ಸದಸ್ಯರ ಚರ್ಚೆಪುಟ:Vasudha Pailoor
ನಮಸ್ಕಾರ Vasudha Pailoor,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ಲೇಖನ ಸೇರಿಸುವಾಗ
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು -ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ
Palagiri (ಚರ್ಚೆ) ೦೩:೪೧, ೧ ಜುಲೈ ೨೦೧೫ (UTC)
ಸಾವಯವ ಗೊಬ್ಬರಗಳು
[ಬದಲಾಯಿಸಿ]ಪ್ರಾಣಿ ಮತ್ತು ಸಸ್ಯಮೂಲದ ವಸ್ತುಗಳಿಂದ ದೊರೆಯುವ ಗೊಬ್ಬರವೇ ಸಾವಯವ ಗೊಬ್ಬರ. ಜಾನುವಾರುಗಳ ಸೆಗಣಿ ಒಂದು ಮುಖ್ಯ ಸಾವಯವ ಗೊಬ್ಬರ. ಸೆಗಣಿ, ಗಂಜಳ, ಹಸುರೆಲೆ, ಹಿಂಡಿ, ಕಸಾಯಿಖಾನೆಯಿಂದ ದೊರೆಯುವ ತ್ಯಾಜ್ಯ ವಸ್ತು, ಮೀನಿನ ಪುಡಿ, ಕಂಪೋಸ್ಟ್ ಇವೆಲ್ಲಾ ಸಾವಯವ ಗೊಬ್ಬರಗಳು.
ಕೇವಲ ರಾಸಾಯನಿಕ ಗೊಬ್ಬರಗಳನ್ನೇ ಬಳಸುವುದರಿಂದ ಭೂಮಿಯಲ್ಲಿ ಕ್ಷಾರ, ಆಮ್ಲತೆಗಳು ಹೆಚ್ಚಿ ಮಣ್ಣಿನ ಗುಣ ಕೆಡುತ್ತದೆ. ಆದರೆ ಜಮೀನಿಗೆ ಕೊಡಬೇಕಾದ ಪ್ರಮಾಣಕ್ಕಿಂತ ಹೆಚ್ಚು ಸಾವಯವ ಗೊಬ್ಬರ ಕೊಟ್ಟರೂ ಮಣ್ಣಿನ ಗುಣ ಕೆಡುವುದಿಲ್ಲ. ಮಣ್ಣಿನ ಕಣಗಳ ಹೊಂದಾಣಿಕೆ, ರಚನೆ, ಬಣ್ಣ, ಫಲವತ್ತತೆ ಹೆಚ್ಚುತ್ತಾ ಹೋಗುತ್ತದೆ. ಸಾವಯವ ಗೊಬ್ಬರವನ್ನು ಉಪಯೋಗಿಸುವುದರಿಂದ ಬೆಳೆಗೆ ಬೇಕಾದ ಮುಖ್ಯ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಷ್ ಗಳಲ್ಲದ ಲಘು ಪೋಷಕಾಂಶಗಳೂ ಸೇರುತ್ತದೆ. ಮಣ್ಣು ಒಂದು ನಿರ್ಜೀವ ರಾಶಿಯಲ್ಲ. ಹಲವಾರು ಸೂಕ್ಷ್ಮಜೀವಿಗಳು ಮಣ್ಣಿನಲ್ಲಿ ಚಟುವಟಿಕೆಯಿಂದಿರುತ್ತದೆ. ಮಣ್ಣಿನಲ್ಲಿ ಸಾವಯವ ವಸ್ತುಗಳ ಕೊರತೆ ಉಂಟಾದಾಗ ಸೂಕ್ಷ್ಮ ಜೀವಿಗಳ ಸಂಖ್ಯೆ ಕಡಿಮೆಯಾಗುತದೆ. ಸಾವಯವ ವಸ್ತುಗಳನ್ನು ಮಣ್ಣಿಗೆ ಸೇರಿದಾಗ ಸೂಕ್ಷ್ಮಜೀವಿಗಳಿಗೆ ಅನುಕೂಲದ ವಾತವರಣ ಕಲ್ಪಿಸಿದಂತಾಗುತ್ತದೆ. ಭೂಮಿ ಹದಗೊಳ್ಳುತ್ತದೆ.
