಯಿಸಿ]- ಪುರಂದರ ಕೃಷ್ಣ
- ಹರಿದಾಸ ಪರಂಪರೆ
- ಗಣೇಶ ವಂದನ
- ಸಂಗೀತದ ಬೆಳವಣಿಗೆ ನಾದಯೋಗ
- ರಾಗಾರ್ಥ ರಂಜಿನಿ
- ಶ್ರೀ ತ್ಯಾಗರಾಜರ ಕೃತಿಗಳ ರಚನಾ ಸಂದರ್ಭ
- ರಾಮ ಗುಣ ಸೀಮಾ
ನೃತ್ಯ ರೂಪಕಗಳು
[ಬದಲಾಯಿಸಿ](ಸ್ವಂತ ರಚನೆಗಳು)
[ಬದಲಾಯಿಸಿ]- ಕನ್ನಡ ಚೌಪದಿಗಳುಳ್ಳ ಕೇನೋಪನಿಷತ್
- ಕನ್ನಡ ಚೌಪದಿಗಳುಳ್ಳ ತೈತ್ತೀರೀಯೋಪನಿಷತ್
- ಕುಮಾರವ್ಯಾಸನಲ್ಲಿ ನವರಸಗಳು ಗಮಕ ನೃತ್ಯರೂಪಕಗಳು ಮತ್ತು ಲೇಖನ
- ಶ್ರೀರಾಮ ಪಟ್ಟಾಭಿಷೇಕ
- ಭಾಮಿನಿ ಷಟ್ಪದಿ- ಪುರಂದರದಾಸರು- ಜೀವನ ಚರಿತ್ರೆಯ ಕಿರುಕಾವ್ಯ
- ಭಾಮಿನಿ ಷಟ್ಪದಿ- ಶಬರಿ ಕಿರುಕಾವ್ಯ
- ಭಾಮಿನಿ ಷಟ್ಪದಿ- ವೇದವ್ಯಾಸರು ಕಿರುಕಾವ್ಯ
ಮುದ್ರಣ ಸಂಕಲನ ಗ್ರಂಥಗಳು
[ಬದಲಾಯಿಸಿ]- ಬನ್ನಿ ಕೂಡಿ ಹಾಡೋಣ (ಭಾರತದ ೧೪ ಭಾಷೆಗಳ ಸಮುದಾಯ ಗೀತೆಗಳ ಕನ್ನಡ ಅವತರಣಿಕೆ)
- ಜಯ ಮಂಗಳ (ಭಾಗ- ೧) (ಕುಮಾರವ್ಯಾಸನ ಮಹಾಭಾರತದ ಸಮಗ್ರ ವಾಚನ-ವ್ಯಾಖ್ಯಾನದ ನಂತರ ಶ್ರೀ ಸದನದ ಸದಸ್ಯೆಯರಿಂದ ಬರೆಸಿದ ಲೇಖನಗಳು)
- ಜಯ ಮಂಗಳ (ಭಾಗ- ೧) (ಜೈಮಿನಿ ಭಾರತದ ಮಹಾಮಂಗಳ ಸಂದರ್ಭದಲ್ಲಿ ಹಿರಿಯ ವಿದ್ವಾಂಸರಿಂದ ಬರೆಸಿದ ಲೇಖನಗಳ ಸಂಗ್ರಹ)
ವಿ.ಸೂ.: ಗಮಕ, ಸಂಗೀತ ರೂಪಕಗಳು, ಗಾಯನ ಸಮಾಜ, ಸಂಗೀತ ಸಭೆಗಳು, ಸಂಘ, ಸಂಸ್ಥೆ, ಸಮ್ಮೇಳನಗಳಲ್ಲಿ ಪ್ರದರ್ಶಿತವಾಗಿವೆ. ರೇಡಿಯೋಗಳಲ್ಲಿ ಆಕಾಶವಾಣಿ ಕೇಂದ್ರಗಳ ಮೂಲಕ ಪ್ರಸಾರವಾಗಿವೆ.
ಸನ್ಮಾನ- ಪ್ರಶಸ್ತಿಗಳು
[ಬದಲಾಯಿಸಿ]ಸನ್ಮಾನಗಳು
[ಬದಲಾಯಿಸಿ]- ಶಿವಮೊಗ್ಗದ ತಿಲಕನಗರದ ಶ್ರೀ ರಾಮಕೃಷ್ಣ ಪರಮಹಂಸರ ಜಯಂತಿಯ ಸಂದರ್ಭದಲ್ಲಿ ಸನ್ಮಾನ
- ತುಮಕೂರು ವಿಶ್ವಕರ್ಮ ಸಮಾಜದಲ್ಲಿ ಸನ್ಮಾನ
ಪ್ರಶಸ್ತಿಗಳು
[ಬದಲಾಯಿಸಿ]- ಕೆಂಗೇರಿ ಉಪನಗರದ ಶ್ರೀ ರಾಜರಾಜೇಶ್ವರಿ ಬಲಮುರಿ ದೇವಸ್ಥಾನದವರು ನೀಡಿದ 'ಕರ್ನಾಟಕ ರತ್ನ' ಬಿರುದು.
- ಜಯನಗರ ಬೆಂಗಳೂರುವಿಶ್ವಕರ್ಮ ಸೇವಾ ಸಂಘದ 'ವಿಶ್ವಜ್ಯೋತಿ' ಪ್ರಶಸ್ತಿ.
- ಶ್ರೀ ರಾಜರಾಜೇಶ್ವರಿ ದೇವಾಲಯದಿಂದ ಚಂಡಿ ಹೋಮದ ಸಂದರ್ಭದಲ್ಲಿ 'ಶ್ರೀ ರಾಜರಾಜೇಶ್ವರಿ ಅನುಗ್ರಹ' ಪ್ರಶಸ್ತಿ.
- ೧೪-೧೨-೨೦೦೧, ಮೈಸೂರಿನ ಶ್ರೀ ವಾಲ್ಮೀಕಿ ಗಮಕ ಪಾಠಶಾಲೆಯವರಿಂದ 'ಸಂಗೀತ- ಗಮಕ ಗಾಯನ ಚತುರೆ' ಪ್ರಶಸ್ತಿ.
ಬಿರುದುಗಳು:
[ಬದಲಾಯಿಸಿ]- ೬-೬-೨೦೦೩, ಬೆಂಗಳೂರು ರಾಜಾಜಿನಗರ ಜ್ಞಾನಜ್ಯೋತಿ ಕಲಾ ಮಂದಿರದವರು, ಮುಳುಬಾಗಿಲಿನಲ್ಲಿ ಶ್ರೀ ಶ್ರೀಪಾದರಾಜ ಮಠದ ಪೀಠಾಧಿಪತಿಗಳಾದ ಶ್ರೀಶ್ರೀ ವಿಜ್ಞಾನನಿಧಿ ತೀರ್ಥರಿಂದ 'ಅಭಿನವ ಸಂಗೀತ ಕಲಾ ಸರಸ್ವತಿ' ಬಿರುದು.
- ಕೆಂಗೇರಿ ಉಪನಗರದ ಬ್ರಾಹ್ಮ್ಮಣ ಸಭಾದವರಿಂದ 'ಸಂಗೀತ- ಗಮಕ ವಿಶಾರದೆ' ಬಿರುದು
- ಶ್ರೀ ತ್ರಿವೇಣಿ ಕಲಾಸಂಘದಿಂದ 'ಮಹಾ ಕಲಾತಪಸ್ವಿ' ಬಿರುದು.