ಕೀನೋವಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೀನೋವಾ ಗೂಸ್‍ಫ಼ುಟ್ ಜಾತಿಯ (ಕೆನೋಪೋಡೀಯಮ್ ಕೀನೋವಾ) ಒಂದು ಪ್ರಜಾತಿ, ಮತ್ತು ಇದು ಮುಖ್ಯವಾಗಿ ಅದರ ಆಹಾರ ಯೋಗ್ಯ ಬೀಜಗಳಿಗಾಗಿ ಬೆಳೆಯಲಾದ ಒಂದು ಕಾಳು ಬೆಳೆ. ಇದು ನೈಜ ಧಾನ್ಯದ ಬದಲಾಗಿ ಕೆಲವು ವಿಷಯಗಳಲ್ಲಿ ಬಕ್‍ವೀಟ್ ಅನ್ನು ಹೋಲುವ ಒಂದು ಹುಸಿಧಾನ್ಯ, ಏಕೆಂದರೆ ಇದು ನೈಜ ಹುಲ್ಲು ಕುಟುಂಬದ ಸದಸ್ಯವಲ್ಲ. ಒಂದು ಕೀನಪಾಡ್ ಆಗಿ ಕೀನೋವಾ ಬೀಟ್‍ರೂಟ್‍ಗಳು, ಪಾಲಕ್ ಮತ್ತು ಟಂಬಲ್‍ವೀಡ್‍ನಂತಹ ಪ್ರಜಾತಿಗಳಿಗೆ ನಿಕಟವಾಗಿ ಸಂಬಂಧಿಸಿದೆ. ಇದು ಪ್ರೋಟೀನ್ ಅನ್ನು ಅಧಿಕವಾಗಿ ಹೊಂದಿದೆ, ಮತ್ತು ಒಣ ಮಣ್ಣನ್ನು ತಡೆದುಕೊಳ್ಳುತ್ತದೆ.

"https://kn.wikipedia.org/w/index.php?title=ಕೀನೋವಾ&oldid=613356" ಇಂದ ಪಡೆಯಲ್ಪಟ್ಟಿದೆ