ಸಾವಯವ ಗೊಬ್ಬರಗಳು ಮಣ್ಣಿನ ರಸ ಸಾರವನ್ನು ತಟ್ಟಿಸ್ಥಮಟ್ಟದಲ್ಲಿಡುತ್ತದೆ. ವಿದ್ಯುದ್ವಾಹಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಭೂಮಿಗೆ ಸಾಕಷ್ಟು ಪ್ರಮಾಣದಲ್ಲಿ ಹಸುರೆಲೆ ಗೊಬ್ಬರಗಳನ್ನು ಒದಗಿಸಿ ಮಣ್ಣಿನಲ್ಲಿಯ ಸಾವಯವ ವಸ್ತುವಿನ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಜಮೀನಿನ ಮಣ್ಣನ್ನು ಪುನ:ಶ್ಚೇತನಗೊಳಿಸುತ್ತವೆ. ಮಣ್ಣಿನ ಸವಕಳಿಯನ್ನು ತಡೆಗಟ್ಟುವುದರಲ್ಲಿಯೂ ಪಾತ್ರವಹಿಸುತ್ತದೆ.
ಸೆಣಬು, ಡಯೆಂಚ, ಅಲಸಂಡೆ, ಸಸ್ಬೇನಿಯಾ, ಕಾಡು ಸನ್ ಹೆಂಪ್, ಮೊದಲಾದ ಬೆಳೆಗಳನ್ನು ಹಸುರೆಲೆ ಗೊಬ್ಬರಕ್ಕಾಗಿ ಬೆಳೆಸಬಹುದು. ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು.
ಜೈವಿಕ ಅನಿಲ
[ಬದಲಾಯಿಸಿ]ಗ್ರಾಮೀಣ ಜನರು ಸಾಮಾನ್ಯವಾಗಿ ಕಟ್ಟಿಗೆಯನ್ನು ಉರುವಲಾಗಿ ಉಪಯೋಗಿಸುತ್ತಾರೆ. ಆದರೆ ಅರಣ್ಯ ನಾಶದಿಂದಾಗಿ ಈಗ ಕಟ್ಟಿಗೆಯೂ ದುರ್ಬಲವಾಗಿದೆ. ಸೀಮೆ ಎಣ್ಣೆಯೂ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತಿಲ್ಲ. ಅಡಿಗೆ ಅನಿಲ ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಿಲ್ಲ. ವಿದ್ಯುಚ್ಛಕ್ತಿಯ ಬೆಲೆ ದುಬಾರಿ. ಆದರೆ, ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ದನಕರುಗಳನ್ನು ಸಾಕುತ್ತಾರೆ. ಜಾನುವಾರುಗಳ ಸಗಣಿಯನ್ನು ಉಪಯೋಗಿಸಿ ಅನಿಲ ಉತ್ಪಾದಿಸುವ ಯಂತ್ರವೊಂದನ್ನು ಸ್ಥಾಪಿಸಿದರೆ ಅಡಿಗೆಗೆ ಬೇಕಾದ ಇಂಧನದ ಅವಶ್ಯಕತೆಯನ್ನು ಪೂರೈಸಿಕೊಳ್ಳಬಹುದು. ಅದನ್ನೇ ಗೊಬ್ಬರದ ಅನಿಲ ಸ್ಥಾವರ ಎನ್ನುವುದು.
