ಕ್ಯಾರಮೆಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಸಿಯಲ್ಲಿ ಹಾಕಿದ ದ್ರವ ಕ್ಯಾರಮೆಲ್

ಕ್ಯಾರಮೆಲ್ ವಿವಿಧ ಸಕ್ಕರೆಗಳನ್ನು ಕಾಯಿಸಿ ತಯಾರಿಸಲಾದ ಬೇಯ್ಜ್‍ನಿಂದ ಗಾಢ ಕಂದುಬಣ್ಣದ ಕನ್‍ಫ಼ೆಕ್ಷೆನರಿ ಉತ್ಪನ್ನ. ಅದನ್ನು ಪುಡಿಂಗ್‍ಗಳು ಹಾಗೂ ಡಿಜ಼ರ್ಟ್‍ಗಳಲ್ಲಿ ಒಂದು ಪರಿಮಳಕಾರಕವಾಗಿ, ಬಾನ್‍ಬಾನ್‍ಗಳಲ್ಲಿ ಹೂರಣವಾಗಿ, ಅಥವಾ ಐಸ್ ಕ್ರೀಂ ಹಾಗೂ ಕಸ್ಟರ್ಡ್‍ಗಾಗಿ ಟಾಪಿಂಗ್ ಆಗಿ ಬಳಸಬಹುದು. ಕ್ಯಾರಮೆಲೀಕರಣದ ಪ್ರಕ್ರಿಯೆ ಸಕ್ಕರೆಯನ್ನು ನಿಧಾನವಾಗಿ ಸುಮಾರು ೧೭೦ ಡಿಗ್ರಿ ಸೆಲ್ಸಿಯಸ್‍ಗೆ ಕಾಯಿಸುವುದನ್ನು ಒಳಗೊಳ್ಳುತ್ತದೆ.