ಸೆಗಣಿ ಹದುಗಿದಾಗ ಮೀಥೇನ್ ಉತ್ಪತ್ತಿಯಾಗುತ್ತದೆ. ಈ ಅನಿಲ ವಾತಾವರಣದ ಗಾಳಿಗಿಂತ ಹಗುರ. ಉರಿದಾಗ ಜ್ವಾಲೆ ಬಣ್ಣ ನೀಲಿ. ಗೋಬರ ಅನಿಲ ಯಂತ್ರದಲ್ಲಿ ಸೆಗಣಿಯನ್ನು ಹುದುಗಿಸಿ ಮೀಥೇನ್ ಇರುವ ಅನಿಲವನ್ನು ತಯಾರಿಸುತ್ತಾರೆ. ಗೋಬರ್ ಅನಿಲ ಯಂತ್ರದ ಗಾತ್ರ ಜಾನುವಾರುಗಳ ಸಂಖ್ಯೆ ಮತ್ತು ದೊರೆಯುವ ಸೆಗಣಿಯ ಪ್ರಮಾಣವನ್ನು ಅವಲಂಬಿಸಿರುತ್ತದೆ. ಅನಿಲ ಸ್ಥಾವರವನ್ನು ಅಡಿಗೆಮನೆ ಮತ್ತು ದನಗಳ ಕೊಟ್ಟಿಗೆಗಳ ಸಮೀಪ ಕಟ್ಟಬೇಕು. ಬಿಸಿಲಿನ ತಾಪವಿದ್ದಲ್ಲಿ ಅನಿಲದ ಉತ್ಪತ್ತಿ ಮತ್ತು ಒತ್ತಡ ಅಧಿಕವಾಗಿರುತ್ತದೆ.
ಅನಿಲ ಸ್ಥಾವರವು ಸೆಗಣಿ ಶೇಖರಣೆಗೊಳ್ಳುವ ಹೊಂಡ, ಅನಿಲ ಶೇಖರಣೆಯಾಗುವ ಡ್ರಮ್, ಸೆಗಣಿ ಒಳ ಹೋಗುವ ಮತ್ತು ಹೊರಬರುವ ಕೊಳವೆ, ಅನಿಲ ಸಾಗಿಸುವ ಕೊಳವೆಗಳನ್ನೊಳಗೊಂಡಿರುತ್ತದೆ. ಸ್ಥಾವರದ ಆವರಣವನ್ನು ಇಟ್ಟಿಗೆ ಅಥವಾ ಕಲ್ಲಿನಿಂದ ಕಟ್ಟಬಹುದು. ಸ್ಥಾವರದ ಗಾತ್ರ ೨ ರಿಂದ ೮ ಘನ ಮೀಟರ್ ಇರುತ್ತದೆ. ಡ್ರಮ್ಮಿನ ವ್ಯಾಸ ೧.೨೫ ರಿಂದ ೨.೫೦ ಮೀಟರ್ ಇರುತ್ತದೆ. ಮೊದಲು ಕಬ್ಬಿಣದ ಡ್ರಮ್ ಗಳನ್ನು ಉಪಯೋಗಿಸುತ್ತಿದ್ದರು. ಈಗ ಫೈಬರ್ ಗ್ಲಾಸ್ ಡ್ರಮ್ ಗಳನ್ನು ಉಪಯೋಗಿಸುತ್ತಾರೆ. ಸ್ಥಾವರಕ್ಕೆ ಹಾಕುವ ಸೆಗಣಿಯನ್ನು ಹೊರತೊಟ್ಟಿಯಲ್ಲಿ ನೀರಿನ ಸಮಪ್ರಮಾಣದಲ್ಲಿ ಬೆರಸಿ ಕಲ್ಲು, ಮಣ್ಣು, ಕಸಕಡ್ದಿಗಳನ್ನು ತೆಗೆದು ಸ್ಥಾವರದೊಳಗೆ ಬಿಡಬೇಕು. ಸ್ಥಾವರದ ಒಳಗೆ ಸೆಗಣಿ ಹೆಪ್ಪುಗಟ್ಟದಂತೆ ಡ್ರಮ್ಮನ್ನು ತಿರುಗಿಸುತ್ತಿರಬೇಕು. ಮೊಟ್ಟಮೊದಲು ಅನಿಲ ಉತ್ಪಾದನೆಗೆ ಸುಮಾರು ಮೂರು ವಾರಗಳು ಕಾಯಬೇಕು.
ಅನಿಲ ಉತ್ಪಾದನೆ ನಂತರದ ಉಲಿದ ಸೆಗಣಿ ಉತ್ತಮ ಗೊಬ್ಬರ, ಸೆಗಣಿಯನ್ನು ಇಂಧನಾನಿಲ ಉತ್ಪಾದನೆಗೆ ಉಪಯೋಗಿಸುವುದರಿಂದ ಇಂಧನ ಸಮಸ್ಯೆ ಬಗೆಹರಿಯುವುದರ ಜೊತೆಗೆ, ನೈರ್ಮಲ್ಯವೂ ಹೆಚ್ಚಿ ಅರಣ್ಯ ನಾಶವಾಗುತ್ತದೆ. ಗೋಬರ್ ಅನಿಲವನ್ನು ಸೂಕ್ತ ಆವರಣದಲ್ಲಿ ಉತ್ಪನ್ನವಾದ ಶಕ್ತಿಯನ್ನು ವಿದ್ಯುಚ್ಛಕ್ತಿಗೆ ಮಾರ್ಪಡಿಸಬಹುದು. ಸಮುದಾಯ ಗೊಬ್ಬರ ಅನಿಲ ಸ್ಥಾವರಗಳು ಬಳಕೆಗೆ ಬಂದರೆ, ಈ ರೀತಿ ವಿದ್ಯುಚ್ಛಕ್ತಿಯನ್ನು ಪಡೆಯುವುದು ಲಾಭದಾಯಕ.
ರಾಸಾಯನಿಕ ಕೀಟನಾಶಕಗಳು
[ಬದಲಾಯಿಸಿ]ಪ್ರಾಯಸ್ಥ ಕೀಟಗಳು, ಅವುಗಳ ಮೊಟ್ಟೆ, ಮರಿ ಮತ್ತು ಕೋಶಗಳನ್ನು ನಾಶ ಮಾಡಬಲ್ಲ ರಾಸಾಯನಿಕ ಕೀಟನಾಶಕಗಳನ್ನು ಅವುಗಳಲ್ಲಿರುವ ಸಂಘಟಕ ಪದಾರ್ಥಗಳಿಗನುಗುಣವಾಗಿ ಕ್ಲೋರಿನ್ ಸಂಯುಕ್ತ ಹೈಡ್ರೋಕಾರ್ಬನ್ ಗಳು, ರಂಜಕಯುಕ್ತ ಸಂಯೋಜಕಗಳು, ಕಾರ್ಬರ್ನೇಟ್ ಗಳು ಇತ್ಯಾದಿ ಗುಂಪುಗಳಾಗಿ ವಿಂಗಡಿಸಲಾಗಿದೆ. ಕೀಟನಾಶಕಗಳ ಸಂಪರ್ಕ ವಿಧಾನವನ್ನನುಸರಿಸಿ ಅವುಗಳನ್ನು ಹೊಟ್ಟೆ ಪಾಷಾನಗಳು ಸಂಪರ್ಕ ವಿಷಗಳು, ಧೂಪಕಗಳು ಎಂದು ವರ್ಗೀಕರಿಸಲಾಗಿದೆ. ಭೌತಿಕ ರೂಪವನ್ನು ಅನುಸರಿಸಿ ಪುಡಿ, ನೆನೆಪುಡಿ ನೀರಿನಲ್ಲಿ ಹರಡುವ ದ್ರಾವನ, ಹರಳು ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಕೆಲವು ಕೀಟನಾಶಕಗಳನ್ನು ಸಸ್ಯ ಭಾಗಗಳಿಗೆ ಸಿಂಪಡಿಸಿದರೆ ಅಥವಾ ಬೇರುಗಳ ಮೂಲಕ ಒದಗಿಸಿದರೆ ಅವು ಸಸ್ಯಗಳ ಅಂಗಾಂಗಗಳಲ್ಲಿ ಹರಡಿ ಸಸ್ಯಗಳನ್ನು ವಿಷಮಯ ಮಾಡುತ್ತದೆ. ಇವುಗಳನ್ನು ಸಸ್ಯಪ್ಯಾಪಿ ಕೀಟನಾಶಕಗಳೆನ್ನುತ್ತಾರೆ.
ಕೀಟಗಳಿಗೆ ಆಕರ್ಷಕವಾದ ಆಹಾರದೊಂದಿಗೆ ಹೊಟ್ಟೆ ಪಾಷಾನಗಳನ್ನು ಬೆರೆಸಿ ಇಡುವುದರಿಂದ ಅವುಗಳನ್ನು ತಿಂದ ಕೀಟಗಳು ಸಾಯುತ್ತವೆ. ಸಂಪರ್ಕ ಕೀಟನಾಶಕಗಳು ಕೀಟಗಳ ದೇಹಭಾಗವನ್ನು ಸಂಪರ್ಕಿಸಿ ಅವುಗಳನ್ನು ಕೊಲ್ಲುತ್ತವೆ. ಧೂಳು, ಪುಡಿ ಮತ್ತು ಸಿಂಪರಣೆಯ ರೂಪದಲ್ಲಿ ಉಪಯೋಗಿಸುವ ಕೀಟನಾಶಕಗಳು ಸಂಪರ್ಕ ಕೀಟನಾಶಕಗಳು. ಅನಿಲ ರೂಪದಲ್ಲಿ ಕೀಟಗಳ ಉಸಿರಾಟದ ಅಂಗಗಳನ್ನು ಪ್ರವೇಶಿಸಿ ವಿಷಾನಿಲದಿಂದ ಕೀಟಗಳನ್ನು ಕೊಲ್ಲುವ ಧೂಪಕಗಳು ಉಪಯೋಗವಾಗುತ್ತದೆ.
ಕೀಟನಾಶಕಗಳಲ್ಲಿರುವ ಸಂಯುಕ್ತ ವಸ್ತುಗಳನ್ನನುಸರಿಸಿ ಅವುಗಳಿಗೆ ರಾಸಾಯನಿಕ ಹೆಸರುಗಳನ್ನಿಡಲಾಗಿದೆ. ಉದಾಹರಣೆಗೆ ಡಿಡಿಟಿ ಸಾಮಾನ್ಯ ಹೆಸರು. ಇದರ ರಾಸಾಯನಿಕ ಹೆಸರು ಡೈಕ್ಲೋರೋ ಡೈಫೀನೈಲ್ ಟ್ರೈಕೋರೋ ಈಥೆನ್ ಎಂದಾಗಿದೆ.
ವಿಷ ಪ್ರಯೋಗಕ್ಕೊಳಗಾಗಿ ಸವನ್ನಪ್ಪುವ ಕೀಟಗಳ ನಡುಕ, ಅತಿ ಉತ್ಯುಕತೆ, ಸ್ನಾಯುಗಳ ಬಳಲಿಕೆ, ಪಕ್ಷಪಾತ, ಸೆಟೆದುಕೊಳ್ಳುವಿಕೆ, ದುರ್ಬಲತೆ ಮತ್ತು ಅಡ್ಡ ಬೀಳುವಿಕೆ ಸಾಮಾನ್ಯ ಚಿಹೆಗಳು. ಎಲ್ಲಾ ಕೀಟನಾಶಕಗಳೂ ಮನುಷ್ಯರಿಗೂ ವಿಷಕಾರಿಯಾಗಿರುವುದರಿಂದ ಕೀಟನಾಶಕಗಳನ್ನು ಉಪಯೋಗಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸುವುದು ಅತ್ಯಂತ ಅವಶ್ಯಕ.